ಚಿತ್ರ ವಿಮರ್ಶೆ: ಡಿಂಗ
ಅವರಿಬ್ಬರ ಬದುಕಲ್ಲಿ ಅಂದುಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು. ಜನ್ನಿ ಮತ್ತು ಬಂಟಿ ಪ್ರೀತಿಸಿ ಮದುವೆ ಆಗಬೇಕೆಂದು ಹೊರಟರು. ಮದುವೆ ಸಂಭ್ರಮಕ್ಕೆ ದಿನವೂ ಫಿಕ್ಸ್ ಆಯಿತು. ಆದರೆ ಮದುವೆಗಾಗಿ ಒಂದೆಡೆ ಸೇರುವ ದಿನ ಅಲ್ಲಿ ನಡೆದಿದ್ದೇ ಬೇರೆ. ಬಂಟಿ ಮದುವೆಗೆ ಬಾರದೆ ಜನ್ನಿಗೆ ಕೈಕೊಟ್ಟ. ತನ್ನ ಕೈಹಿಡಿದು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಬೇಕಿದ್ದ ಬಂಟಿ ಮೋಸ ಮಾಡಿದ ಅಂತ ಜನ್ನಿ ಕೊಪಗೊಂಡು ಹೊರಟು ಹೋದಳು. ಅಲ್ಲಿಂದ ಏನಾಯಿತು, ಅವರಿಬ್ಬರ ಬದುಕಲ್ಲಿ ನಿಜಕ್ಕೂ ಆಗಿದ್ದೇನು ಎನ್ನುವ ಕುತೂಹಲಕಾರಿ ಪ್ರಶ್ನೆಗಳ ಮೂಲಕ ಪ್ರೇಕ್ಷಕರನ್ನು ಆರಂಭದಿಂದ ಅಂತ್ಯದವರೆಗೆ ಭಾವುಕತೆಯೊಂದಿಗೆ ರಂಜಿಸುವ ಸಿನಿಮಾ ಡಿಂಗ.
ದೇಶಾದ್ರಿ ಹೊಸ್ಮನೆ
ಕೆಲವು ಘಟನೆಗಳೇ ಹಾಗೆ, ಮೇಲ್ನೋಟಕ್ಕೆ ನಿರ್ಲಕ್ಷ್ಯ, ತಾತ್ಸಾರದಿಂದಾಗಿ ನಡೆದು ಹೋಗಿರಬಹುದು ಅಂತೆನಿಸುತ್ತವೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಹಾಗೆ ಅದರ ಆಳಕ್ಕೆ ಇಳಿದು ನೋಡಿದಾಗಲೇ ಘಟನೆಯ ಹಿಂದಿನ ಗಂಭೀರತೆ, ನಿಜವಾದ ಕಾರಣ ಗೊತ್ತಾಗುವುದು. ಅಂತಹದೇ ಒಂದು ಮನಕಲುಕುವ ಘಟನೆಯಿಂದಾಗಿ ನಡೆಯದೇ ಹೋದ ಜನ್ನಿ ಮತ್ತು ಬಂಟಿ ಪ್ರೇಮ ವಿವಾಹದ ಹಿಂದಿನ ಘಟನೆಯ ತೀವ್ರತೆ, ಗಂಭೀರತೆ, ಮಾನವೀಯತೆಯ ಪದರಗಳನ್ನು ನೋಡುಗನ ಮನ ಮಿಡಿಯುವ ಹಾಗೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅಭಿಷೇಕ್ ಜೈನ್.
ಚಿತ್ರ ವಿಮರ್ಶೆ: ನಾನು ಮತ್ತು ಗುಂಡ
ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಡಿಂಗ ಎನ್ನುವ ನಾಯಿಯ ಕತೆಯಾದರೂ, ಅದರೊಟ್ಟಿಗೆ ಹಲವು ಸಂಗತಿಗಳು ಪ್ರಾಮುಖ್ಯತೆ ಪಡೆದಿವೆ. ಬಂಟಿ ಮತ್ತು ಜನ್ನಿ ನಡುವಿ ಪ್ರೀತಿ ಹಾಗೂ ನಡೆಯದೆ ಹೋದ ಮದುವೆಯ ಕಾರಣದ ತೀವ್ರತೆಯನ್ನು ಮನಸ್ಸಿಗೆ ತಟ್ಟುವಂತೆ ತೆರೆದಿಡುವ ಈ ಸಿನಿಮಾ, ನಾಯಿ ಮತ್ತು ಮನುಷ್ಯನ ಭಾವನಾತ್ಮಕ ಸಂಬಂಧ ಹಾಗೂ ಗೆಳತನದ ಮಹತ್ವಕ್ಕೂ ಹೆಚ್ಚು ಜಾಗ ಕೊಟ್ಟಿದೆ. ಹಣಕ್ಕಿಂತ ಮನುಷ್ಯತ್ವ ಮುಖ್ಯ ಎನ್ನುವ ಸಂದೇಶವನ್ನು ತೀರಾ ಸರಳ ಎನಿಸುವ ಕತೆಯಲ್ಲೂ ಮನಸಿಗೆ ನಾಟುವಂತೆ ತೋರಿಸಲಾಗಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಬಂಟಿಯ ಅವಿಭಾಜ್ಯ ಅಂಗವೇ ಆದ ಹೇಗೆ ಆತನ ಸ್ನೇಹಿತನಾಗಿ, ಬಂಧುವಾಗಿ, ಕೊನೆಗೆ ಗೆಳೆತನದ ಸಂಕೇತವಾಗಿ ರೂಪುಗೊಳ್ಳುತ್ತದೆ ಎನ್ನುವುದು ಈ ಸಿನಿಮಾದ ಹೈಲೈಟ್.
ಚಿತ್ರ ವಿಮರ್ಶೆ: ಇಂಡಿಯಾ ವರ್ಸಸ್ ಇಂಗ್ಲೆಂಡ್
ಕತೆ, ತಾರಾಗಣ ಅಥವಾ ತಂತ್ರಜ್ಞರಿಗಿಂತ ಈ ಸಿನಿಮಾ ಕುತೂಹಲ ಮೂಡಿಸಿದ್ದು ಪೂರ್ಣ ಪ್ರಮಾಣದಲ್ಲಿ ಐ ಫೋನ್‌ನಲ್ಲಿ ಚಿತ್ರೀಕರಣಗೊಂಡ ಕಾರಣಕ್ಕೆ. ಭಾರತ ಮಾತ್ರವಲ್ಲ, ಏಷ್ಯಾದಲ್ಲೇ ಪ್ರಥಮ ಬಾರಿಗೆ ಈ ಪ್ರಯತ್ನ ನಡೆದಿದೆ ಎನ್ನುವುದು ಚಿತ್ರತಂಡ ಹೇಳಿಕೊಂಡ ಮಾತು. ಅದು ಎಷ್ಟುಸತ್ಯವೋ ಗೊತ್ತಿಲ್ಲ, ಆದರೆ ಐಫೋನ್‌ನಲ್ಲಿಯೇ ಒಂದು ಗುಣಮಟ್ಟದ ಸಿನಿಮಾ ಮಾಡಬಹುದು ಎನ್ನುವುದಕ್ಕೆ ಈ ಸಿನಿಮಾ ಮಾದರಿ. ಮಂಜುನಾಥ್ ಛಾಯಾಗ್ರಹಣ ಯಾವುದೇ ಹೈಟೆಕ್ ಕ್ಯಾಮರಾಕ್ಕೂ ಕಮ್ಮಿ ಇಲ್ಲದಂತೆ ಮಾಡಿದೆ. ಪ್ರತಿ ಸೀನ್‌ಗಳಲ್ಲೂ ಹೊಸತನವಿದೆ. ಅದರ ಸೊಗಸಾದ ನೋಟಕ್ಕೆ ಸದ್ದೂ ರಾಯ್ ಅವರ ಸಂಗೀತ ಇನ್ನಷ್ಟುಮೆರುಗು ತುಂಬಿದೆ. ವಿಜಯ್ ಈಶ್ವರ್ ಸಂಭಾಷಣೆ ಯಲ್ಲೂ ತಾಜಾತನವಿದೆ. ಪಾತ್ರವರ್ಗದಲ್ಲಿ ಅಭಿಷೇಕ್ ಹಾಗೂ ಅರವ್ ಗೌಡ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ಅದರಲ್ಲೂ ಅರವ್ ಕಾಮಿಡಿ ಸೆನ್ಸ್ ಕೂಡ ಚೆನ್ನಾಗಿದೆ. ಹಾಗಂತ ಉಳಿದವರನ್ನು ಕಡೆಗಣಿಸುವಂತಿಲ್ಲ.
ಚಿತ್ರ ವಿಮರ್ಶೆ: ಅವನೇ ಶ್ರೀಮನ್ನಾರಾಯಣ