ಕೆಂಡಪ್ರದಿ

ಮಂಡ್ಯದ ಹಸಿರಿನ ಗದ್ದೆಗಳು, ಪಕ್ಕಾ ಲೋಕಲ್‌ ಲ್ಯಾಂಗ್ವೇಜ್‌, ಅಲ್ಲಿನ ನೇಟಿವಿಟಿಗೆ ಹೊಂದುವಂತಹ ಒಂದಷ್ಟುಎಲಿಮೆಂಟ್‌ಗಳನ್ನು ಚಿತ್ರದಲ್ಲಿ ತೋರಿಸಿರುವುದು ಬಿಟ್ಟರೆ ಇನ್ಯಾವ ವಿಶೇಷಗಳೂ ಇಲ್ಲಿಲ್ಲ.

ಊರಿನ ದೊಡ್ಡ ಮನುಷ್ಯ ಎಂದುಕೊಂಡವನೊಬ್ಬ ಮುದ್ದೆ ತಿನ್ನುವ ಸ್ಪರ್ಧೆ ಏರ್ಪಾಡು ಮಾಡುತ್ತಾನೆ. ಅದರಲ್ಲಿ ಆತ ತನ್ನ ಜೇಬು ತುಂಬಿಸಿಕೊಳ್ಳುವುದಕ್ಕೆ ಒತ್ತು ನೀಡುತ್ತಾಯೇ ಹೊರತು ಸ್ಪರ್ಧೆಯ ಯಶಸ್ಸಿಗಲ್ಲ. ಹೀಗೆ ತನ್ನ ಸ್ವಾರ್ಥ ಸಾಧನೆಗೆ ನಿಂತ ಗೌಡ ಸೊಕ್ಕು ಮುರಿದು, ಅವನನ್ನು ಸರಿದಾರಿಗೆ ತಂದು ನಾಯಕ ಶಿವು ಗ್ರೇಟ್‌ ಎನ್ನಿಸಿಕೊಳ್ಳುತ್ತಾನೆ. ಜೊತೆಗೆ ಗೌಡನ ಮಗಳನ್ನೂ ಪಟಾಯಿಸುತ್ತಾನೆ.

ಚಿತ್ರ ವಿಮರ್ಶೆ: ಮಾಯಾಬಜಾರ್‌

ಇನ್ನೊಂದು ಕಡೆ ನಾಯಕನೂ ಸೇರಿ ಊರಿನ ಉತ್ಸಾಹಿ ಯುವಕರು ಮಾಮೂಲಿಯಂತೆ ಸುತ್ತಾಡಿಕೊಂಡು, ತಾವು ಊರಿನ ಉದ್ಧಾರಕ್ಕಾಗಿಯೇ ಹುಟ್ಟಿರುವವರಂತೆ ಆಡುತ್ತಾರೆ. ಗೌಡನಿಂದ ಊರಿಗೆ ಆದ ಅವಮಾನವನ್ನು ಸರಿ ಮಾಡಲು ತಾವೂ ಒಂದು ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸುತ್ತಾರೆ. ಇದಕ್ಕೆ ಎಲ್ಲರ ಭರ್ಜರಿ ಸಹಕಾರ ಸಿಕ್ಕು ಅದು ಯಶಸ್ಸೂ ಆಗುತ್ತದೆ. ಅಲ್ಲಿಗೆ ಚಿತ್ರಕ್ಕೆ ಮಂಗಳ.

ಚಿತ್ರ ವಿಮರ್ಶೆ: ಬಿಚ್ಚುಗತ್ತಿ

ಚಿತ್ರಕತೆಯೇ ಗಟ್ಟಿಇಲ್ಲದಾಗ ಮತ್ತೇನನ್ನು ನಿರೀಕ್ಷೆ ಮಾಡಲು ಸಾಧ್ಯ. ಇರುವುದರಲ್ಲಿ ಸಂಗೀತಕ್ಕೆ ಸ್ವಲ್ಪ ಜೀವಿದೆಯಾದರೂ ತಾಂತ್ರಿಕವಾಗಿ ತೀರಾ ಪೊಳ್ಳಾಗಿರುವ ಆನೆಬಲ ಗ್ರಾಮೀಣ ಶೈಲಿಯ ಡೈಲಾಗ್‌ಗಳಿಂದ ಸ್ವಲ್ಪ ಮನರಂಜನೆ ನೀಡುತ್ತದೆ ಅಷ್ಟೆ.