ಪ್ರೇಕ್ಷಕರು ಈ ಚಿತ್ರವನ್ನು ಯಾಕೆ ನೋಡಬೇಕು?

ಕನ್ನಡಕ್ಕೆ ಇದೊಂದು ಹೊಸ ಬಗೆಯ ಚಿತ್ರ. ತೆಲುಗಿನಲ್ಲಿ ಬಂದ ‘ಅರುಂಧತಿ’, ‘ಭಾಗಮತಿ’ಚಿತ್ರಗಳ ಶೈಲಿಯ ಕನ್ನಡ ಚಿತ್ರ. ಹಾಗಂತ ಆ ಚಿತ್ರಗಳ ಕತೆಗೂ, ನನ್ನ ಸಿನಿಮಾಕ್ಕೂ ಯಾವುದೇ ಕನೆಕ್ಷನ್‌ ಇಲ್ಲ. ಕನ್ನಡದ ನೇಟಿವಿಟಿ ಮಾತ್ರವಲ್ಲ ಯಾವುದೇ ಭಾಷೆಗೂ ಕನೆಕ್ಟ್ ಆಗುವಂತಹ ಕತೆ ಇದು. ಮೇಕಿಂಗ್‌ ದೃಷ್ಟಿಯಲ್ಲಿ ಅದ್ಧೂರಿಯಾಗಿಯೇ ತೆರೆಗೆ ಬಂದ ಸಿನಿಮಾ. ಹಾಗೆಯೇ ಮಹಿಳಾ ಪ್ರಧಾನ ಸಿನಿಮಾ. ಚಿತ್ರದ ಪ್ರಮುಖ ಪಾತ್ರಧಾರಿ ರಾಧಿಕಾ ಕುಮಾರ ಸ್ವಾಮಿ ಫಸ್ಟ್‌ ಟೈಮ್‌ ಇಂತಹ ಪಾತ್ರದಲ್ಲಿ ಅಭಿನಯಿಸಿದ್ದು.

'ದಮಯಂತಿ' ಯನ್ನು ಅರುಂಧತಿಗೆ ಹೋಲಿಸಿದ್ದಕ್ಕೆ ರಾಧಿಕಾ ಕುಮಾರಸ್ವಾಮಿ ಮುನಿಸು?

ದಮಯಂತಿ ಯಾರು, ಆಕೆಯ ಕತೆ ಏನು?

ಇದೊಂದು ರಾಜ ಮನೆತನದ ಕತೆ. 80ರ ದಶಕದಲ್ಲಿ ನಡೆದು ಹೋದ ಘಟನೆ. ಅದು 2019ಕ್ಕೂ ಕನೆಕ್ಟ್ ಆಗುತ್ತದೆ. ಆ ಕತೆಯ ಪ್ರಮುಖ ಪಾತ್ರಧಾರಿ ದಮಯಂತಿ. ಆಕೆ ರಾಜನ ಮಗಳು. ಆಕೆಯ ತಂದೆಯ ರಾಜ ಮನೆತನವನ್ನು ನಾಶ ಮಾಡಿದವ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ದಮಯಂತಿ ಅಘೋರಿ ವೇಷದಲ್ಲಿ ಬರುತ್ತಾಳೆ. ಆಕೆ ಹೇಗೆ ತನ್ನ ಸೇಡು ತೀರಿಸಿಕೊಳ್ಳುತ್ತಾಳೆ, ಯಾಕಾಗಿ ಆ ಸೇಡು ಎನ್ನುವುದನ್ನೇ ಹಾರರ್‌ ಜಾನರ್‌ನಲ್ಲಿ ತೋರಿಸಲಾಗಿದೆ.

ತಮ್ಮ ರಾಧಿಕಾ ನಡುವಿನ ಸೀಕ್ರೆಟ್ ಬಿಚ್ಚಿಟ್ಟ ಚಾಲೆಂಜಿಂಗ್ ಸ್ಟಾರ್!

ಈ ಕತೆಗೆ ರಾಧಿಕಾ ಕುಮಾರಸ್ವಾಮಿ ಅವರೇ ಬೇಕೆನಿಸಿದ್ದು ಯಾಕೆ?

ಮೊದಲು ನಾನು ಈ ಕತೆಯನ್ನು ತೆಲುಗಿನಲ್ಲಿ ಮಾಡಬೇಕೆಂದುಕೊಂಡಿದ್ದೆ. ಅದಕ್ಕೆ ಅನುಷ್ಕಾ ಅವರನ್ನು ಸಂಪರ್ಕ ಮಾಡಿದ್ದೆ. ಆದರೆ ಅವರು ಎರಡು ವರ್ಷ ತಮಗೆ ಸಮಯ ಇಲ್ಲ, ಸದ್ಯಕ್ಕೆ ಒಪ್ಪಿಕೊಂಡ ಸಿನಿಮಾ ಬಿಟ್ಟು ಬೇರೆ ಸಿನಿಮಾ ಮಾಡುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ರು. ಅಲ್ಲಿಗೆ ನಾನು ತೆಲುಗು ಪ್ರಾಜೆಕ್ಟ್ ಕೈಬಿಟ್ಟು, ಕನ್ನಡದಲ್ಲೇ ಮಾಡೋಣ ಅಂತ ಹೊರಟಾಗ ಆ ಪಾತ್ರಕ್ಕೆ ನನಗೆ ಮೊದಲು ಹೊಳೆದಿದ್ದು ರಾಧಿಕಾ ಕುಮಾರಸ್ವಾಮಿ. ಅವರನ್ನು ಬಿಟ್ಟರೆ ಬೇರೆ ಯಾರು ನನಗೆ ಸೂಕ್ತ ಎನಿಸಲಿಲ್ಲ. ಆ ಪಾತ್ರವೇ ಅದಕ್ಕೆ ಕಾರಣ.

ಉಳಿದ ಪಾತ್ರವರ್ಗ ಮತ್ತು ಚಿತ್ರ ನಿರ್ಮಾಣದ ವೈಶಿಷ್ಟ್ಯತೆ ಏನು?

ಚಿತ್ರಕ್ಕೆ ನಾನೇ ನಿರ್ದೇಶಕ ಕಮ್‌ ನಿರ್ಮಾಪಕ. ಒಂದೇ ಮಾತಿನಲ್ಲಿ ಹೇಳುವುದಾದರೆ ಹಾರರ್‌ ಸಿನಿಮಾವೊಂದನ್ನು ಕನ್ನಡದಲ್ಲಿ ಇದುವರೆಗೂ ಯಾರು ಕೂಡ ಇಷ್ಟುಅದ್ದೂರಿಯಾಗಿ ತೆರೆಗೆ ತಂದಿಲ್ಲ. ಇಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಪಾತ್ರ ‘ಆಪ್ತಮಿತ್ರ’ದ ನಾಗವಲ್ಲಿಗಿಂತಲೂ ಹೆಚ್ಚು ಪರಿಣಾಮಕಾರಿ ಆಗಿ ಬಂದಿದೆ. ಗ್ರಾಫಿಕ್ಸ್‌ ಕೆಲಸಕ್ಕೆ ಸಾಕಷ್ಟುಹಣ ವೆಚ್ಚವಾಗಿದೆ. ಯಾವುದಕ್ಕೂ ಕಮ್ಮಿ ಮಾಡಿಲ್ಲ. ಕನ್ನಡಕ್ಕೆ ಒಂದೊಳ್ಳೆಯ ಸಿನಿಮಾ ಕೊಡಬೇಕೆನ್ನುವ ಉದ್ದೇಶದಿಂದಲೇ ಈ ಸಿನಿಮಾ ಮಾಡಿದ್ದೇನೆ. ಪಾತ್ರವರ್ಗದಲ್ಲೂ ಇದು ವಿಶೇಷ ವಾದ ಸಿನಿಮಾ. ದೊಡ್ಡ ತಾರಾಗಣವೇ ಇಲ್ಲಿದೆ.

ಹಾರರ್‌ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡರೆ ಹೇಗಿರುತ್ತದೆ?

ಚಿತ್ರದ ರಿಲೀಸ್‌ ಪ್ಲಾನ್‌ ಹೇಗಿದೆ, ತೆಲುಗು, ತಮಿಳಿನಲ್ಲಿ ಯಾವಾಗ ರಿಲೀಸ್‌ ಆಗುತ್ತೆ?

ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲೂ ಒಟ್ಟಿಗೆ ರಿಲೀಸ್‌ ಮಾಡಬೇಕೆನ್ನುವುದು ನನ್ನ ಪ್ಲಾನ್‌ ಆಗಿತ್ತು. ಆದ್ರೆ, ತೆಲುಗು ಮತ್ತು ತಮಿಳಿನಲ್ಲಿ ಸೆನ್ಸಾರ್‌ ಸಮಸ್ಯೆ ಆಗಿದೆ. ಡಿಸೆಂಬರ್‌ 13ಕ್ಕೆ ಅಲ್ಲಿ ತೆರೆಗೆ ಬರಲಿದೆ. ಸದ್ಯಕ್ಕೀಗ ಕನ್ನಡದಲ್ಲಿ ಮಾತ್ರ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದೆ. ಈಗಾಗಲೇ ಚಿತ್ರದ ಬಗ್ಗೆ ದೊಡ್ಡ ಕುತೂಹಲ ಇದೆ. ಟೀಸರ್‌, ಟ್ರೇಲರ್‌ ಹಾಗೂ ಆಡಿಯೋಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರಿಂದ ಚಿತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತೆ ಎನ್ನುವ ವಿಶ್ವಾಸ ಇದೆ.