Asianet Suvarna News Asianet Suvarna News

Davanagere: ಜ.6ರಂದು ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರ ಬಿಡುಗಡೆ

ಛಾಯಾಗ್ರಾಹಕರ ಬದುಕು ಬವಣೆಗಳನ್ನು ತೆರೆದಿಡುವ ಮೂಲಕ ನವಿರು ಹಾಸ್ಯದ ಕೌಟುಂಬಿಕ ಚಿತ್ರವಾಗಿರುವ  'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಚಲನಚಿತ್ರ ಇದೇ ಜನವರಿ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ, ಹಾಗೂ ನಟರಾದ ಅಗ್ನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ರಾಜೇಶ್ ಧೃವ ತಿಳಿಸಿದರು.

Sri Balaji Photo Studio movie release on 6th January sat
Author
First Published Jan 2, 2023, 1:17 PM IST

ದಾವಣಗೆರೆ (ಜ.02):  ಛಾಯಾಗ್ರಾಹಕರ ಬದುಕು ಬವಣೆಗಳನ್ನು ತೆರೆದಿಡುವ ಮೂಲಕ ನವಿರು ಹಾಸ್ಯದ ಕೌಟುಂಬಿಕ ಚಿತ್ರವಾಗಿರುವ  'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಚಲನಚಿತ್ರ ಇದೇ ಜನವರಿ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ, ಹಾಗೂ ನಟರಾದ ಅಗ್ನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ರಾಜೇಶ್ ಧೃವ ತಿಳಿಸಿದರು.

ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೋಟೋಗ್ರಾಫರ್ ಗಳ ಕಾಯಕ, ನೋವು, ಅವರದೇ ಆದ ವ್ಯಥೆಗಳ ಕುರಿತು ಈ ಚಿತ್ರದಲ್ಲಿ ತೆರೆದಿಡಲಾಗಿದೆ. ಬದುಕನ್ನು ಅರಸುತ್ತಾ ಫೋಟೋಗ್ರಾಫರ್ ಒಬ್ಬ ಹಳ್ಳಿಯಿಂದ ನಗರಕ್ಕೆ ಹೋದಾಗ ಆತ ಎದುರಿಸುವ ಸನ್ನಿವೇಶಗಳನ್ನು ಚಿತ್ರಕಥೆಯ ಮೂಲಕ  ತೋರಿಸಲಾಗಿದೆ. ಹೊಸ ವರ್ಷದಲ್ಲಿ ಹೊಸ ಕಲಾವಿದರನ್ನು ಹಾಕಿಕೊಂಡು ಚಿತ್ರ ಮಾಡಲಾಗಿದೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದ್ದು, ಉತ್ತರ ಕನ್ನಡ ಭಾಷೆಯನ್ನು ಮೊದಲ ಬಾರಿಗೆ ಬಳಸಿಕೊಳ್ಳಲಾಗಿದೆ. ಜನವರಿ 6ರಂದು 100 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಚಿತ್ರ ತೆರೆಕಾಣಲಿದೆ ಎಂದು ಮಾಹಿತಿ ನೀಡಿದರು.

2023ರ ಬಹುನಿರೀಕ್ಷಿತ 12 ಸಿನಿಮಾಗಳು; ನಿಮ್ಮ ನೆಚ್ಚಿನ ಸ್ಟಾರ್‌ ಈ ಲಿಸ್ಟ್‌ನಲ್ಲಿ ಇದ್ದಾರಾ?

ಶ್ರೀರಾಮ್ ಗಂಧರ್ವ ಸಂಗೀತ ನಿರ್ದೇಶನ: ಚಿತ್ರದ 'ಪುಕ್ಸಟ್ಟೆ' ಹಾಡು ಈಗಾಗಲೇ ಸದ್ದು ಮಾಡುತ್ತಿದ್ದು, ಚಿತ್ರದಲ್ಲಿ 5 ಹಾಡುಗಳಿದ್ದು, ಸಂಗೀತ ನಿರ್ದೇಶನವನ್ನು ಶ್ರೀರಾಮ್ ಗಂಧರ್ವ ನೀಡಿದ್ದಾರೆ.  ತಾರಾಗಣದಲ್ಲಿ ಪ್ರಮುಖ ಪಾತ್ರದಲ್ಲಿ ಸಂಪತ್ ಜಯರಾಮ್, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಶುಭಲಕ್ಷ್ಮೀ, ಇನ್ನಿತರರಿದ್ದಾರೆ. ದಾವಣಗೆರೆ ಸಿನಿ ಸ್ಟುಡಿಯೋದ ಮನೋಜ್ ಕ್ಯಾಮೆರಾ ಮೆನ್ ಆಗಿ ಕಾರ್ಯನಿರ್ವಹಿಸಿದ್ದು, ಸಿನಿಮಾ ವೀಕ್ಷಿಸುವ ಮೂಲಕ ಹೊಸಬರಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.

ಚಿತ್ರ ವೀಕ್ಷಿಸಿ ಹಾರೈಸಿ: ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಪತ್ ಜಯರಾಂ ಮಾತನಾಡಿ, ಹೊಸ ವರ್ಷಕ್ಕೆ ಹೊಸ ತಂಡದೊಂದಿಗೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ತೆರೆಕಾಣುತ್ತಿದೆ. ಎಲ್ಲರೂ ಚಿತ್ರ ವೀಕ್ಷಿಸಿ ಹರಿಸಿ, ಹಾರೈಸುವಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ, ನಟರಾದ  ರವಿ ಸಾಲಿಯಾನ್, ಶರತ್, ದಾವಣಗೆರೆ ಫೋಟೋಗ್ರಾಫರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಹೆಚ್.ಕೆ.ಸಿ. ರಾಜು, ಪ್ರಧಾನ ಕಾರ್ಯದರ್ಶಿ ವಿಜಯ್ ಜಾಧವ್, ಪದಾಧಿಕಾರಿಗಳಾದ ತಿಪ್ಪೇಶಿ, ಶಶಿ, ನವೀನ್ ಇನ್ನಿತರರಿದ್ದರು.

New Year 2023: ಸುವರ್ಣ ಪಾರ್ಟಿಯಲ್ಲಿ 'ಅಮೃತಾಂಜನ್' ಟೀಂ ಮಾತು

Follow Us:
Download App:
  • android
  • ios