ಕಲೆಯೇ ಬದುಕಿನ ಜೀವಾಳ: ನಾಗಶ್ರೀ ಬೇಗಾರ್
ರಮೇಶ್ ಬೇಗಾರ್ ನಿರ್ದೇಶನದ, ನಾಗಶ್ರೀ ಬೇಗಾರ್ ಹಾಗೂ ರಜನೀಶ್ ನಟನೆಯ ಜಲಪಾತ ಸಿನಿಮಾ ಇಂದು ತೆರೆ ಕಾಣುತ್ತಿದೆ. ಟಿ ಎಸ್ ರವೀಂದ್ರ ತುಂಬರಮನೆ ನಿರ್ಮಾಪಕರು. ಈ ಚಿತ್ರದ ಮೂಲಕ ನಾಗಶ್ರೀ ನಟಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ಪ್ರಿಯಾ ಕೆರ್ವಾಶೆ
ಸಿನಿಮಾಗೆ ಬರುವ ಮುಂಚೆ ಎಲ್ಲಿದ್ರಿ?
ಹುಟ್ಟಿ ಬೆಳೆದಿದ್ದು ಶೃಂಗೇರಿ. ಕಲಾವಿದರ ಮನೆತನ ನಮ್ಮದು. ಚಿಕ್ಕ ವಯಸ್ಸಲ್ಲೇ ಭರತನಾಟ್ಯ, ಸಂಗೀತ ಕಲಿಯುತ್ತಿದ್ದೆ. ನನ್ನ ಭರತನಾಟ್ಯ ಪ್ರದರ್ಶನಕ್ಕೆ ಜನಪ್ರಿಯತೆಯೂ ಸಿಕ್ಕಿತು. ಮುಂದೆ ಯಕ್ಷಗಾನ ಕಲಿತೆ. ಅಲ್ಲಿ ಮಹಿಷಾಸುರನ ಪಾತ್ರವನ್ನೆಲ್ಲ ಮಾಡುತ್ತಿದ್ದೆ. ರಂಗಭೂಮಿಯಲ್ಲೂ ತೊಡಗಿಸಿಕೊಂಡೆ. ಶೃಂಗೇರಿಯಲ್ಲಿ ನನ್ನ ತಂದೆ ಕಟ್ಟಿ ಬೆಳೆಸಿದ ‘ಗೆಳೆಯರ ಬಳಗ’ ರಂಗ ತಂಡ ಇದೆ. ಈ ತಂಡದ ನಾಟಕಗಳಲ್ಲಿ ಭಾಗಿಯಾಗುತ್ತಿದ್ದೆ. ಇಲ್ಲಿಂದ ರಂಗಭೂಮಿ ಹತ್ತಿರವಾಯಿತು. ಬೆಂಗಳೂರಿನ ಕ್ರೈಸ್ಟ್ ಕಾಲೇಜಿಗೆ ಸೇರಿಕೊಂಡ ಮೇಲೆ ಅಲ್ಲೇ ಒಂದು ರಂಗ ತಂಡ ಕಟ್ಟಿದೆ. ‘ಬಣ್ಣಮನೆ’ ಅಂತ ಹೆಸರು. ಆ ಟೀಮ್‌ನಿಂದ ನಾಟಕ ಮಾಡಿಸಿದ್ದೆವು. ಈಗಲೂ ಶೋ ನಡೀತಿದೆ.
ಸಿನಿಮಾ ಪ್ರೀತಿ?
ನಮ್ಮೂರಲ್ಲಿ ಥಿಯೇಟರ್ ಇಲ್ಲ. ಅಪ್ಪನ ಜೊತೆಗೆ ಕೊಪ್ಪಕ್ಕೆ ಹೋಗಿ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು ನಾನು. ಕ್ಯಾಮರಾ ಮುಂದೆ ನಿಲ್ಲುವ ಧೈರ್ಯ ಬಂದದ್ದು ಶಾರ್ಟ್ ಫಿಲಂ ಮಾಡಿದಾಗ. ಇದರಲ್ಲಿ ನನ್ನ ಅಭಿನಯ ನೋಡಿ ಅಪ್ಪ ‘ಜಲಪಾತ’ ಸಿನಿಮಾದ ಪಾತ್ರವೊಂದಕ್ಕೆ ಆಯ್ಕೆ ಮಾಡಿದರು.
ಕಾಂತಾರ 2 ಯಾರಾದರೂ ಲೀಕ್ ಮಾಡಿದರೆ ಅನ್ನುವ ಆತಂಕವಿದೆ: ರಿಷಬ್ ಶೆಟ್ಟಿ
ಯಾವ ಥರದ ಪಾತ್ರ?
ತರಲೆ ಕಂಟೆಂಟ್ ಕ್ರಿಯೇಟರ್ ಪಾತ್ರ. ಹಾಗಂತ ಬೆಂಗಳೂರಿನವಳಲ್ಲ. ಹಳ್ಳಿಯವಳು. ಊರಲ್ಲಿ ರೀಲ್ಸ್ ಮಾಡೋದು, ಅವಳಿಗೆ ಅವಳೇ ಬಿಲ್ಡಪ್ ಕೊಟ್ಟುಕೊಳ್ಳೋದು. ಈ ಥರ ಮಜವಾದ ಪಾತ್ರ. ಸೀರಿಯಸ್ ಆಗಿ ಸಾಗುವ ಚಿತ್ರದಲ್ಲಿ ನನ್ನ ಪಾತ್ರ ಜನರನ್ನು ನಗಿಸುತ್ತೆ, ಮನರಂಜನೆ ನೀಡುತ್ತೆ. ನಾನು ರಿಯಲ್‌ನಲ್ಲಿ ಇರೋದಕ್ಕೂ ಈ ಪಾತ್ರಕ್ಕೂ ಸಾಮ್ಯತೆ ಇದೆ.
ನೋವನ್ನು ಬಿಡುವುದು ಕಷ್ಟ, ಕಳೆದವಾರ ಕಿರುತೆರೆಗೆ ಬಂದೆ ಈ ವಾರ ಚಿತ್ರಮಂದಿರಕ್ಕೆ ಬಂದೆ: ವಿಜಯ್ ರಾಘವೇಂದ್ರ
ಅಪ್ಪ ನಿರ್ದೇಶಕರಾಗಿರುವುದು ಪಾಸಿಟಿವಾ? ನೆಗೆಟಿವಾ?
ನಿರ್ದೇಶಕರ ನಟಿ ನಾನು. ಅಪ್ಪ ನನ್ನನ್ನು ಸ್ಪೆಷಲ್ ಆಗಿ ಟ್ರೀಟ್ ಮಾಡಿಲ್ಲ. ನಾವೆಲ್ಲ ಒಂದೇ ಥಿಯೇಟರ್ ಟೀಮ್‌ನವರಾದ ಕಾರಣ ಸಿನಿಮಾ ಮಾಡಿದ್ದು ಇನ್ನೊಂದು ನಾಟಕ ಪ್ರೊಡಕ್ಷನ್ ಮಾಡಿದಷ್ಟೇ ಆಪ್ತವಾಗಿತ್ತು.