Usire Usere Film Review: ನೈಜ ಘಟನೆ ಆಧರಿತ ಗಾಢ ಕತೆಯಲ್ಲಿ ಪ್ರೇಮ ‘ಸ್ಪರ್ಶ’
ಇತ್ತ ನಾಯಕ, ನಾಯಕಿ ತಮ್ಮ ಪ್ರೀತಿಯನ್ನು ಹೆತ್ತವರ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಾಗ ಅಲ್ಲೊಂದು ಗಲಾಟೆ ನಡೆಯುತ್ತದೆ. ಈಗ ಹೆತ್ತವರ ವಿರೋಧ ಕಟ್ಟಿಕೊಂಡು ನಗರಕ್ಕೆ ಬರುವ ನಾಯಕ, ನಾಯಕಿಯ ಕತೆ ಇದು.
ಆರ್.ಕೆ
ಹಳ್ಳಿಯಲ್ಲಿ ಹುಟ್ಟಿಕೊಳ್ಳುವ ಪ್ರೀತಿ, ನಗರಕ್ಕೆ ಬಂದು ಮೇಲೆ ಏನಾಗುತ್ತದೆ, ಪ್ರೀತಿಸಿ ಕೈ ಹಿಡಿದ ನಾಯಕ ಸಾವು ಬದುಕಿನ ಮಧ್ಯೆ ಇದ್ದರೆ, ಹುಡುಗಿಯೂ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಕೊನೆಗೆ ಏನಾಗುತ್ತದೆ ಎಂಬುದೇ ಚಿತ್ರದ ಕತೆ. ನೈಜ ಘಟನೆಗಳನ್ನು ಬಳಸಿಕೊಂಡು ಸಿನಿಮಾ ಮಾಡುವುದು ಹೊಸದಲ್ಲ. ಅದೇ ಸಾಲಿಗೆ ಸೇರುವ ಚಿತ್ರ ‘ಉಸಿರೇ ಉಸಿರೇ’. ಆದರೆ, ಇಲ್ಲಿ ಬರುವ ನೈಜ ಘಟನೆ ಯಾವುದೆಂದು ಪ್ರೇಕ್ಷಕನಿಗೆ ಕೊನೆಯಲ್ಲಿ ಗೊತ್ತಾಗುತ್ತದೆ. ಎರಡು ಕುಟುಂಬಗಳು. ಇದು ನಾಯಕ ಮತ್ತು ನಾಯಕಿ ಕುಟುಂಬ. ಧರ್ಮ ಬೇರೆ ಬೇರೆಯಾದರೂ ಸ್ನೇಹಕ್ಕೆ ಇದು ಅಡ್ಡಿ ಆಗಲ್ಲ. ಕೌಟುಂಬಿಕ ಸ್ನೇಹವೇ ಪ್ರೀತಿ ಹುಟ್ಟಿಕೊಳ್ಳುವುದಕ್ಕೂ ಕಾರಣವಾಗುತ್ತದೆ.
ಇತ್ತ ನಾಯಕ, ನಾಯಕಿ ತಮ್ಮ ಪ್ರೀತಿಯನ್ನು ಹೆತ್ತವರ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಾಗ ಅಲ್ಲೊಂದು ಗಲಾಟೆ ನಡೆಯುತ್ತದೆ. ಈಗ ಹೆತ್ತವರ ವಿರೋಧ ಕಟ್ಟಿಕೊಂಡು ನಗರಕ್ಕೆ ಬರುವ ನಾಯಕ, ನಾಯಕಿಯ ಕತೆ ಇದು. ಊರು ಬಿಟ್ಟು ಬಂದ ಜೋಡಿ ಮುಂದೆನಾಗುತ್ತದೆ ಎನ್ನುವ ಕುತೂಹಲಕ್ಕೆ ನಿರ್ದೇಶಕರು ನೈಜ ಘಟನೆಯನ್ನು ಲಿಂಕ್ ಮಾಡುತ್ತಾರೆ. ಮುಂದೇನು ಎಂಬುಕ್ಕೆ ಸಿನಿಮಾ ನೋಡಬೇಕು. ನೈಜ ಘಟನೆಗೆ ಪ್ರೇಮ ‘ಸ್ಪರ್ಶ’ ನೀಡಿದಂತೆ ಸುದೀಪ್ ಅವರ ಪಾತ್ರ ಕೊನೆಯಲ್ಲಿ ಬಂದು ಹೋಗುತ್ತದೆ. ಒಂದೇ ಘಟನೆ ನಂಬಿ ಇಡೀ ಕತೆ ಮಾಡಿದ್ದು ಈ ಚಿತ್ರದ ವಿಶೇಷತೆ. ದೃಶ್ಯಗಳ ಸಂಯೋಜನೆ, ನಿರೂಪಣೆಯಲ್ಲಿ ಇನ್ನೂ ಏನೋ ಬೇಕಿತ್ತು ಅನಿಸುತ್ತದೆ.
ಚಿತ್ರ: ಉಸಿರೇ ಉಸಿರೇ
ನಿರ್ದೇಶನ: ಸಿ ಎಂ ವಿಜಯ್
ತಾರಾಗಣ: ರಾಜೀವ್, ಸುದೀಪ್, ತಾರಾ, ರಾಜೇಶ್ ನಟರಂಗ, ಸುಚೇಂದ್ರ ಪ್ರಸಾದ್, ಶ್ರೀಜಿತ ಘೋಶ್
ರೇಟಿಂಗ್: 3
100 ಕೆಜಿ ಭಾರ ಎತ್ತಿದ ರಶ್ಮಿಕಾ ಮಂದಣ್ಣ: ಎಲ್ಲಾ ನೈಟ್ ಶಿಫ್ಟ್ ಪ್ರಭಾವ ಎಂದಿದ್ಯಾಕೆ
ಚಿತ್ರದ ಅತಿಥಿ ಪಾತ್ರಕ್ಕೆ ಸುದೀಪ್ ಡಬ್ಬಿಂಗ್: ಬಿಗ್‌ಬಾಸ್ ಖ್ಯಾತಿಯ ರಾಜೀವ್ ನಾಯಕನಾಗಿ ನಟಿಸಿರುವ ‘ಉಸಿರೇ ಉಸಿರೇ’ ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಆ ಪಾತ್ರದ ಡಬ್ಬಿಂಗ್ ಅನ್ನೂ ಸುದೀಪ್ ಪೂರ್ಣಗೊಳಿಸಿದ್ದಾರೆ. ಸಿ.ಎಂ.ವಿಜಯ್ ಈ ಸಿನಿಮಾದ ನಿರ್ದೇಶಕ. ಪ್ರದೀಪ್ ಯಾದವ್ ನಿರ್ಮಿಸಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ಶ್ರೀಜಿತ ಚಿತ್ರದ ನಾಯಕಿ. ತೆಲುಗು ನಟ ಖ್ಯಾತ ನಟರಾದ ಬ್ರಹ್ಮಾನಂದ ಹಾಗೂ ಡಾ ಆಲಿ, ದೇವರಾಜ್, ಸಾಧುಕೋಕಿಲ, ಮಂಜು ಪಾವಗಡ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ ತಾರಾಬಳಗದಲ್ಲಿದ್ದಾರೆ.