ತೀರಾ ಚಿಕ್ಕ ವಯಸ್ಸಿಗೇ ಮಲ್ಲು ರಿಯಲ್‌ ಎಸ್ಟೇಟ್‌ ಮಾಡುವುದು, ಕಮಿಷನ್‌ ರೂಪದಲ್ಲಿ ಸಿಗುವ 5 ಲಕ್ಷ ಹಣದಲ್ಲಿ ಮುಂದೆ ಏನು ಮಾಡುತ್ತಾನೆ ಎಂಬುದು ಚಿತ್ರದ ಕುತೂಹಲಕಾರಿ ಅಂಶ. ಮಲ್ಲು ಪಾತ್ರದಲ್ಲಿ ನಿರ್ದೇಶಕರು ಹೇಳಿದಂತೆ ನಟಿಸಿದ್ದಾರೆ!

- ಆರ್‌ಕೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ರದ ಹೆಸರೇ ಹೇಳುವಂತೆ ನಟ ಪುನೀತ್‌ ರಾಜ್‌ಕುಮಾರ್‌ ಅವರ ಆದರ್ಶಗಳನ್ನೇ ಪ್ರಧಾನವಾಗಿಟ್ಟುಕೊಂಡು ರೂಪಿಸಿರುವ ಸಿನಿಮಾ ‘ಪುನೀತ್‌ ನಿವಾಸ’. ಸಿನಿಮಾ ಮಾಡುವ ಗುರಿ, ಮನೆ ಕಟ್ಟುವ ಕನಸು ಈ ಎರಡೂ ದಾರಿಯಲ್ಲಿ ಸಾಗುವ ಕತೆಯ ಮೂಲಕ ನಿರ್ದೇಶಕ ನಾಗೇಂದ್ರ ಪ್ರಸಾದ್‌, ಮಲ್ಲು ಹೆಸರಿನ ಹದಿಹರೆಯದ ಯುವಕನ ಪಾತ್ರದಲ್ಲಿ ಸಂದೇಶ ಸಾರುವ ಪ್ರಯತ್ನ ಮಾಡಿದ್ದಾರೆ.

ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುವ ಮಲ್ಲುಗೆ ಬಡತನ ಆವರಿಸಿಕೊಂಡಿದ್ದರೂ ಪುನೀತ್‌ ಹೆಸರು ಆತನ ಕನಸುಗಳಿಗೆ ಉತ್ಸಾಹ ತುಂಬುತ್ತಿರುತ್ತದೆ. ಇಂಥ ಹುಡುಗನಿಗೆ ಜೀವನದಲ್ಲಿ ಎರಡು ಗುರಿಗಳಿವೆ. ಒಂದು ತಾನು ದುಡಿದ ಹಣದಲ್ಲಿ ಒಂದು ಮನೆ ಕಟ್ಟಬೇಕು, ಹಾಗೆಯೇ ಒಂದು ಸಿನಿಮಾ ಮಾಡಬೇಕು ಎಂಬುದು. ಈ ಹುಡುಗನ ಸಿನಿಮಾ ಮತ್ತು ಮನೆ ನಿರ್ಮಾಣದ ಕನಸು ನನಸಾಗುತ್ತದೆಯೇ ಎಂಬುದು ಚಿತ್ರದ ಕತೆ.

ಚಿತ್ರ: ಪುನೀತ್‌ ನಿವಾಸ

ತಾರಾಗಣ: ವಿಠ್ಠಲ್, ಅಭಿಜಿತ್‌, ಶಂಕರ್‌ ಭಟ್‌, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ಕರಿಸುಬ್ಬು
ನಿರ್ದೇಶನ: ನಾಗೇಂದ್ರ ಪ್ರಸಾದ್

ತೀರಾ ಚಿಕ್ಕ ವಯಸ್ಸಿಗೇ ಮಲ್ಲು ರಿಯಲ್‌ ಎಸ್ಟೇಟ್‌ ಮಾಡುವುದು, ಕಮಿಷನ್‌ ರೂಪದಲ್ಲಿ ಸಿಗುವ 5 ಲಕ್ಷ ಹಣದಲ್ಲಿ ಮುಂದೆ ಏನು ಮಾಡುತ್ತಾನೆ ಎಂಬುದು ಚಿತ್ರದ ಕುತೂಹಲಕಾರಿ ಅಂಶ. ಮಲ್ಲು ಪಾತ್ರದಲ್ಲಿ ಮಾ.ವಿಠ್ಠಲ್‌, ನಿರ್ದೇಶಕರು ಹೇಳಿದಂತೆ ನಟಿಸಿದ್ದಾರೆ! ಕರಿಸುಬ್ಬು, ಶಂಕರ್‌ ಭಟ್‌, ಅಭಿಜಿತ್‌, ಡಿಂಗ್ರಿ ನಾಗರಾಜ್‌ ಇವರೆಲ್ಲ ಬಂದು ಹೋಗುತ್ತಾರೆ. ಸ್ಕ್ರೀನ್‌ ಪ್ಲೇ ಹಾಗೂ ತಾಂತ್ರಿಕ ವಿಭಾಗದ ಕಡೆಗೆ ಹೆಚ್ಚಿನ ಗಮನ ಕೊಡಬೇಕಿತ್ತು. ಯಾಕೆಂದರೆ ಸಾಮಾನ್ಯ ವ್ಯಕ್ತಿಗಳು ತಾವು ಆರಾಧಿಸುವವರನ್ನು ಫಾಲೋ ಮಾಡುವ ಕತೆಗಳನ್ನು ತುಂಬಾ ರೋಚಕವಾಗಿ ಹೇಳ‍ುವ ಅವಕಾಶಗಳು ವಿಪುಲವಾಗಿರುತ್ತವೆ.