ಕತೆ ಸಾಗುವುದು ಮಲೆನಾಡಿನ ಹಿನ್ನೆಲೆಯಲ್ಲಿ. ಅಲ್ಲಿನ ಸ್ಥಳೀಯ ಭಾಷೆಯ ಸೊಗಡಿಗೆ ಪಾತ್ರಧಾರಿಗಳ‍ ಸಂಭಾಷಣೆಗಳು ಜೀವ ತುಂಬಿವೆ. ಹೀಗಾಗಿ ಇದು ನೆಲದ ಬದುಕಿನ ಸಿನಿಮಾ ಕೂಡ ಹೌದು. ಪ್ರಕೃತಿ ಸೌಂದರ್ಯದ ನಡುವೆ ಇರುವ ಒಂದು ಹಳ್ಳಿ.

ಆರ್‌.ಕೆ

ಕಾಡು, ಬೇಟೆ, ಶಿಕ್ಷಣ, ದೊಡ್ಡವರ ವರ್ತನೆಗಳು, ಶಾಲಾ ಮಕ್ಕಳ ಕನಸುಗಳು, ಮನುಷ್ಯ ಸಂಬಂಧಗಳು ಹೀಗೆ ಹಲವು ತಿರುವುಗಳಲ್ಲಿ ಸಂಚರಿಸುವ ‘ಪಾಠಶಾಲಾ’ ಸಿನಿಮಾ ಸದ್ದಿಲ್ಲದೆ ಒಂದಿಷ್ಟು ಒಳ್ಳೆಯ ವಿಚಾರಗಳನ್ನು ಪ್ರೇಕ್ಷಕರಿಗೆ ದಾಟಿಸುತ್ತದೆ. ನಿರ್ದೇಶಕ ಹೆದ್ದೂರ್‌ ಮಂಜುನಾಥ್‌ ಶೆಟ್ಟಿ ಸಾಮಾಜಿಕ ಕಳಕಳಿಯನ್ನು ಮನರಂಜನೆ, ತಮಾಷೆ ಪ್ರಸಂಗಗಳ ಮೂಲಕ ಹೇಳಿರುವುದು ಚಿತ್ರದ ಹೆಚ್ಚುಗಾರಿಕೆ.

ಕತೆ ಸಾಗುವುದು ಮಲೆನಾಡಿನ ಹಿನ್ನೆಲೆಯಲ್ಲಿ. ಅಲ್ಲಿನ ಸ್ಥಳೀಯ ಭಾಷೆಯ ಸೊಗಡಿಗೆ ಪಾತ್ರಧಾರಿಗಳ‍ ಸಂಭಾಷಣೆಗಳು ಜೀವ ತುಂಬಿವೆ. ಹೀಗಾಗಿ ಇದು ನೆಲದ ಬದುಕಿನ ಸಿನಿಮಾ ಕೂಡ ಹೌದು. ಪ್ರಕೃತಿ ಸೌಂದರ್ಯದ ನಡುವೆ ಇರುವ ಒಂದು ಹಳ್ಳಿ. ಆ ಹಳ್ಳಿಯ ಶಾಲಾ ಮಕ್ಕಳ ಓದು, ತುಂಟಾಟ, ಗಲಾಟೆಗಳು, ಪ್ರೀತಿ-ಪ್ರೇಮ ಹಾಗೂ ಆಕರ್ಷಣೆಯ ಗದ್ದಗಳ ನಡುವೆ ಕಾಡಿಗೆ ಬೇಟೆಗೆ ಹೋಗುವ ವ್ಯಕ್ತಿ. ಬೇಟೆಗಾರ ಹಿಂದೆ ಬೀಳುವ ಅರಣ್ಯ ಅಧಿಕಾರಿ, ಇವರ ಕಾನೂನು ಸಂಘರ್ಷ ಮುಂದೇನಾಗುತ್ತದೆ ಎಂಬುದು ಚಿತ್ರದ ಕತೆ.

ಚಿತ್ರ: ಪಾಠಶಾಲಾ

ತಾರಾಗಣ: ಬಾಲಾಜಿ ಮನೋಹರ್‌, ಕಿರಣ್‌ ನಾಯಕ್‌, ನಟನಾ ಪ್ರಶಾಂತ್‌, ಕಂಬದ ರಂಗಯ್ಯ, ಸುಧಾಕರ್ ಬನ್ನಂಜೆ
ನಿರ್ದೇಶನ: ಹೆದ್ದೂರ್‌ ಮಂಜುನಾಥ್‌ ಶೆಟ್ಟಿ
ರೇಟಿಂಗ್‌: 3

ಶಾಲೆ, ವಿದ್ಯೆ ಯಾಕೆ ಮುಖ್ಯ ಎಂದು ಹೇಳುವ ಜೊತೆಗೆ ದೊಡ್ಡವರ ಹೆಜ್ಜೆಗಳು ಮಕ್ಕಳನ್ನೂ ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು. ಚಿತ್ರದ ಪ್ರಮುಖ ಘಟ್ಟದಲ್ಲಿ ಎಂಟ್ರಿ ಆಗುವ ಬಾಲಾಜಿ ಮನೋಹರ್‌ ಅವರ ಪಾತ್ರದ ಹಿನ್ನೆಲೆ ಮತ್ತು ಉದ್ದೇಶ ಚಿತ್ರದ ಸಪ್ರೈಸ್‌ ಅಂಶಗಳಲ್ಲಿ ಒಂದು. ಆಟ-ಪಾಠಗಳಲ್ಲಿ ಗಮನ ಸೆಳೆಯುವ ಮಕ್ಕಳು, ಕೋಪ- ಹೋರಾಟದಲ್ಲಿ ಮುಂದಿರುವ ದೊಡ್ಡವರ ಈ ಚಿತ್ರ ಎಲ್ಲಾ ವಯೋಮಾನದವರಿಗೂ ಮೆಚ್ಚುಗೆ ಆಗುತ್ತದೆ.