Asianet Suvarna News Asianet Suvarna News

'ಮುಂದಿನ ನಿಲ್ದಾಣ' ಫಸ್ಟ್ ಲುಕ್!

 

ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಚಿತ್ರವೊಂದು ಬರುತ್ತಿದ್ದು, ಈಗಷ್ಟೆ ಅದರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದ ಹೆಸರು ‘ಮುಂದಿನ ನಿಲ್ದಾಣ’. 

 

Kannada movie Mundina Nildana first poster look
Author
Bangalore, First Published Aug 5, 2019, 10:22 AM IST
  • Facebook
  • Twitter
  • Whatsapp

ಪೋಸ್ಟರ್‌ನಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದ ನಾಯಕ ‘ಚೂರಿಕಟ್ಟೆ’ ಪ್ರವೀಣ್ ತೇಜ್. ನಾಯಕಿ ರಾಧಿಕಾ ಚೇತನ್. ವಿನಯ್ ಭಾರದ್ವಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಕೋಸ್ಟಲ್ ಬ್ರಿಜ್ ಪ್ರೊಡಕ್ಷನ್‌ನಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ.

ಪಿಆರ್‌ಕೆ ಸಂಸ್ಥೆ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದೆ. ಕತೆಗೆ ತಕ್ಕಂತೆ ಕರಣ್ ಆಚಾರ್ಯ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ. ಕರಣ್ ಆಚಾರ್ಯ ಈ ಹಿಂದೆ ಸಾಕಷ್ಟು ಸದ್ದು ಮಾಡಿದ ಹನುಮಾನ್ ಪೋಸ್ಟರ್ ವಿನ್ಯಾಸ ಮಾಡಿದ ಪ್ರತಿಭೆ.

ಕೆಜಿಎಫ್ ವಿಲನ್‌ಗೂ ಇದೆ ಪಂಜಾಬ್‌ನಲ್ಲಿ ಅಭಿಮಾನಿಗಳ ಸಂಘ!

‘ಇದು ದೇಶದ ಯುವಕರ ನ್ಯಾಷನಲ್ ಪೋಸ್ಟರ್‌ನಂತೆ ಕಾಣುತ್ತಿದ್ದು, ಈ ಪೋಸ್ಟರ್ ಮೂಲಕ ನಮ್ಮ ಚಿತ್ರಕ್ಕೆ ನ್ಯಾಷನಲ್ ಲುಕ್ ಬಂದಿದೆ.ಮೂರು ಮುಖ್ಯ ಪಾತ್ರಗಳ ಮುಖ ತೋರಿಸದೆ, ಇವರ ಪಾತ್ರ ಹೇಗಿರಬಹುದು ಎಂಬ ಕುತೂಹಲ ಹೆಚ್ಚಿಸುವಂತೆ ಪೋಸ್ಟರ್ ಇದೆ. ಅಕ್ಟೋಬರ್ ತಿಂಗಳಲ್ಲಿ ಈ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಅನನ್ಯ ಕಶ್ಯಪ್ ಚಿತ್ರದ ಮತ್ತೊಬ್ಬ ನಾಯಕಿ’ ಎಂಬುದು ನಿರ್ದೇಶಕ ವಿನಯ್ ಭಾರದ್ವಾಜ್ ಮಾತು.

 

Follow Us:
Download App:
  • android
  • ios