ರಣ್‌ ಶ್ರೀನಿವಾಸ್‌, ಅನಂತ್‌ನಾಗ್‌, ಪ್ರಕಾಶ್‌ ಬೆಳವಾಡಿ, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಶರ್ಮಿಳಾ ಮಾಂಡ್ರೆ ಅಭಿನಯಿಸಿರುವ ಮಂಡಲ ಸಿನಿಮಾ ಬಿಡುಗಡೆಯಾಗುತ್ತಿದೆ. 

ಪ್ರಿಯಾ ಕೆರ್ವಾಶೆ

ಸೈಫೈಗಳ ಹಲವು ಸಾಧ್ಯತೆಗಳನ್ನು ಹಾಲಿವುಡ್‌ ಸಿನಿಮಾಗಳು ತೆರೆದಿಟ್ಟಿವೆ. ಈಗ ಯಾವ ಸಿನಿಮಾ ಬಂದರೂ ಅದರ ಅನುಕರಣೆ ಏನೋ ಅನಿಸಿಬಿಡುತ್ತದೆ. ಇಂಥಾ ಮಿತಿಯನ್ನು ಮೀರುವಂತೆ ಮಾಡೋದು ಪ್ರಾದೇಶಿಕತೆಯ ಸ್ಪರ್ಶ. ಅಂಥದ್ದೊಂದು ಸ್ಥಳೀಯತೆಯ ಟಚ್‌ ಕೊಡುವ ಪ್ರಯತ್ನದಲ್ಲಿ ಕೊಂಚ ವಿಭಿನ್ನ ಅನಿಸುವ ಕತೆ ಇರುವ ಸಿನಿಮಾ ಮಂಡಲ.

ತಾರಾಗಣ: ಕಿರಣ್‌ ಶ್ರೀನಿವಾಸ್‌, ಅನಂತ್‌ನಾಗ್‌, ಪ್ರಕಾಶ್‌ ಬೆಳವಾಡಿ, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಶರ್ಮಿಳಾ ಮಾಂಡ್ರೆ

ನಿರ್ದೇಶನ: ಅಜಯ್‌ ಸರ್ಪೇಶ್ಕರ್‌

ರೇಟಿಂಗ್‌ : 3

KADALA THEERADA BHARGAVA FILM REVIEW ಕಡಲ ತೀರದ ಗೊಂದಲಗಳು

ಗೆಳತಿ ಮಾಯಾಗಾಗಿ ಭಾರತಕ್ಕೆ ಬರುವ ಅನಿವಾಸಿ ಭಾರತೀಯ ಅರ್ಜುನ್‌ ಅರಳಿಕಟ್ಟೆ. ಮಾಯಾ ಏರೋ ಸ್ಪೇಸ್‌ ಇಂಜಿನಿಯರ್‌. ಅವಳ ನೆವದಲ್ಲಿ ಅರ್ಜುನ್‌ ಚಿತ್ರ ವಿಚಿತ್ರ ಅನುಭವಗಳಿಗೆ ಸಾಕ್ಷಿಯಾಗುತ್ತಾನೆ. ಮೇಲ್ನೋಟಕ್ಕೆ ಯುಎಫ್‌ಓ ಅಂದರೆ ಹಾರುವ ತಟ್ಟೆ, ಅನ್ಯಗ್ರಹ ಜೀವಿಗಳ ಬಗ್ಗೆ ಹಿಂಟ್‌ ಕೊಡುತ್ತಾ ಹೋಗುವ ಸಿನಿಮಾ ಮತ್ತೇನನ್ನೋ ಹೇಳಲು ಪ್ರಯತ್ನಿಸುತ್ತದೆ. ಆ ‘ಮತ್ತೇನೋ..’ ಏನು ಅನ್ನೋದೇ ಕೌತುಕ. ಇದರಲ್ಲಿ ಬರುವ ‘ಮಂಡಲ’ದ ಹಿನ್ನೆಲೆಯೂ ಚೆನ್ನಾಗಿದೆ.

ಬಹಳ ಇಂಟರೆಸ್ಟಿಂಗ್‌ ಅನಿಸೋದು ಹ್ಯಾಕರ್‌ ಯಶೋದಾ. ಆಕೆ ಯಾರು ಅನ್ನೋದನ್ನ ಸಿನಿಮಾದಲ್ಲೇ ನೋಡಿದ್ರೆ ಚಂದ. ಆ ಪಾತ್ರಕ್ಕೆ ಏನೇನೋ ಸಾಧ್ಯತೆಗಳಿದ್ದವು. ಆದರೆ ಹಾಸ್ಯ ಲೇಪದಲ್ಲಿ ಸೀಮಿತ ಪರಿಧಿಯಲ್ಲಿ ಉಳಿದುಬಿಟ್ಟಿತು. ಇನ್ನೊಂದು ರಾಕೆಟ್‌ ತಾತ ಪಾತ್ರಕ್ಕೂ ಇಂಥಾ ಅಪಾರ ಸಾಧ್ಯತೆಗಳಿದ್ದವು. ಇವೆರಡೂ ಈ ನೆಲದಿಂದ ಎದ್ದುಬಂದಂಥಾ ಪಾತ್ರಗಳು. ಈ ಪಾತ್ರಗಳೇ ಕೇಂದ್ರವಾಗಿದ್ದರೆ ಸಿನಿಮಾದ ರೀತಿಯೇ ಬದಲಾಗ್ತಿತ್ತು. ಈಗಿರುವ ಎಲೀಟ್‌ ಕ್ಲಾಸ್‌ ಚಿತ್ರದ ಬದಲಿಗೆ ಸೈಫೈನಲ್ಲಿ ಹೊಸ ಮಾದರಿಯ ಸಿನಿಮಾವಾಗ್ತಿತ್ತು. ನಟ್‌ ಕೇಸ್‌ ಮೂರ್ತಿ ಪಾತ್ರದಲ್ಲಿ ಅನಂತ್‌ನಾಗ್‌ ನಟಿಸಿದ್ದಾರೆ. ಮನೆ ಮುಂದೆ ‘ನಾಯಿ ಇದೆ, ಕಚ್ಚುತ್ತೆ’ ಅನ್ನೋ ಬೋರ್ಡ್‌ ಹಾಕಿಕೊಂಡ ಈ ಹಿಲೇರಿಯಸ್‌ ಪಾತ್ರ ಬಿಲ್ಡಪ್‌ ತೆಗೆದುಕೊಂಡ ಲೆವೆಲ್‌ಗೆ ಬೆಳೆಯೋದಿಲ್ಲ. ಆದರೆ ಅನಂತ್‌ ನಟನೆ ಎಂದಿನಂತೆ ಸಹಜ, ಲೀಲಾಜಾಲ.

Gowli Review: ತಾಂತ್ರಿಕವಾಗಿ ಘರ್ಜಿಸುವ ಶ್ರೀನಗರ ಕಿಟ್ಟಿ 'ಗೌಳಿ'

ಸಿನಿಮಾದಲ್ಲಿ ಅಲ್ಲಲ್ಲಿ ಎಳೆದಾಟ ಇದೆ. ಕೊನೆಯಲ್ಲಿ ರಿವೀಲ್‌ ಆಗೋ ಸೀಕ್ರೆಟ್‌ ಸಾಮಾನ್ಯ ಪ್ರೇಕ್ಷಕನ ತಲೆಯೊಳಗೆ ಇಳಿಯೋ ಮೊದಲೇ ಸಿನಿಮಾ ಕೊನೆಯಾಗುತ್ತದೆ. ಕೊನೆಯ ಭಾಗ ಇಂಗ್ಲಿಷ್‌ನಲ್ಲಿದೆ. ಸಬ್‌ಟೈಟಲ್ಲೂ ಇಂಗ್ಲಿಷಿನಲ್ಲೇ ಇದೆ. ಸಿನಿಮಾದುದ್ದಕ್ಕೂ ಇಂಗ್ಲಿಷ್‌ ಹಾವಳಿ ವಿಪರೀತ. ಸುಧಾ ಬೆಳವಾಡಿ ಪಾತ್ರದೊಳಗೆ ಜೀವಿಸಿದ್ದಾರೆ. ಡಿಸಿಪಿ ರಾಧಿಕಾ ಪಾತ್ರಕ್ಕೆ ಬೇಕಾದ ಗತ್ತು, ಠೀವಿ ಪರಿಣಾಮಕಾರಿಯಾಗಿ ಬಂದಿಲ್ಲ. ಅರ್ಜುನ್‌ ಪಾತ್ರಕ್ಕೆ ಕಿರಣ್‌ ಶ್ರೀನಿವಾಸ್‌ ನ್ಯಾಯ ಒದಗಿಸಿದ್ದಾರೆ. ಜೆಸ್ಸಿ ಕ್ಲಿಂಟನ್‌ ಬ್ಯಾಗ್ರೌಂಡ್‌ ಸ್ಕೋರ್‌ ಕತೆಗೆ ಪೂರಕ. ನಿರ್ದೇಶಕ ಅಜಯ್‌ ಸರ್ಪೇಶ್‌ಕರ್‌ ಮುಂದಿನ ದಿನಗಳಲ್ಲಿ ಒಳ್ಳೆ ಸಿನಿಮಾ ಕೊಡಬಹುದು ಅನ್ನೋ ನಿರೀಕ್ಷೆ ಹುಟ್ಟಿಸುತ್ತಾರೆ.