Kirik Shankar Film Review: ಜನೋಪಕಾರಿಯಾಗುವ ದಾರಿ ತಪ್ಪಿದ ಮಕ್ಕಳು
ಹಳ್ಳಿಯಲ್ಲಿ ತರಲೆ ಮಾಡಿಕೊಂಡಿರುವ ನಾಲ್ಕು ಮಂದಿ ಹುಡುಗರು. ಶಾರ್ಟ್ ಕಟ್‌ನಲ್ಲಿ ದುಡ್ಡು ಮಾಡುವ ಇವರಿಗೆ ಯಾರನ್ನು, ಹೇಗೆ, ಯಾವ ರೀತಿ ಮ್ಯಾನೇಜು ಮಾಡಬಹುದು ಎನ್ನುವ ಕಲೆ ಕೂಡ ಕರಗತವಾಗಿರುತ್ತದೆ.
ಆರ್ ಕೇಶವಮೂರ್ತಿ
ಕಿರಿಕ್ ಮಾಡಿದರೆ ಒಮೊಮ್ಮೆ ಒಳ್ಳೆಯದು ಆಗುತ್ತದೆ. ಹೀಗೆ ಕಿರಿಕ್‌ಗಳಿಂದಲೇ ಸಮಾಜ ಸೇವೆ ಮಾಡಿದರೆ ಹೇಗಿರುತ್ತದೆ ಎಂಬುದನ್ನು ನಿರ್ದೇಶಕ ಆರ್ ಅನಂತರಾಜು ಅವರು ‘ಕಿರಿಕ್ ಶಂಕರ್’ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಕಾಮಿಡಿ, ಆ್ಯಕ್ಷನ್ ಹಾಗೂ ಸಸ್ಪೆನ್ಸ್ ನೆರಳಿನಲ್ಲಿ ಸಾಗುವ ಈ ಚಿತ್ರದಲ್ಲಿ ನಾಯಕ, ನಗಿಸುತ್ತಲೇ ಪೊಲೀಸ್ ಸ್ಟೇಷನ್ ಸೇರುತ್ತಾನೆ. ಒಳ್ಳೆಯದನ್ನೇ ಮಾಡುವ ಕಿರಿಕ್ ಶಂಕರ್ ಮತ್ತು ಅವನ ಸ್ನೇಹಿತರು ಪೊಲೀಸ್ ಸ್ಟೇಷನ್ ಯಾಕೆ ಸೇರುತ್ತಾರೆ ಎಂಬುದೇ ಚಿತ್ರದ ಕತೆ. ಹಳೆಯ ಸೂತ್ರದಲ್ಲಿ ಹೊಸ ಕತೆಯನ್ನು ಮಾಡಿದ್ದಾರೆ ಅಂತ ಪ್ರೇಕ್ಷಕರಿಗೆ ಅನಿಸಿದರೆ ಅದು ಚಿತ್ರದ ವಿರಾಮದ ನಂತರ ಬರುವ ಆರೋಗ್ಯದ ವಿಚಾರದ ಕಾರಣಕ್ಕೆ ಇರಬಹುದು.
ಹೀಗಾಗಿ ಆರಂಭದಲ್ಲಿ ಕಿರಿಕ್ಕು, ಕೊನೆಯಲ್ಲಿ ಸಂದೇಶ ಮತ್ತು ಸೇವೆ ಎರಡನ್ನೂ ನೋಡುವ ಭಾಗ್ಯ ನಿಮ್ಮದಾಗಬೇಕು ಎಂದರೆ ನೀವು ಧಾರಾಳವಾಗಿ ಈ ಚಿತ್ರ ನೋಡಬಹುದು. ಹಳ್ಳಿಯಲ್ಲಿ ತರಲೆ ಮಾಡಿಕೊಂಡಿರುವ ನಾಲ್ಕು ಮಂದಿ ಹುಡುಗರು. ಶಾರ್ಟ್ ಕಟ್‌ನಲ್ಲಿ ದುಡ್ಡು ಮಾಡುವ ಇವರಿಗೆ ಯಾರನ್ನು, ಹೇಗೆ, ಯಾವ ರೀತಿ ಮ್ಯಾನೇಜು ಮಾಡಬಹುದು ಎನ್ನುವ ಕಲೆ ಕೂಡ ಕರಗತವಾಗಿರುತ್ತದೆ. ಇಂಥ ಊರಿಗೆ ನಾಯಕಿ ಬರುತ್ತಾಳೆ. ಆಕೆಗೆ ಈ ಬೇಜವಾಬ್ದಾರಿ ಹುಡುಗರ ಸ್ನೇಹ ಸಿಗುತ್ತದೆ. ಸೋಮಾರಿತನದ ಜತೆಗೆ ಇವರಿಗೆ ಪ್ರತಿಭೆಯೂ ಇದೆ ಎಂದರಿತ ನಾಯಕಿ, ಜೀವನದ ಪಾಠ ಹೇಳುತ್ತಾರೆ.
ಚಿತ್ರ: ಕಿರಿಕ್ ಶಂಕರ್
ತಾರಾಗಣ: ಯೋಗೀಶ್, ಅದ್ವಿಕಾ ರೆಡ್ಡಿ, ರಿತೇಶ್, ನಾಗೇಂದ್ರ ಅರಸ್, ಬಲರಾಜವಾಡಿ, ಪ್ರಶಾಂತ್ ಸಿದ್ದಿ
ನಿರ್ದೇಶನ: ಆರ್ ಅನಂತರಾಜು
ರೇಟಿಂಗ್: 3
ದಾರಿತಪ್ಪಿದ ಮಕ್ಕಳು ಸರಿ ದಾರಿಗೆ ಬರುವಷ್ಟರಲ್ಲಿ ನಾಯಕಿಗೆ ಗುಟ್ಟಾಗಿರುವ ಸಮಸ್ಯೆಯೊಂದರ ದರ್ಶನವಾಗುತ್ತದೆ. ಈಗ ಎಲ್ಲರು ಆಕೆಯನ್ನು ರಕ್ಷಿಸುವ ಸಾಹಸ ಮಾಡುತ್ತಾರೆ. ಮುಂದೇನು ಎನ್ನುವುದಕ್ಕೆ ಚಿತ್ರ ನೋಡಬೇಕು. ಅದ್ದೂರಿ ಮೇಕಿಂಗ್, ಸೂಪರ್ ಎನಿಸುವ ಹಾಡುಗಳು, ಪಂಚ್ ಡೈಲಾಗ್‌ಗಳು ಇತ್ಯಾದಿಗಳನ್ನು ನಿರೀಕ್ಷೆ ಮಾಡದೆ ಹೋದರೆ ಒಂದು ಸರಳ ಮತ್ತು ಅಷ್ಟೇ ಸಹಜವಾದ ಸಿನಿಮಾ ಆಗಿ ‘ಕಿರಿಕ್ ಶಂಕರ್’ ಇಷ್ಟವಾಗುತ್ತಾನೆ. ಲೂಸ್‌ಮಾದ ಯೋಗೀಶ್, ಕಿರಿಕ್ ಶಂಕರ್ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಅದ್ವಿಕಾ ರೆಡ್ಡಿ ತೆರೆ ಮೇಲೆ ನೋಡಲು ಚೆಂದ. ರಿತೇಶ್ ನಗಿಸುತ್ತಾರೆ. ವೀರ್‌ಸಮರ್ಥ್ ಅವರ ಸಂಗೀತ ಹೆಚ್ಚು ಸ್ಕೋರ್ ಮಾಡುತ್ತದೆ.
Raaji Film Review: ಅಂತಃಕರಣದ ಹೆಣ್ಣೋಟ
ಇನ್ನು ‘ಇದು ಕೌಟುಂಬಿಕ ಸಿನಿಮಾ. ಇಬ್ಬರು ತಂಗಿಯರ ಜವಾಬ್ದಾರಿ ಹೊತ್ತುಕೊಂಡಿರುವ ಅಣ್ಣನ ಕತೆ ಇಲ್ಲಿದೆ. ನಗರದಿಂದ ದೂರ ಇರುವ ಪ್ರದೇಶದ ಹಿನ್ನೆಲೆಯಲ್ಲಿ ಚಿತ್ರ ಸಾಗುತ್ತದೆ. ಕುಟುಂಬದ ಜವಾಬ್ದಾರಿ ಹೊರಬೇಕಾದ ಮನೆಯ ಮಗ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದಿದ್ದಾಗ ಏನಾಗುತ್ತದೆ, ನಾಯಕನ ಜೀವನದಲ್ಲಿ ನಾಯಕಿ ಪ್ರವೇಶ ಆದ ಮೇಲೆ ಏನೆಲ್ಲ ನಡೆಯುತ್ತದೆ ಎಂಬುದು ಚಿತ್ರದ ಕತೆ’.ಈ ಚಿತ್ರದ ಮೂಲಕ ನಾಯಕಿಯಾಗಿ ಮೊದಲ ಬಾರಿಗೆ ಪರಿಚಯ ಆಗುತ್ತಿರುವುದು ಅದ್ವಿಕ. ರಂಗಭೂಮಿಯಲ್ಲಿ ಗುರುತಿಸಿಕೊಂಡವರು. ‘ಜಟ್ಟಗಿರಿರಾಜ್ ನನ್ನ ಗುರುಗಳು. ನಾನು ಸಾಕಷ್ಟುನಾಟಕಗಳಲ್ಲಿ ನಟಿಸಿದ್ದೇನೆ. ಇದು ಮೊದಲ ಸಿನಿಮಾ. ಒಳ್ಳೆಯ ಪಾತ್ರ’ ಎಂದಷ್ಟೆ ಅದ್ವಿಕ ಈ ಮೊದಲು ತಿಳಿಸಿದ್ದಾರೆ. ಯೋಗೀಶ್ ಹುಣಸೂರು ಈ ಚಿತ್ರಕ್ಕೆ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.