ಸಾಫ್ಟ್‌ವೇರ್‌ ಕ್ಷೇತ್ರದಲ್ಲಿರುವ ನೀವು ಸಿನಿಮಾ ನಿರ್ಮಾಣಕ್ಕೆ ಯಾಕೆ ಬಂದ್ರಿ?

ನಾವಿಲ್ಲಿಗೆ ಬರವು ಪ್ರಮುಖವಾಗಿ ಕಾರಣ. ಕನ್ನಡದ ಮೇಲಿನ ಪ್ರೀತಿ ಅದಕ್ಕಿರುವ ಮೊದಲ ಕಾರಣ. ಜತೆಗೆ ನಿರ್ಮಾಪಕರಾದ ನಾನು, ಶೇಷಾದ್ರಿ ಉಡುಪ, ತಾರಾನಾಥ್‌ ರೈ ಹಾಗೂ ಡಾ. ಸುರೇಖ್‌ ಕುಮಾರ್‌ ಹಳ್ಳಿಗಾಡಿನಿಂದ ಬಂದವರು. ಸಿನಿಮಾ ಅಂದ್ರೆ ಆಕರ್ಷಣೆಯಲ್ಲಿ ಇದ್ದವರು. ಆ ಬಗ್ಗೆ ಕಲ್ಪನೆಗಳಲ್ಲಿ ತೇಲಿದವರು. ಅಲ್ಲಿಗೂ ಹೋಗೋಣ ಎನ್ನುವ ಆಸೆ ಎರಡನೇಯದು. ಇನ್ನು ಹೊಸ ಪ್ರತಿಭೆಗಳಿಗೆ ವೇದಿಕೆಯೊಂದನ್ನು ಕಲ್ಪಿಸೋಣ ಎನ್ನುವುದು ಅದಕ್ಕಿದ್ದ ಕೊನೆಯ ಮತ್ತು ಮೂರನೇ ಕಾರಣ.

'ಮುಂದಿನ ನಿಲ್ದಾಣ' ಫಸ್ಟ್ ಲುಕ್!

ಸಿನಿಮಾ ನಿರ್ಮಾಣದ ಮೊದಲ ಪ್ರಯತ್ನಕ್ಕೆ ‘ಮುಂದಿನ ನಿಲ್ದಾಣ’ವೇ ಯಾಕೆ ಸೂಕ್ತ ಎನಿಸಿತು?

ಸಿನಿಮಾ ಕಂಟೆಂಟ್‌. ಒಳ್ಳೆಯ ಕಂಟೆಂಟ್‌ ಇರುವಂತಹ ಸಿನಿಮಾ ಕೊಟ್ಟರೆ ಜನರು ನೋಡ್ತಾರೆ ಎನ್ನುವುದು ಇತ್ತೀಚೆಗೆ ಸಾಬೀತಾದ ವಿಚಾರ. ಅಂತಹ ಕತೆ ಸಿಕ್ಕರೆ ನಾವೇಕೆ ಸಿನಿಮಾ ಮಾಡಬಾರದು ಅಂತ ಯೋಚಿಸುತ್ತಿದ್ದಾಗ ಸಿಕ್ಕ ಕತೆ ಇದು. ತುಂಬಾ ನೈಜ ಮತ್ತು ಹೊಸತನದಿಂದ ಕೂಡಿದ ಕತೆ ಇದು. ಎಲ್ಲೂ ಮೇಲೋ ಡ್ರಾಮಾ ಇಲ್ಲ. ಕತೆ ಜತೆಗೆ ಟ್ರಾವೆಲ್‌ ಮಾಡುತ್ತಾ ಹೊರಟರೆ, ಆಪ್ತವೆನಿಸುವ ದೃಶ್ಯಗಳು, ಮಾತುಗಳು ಇಲ್ಲಿವೆ. ಅಲ್ಲಿರುವ ಪಾತ್ರಧಾರಿಗಳು ಪಕ್ಕದ ಮನೆಯವರೇ ಎಂದೆನಿಸುತ್ತದೆ. ಅದೇ ನಮ್ಮನ್ನು ನಿರ್ಮಾಪಕರನ್ನಾಗಿಸಿತು.

ಪಾತ್ರವರ್ಗದ ಆಯ್ಕೆಯಲ್ಲಿ ನೀವು ಇದ್ರಾ?

ಖಂಡಿತಾ ಹೌದು. ಪಾತ್ರವರ್ಗ ಮಾತ್ರವಲ್ಲ, ಇಡೀ ಸಿನಿಮಾ ಒಂದು ಟೀಮ್‌ ವರ್ಕ್ನಿಂದ ಆಗಿದ್ದು. ವಿನಯ್‌ ಅವರು ಕತೆ ಹೇಳಿದಾಗ ಅಲ್ಲಿನ ಪಾತ್ರಗಳಿಗೆ ಯಾರು ಸೂಕ್ತ, ಹೊಸಬರ ಪೈಕಿ ಯಾರೆಲ್ಲ ಹೇಗೆ ಬ್ಯುಸಿ ಇದ್ದಾರೆ. ಅವರ ಜರ್ನಿ ಹೇಗಿದೆ ಅಂತೆಲ್ಲ ಯೋಚಿಸುತ್ತಿದ್ದಾಗ ಚಿತ್ರದ ನಾಯಕನ ಪಾತ್ರಕ್ಕೆ ಸಿಕ್ಕಿದ್ದು ಪ್ರವೀಣ್‌ ತೇಜ್‌. ಐದಾರು ವರ್ಷಗಳಿಂದ ನಾನು ಅವರ ಸಿನಿಮಾಗಳನ್ನು ವಾಚ್‌ ಮಾಡಿದ್ದೆ. ಇನ್ನು ರಾಧಿಕಾ ನಾರಾಯಣ್‌ ಅವರಿಗಿದ್ದ ಇಮೇಜ್‌ ಬದಲಾಯಿಸಲು ಇದೊಂದು ಅವಕಾಶ ಅಂತ ಅವರನ್ನೇ ಆಯ್ಕೆ ಮಾಡಿಕೊಂಡೆವು. ಅನನ್ಯ ಅವರು ಆಡಿಷನ್‌ ಮೂಲಕ ಸೆಲೆಕ್ಟ್ ಆದ್ರು. ದತ್ತಣ್ಣ ಅವರದ್ದು ನಮ್ಮದೇ ಆಯ್ಕೆ.

ಹೆಸರು ಬದಲಾಯಿಸಿಕೊಂಡ್ರು ರಂಗಿತರಂಗ ನಟಿ ರಾಧಿಕಾ!

ನಿಮ್ಮ ಪ್ರಕಾರ ಒಂದು ಪಕ್ಕಾ ಮನರಂಜನಾ ಸಿನಿಮಾ ಅಂದ್ರೆ ಹೇಗೆ?

ಮೊದಲು ಕಂಟೆಂಟ್‌, ಆನಂತರ ಪಾತ್ರವರ್ಗ, ಉಳಿದಂತೆ ಸಂಗೀತ, ಛಾಯಾಗ್ರಹಣ, ಕಲೆ, ವಸ್ತ್ರ ವಿನ್ಯಾಸ ಇತ್ಯಾದಿ. ಇಲ್ಲಿ ಯಾವುದು ಮೊದಲಲ್ಲ, ಯಾವುದು ಕೊನೆಯಲ್ಲ. ಎಲ್ಲವೂ ಸಮಾನಂತರದಲ್ಲಿ ಹದವಾಗಿ ಬೆರೆತಿರಬೇಕು. ರುಚಿ ಕಟ್ಟಾದ ಅಡುಗೆ ಹೇಗೆ ಸಿದ್ಧಗೊಳ್ಳುತ್ತದೆಯೋ ಹಾಗೆಯೇ ಒಂದು ಸಿನಿಮಾ ಕೂಡ. ಅವೆಲ್ಲವೂ ಇಲ್ಲಿ ಸಮ್ಮಿಳಿತಗೊಂಡಿವೆ ಎನ್ನುವುದು ನನ್ನ ಭಾವನೆ.

ಕನ್ನಡದ ಪ್ರೇಕ್ಷಕರು ನಿಮ್ಮ ಸಿನಿಮಾವನ್ನು ಯಾಕೆ ನೋಡಬೇಕು?

ನಿಜ, ಒಬ್ಬ ಕಾಮನ್‌ ಆಡಿಯನ್ಸ್‌ ಆಗಿ ನಾನು ಕೂಡ ಒಂದು ಸಿನಿಮಾ ಹೀಗೆ ಇರಬೇಕೆಂದು ಬಯಸುತ್ತೇನೆ. ಯಾಕಂದ್ರೆ ದುಡ್ಡು ಕೊಟ್ಟು ಚಿತ್ರಮಂದಿರಕ್ಕೆ ಹೋದ್ರೆ ಮನರಂಜನೆ ಬೇಕೆನ್ನುವುದು ನನ್ನ ಮೊದಲ ಆದ್ಯತೆ. ಉಳಿದಂತೆ ಎಲ್ಲವೂ. ಇದನ್ನೇ ನಾವು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಬಾಲಿವುಡ್‌ ಸಿನಿಮಾಗಳ ಗುಣಮಟ್ಟದಲ್ಲಿ ಒಂದು ಸಿನಿಮಾ ಮಾಡ್ಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಅದಕ್ಕೆ ತಕ್ಕಂತೆಯೇ ಈ ಸಿನಿಮಾ ಮೂಡಿಬಂದಿದೆ. ಎಲ್ಲೂ ಫ್ಯಾಂಟಸಿ ಎನ್ನುವುದಿಲ್ಲ. ಎಲ್ಲವೂ ನೈಜತೆಗೆ ಹತ್ತಿರವಾದ ಅಂಶ. ಆ ಕಾರಣಕ್ಕೆ ಪ್ರೇಕ್ಷಕರು ಈ ಸಿನಿಮಾ ನೋಡಿ ಹಾರೈಸಬೇಕೆನ್ನುವುದು ನನ್ನ ವಿನಂತಿ.

ರೊಮ್ಯಾಂಟಿಕ್‌ ಸ್ಟೋರಿ, ಮಾಡರ್ನ್‌ ಲುಕ್ಕು ರಾಧಿಕಾ ನಾರಾಯಣ್‌!