ಡಾ.ರಾಜ್ ಸಿನಿಮಾ ಒಂದಲ್ಲ, 100 ಅಲ್ಲ, ಬರೋಬ್ಬರಿ 730 ದಿನ ಪ್ರದರ್ಶನ ಕಂಡಿತ್ತು. 13 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿತ್ತು. ಅಂದಿನ ದುಬಾರಿ ಬಜೆಟ್ ಸಿನಿಮಾ ಗಳಿಕೆಯಲ್ಲೂ ದಾಖಲೆ ಬರೆದಿತ್ತು.

ಬೆಂಗಳೂರು (ನ.02) ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಂಡರೆ ಸಾಕು. ಹಲವು ಬಾರಿ ಉತ್ತಮ ಸಿನಿಮಾ ಆದರೂ ಥಿಯೇಟರ್ ಸಿಗದೆ ಪರದಾಡಿದ ಹಲವು ಉದಾಹರಣೆಗಳಿವೆ. ಈಗ 100 ಡೇಸ್ ಸಿನಿಮಾ ಓಡಿದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೇನು ಇಲ್ಲ. ಆದರೆ ಡಾ.ರಾಜ್‌ಕುಮಾರ್ ಸಿನಿಮಾ 100 ಅಲ್ಲ, ಬರೋಬ್ಬರಿ 730 ದಿನ ಓಡಿತ್ತು. ಅಂದಿನ ಕಾಲದಲ್ಲಿ ಕನ್ನಡ ಸಿನಿಮಾವನ್ನು 2 ರಿಂದ 4 ಲಕ್ಷ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಈ ಸಿನಿಮಾ 13 ಲಕ್ಷ ರೂಪಾಯಿ ಬಜೆಟ್ ಆಗಿತ್ತು. ಕಲೆಕ್ಷನ್‌ನಲ್ಲೂ ದಾಖಲೆ ಬರೆದ ಈ ಸಿನಿಮಾ ಬೇರೆ ಯಾವುದು ಅಲ್ಲ ಒನ್ ಒನ್ಲಿ ಬಂಗಾರದ ಮನುಷ್ಯ.

1972ರಲ್ಲಿ ತೆರೆ ತಂಡ ಸಿನಿಮಾ

1972ರಲ್ಲಿ ಬಂಗಾರದ ಮನುಷ್ಯ ಸಿನಿಮಾ ರಿಲೀಸ್ ಆಗಿತ್ತು. ಕೆಟಿ ರಾಮರಾವ್ ಕಾದಂಬರಿ ಆಧಾರಿತ ಈ ಸಿನಿಮಾ ಸ್ಯಾಂಡಲ್‌ವುಡ್ ಮಾತ್ರವಲ್ಲ ದೇಶದ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆ ಬರೆದ ಸಿನಿಮಾ. 1972ರ ವೇಳೆ ಉತ್ತಮ ಸಿನಿಮಾಗಳು 100 ದಿನ ಪೂರೈಸುತ್ತಿತ್ತು. ಕೆಲ ಸಿನಿಮಾಗಳು 6 ತಿಂಗಳು ಪೂರೈಸಿ ದಾಖಲೆ ಬರೆದಿತ್ತು. ಆದರೆ ಬಂಗಾರದ ಮನುಷ್ಯ ಸಿನಿಮಾ ಬರೋಬ್ಬರಿ 2 ವರ್ಷ ದಾಖಲೆಯ ಪ್ರದರ್ಶನ ಕಂಡಿತ್ತು. ಸಿದ್ದಲಿಂಗಯ್ಯ ನಿರ್ದೇಶಿಸಿದ ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

13 ಲಕ್ಷ ಬಜೆಟ್, ದಾಖಲೆಯ ಕಲೆಕ್ಷನ್

1970ರ ದಶಕದಲ್ಲಿ ಕನ್ನಡ ಸಿನಿಮಾದ ಸರಾಸರಿ ಬಜೆಟ್ 2 ರಿಂದ 4 ಲಕ್ಷ ರೂಪಾಯಿ. ಕೆಲ ಸಿನಿಮಾಗಳು 1 ಲಕ್ಷ ರೂಪಾಯಿಯಲ್ಲೂ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್‌ನ ಸರಾಸರಿ 4 ಲಕ್ಷ ರೂಪಾಯಿ ಬಟೆಟ್ ಸಿನಿಮಾಗಿಂತ ಬಂಗಾರದ ಮನುಷ್ಯ ಸಿನಿಮಾ ಮೂರು ಪಟ್ಟು ಹೆಚ್ಚಾಗಿತ್ತು. ಈ ಸಿನಿಮಾ ಮುಗಿದಾಗ ಬಜೆಟ್ 13 ಲಕ್ಷ ರೂಪಾಯಿ ಆಗಿತ್ತು. ಅಂದು ಈ ಬಜೆಟ್ ನೋಡಿ ಹಲವು ನಿರ್ಮಾಪಕರು, ನಿರ್ದೇಶಕ, ಚಂದನವನ ಈ ಸಿನಿಮಾದಿಂದ ಎಲ್ಲರೂ ನಷ್ಟ ಅನುಭವಿಸುತ್ತಾರೆ ಎಂದಿದ್ದರು. ನಿರ್ಮಾಪಕರನ್ನು ದೇವರೇ ಕಾಪಾಡಬೇಕು ಅನ್ನೋ ಮಾತುಗಳು ಬಂದಿತ್ತು. ರಿಲೀಸ್ ಆದ ಬೆನ್ನಲ್ಲೇ ಸಿನಿಮಾ ಸೂಪರ್ ಹಿಟ್ ಆಗಿತ್ತು. 100 ಡೇಸ್, 200 ಡೇಸ್, 300 ಡೇಸ್ ಸೇರಿದಂತೆ ಪ್ರತಿ ದಿನ ಸಿನಿಮಾ ಹೌಸ್‌ಫುಲ್ ಆಗಿತ್ತು. 2 ವರ್ಷ ಸತತವಾಗಿ ಪ್ರದರ್ಶನ ಕಂಡ ಈ ಸಿನಿಮಾ 2.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಅಂದು ಟಿಕೆಟ್ ಬೆಲೆ ಎಷ್ಟಿತ್ತು?

1970-72ರ ವೇಳೆಯಲ್ಲಿ ಟಿಕೆಟ್ ಬೆಲೆ 2.75 ರೂಪಾಯಿಯಿಂದ 4.75 ರೂಪಾಯಿ. ಈ ಬೆಲೆಯಲ್ಲಿ ಟಿಕೆಟ್ ಖರೀದಿಸಿದ ಸಿನಿಮಾ ಒಂದು 2.5 ಕೋಟಿ ರೂಪಾಯಿ ಗಡಿ ದಾಟಿತ್ತು. ಇಂದಿನ 500 ಕೋಟಿ ರೂಪಾಯಿಗೆ ಸಮವಾಗಿತ್ತು. ಇಷ್ಟೇ ಅಲ್ಲ ಕೇವಲ ಚಿತ್ರಮಂದಿರದಲ್ಲಿ ಟಿಕೆಟ್ ಮಾರಾಟವಾಗಿ ಬರವು ದುಡ್ಡೇ ಕಲೆಕ್ಷನ್ ಆಗಿತ್ತು. ಒಟಿಟಿ , ಪ್ರೈಮ್ ಹಕ್ಕುಗಳು ಇರಲಿಲ್ಲ.

ಡಾ.ರಾಜ್‌ಕುಮಾರ್ ಸಂಭಾವನೆ ಎಷ್ಟಿತ್ತು?

1972 ವೇಳೆ ಕನ್ನಡ ಸಿನಿಮಾದ ಪ್ರೊಡಕ್ಷನ್ ದುಬಾರಿಯಾಗಿತ್ತು. ಮಡ್ರಾಸ್‌ನಲ್ಲಿ ಡಬ್ಬಿಂಗ್, ಮ್ಯೂಸಿಕ್, ಪ್ರೊಡಕ್ಷನ್ ಕೆಲಸಗಳು ಹೆಚ್ಚಾಗಿ ನಡೆಯುತ್ತಿತ್ತು. ಹೀಗಾಗಿ ದುಬಾರಿಯಾಗುತ್ತಿತ್ತು. ಈ ಸಿನಿಮಾಗೆ ಬಜೆಟ್ 13 ಲಕ್ಷ ರೂಪಾಯಿ, ಆದರೆ ನಾಯಕ ಡಾ.ರಾಜ್‌ಕುಮಾರ್ ಸಂಭಾವನೆ 30 ಸಾವಿರ ರೂಪಾಯಿ. ನಾಯಕಿ ಭಾರತಿ ಸಂಭಾವನೆ 20 ಸಾವಿರ ರೂಪಾಯಿ.

ಪಟ್ಟಣ ಜೀವನ ಬಿಟ್ಟು ಹಳ್ಳಿಗೆ ಬಂದು ಕೃಷಿ ಮಾಡಿ ಬದುಕು ಗೆದ್ದ ಕತೆ ಇದಾಗಿತ್ತು. ಈ ಸಿನಿಮಾ ನೋಡಿ ಹಲವರು ಪಟ್ಟಣದ ಜೀವನ ತೊರೆದು ಮತ್ತೆ ಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿದ್ದರು. ಹಲವು ರೈತರಿಗೆ ಈ ಸಿನಿಮಾ ಸ್ಪೂರ್ತಿಯಾಗಿತ್ತು. ಈ ಸಿನಿಮಾದ ಎಲ್ಲಾ ಐದು ಹಾಡುಗಳು ಸೂಪರ್ ಹಿಟ್ ಆಗಿತ್ತು. ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನದ ಐದು ಹಾಡುಗಳು ಈಗಲೂ ಸೂಪರ್ ಹಿಟ್. ಆಗದು ಎಂದು ಕೈಕಟ್ಟಿ ಕುಳಿತರೆ, ನಗು ನಗುತಾ ನಲಿ ನಲಿ ಸೇರಿದಂತೆ ಐದು ಹಾಡುಗಳು ಈಗಲೂ ಅಷ್ಟೇ ಜನಪ್ರಿಯವಾಗಿದೆ. ಎಲ್ಲಾ ಹಾಡುಗಳನ್ನು ಪಿಬಿ ಶ್ರೀನಿವಾಸ್ ಹಾಗೂ ಪಿ ಸುಶೀಲಾ ಹಾಡಿದ್ದರು.