Asianet Suvarna News Asianet Suvarna News

Digvijaya Review: ರೈತರ ಗೆಲುವಿಗೆ ಹಾತೊರೆಯುವ ಕತೆ

ಜಯಪ್ರಭು, ಸ್ನೇಹಾ, ಸುಚೇಂದ್ರ ಪ್ರಸಾದ್, ಹೊನ್ನವಳ್ಳಿ ಕೃಷ್ಣ, ಕಿಲ್ಲರ್ ವೆಂಕಟೇಶ್, ಶಿವಕುಮಾರ ಆರಾಧ್ಯ ನಟನೆಯ ದಿಗ್ವಿಜಯ ಸಿನಿಮಾ ರಿಲೀಸ್ ಅಗಿದೆ....

Suchendra Prasad Sneha Killer Venkatesh Digvijaya kannada film review vcs
Author
First Published Sep 23, 2023, 10:04 AM IST

ಆರೆಸ್‌.

ಸಿನಿಮಾ ಮೂಲಕ ಜಗತ್ತಿಗೆ ಸಂದೇಶ ನೀಡುವ ಪ್ರಯತ್ನಗಳು ಆಗುತ್ತಾ ಇರುತ್ತವೆ. ಕತೆಯ ಮೂಲಕವೇ ಸಮಾಜ ತಿದ್ದುವ ಪ್ರಯತ್ನ ನಡೆಯುತ್ತಿರುತ್ತದೆ. ಈ ಸಿನಿಮಾ ಅಂಥದ್ದೇ ಒಂದು ಪ್ರಯತ್ನ. ಕಮರ್ಷಿಯಲ್‌ ಅಂಶಗಳ ಜೊತೆಯೇ ರೈತರಿಗೆ ಒಳಿತು ಮಾಡುವ ಸಂದೇಶವನ್ನು ಸಾರುತ್ತದೆ.

ನಿರ್ದೇಶನ: ದುರ್ಗಾ ಪಿ.ಎಸ್, ಶ್ರೀಕಾಂತ್ ಹೊನ್ನವಳ್ಳಿ

ತಾರಾಗಣ: ಜಯಪ್ರಭು, ಸ್ನೇಹಾ, ಸುಚೇಂದ್ರ ಪ್ರಸಾದ್, ಹೊನ್ನವಳ್ಳಿ ಕೃಷ್ಣ, ಕಿಲ್ಲರ್ ವೆಂಕಟೇಶ್, ಶಿವಕುಮಾರ ಆರಾಧ್ಯ

OLAVE MANDARA 2 REVIEW: ಸಂಬಂಧವೆಂಬ ಆಲದ ಮರದಡಿ ಪ್ರೀತಿ, ನೀತಿ ಇತ್ಯಾದಿ

ರೈತರ ಸಾಲ ಬಾಧೆ, ಸರಿಯಾದ ಬೆಲೆ ಸಿಗದೇ ಇರುವುದು, ರೈತರ ಆತ್ಮಹತ್ಯೆ ಇತ್ಯಾದಿ ಸಮಸ್ಯೆಗಳು ಎಲ್ಲಾ ಕಾಲದಲ್ಲೂ ಇದ್ದಕ್ಕಿದ್ದಂತೆ ಮುನ್ನೆಲೆಗೆ ಬರುತ್ತವೆ. ಅದಕ್ಕೆ ಶಾಶ್ವತ ಪರಿಹಾರ ಅನ್ನುವುದು ಇಲ್ಲವೇ ಇಲ್ಲ ಎಂಬಂತಾಗಿದೆ. ಆದರೆ ಈ ಚಿತ್ರದ ನಾಯಕ ಆಶಾವಾದಿ. ಪ್ರಯತ್ನಕ್ಕೆ ಫಲವುಂಟು ಎಂದು ನಂಬುವವನು. ಅವರು ರೈತರ ಪರವಾಗಿ ನಿಂತು ಹೋರಾಟ ಸಂಘಟಿಸಿ ಅತ್ಯದ್ಭುತ ಫಲಿತಾಂಶವನ್ನು ತರುವಲ್ಲಿಗೆ ದಿಗ್ವಿಜಯ ಎಂಬ ಶೀರ್ಷಿಕೆಗೆ ಸಾರ್ಥಕತೆ ಬಂದಿರುತ್ತದೆ.

Tatsama Tadbhava Review: ಜಾಣ ಬರವಣಿಗೆಯ ಕುತೂಹಲಕರ ಥ್ರಿಲ್ಲರ್

ಸಿನಿಮಾದ ಉದ್ದೇಶ ಅಮೋಘವಾಗಿದೆ. ಅದಕ್ಕೆ ತಕ್ಕಂತೆ ಕತೆ ಹೆಣೆಯಲಾಗಿದೆ. ಮಧ್ಯದಲ್ಲಿ ರುಚಿಗೆ ತಕ್ಕಷ್ಟು ಸಾಂಗು, ಡಾನ್ಸು ಮತ್ತಿತ್ಯಾದಿ ಬಂದು ಹೋಗುತ್ತದೆ. ಅವೆಲ್ಲವೂ ಇದಕ್ಕೊಂದು ಕಮರ್ಷಿಯಲ್ ಗುಣವನ್ನು ಒದಗಿಸಿದೆ. ಈ ಮಧ್ಯೆ ಇದೊಂದು ಹೊಸ ತಂಡದ ಪ್ರಾಮಾಣಿಕ ಪ್ರಯತ್ನ ಅನ್ನುವುದನ್ನು ಮನಸ್ಸಲ್ಲಿ ಇಟ್ಟುಕೊಳ್ಳುವುದು ಒಳಿತು. ಚಿತ್ರದ ನಾಯಕ ಜಯಪ್ರಭು ಹೊಸ ಪ್ರತಿಭೆ. ಅವರ ಪಾತ್ರದ ಹೋರಾಟ ಅಪ್ರತಿಮ. ಇನ್ನು ಹಿರಿಯ ನಟರೆಲ್ಲರೂ ತಮ್ಮ ತಮ್ಮ ಪಾತ್ರಗಳ ಘನತೆ. ಒಟ್ಟಾರೆ ಇದೊಂದು ಘನ ಉದ್ದೇಶದ ಹೊಸ ಸಿನಿಮಾ.

Follow Us:
Download App:
  • android
  • ios