Tharakeshwara Film Review: ಹೀರೋ ಪ್ರಧಾನ ಚಿತ್ರಗಳ ನಡುವೆ ಭಕ್ತಿ ಪ್ರಧಾನ ತಾರಕೇಶ್ವರನ ಸಂಹಾರದ ನಾಟಕ

ಪುರುಷೋತ್ತಮ್‌ ಓಂಕಾರ್‌ ನಿರ್ದೇಶನದ ಈ ಚಿತ್ರದಲ್ಲಿ ಶಿವ ಮತ್ತು ತಾರಕೇಶ್ವರನಾಗಿ ನಟಿಸಿರುವುದು ಹಿರಿಯ ಪೋಷಕ ನಟ ಗಣೇಶ್‌ರಾವ್‌ ಕೇಸರಕರ್‌. ಹೀರೋ ಪ್ರಧಾನ ಚಿತ್ರಗಳ ನಡುವೆ ಭಕ್ತಿ ಪ್ರಧಾನ ಸಿನಿಮಾ ನೋಡಬೇಕು ಎನ್ನುವವರಿಗೆ ಅಸುರ ಸಮುದಾಯದ ತಾರಕೇಶ್ವರನನ್ನು ದರ್ಶನ ಮಾಡಿಕೊಳ್ಳಬಹುದು.

Ganesh Rao Kesarkar Starrer Tharakeshwara in Mythological Film Review gvd

ಆರ್‌.ಕೆ

ಇಷ್ಟಕ್ಕೂ ಈ ತಾರಕೇಶ್ವರ ಯಾರು, ಆತನಿಗೂ ಶಿವ ಪುತ್ರನಾದ ಸುಬ್ರಹ್ಮಣ್ಯನ ನಡುವೆ ಯುದ್ಧ ನಡೆಯೋದು ಯಾಕೆ, ದೇವೇಂದ್ರನ ಮೇಲೆ ತಾರಕೇಶ್ವರನಿಗೆ ಯಾಕೆ ಸಿಟ್ಟು, ಶಿವ-ಪಾರ್ವತಿಯ ಕಲ್ಯಾಣ ಆಗೋದು ಯಾತಕ್ಕೆ... ಭಕ್ತಿ ಪ್ರಧಾನ ಕಥನಗಳ ಹಿಂದೆ ಇಂಥ ಹಲವು ಪ್ರಶ್ನೆಗಳನ್ನು ಹುಟ್ಟಿಕೊಳ್ಳೋದು ಸಹಜ. ‘ತಾರಕೇಶ್ವರ’ ಸಿನಿಮಾ ಈ ಪ್ರಶ್ನೆಗಳಿಗೆ ಒಂದು ಸಣ್ಣ ಸಮಾಧಾನ ಎನ್ನಬಹುದು. 

ಪುರುಷೋತ್ತಮ್‌ ಓಂಕಾರ್‌ ನಿರ್ದೇಶನದ ಈ ಚಿತ್ರದಲ್ಲಿ ಶಿವ ಮತ್ತು ತಾರಕೇಶ್ವರನಾಗಿ ನಟಿಸಿರುವುದು ಹಿರಿಯ ಪೋಷಕ ನಟ ಗಣೇಶ್‌ರಾವ್‌ ಕೇಸರಕರ್‌. ಹೀರೋ ಪ್ರಧಾನ ಚಿತ್ರಗಳ ನಡುವೆ ಭಕ್ತಿ ಪ್ರಧಾನ ಸಿನಿಮಾ ನೋಡಬೇಕು ಎನ್ನುವವರಿಗೆ ಅಸುರ ಸಮುದಾಯದ ತಾರಕೇಶ್ವರನನ್ನು ದರ್ಶನ ಮಾಡಿಕೊಳ್ಳಬಹುದು. ಭಕ್ತಿ ಪ್ರಧಾನ ಸಿನಿಮಾ ಆಗಿರುವುದರಿಂದ ಕತೆ ಬಗ್ಗೆ ಹೆಚ್ಚು ಕೇಳುವಂತಿಲ್ಲ! 

ಚಿತ್ರ: ತಾರಕೇಶ್ವರ
ತಾರಾಗಣ: ಗಣೇಶ್‌ರಾವ್‌ ಕೇಸರಕರ್‌, ರೂಪಾಲಿ, ನಮಿತಾ ರಾವ್‌, ವಿಕ್ರಂ ಸೂರಿ, ಎನ್ ಟಿ ರಾಮಸ್ವಾಮಿ, ಶಂಕರ್‌ ಭಟ್‌, ಋತುಸ್ಪರ್ಶ, ಪ್ರಜ್ವಲ್‌ ಕೇಸರಕರ್‌
ನಿರ್ದೇಶನ: ಪುರುಷೋತ್ತಮ್‌ ಓಂಕಾರ್‌ 

ಆದರೆ, ಇಡೀ ಸಿನಿಮಾ ನಾಟಕದಂತೆ ತೆರೆ ಮೇಲೆ ಅನಾವರಣಗೊಳ್ಳುತ್ತಾ ಚಿತ್ರದ ಪ್ರತಿ ಪಾತ್ರವೂ ನೋಡುಗನಿಗೆ ಹತ್ತಿರವಾಗುತ್ತವೆ. ನಿರ್ದೇಶಕ ಪುರುಷೋತ್ತಮ್‌ ಓಂಕಾರ್‌ ಕಡಿಮೆ ಬಜೆಟ್‌ನಲ್ಲಿ ಭಕ್ತಿ ಸಿನಿಮಾ ಮಾಡುವುದು ಹೇಗೆ ಎಂಬುದನ್ನು ಗ್ರಾಫಿಕ್ಸ್‌ ಮೂಲಕ ತೋರಿಸಿದ್ದಾರೆ. ಪಾತ್ರಧಾರಿಗಳ ನಟನೆ ಕತೆ ಮತ್ತು ನಿರ್ದೇಶಕರ ಆಣತಿಯಂತೆ ಮೂಡಿಬಂದಿದೆ.

Latest Videos
Follow Us:
Download App:
  • android
  • ios