Sneharshi review ಡೆಲಿವರಿ ಬಾಯ್ಸ್ ಬದುಕು ಬವಣೆಯ ಚಿತ್ರ
ಕಿರಣ್ ನಾರಾಯಣ್, ಸಂಜನಾ ಬುರ್ಲಿ, ಸುಧಾ ಬೆಳವಾಡಿ, ರಂಗನಾಥ್ ಸಂಪತ್ ನಟನೆಯ ಸ್ನೇಹರ್ಷಿ ಸಿನಿಮಾ ರಿಲೀಸ್ ಆಗಿದೆ...ಚಿತ್ರ ಹೇಗಿದೆ?
ಪೀಕೆ
ಸ್ನೇಹಕ್ಕಾಗಿ ಜೀವ ಒತ್ತೆ ಇಟ್ಟು ಹೋರಾಡುವ ಯುವಕನ ಕಥೆ ‘ಸ್ನೇಹರ್ಷಿ’. ಸಿನಿಮಾ ಅಂದರೆ ಅದರಲ್ಲಿ ಪ್ರೇಮ, ರೊಮ್ಯಾನ್ಸ್, ಫೈಟ್, ಹಾಡು, ಮದರ್ ಸೆಂಟಿಮೆಂಟ್ ಇವೆಲ್ಲ ಇರಬೇಕು ಅನ್ನೋ ಥಿಯರಿಯನ್ನು ತಲೆಯಲ್ಲಿಟ್ಟುಕೊಂಡು ಅವನ್ನೂ ಸೇರಿಸಲಾಗಿದೆ.
ಮಗ ಪೊಲೀಸ್ ಡಿಪಾರ್ಟ್‌ಮೆಂಟಿಗೆ ಸೇರಬೇಕು ಅನ್ನೋದು ತಾಯಿ ಪಾಯಿಂಟ್ ಪದ್ಮಾ ಆಸೆ. ಆದರೆ ಈ ಮಗನೋ ಪೊಲೀಸ್ ಜೇಬಿಂದಲೇ ದುಡ್ಡು ಹಾರಿಸಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಕಣ್ಣೀರು ಒರೆಸೋ ಕರುಣಾಮಯಿ. ಇಂಥಾ ಹುಡುಗನಿಗೆ ಐಸ್‌ಕ್ರೀಮಿನಂಥಾ ಹುಡುಗಿ ಮೇಲೆ ಜೋರಾಗಿಯೇ ಲವ್ವಾಗುತ್ತೆ.
MAYANAGARI REVIEW ಕುತೂಹಲಕರ ತಿರುವುಮುರುವು ಪ್ರಯಾಣದ ಮಾಯಾನಗರಿ
ತಾರಾಗಣ: ಕಿರಣ್ ನಾರಾಯಣ್, ಸಂಜನಾ ಬುರ್ಲಿ, ಸುಧಾ ಬೆಳವಾಡಿ, ರಂಗನಾಥ್ ಸಂಪತ್
ನಿರ್ದೇಶನ: ಕಿರಣ್ ನಾರಾಯಣ್
ರೇಟಿಂಗ್: 3
ಇದು ಸಿನಿಮಾ ಕಥೆಯಾ ಅಂದರೆ ಖಂಡಿತಾ ಅಲ್ಲ! ಕಥೆ ಶುರು ಆಗ್ಬೇಕು ಅಂದರೆ ಇಂಟರ್‌ವಲ್ ಮುಗಿಯೋವರೆಗೂ ಕಾಯಬೇಕು, ಅಲ್ಲೀವರೆಗೆ ಈ ಲವ್ವಿ ಡವ್ವಿ ಎಂಟರ್‌ಟೇನ್‌ಮೆಂಟಿನ ಉಚಿತ ಪ್ಯಾಕೇಜು. ಎರಡನೇ ಭಾಗದಲ್ಲಿ ಡೆಲಿವರಿ ಬಾಯ್ ಬದುಕಿನ ಕಷ್ಟ, ಒದ್ದಾಟದ ದರ್ಶನ. ಡೆಲಿವರಿ ಬಾಯ್ ಸ್ನೇಹಿತನಿಗಾಗಿ ಹೀರೋ ಏನು ಮಾಡುತ್ತಾನೆ, ಆತನ ನೆವದಲ್ಲಿ ಡೆಲಿವರಿ ಬಾಯ್‌ಗಳ ಪರ ಹೇಗೆ ಹೋರಾಡುತ್ತಾನೆ ಅನ್ನೋದು ಸಿನಿಮಾದ ಒನ್‌ಲೈನ್.
ನಮ್ಮೂರಲ್ಲಿ ನಮ್ಮ ಸಿನಿಮಾ ಬಿಡುಗಡೆ ಮಾಡಕ್ಕೆ ನಾವ್ಯಾಕೆ ಹೆದರಬೇಕು: ದರ್ಶನ್
ಕಥೆಯಲ್ಲಿ, ಸಿನಿಮಾ ಮೇಕಿಂಗ್‌ನಲ್ಲಿ ಅಪಾರ ಕ್ರಿಯೇಟಿವಿಟಿ ನಿರೀಕ್ಷೆ ಬೇಡ. ಇಲ್ಲಿ ತೆಗೆದುಕೊಂಡಿರುವ ಸಬ್ಜೆಕ್ಟ್ ಕೊಂಚ ಹಳೆಯದು. ಆದರೆ ಈ ಸಮಸ್ಯೆ ಇಂದಿಗೂ ಇರುವ ಕಾರಣ ಪ್ರಸ್ತುತತೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.
ಹೀರೋ ಫ್ರೆಂಡ್ ಡೆಲಿವರಿ ಬಾಯ್ ಪಾತ್ರ ಮಾಡಿದ ಕಲಾವಿದನ ನಟನೆ ಗಮನ ಸೆಳೆಯುತ್ತದೆ. ಸಂಜನಾ ಬುರ್ಲಿ ಪಾತ್ರ ಗ್ಲಾಮರ್‌ಗಷ್ಟೇ ಸೀಮಿತವಾದಂತಿದೆ. ವೀಕೆಂಡಲ್ಲಿ ಎಲ್ಲಾ ರಸಗಳ ಪ್ಯಾಕೇಜ್‌ನಂಥಾ ಸಿನಿಮಾ ನೋಡಬೇಕು ಅನ್ನೋರು ಸ್ನೇಹರ್ಷಿ ನೋಡಬಹುದು.