Asianet Suvarna News Asianet Suvarna News

Somu Sound Engineer Review ತೀವ್ರ ಗಾಢ ಭಾವಗಳ ಆರ್ದ್ರ ಕಥನ

ಶ್ರೇಷ್ಠ ಬಸವರಾಜ್, ಗಿರೀಶ್ ಜತ್ತಿ, ನಿಶ್ವಿಕಾ ಪಾಟೀಲ್, ಜಹಾಂಗೀರ್, ಯಶ್ ಶೆಟ್ಟಿ ನಟನೆಯ ಸೋಮು ಸೌಂಡ್ ಇಂಜಿನಿಯರ್ ಸಿನಿಮಾ ರಿಲೀಸ್ ಆಗಿದೆ.. 

Shresta Basavaraj Girishi Nisha patel Somu Sound engineer kannada movie review vcs
Author
First Published Mar 16, 2024, 11:59 AM IST

ರಾಜೇಶ್ ಶೆಟ್ಟಿ

ಈ ಸಿನಿಮಾ ಮೂಲಕ ಇಬ್ಬರು ಅಮೋಘ ಪ್ರತಿಭೆಗಳ ಪರಿಚಯ ಆಗುತ್ತದೆ. ಒಬ್ಬರು ನಿರ್ದೇಶಕ ಅಭಿ, ಇನ್ನೊಬ್ಬರು ನಾಯಕ ನಟ ಶ್ರೇಷ್ಠ. ಒಬ್ಬರು ಬರವಣಿಗೆ- ನಿರ್ದೇಶನದ ಮೂಲಕ, ಇನ್ನೊಬ್ಬರು ನಟನೆ ಮೂಲಕ ಈ ಸಿನಿಮಾವನ್ನು ತಾಕುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಿನಿಮಾ ಇಂತಿಂಥಾ ಹೊತ್ತಲ್ಲಿ ಟೇಕಾಫ್ ಆಗಬೇಕು, ಹೀರೋ ಎಲಿವೇಷನ್ ಇರಬೇಕು ಇತ್ಯಾದಿಗಳ ಹಂಗಿಗೆ ಒಳಗಾಗಿಲ್ಲ. ಸಹಜವಾಗಿ ಶುರುವಾಗುತ್ತದೆ. ಜೀವನದಂತೆ ಮುಂದುವರಿಯುತ್ತದೆ. ಅದ್ಯಾವುದೋ ಹೊತ್ತಲ್ಲಿ ವಿಧಿ ಲೀಲೆಯಂತೆ ಜರುಗುವ ಘಟನೆಗೆ ಶರಣಾಗುತ್ತದೆ. ಅಲ್ಲಿಂದ ಕತೆ ಬಣ್ಣ ಬದಲಾಗುತ್ತದೆ. ಕತೆ ಬಣ್ಣ ಬದಲಿಸುವುದನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವು ನಟ ಶ್ರೇಷ್ಠ. ಅವರ ಮುಖದ ಕದಲಿಕೆಗಳೇ ಈ ಚಿತ್ರಕ್ಕೆ ಗಾಢತೆ ಕೊಟ್ಟಿದೆ.

PHOTO REVIEW ಸುಡುವ ದಾರಿಯಲ್ಲಿ ಕಾಡುವ ನಿಜ ಪಾತ್ರಗಳು

ನಿರ್ದೇಶನ: ಅಭಿ

ತಾರಾಗಣ: ಶ್ರೇಷ್ಠ ಬಸವರಾಜ್, ಗಿರೀಶ್ ಜತ್ತಿ, ನಿಶ್ವಿಕಾ ಪಾಟೀಲ್, ಜಹಾಂಗೀರ್, ಯಶ್ ಶೆಟ್ಟಿ

ರೇಟಿಂಗ್: 3

ಇಲ್ಲಿ ಏನೂ ಜರುಗುತ್ತಿಲ್ಲವಲ್ಲ ಅಂತ ಒಮ್ಮೊಮ್ಮೆ ಅನ್ನಿಸುತ್ತದೆ. ಒಬ್ಬ ಕೋಪಿಷ್ಠ ಹುಡುಗನ ಸಹಜ ಜೀವನದಂತಿದೆಯಲ್ಲ ಅನ್ನಿಸುತ್ತದೆ. ಆದರೆ ನಿರ್ದೇಶಕರು ಸೂಚನೆಯೇ ಕೊಡದೆ ನೋಡುಗನಿಗೆ ರಿಯಲೈಸೇಷನ್ ಮಾಡಿರುತ್ತಾರೆ. ಆ ಮಟ್ಟಿಗೆ ಇದೊಂದು ಹಲವು ಸಣ್ಣ ಕತೆಗಳಿರುವ ತೀವ್ರವಾದ ಕಥಾ ಸಂಕಲನವೂ ಹೌದು. ಒಂದೊಂದು ಕತೆಯೂ ಒಂದೊಂದು ಪಾಠ ಹೇಳಿಹೋಗಿರುತ್ತದೆ. ಅಲ್ಲಲ್ಲಿ ಮನಸ್ಸು ಆರ್ದ್ರ ಗೊಳಿಸುತ್ತದೆ.

Hide & Seek Review ಪ್ರೇಕ್ಷಕನ ಊಹೆಯ ಜೊತೆ ಕಥೆಯ ಕಣ್ಣಾಮುಚ್ಚಾಲೆ!

ಚರಣ್‌ರಾಜ್‌ ತಮ್ಮ ಸಂಗೀತದ ಮೂಲಕ ಈ ಚಿತ್ರಕ್ಕೆ ತೀವ್ರತೆ ಒದಗಿಸಿದ್ದಾರೆ. ಚಿತ್ರದಲ್ಲಿರುವ ಉತ್ತರ ಕರ್ನಾಟಕ ಭಾಷೆ, ಅದರ ಧ್ವನಿ ಕತೆಗೆ ಅಪೂರ್ವತೆ ತಂದುಕೊಟ್ಟಿದೆ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೊಬ್ಬ ಸಶಕ್ತ ನಾಯಕ ನಟ ಸಿಕ್ಕಿದ್ದಾನೆ ಅಂದುಕೊಳ್ಳಲು ಅಡ್ಡಿಯಿಲ್ಲ.

Follow Us:
Download App:
  • android
  • ios