Bond Ravi Film Review: ಅಭಿನಯ ಸೂಪರು ಕತೆ ಏರುಪೇರು
ಆರಂಭದಿಂದ ಕೊನೆಯವರೆಗೂ ಪ್ರಮೋದ್ ಈ ಪಾತ್ರದಲ್ಲಿ ಜೀವಿಸಿದ್ದಾರೆ. ಆ್ಯಂಗ್ರಿ ಯಂಗ್ ಮ್ಯಾನ್ ಆಗಲೂ ಸೈ, ಸಾದ ಸೀದ ಪಕ್ಕದ್ಮನೆ ಹುಡುಗನಂಥಾ ಪಾತ್ರಕ್ಕೂ ಸೈ ಅನಿಸುವಂಥಾ ನಟನೆ ಇವರದು.
ಪೀಕೆ
ಯಾರೋ ಯಾರನ್ನೋ ಕೊಲೆ ಮಾಡಿದರೆ ಮತ್ಯಾರೋ ಜೈಲಿಗೆ ಹೋಗ್ತಾರೆ. ಹೀಗೆ ಜೈಲಿಗೆ ಹೋಗೋದನ್ನೇ ಉದ್ಯೋಗ ಮಾಡಿಕೊಂಡವನ ಬದುಕಿನ ತಂಗಾಳಿ, ಬಿರುಗಾಳಿಗಳ ಕಥೆ ‘ಬಾಂಡ್ ರವಿ’. ಸಾಮಾನ್ಯ ಜನ ಜೈಲುವಾಸ ಅಂದ್ರೆ ಬೆಚ್ಚಿಬಿದ್ದರೆ, ತನ್ನ ಹೆಸರನ್ನು ಬಾಂಡ್ ರವಿ ಎಂದು ಬರೆದುಕೊಳ್ಳುವ ನಾಯಕನಿಗೆ ಜೈಲುವಾಸ ಅಂದರೆ ಫುಲ್ ಎನ್‌ಜಾಯ್‌ಮೆಂಟ್. ದುಡ್ಡಿನ ವ್ಯಾಮೋಹಕ್ಕೆ ಯಾರೋ ಮಾಡಿದ ಕೊಲೆಯನ್ನು ತನ್ನ ಮೇಲೆ ಹಾಕಿಕೊಳ್ಳುವ ಈತನಿಗೆ ಕಾಲ್ ಸೆಂಟರ್‌ನ ಹುಡುಗಿಯೊಬ್ಬಳ ಪರಿಚಯವಾಗುತ್ತದೆ.
ಫೋನ್ ಕಾಲ್‌ನಲ್ಲಿ ಸಿಕ್ಕ ಹುಡುಗಿ ಹೃದಯ ತಟ್ಟುತ್ತಾಳೆ. ಹೊಸ ಬದುಕಿನ ಆಸೆ ಹುಟ್ಟಿಸುತ್ತಾಳೆ. ಆ ಹೊಸ ಬದುಕು ಹೇಗಿರುತ್ತೆ ಎಲ್ಲಿಗೆ ತಲುಪುತ್ತೆ ಅನ್ನೋದು ಈ ಸಿನಿಮಾದಲ್ಲಿ ಇಂಟರೆಸ್ಟಿಂಗ್ ಅನಿಸೋ ಸಂಗತಿ. ಆರಂಭದಿಂದ ಕೊನೆಯವರೆಗೂ ಪ್ರಮೋದ್ ಈ ಪಾತ್ರದಲ್ಲಿ ಜೀವಿಸಿದ್ದಾರೆ. ಆ್ಯಂಗ್ರಿ ಯಂಗ್ ಮ್ಯಾನ್ ಆಗಲೂ ಸೈ, ಸಾದ ಸೀದ ಪಕ್ಕದ್ಮನೆ ಹುಡುಗನಂಥಾ ಪಾತ್ರಕ್ಕೂ ಸೈ ಅನಿಸುವಂಥಾ ನಟನೆ ಇವರದು. ಸ್ಟೋರಿಲೈನ್ ಎಷ್ಟೇ ಅಪರೂಪದ್ದಾಗಿ, ಇಂಟರೆಸ್ಟಿಂಗ್ ಅನಿಸಿದ್ದರೂ ಅದನ್ನು ಪ್ರೆಸೆಂಟ್ ಮಾಡುವ ರೀತಿ ಇಂಟರೆಸ್ಟಿಂಗ್ ಅನಿಸದಿದ್ದರೆ ಎಲ್ಲ ನೀರಲ್ಲಿ ಮಾಡಿದ ಹೋಮದಂತಾಗುತ್ತದೆ.
ಚಿತ್ರ: ಬಾಂಡ್ ರವಿ
ತಾರಾಗಣ: ಪ್ರಮೋದ್, ಕಾಜಲ್ ಕುಂದರ್, ಶೋಭರಾಜ್
ನಿರ್ದೇಶನ: ಪ್ರಜ್ವಲ್ ಎಸ್ ಪಿ
ರೇಟಿಂಗ್: 2
ಈ ಚಿತ್ರದಲ್ಲಿ ಸ್ಟೋರಿ ಲೈನ್ ಚೆನ್ನಾಗಿದೆ, ಆದರೆ ಕಥೆಯನ್ನು ಹೇಳುವ ಕ್ರಮದಲ್ಲಿ ನಿರ್ದೇಶಕ ಪ್ರಜ್ವಲ್ ಅವರಿಗೆ ಸ್ಪಷ್ಟತೆ ಇದ್ದಂತಿಲ್ಲ. ಬಾಂಡ್ ರವಿಯ ಬಿಲ್ಡಪ್‌ಗೆ ಅವರು ಕೊಟ್ಟಡೆಡಿಕೇಶನ್ ಅನ್ನು ಕಥೆ ನಿರೂಪಣೆಗೆ, ಉಳಿದ ಪಾತ್ರಗಳ ಪೋಷಣೆಗೂ ಕೊಡಬಹುದಿತ್ತು. ರವಿ ಕಾಳೆ ಮಾಡಿರುವ ಪಾತ್ರವಾಗಲೀ, ಮುಖ್ಯ ವಿಲನ್ ಶೋಭರಾಜ್ ಪಾತ್ರಕ್ಕಾಗಲೀ ಗಟ್ಟಿ ಹಿನ್ನೆಲೆಯೇ ಇಲ್ಲ. ನಾಯಕನ ಪಾತ್ರಕ್ಕೂ ಹಿಸ್ಟರಿ ಇಲ್ಲ. ವರ್ತಮಾನವೂ ಕನ್ವಿನ್ಸಿಂಗ್ ಆಗಿಲ್ಲ. ಮನೋಮೂರ್ತಿ ಹಾಡುಗಳು ಚೆನ್ನಾಗಿದ್ದರೂ ಸಿನಿಮಾದಲ್ಲಿ ಅವುಗಳ ಪ್ರಸ್ತುತತೆ ಕನ್ವಿನ್ಸಿಂಗ್ ಅನಿಸಲ್ಲ.
Vijayanand Film Review: ಸಾಧನೆಯ ವಿಜಯ, ಗೆಲುವಿನ ಆನಂದ
ಮೊದಲರ್ಧ ತೆಳುವಾಗಿದೆ. ಕಥೆ ಟೇಕಾಫ್ ಆಗೋದೇ ಇಲ್ಲ. ಸಿನಿಮಾದ ಮುಕ್ಕಾಲು ಭಾಗ ಅಂದುಕೊಂಡ ಹಾಗೇ ಸಾಗುತ್ತದೆ. ಸಪ್ರೈರ್‍ಸಿಂಗ್ ಎಲಿಮೆಂಟ್ ಕಡಿಮೆ. ಕ್ಲೈಮ್ಯಾಕ್ಸ್ ಕೊಂಚ ಬೇರೆಯಾಗಿ ನಿಲ್ಲುತ್ತದೆ. ಪ್ರೇಕ್ಷಕನನ್ನು ಕುರ್ಚಿ ತುದಿಯಲ್ಲಿ ಕೂರಿಸುವ ಸಿನಿಮಾವಂತೂ ಇದಲ್ಲ. ನಿರ್ದೇಶಕ ಮನಸ್ಸು ಮಾಡಿದ್ದರೆ ಈ ಸಿನಿಮಾವನ್ನು ಆ ಲೆವೆಲ್‌ಗೆ ತೆಗೆದುಕೊಂಡು ಹೋಗಬಹುದಿತ್ತು.