Trikona Film Review: ದಾರಿ ಒಂದು ಘಟನೆ ಮೂರು

ಥ್ರಿಲ್ಲರ್‌ ನೆರಳಿನಲ್ಲಿ ಸಾಗುವ ಇಂಥ ಗಂಭೀರ ಕತೆಯಲ್ಲಿ ನಗಿಸುವುದಕ್ಕಾಗಿಯೇ ಸಾಧು ಕೋಕಿಲ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಾಂಗ್ಲಿಯಾನ ಮಾತುಗಳೇ ಪ್ರೇಕ್ಷಕನಿಗೆ ಮನರಂಜನೆಯ ಟಾನಿಕ್‌.

Kannada Movie Trikona Film Review gvd

ಆರ್‌. ಕೇಶವಮೂರ್ತಿ

ಮನುಷ್ಯನ ಮೂರು ಮುಖ್ಯ ಗುಣಗಳಾದ ತಾಳ್ಮೆ, ಅಹಂ, ಶಕ್ತಿ ಈ ಮೂರರಲ್ಲಿ ಯಾವುದು ಗೆಲ್ಲುತ್ತದೆ ಎಂಬುದನ್ನು ಹೇಳಲು ಸಾಧ್ಯವೇ ಎನ್ನುವ ಕುತೂಹಲಕ್ಕೆ ಉತ್ತರ ಕೊಡುವ ಚಿತ್ರವೇ ‘ತ್ರಿಕೋನ’ (Trikona). ವಯಸ್ಸಾದ, ನಡು ವಯಸ್ಸಿನ ದಂಪತಿ ಮತ್ತು ಒಬ್ಬ ಬಿಸಿ ರಕ್ತದ ಹುಡುಗ. ಈ ಮೂವರಿಗೂ ಈ ಮೂರು ಗುಣಗಳನ್ನು ಅನ್ವಯಿಸಿ, ಒಂದೇ ದಾರಿಯಲ್ಲಿ ಕತೆಯನ್ನು ಹೇಳುವ ತಂತ್ರಕ್ಕೆ ನಿರ್ದೇಶಕ ಚಂದ್ರಕಾಂತ್‌ ಮೊರೆ ಹೋಗುತ್ತಾರೆ. ಈ ಗುಣಗಳನ್ನು ಪರೀಕ್ಷೆ ಮಾಡಲು ಯಮನ ರೂಪದಲ್ಲಿ ಕಾಲ ಬರುತ್ತಾನೆ. ಈ ಕಾಲನ ಮುಂದೆ ಯಾರು ಗೆಲ್ಲುತ್ತಾರೆ. 

ಶಕ್ತಿಯ ರೂಪವಾದ ಯುವಕನೇ, ತಾಳ್ಮೆಯ ವೃದ್ಧ ದಂಪತಿಯೇ, ಅಹಂ ತೋರುವ ನಡುವಯಸ್ಸಿನ ದಂಪತಿಯೇ ಎಂಬುದು ಚಿತ್ರದ ಕತೆ. ಥ್ರಿಲ್ಲರ್‌ ನೆರಳಿನಲ್ಲಿ ಸಾಗುವ ಇಂಥ ಗಂಭೀರ ಕತೆಯಲ್ಲಿ ನಗಿಸುವುದಕ್ಕಾಗಿಯೇ ಸಾಧು ಕೋಕಿಲ (Sadhu Kokila) ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಾಂಗ್ಲಿಯಾನ ಮಾತುಗಳೇ ಪ್ರೇಕ್ಷಕನಿಗೆ ಮನರಂಜನೆಯ ಟಾನಿಕ್‌. ಆದರೆ, ಅಚ್ಯುತ್‌ ಕುಮಾರ್‌ (Achyuth Kumar) ಹಾಗೂ ಸುಧಾರಾಣಿ (Sudharani) ಜೋಡಿ ಕೂಡ ಸಿಟ್ಟಿನಲ್ಲೇ ನಗಿಸುತ್ತದೆ ಎಂಬುದು ಚಿತ್ರದ ಮತ್ತೊಂದು ಹೈಲೈಟ್‌. 

ಚಿತ್ರ: ತ್ರಿಕೋನ

ತಾರಾಗಣ: ಸುರೇಶ್‌ ಹೆಬ್ಳೀಕರ್‌, ಲಕ್ಷ್ಮೀ, ಅಚ್ಯುತ್‌ ಕುಮಾರ್‌, ಸುಧಾರಾಣಿ, ಸಾಧು ಕೋಕಿಲ, ಮಾರುತೇಶ್‌, ರಾಜವೀರ್‌, ಬೇಬಿ ಅದಿತಿ, ಬೇಬಿ ಹಾಸಿನಿ, ಮನದೀಪ್‌ ರಾಯ್, ರಾಕ್‌ಲೈನ್‌ ಸುಧಾಕರ್‌.

ನಿರ್ದೇಶನ: ಚಂದ್ರಕಾಂತ್‌

ರೇಟಿಂಗ್‌: 3

ನಿರ್ಮಾಪಕ ರಾಜಶೇಖರ್‌ ಬರೆದ ಕತೆಗೆ ಚಂದ್ರಕಾಂತ್‌ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಸರಳವಾದ ಕತೆ ನೋಡಲು ಬಯಸುವವರಿಗೆ ‘ತ್ರಿಕೋನ’ ಥ್ರಿಲ್ಲಿಂಗ್‌ ಅನಿಸುತ್ತದೆ. ಚಿತ್ರದಲ್ಲಿ ನಟಿಸಿರುವವರ ಪೈಕಿ ಸಿಡುಕುತ್ತಲೇ ಇರುವ ಅಚ್ಯುತ್‌ ಕುಮಾರ್‌ ಇಷ್ಟವಾಗುತ್ತಾರೆ. ಇನ್ನೂ ಆ್ಯಕ್ಷನ್‌ನಲ್ಲಿ ರಾಜ್‌ವೀರ್‌ ಹಾಗೂ ಮಾರುತೇಶ್‌ ಮಿಂಚಿದ್ದಾರೆ. ಸುರೇಶ್‌ ಹೆಬ್ಳೀಕರ್‌ ಹಾಗೂ ಲಕ್ಷ್ಮೀ ಅವರದ್ದು ಸೈಲೆಂಟ್‌ ಆಗಿ ಸಾಗುವ ಜೋಡಿ. 

ಶ್ರೀನಿವಾಸ್‌ ವಿನ್ನಕೋಟ ಛಾಯಾಗ್ರಹಣ ಚಿತ್ರಕಥೆಗೆ ಸಾಕಷ್ಟುಸಾಥ್‌ ಕೊಡುತ್ತದೆ. ಒಂದೇ ದಾರಿಯಲ್ಲಿ ಮೂರು ಜನರೇಷನ್‌, ಮೂರು ಘಟನೆ ಅಥವಾ ಮೂರು ಕತೆಗಳನ್ನು ಹೇಳುವಾಗ ನಿರೂಪಣೆ ಮತ್ತು ತಾಂತ್ರಿಕತೆಯಲ್ಲಿ ಮತ್ತಷ್ಟು ಜಾಣತನ ತೋರಿಸಬಹುದಿತ್ತು. ಎಂಥದ್ದೇ ಸಂದರ್ಭ ಬಂದಾಗಲೂ ಮನುಷ್ಯ ಅನುಸರಿಸಬೇಕಾದ ತಾಳ್ಮೆಯ ಗುಣ ಯಾವ ಮಟ್ಟಿಗೆ ಯಶಸ್ಸು ಕೊಡುತ್ತದೆಂಬ ಸಂದೇಶ ಈ ಚಿತ್ರದಲ್ಲಿದೆ.

Home Minister Film Review: ಸಣ್ಣ ಕುಟುಂಬದ ಕಥೆ ವ್ಯಥೆ

ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಇಲ್ಲಿ ಕಷ್ಟ ಎನ್ನುವ ಕ್ಯಾರೆಕ್ಟರ್ ಸುತ್ತ ಸಿನಿಮಾ ಸಾಗುತ್ತದೆ. ಅಂದರೆ ಕಷ್ಟ ಕೊಡುವ ವ್ಯಕ್ತಿಗೆ ಶಕ್ತಿ ಇದೆ, ಆ ಕಷ್ಟವನ್ನು ಎದುರಿಸುವವರಿಗೆ ಶಕ್ತಿ ಇರಲ್ಲ. ಇವರ ನಡುವೆ ಇಡೀ ಸಿನಿಮಾ ಸಾಗುತ್ತದೆ. ಆದರೆ, ಕಷ್ಟ ಯಾಕೆ ಇವರನ್ನು ಹಿಂಬಾಲಿಸುತ್ತದೆ ಎಂಬುದು ಚಿತ್ರದ ಮತ್ತೊಂದು ತಿರುವಂತೆ. ನಾನು ಬರೆದ ಕತೆ ತುಂಬಾ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಪೋಷಕ ಪಾತ್ರಧಾರಿಗಳೇ ಚಿತ್ರದ ಮುಖ್ಯ ಕಲಾವಿದರು. ಸಾಮಾನ್ಯವಾಗಿ ಇಂಥ ಚಿತ್ರಗಳನ್ನು ತೋರಿಕೆಗೆ ಬಿಡುಗಡೆ ಮಾಡುತ್ತಾರೆ. ಆದರೆ, ನಾನು ಒಬ್ಬ ಸ್ಟಾರ್ ನಟನ ಚಿತ್ರದಷ್ಟೆ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದೇನೆ ನಿರ್ಮಾಪಕ ರಾಜಶೇಖರ್.   

ಈ ಹಿಂದೆ ಬಂದ ನನ್ನ ನಿರ್ದೇಶನದ ‘143’ ಚಿತ್ರವನ್ನು ಪ್ರೇಕ್ಷಕರು ನೋಡಿ ಮೆಚ್ಚಿದ್ದರು. ಮಾಧ್ಯಮಗಳಲ್ಲೂ ಒಳ್ಳೆಯ ವಿಮರ್ಶೆಗಳು ಬಂದಿದ್ದವು. ತ್ರಿಕೋನ ಸಿನಿಮಾ ಕೂಡ ಅದೇ ರೀತಿಯಲ್ಲಿ ನೋಡಿ ಬೆಂಬಲಿಸುತ್ತಾರೆಂಬ ನಂಬಿಕೆ ಇದೆ. ನಿರ್ಮಾಪಕರೇ ಕತೆ ಬರೆದಿದ್ದಾರೆ. ಒಳ್ಳೆಯ ಕತೆ. ಎಲ್ಲರಿಗೂ ಇಷ್ಟವಾಗುತ್ತದೆ.
- ಚಂದ್ರಕಾಂತ್‌, ನಿರ್ದೇಶಕ

Latest Videos
Follow Us:
Download App:
  • android
  • ios