Prajwal Devaraj Abbara Film Review: ವಿಭಿನ್ನ ತಿರುವುಗಳ ಕುತೂಹಲಕರ ಅಬ್ಬರ

ರಾಮ್‌ನಾರಾಯಣ್‌ ಬರೆದಿರೋ ಅಬ್ಬರದ ಕತೆ. ರಾವಣಸುರನಂತೆ ವೈರಮುಡಿ ತನ್ನ ಮಗಳಿಂದ ಪ್ರಾಣ ರಕ್ಷಿಸಿಕೊಳ್ಳಲು ಏನೆಲ್ಲ ತಂತ್ರ-ಪ್ರತಿತಂತ್ರಗಳನ್ನು ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ತುಂಬಾ ರೋಚಕವಾಗಿಯೇ ಕಟ್ಟಿಕೊಡುತ್ತಾರೆ.

Prajwal Devaraj Lekha Chandra Rajshri Ponnappa Nimika Ratnakar Starrer Abbara Movie Review gvd

ಆರ್‌ ಕೇಶವಮೂರ್ತಿ

ಒಬ್ಬ ತನ್ನ ಹೆತ್ತ ಮಗನಿಂದಲೇ ಸಾಯುತ್ತಾನೆ. ಮತ್ತೊಬ್ಬ ತನ್ನ ಮಗಳಿಂದಲೇ ಸಾಯುತ್ತಾನೆ. ಈ ಇಬ್ಬರ ಸಾವುಗಳ ನಡುವೆ ಇರುವ ಲಿಂಕು ಏನೂ ಎಂಬುದೇ ‘ಅಬ್ಬರ’ ಚಿತ್ರದ ಕತೆ. ಇದರ ನಡುವೆ ‘ಒಳ್ಳೆಯವರಿಗೆ ಒಳ್ಳೆಯದಾಗಬೇಕು ಅಂದ್ರೆ ಕೆಟ್ಟವರಿಗೆ ಕೆಟ್ಟದಾಗಲೇ ಬೇಕು’ಎನ್ನುವ ತತ್ವಾದರ್ಶವನ್ನು ನಿರ್ದೇಶಕ ರಾಮ್‌ನಾರಾಯಣ್‌ ಚಿತ್ರದ ನಾಯಕನಿಗೆ ವೆಪನ್‌ನಂತೆ ಕೊಟ್ಟಿರುತ್ತಾರೆ. ಆ ಎರಡು ಸಾವುಗಳ ಹಿನ್ನೆಲೆ, ಈ ತತ್ವಾದರ್ಶನದ ವ್ಯಾಪ್ತಿಯ ಒಳಗೆ ಹಾಡು, ಫೈಟು, ಡ್ಯಾನ್ಸು, ಹಣದ ಲೂಟಿ, ಪ್ರೀತಿ- ಪ್ರೇಮ ಹಾಗೂ ಒಂಚೂರು ತಮಾಷೆ, ಜತೆಗೊಂದಿಷ್ಟು ತಿರುವುಗಳು... 

ಹೀಗೆ ಒಂದು ಕಮರ್ಷಿಯಲ್‌ ಚಿತ್ರಕ್ಕೆ ಏನೆಲ್ಲ ಬೇಕೋ ಅಷ್ಟನ್ನೂ ನಿರ್ದೇಶಕರು ಪ್ಯಾಕ್‌ ಮಾಡಿ ತೆರೆ ಮೇಲೆ ತೆರೆದಿಟ್ಟಿದ್ದಾರೆ. ನಿರ್ದೇಶಕರ ಈ ವಿಭಿನ್ನ ತಿರುವುಗಳ ಕತೆಯನ್ನು ನಟ ಪ್ರಜ್ವಲ್‌ ದೇವರಾಜ್‌ ತಮ್ಮ ಹೆಗಲ ಮೇಲೆ ಹೊತ್ತು ಸಾಗುತ್ತಾರೆ. ಈ ಬಾರಿ ಅವರು ಏಕಕಾಲದಲ್ಲಿ ಮೂರು ರೀತಿಯ ಪಾತ್ರಗಳಲ್ಲಿ ನಟಿಸಿರುವುದು ವಿಶೇಷ. ಆತನ ಹೆಸರು ವೈರಮುಡಿ. ಹತ್ತಾರು ಕ್ರೈಮ್‌ ಮಾಡಿ ಜೈಲಿಗೆ ಹೋಗಿ ಬರುತ್ತಾನೆ. ಈಗ ಪೊಲಿಟಿಕಲ್‌ ಲೀಡರ್‌ ಆಗಲು ಹೊರಟಿದ್ದಾನೆ. ಅವನಿಗೆ ಒಬ್ಬ ಮಾಸ್ಕ್‌ ಮ್ಯಾನ್‌ ಅಡ್ಡಿಯಾಗುತ್ತಾನೆ. ಈ ಮಾಸ್ಕ್‌ ಮ್ಯಾನ್‌ಗೂ ವೈರಮುಡಿಯ ಹಳೆಯ ಕತೆಗೂ ಏನಾದರೂ ನಂಟು ಉಂಟೇ ಎಂಬುದನ್ನು ಚಿತ್ರದಲ್ಲಿ ನೋಡಬೇಕು. 

ಚಿತ್ರ: ಅಬ್ಬರ

ತಾರಾಗಣ: ಪ್ರಜ್ವಲ್‌ ದೇವರಾಜ್‌, ರಾಜಶ್ರೀ ಪೊನ್ನಪ್ಪ, ಲೇಖಾಚಂದ್ರ, ನಿಮಿಕಾ ರತ್ನಕರ್‌, ರವಿಶಂಕರ್‌, ಶೋಭರಾಜ್‌, ವಿಕ್ಟರಿ ವಾಸು, ಶಂಕರ್‌ ಅಶ್ವತ್‌್ಥ, ಕೋಟೆ ಪ್ರಭಾಕರ್‌, ಅರಸು

ನಿರ್ದೇಶನ: ರಾಮ್‌ನಾರಾಯಣ್‌

ರೇಟಿಂಗ್‌: 3

ಇಲ್ಲಿ ಮೂವರು ನಾಯಕಿಯರು. ಒಬ್ಬಳು ಪೊಲೀಸ್‌ ಮಗಳು, ಮತ್ತೊಬ್ಬಳು ಲಾಯರ್‌ ಮಗಳು, ಇನ್ನೊಬ್ಬಳು ಡಾಕ್ಟರ್‌ ಮಗಳು. ಈ ಮೂವರ ಜತೆಗೂ ಹೀರೋ ಪ್ರೇಮದಾಟ ಆಡುತ್ತಾನೆ. ಈ ಮೂವರ ಪೈಕಿ ವೈರಮುಡಿಯನ್ನು ಕೊಲ್ಲುವುದು ಯಾರೆಂಬುದು ಚಿತ್ರದ ಕ್ಲೈಮ್ಯಾಕ್ಸ್‌.ತನ್ನ ಮಗಳಿಂದಲೇ ಪ್ರಾಣಗಂಡ ಇದೆ ಎಂದು ತಿಳಿದು ಆಕೆಯನ್ನು ಕಾಡಿಗೆ ಬಿಟ್ಟು ಬರುವ ಕತೆಯೊಂದು ರಾವಣಸುರನ ಜೀವನದಲ್ಲಿ ಇದೆ. ‘ಅಬ್ಬರ’ ಚಿತ್ರದಲ್ಲಿ ವೈರಮುಡಿಗೆ ತನ್ನ ಮಗಳಿಂದಲೇ ಪ್ರಾಣಗಂಡ ಎದುರಾಗಿದೆ. 

Gandhada Gudi Review: ಮುಗ್ಧನಂತೆ, ಸಂತನಂತೆ; ಬೆರಗಾಗಿ, ಬಯಲಾಗಿ..

ಹಾಗಂತ ಇದು ರಾಮಾಯಣದ ಕತೆಯಲ್ಲ. ರಾಮ್‌ನಾರಾಯಣ್‌ ಬರೆದಿರೋ ಅಬ್ಬರದ ಕತೆ. ರಾವಣಸುರನಂತೆ ವೈರಮುಡಿ ತನ್ನ ಮಗಳಿಂದ ಪ್ರಾಣ ರಕ್ಷಿಸಿಕೊಳ್ಳಲು ಏನೆಲ್ಲ ತಂತ್ರ-ಪ್ರತಿತಂತ್ರಗಳನ್ನು ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ತುಂಬಾ ರೋಚಕವಾಗಿಯೇ ಕಟ್ಟಿಕೊಡುತ್ತಾರೆ. ಪ್ರಜ್ವಲ್‌ ದೇವರಾಜ್‌, ವೈರಮುಡಿ ಪಾತ್ರಧಾರಿ ರವಿಶಂಕರ್‌ ಹಾಗೂ ಕೋಟೆ ಪ್ರಭಾಕರ್‌, ಅರಸು ಪಾತ್ರಗಳು ಗಮನ ಸೆಳೆಯುತ್ತವೆ. ಒಮ್ಮೆ ನೋಡಬಹುದಾದ ಹೊಸ ರೀತಿಯ ಸಿನಿಮಾ ‘ಅಬ್ಬರ’.

Latest Videos
Follow Us:
Download App:
  • android
  • ios