Evidence Film Review: ಹೆಣ್ಣು, ಸ್ನೇಹ, ಮತ್ಸರ ಮತ್ತು ಕೊಲೆ
ಇಬ್ಬರು ಸ್ನೇಹಿತರು. ಒಬ್ಬ ಡಾಕ್ಟರ್, ಮತ್ತೊಬ್ಬ ಇದೇ ಡಾಕ್ಟರ್ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾನೆ. ಡಾಕ್ಟರ್‌ಗೆ ಸ್ನೇಹಿತನನ್ನು ಕಂಡರೆ ಆಗದು. ಇವರ ನಡುವೆ ಯಾವ ಮಟ್ಟಕ್ಕೆ ಮತ್ಸರ ಹುಟ್ಟಿಕೊಂಡಿರುತ್ತದೆ ಎಂದರೆ ಅದು ಸಾವು-ನೋವುಗಳನ್ನು ಉಂಟು ಮಾಡುತ್ತದೆ.
ಆರ್.ಕೆ
ಕ್ರೈಮ್, ಥ್ರಿಲ್ಲರ್ ನೆರಳಿನಲ್ಲಿ ಅನಾವರಣಗೊಳ್ಳುವ ಕತೆಯೇ ‘ಎವಿಡೆನ್ಸ್’ . ಇಲ್ಲಿ ಸ್ನೇಹ, ಪ್ರೀತಿಯ ಜತೆಗೆ ದ್ವೇಷವೂ ಇದೆ. ನಿರ್ದೇಶಕ ಪ್ರವೀಣ್ ಸಿ ಪಿ ಅವರು ತನಿಖೆಯ ಜಾಡಿನಲ್ಲಿ ಥ್ರಿಲ್ಲಿಂಗ್ ಅನುಭವ ಕೊಡುವ ಕತೆ ಹೇಳುವ ಪ್ರಯತ್ನ ಮಾಡಿದ್ದಾರೆ. ಮೇಕಿಂಗ್ ಸಾಧಾರಣ, ಕತೆ ಕುತೂಹಲಕಾರಿ. ಇದೇ ಚಿತ್ರದ ಹೈಲೈಟ್.
ಇಬ್ಬರು ಸ್ನೇಹಿತರು. ಒಬ್ಬ ಡಾಕ್ಟರ್, ಮತ್ತೊಬ್ಬ ಇದೇ ಡಾಕ್ಟರ್ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾನೆ. ಡಾಕ್ಟರ್‌ಗೆ ಸ್ನೇಹಿತನನ್ನು ಕಂಡರೆ ಆಗದು. ಇವರ ನಡುವೆ ಯಾವ ಮಟ್ಟಕ್ಕೆ ಮತ್ಸರ ಹುಟ್ಟಿಕೊಂಡಿರುತ್ತದೆ ಎಂದರೆ ಅದು ಸಾವು-ನೋವುಗಳನ್ನು ಉಂಟು ಮಾಡುತ್ತದೆ. ಹಾಗೆ ಸ್ನೇಹಿತನನ್ನೇ ದ್ವೇಷಿಸುವುದಕ್ಕೆ ಕಾರಣ ಏನು, ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎನ್ನುವುದು ಚಿತ್ರದ ಆತ್ಮ.
ಚಿತ್ರ: ಎವಿಡೆನ್ಸ್
ತಾರಗಣ: ಮಾನಸ ಜೋಶಿ, ರೋಬೊ ಗಣೇಶ್, ಆಕರ್ಷ್ ಆದಿತ್ಯ, ರಚಿತಾ, ಚಮಕ್‌ಚಂದ್ರ, ಮನಮೋಹನ್ ರೈ, ಶಿವಕುಮಾರ್ ಆರಾಧ್ಯ
ನಿರ್ದೇಶನ: ಪ್ರವೀಣ್ ಸಿ ಪಿ
ರೇಟಿಂಗ್: 3
ಎವಿಡೆನ್ಸ್‌ಗಳು ಇಲ್ಲದೆ ಕ್ರೈಮ್ ಮಾಡಿದವನು ಕೊನೆಗೆ ಹೇಗೆ ಸಿಕ್ಕಿಕೊಳ್ಳುತ್ತಾನೆ ಎಂಬುದು ಕತೆಯ ತಿರುವು. ತನಿಖಾಧಿಕಾರಿ ಮಾನಸ ಜೋಶಿ, ಡಾಕ್ಟರ್ ಪಾತ್ರದಲ್ಲಿ ರೋಬೊ ಗಣೇಶ್ ನಟನೆ ಸೂಪರ್. ಕಡಿಮೆ ಪಾತ್ರಧಾರಿಗಳು, ಅಬ್ಬರವಿಲ್ಲದ ನಿರೂಪಣೆ, ಒಂದು ಘಟನೆ, ಮತ್ತು ಅದರ ಸುತ್ತ ತೆರೆದುಕೊಳ್ಳುವ ಪಾತ್ರಧಾರಿಗಳು ಚಿತ್ರದ ಪ್ರಧಾನ ಅಂಶಗಳು.