Vidyarthi Vidyarthiniyare Film Review: ಹಾದಿ ತಪ್ಪಿದವರಿಗೆ ಎಚ್ಚರಿಕೆಯ ಗಂಟೆ, ಕಾಣದ ಕೈಯೊಂದು ಆಟ
ಶಾಲಾ- ಕಾಲೇಜು, ತುಂಟಾಟ, ಪಾರ್ಟಿ, ಪಬ್ಬು ಇತ್ಯಾದಿಗಳ ಹಿನ್ನೆಲೆಯಲ್ಲಿ ನಡೆಯುವ ಒಂದು ಪುಟ್ಟ ಮಗುವಿನ ಸಾವು, ಆ ಸಾವಿನ ಹಿಂದಿನ ಎಮೋಷನ್... ಇವಿಷ್ಟು ಅಂಶಗಳು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದಲ್ಲಿ ಅಡಗಿದೆ.
ಆರ್ ಕೇಶವಮೂರ್ತಿ
ನಾಲ್ಕು ಮಂದಿ ವಿದ್ಯಾರ್ಥಿಗಳ ಒಂದು ಗುಂಪು ಅದು. ಅವರು ಆಡಿದ್ದೇ ಆಟ, ಹೇಳಿದ್ದೇ ಮಾತು. ರಾಜಕಾರಣಿ, ಪೊಲೀಸ್, ಪತ್ರಿಕಾ ಸಂಪಾದಕ, ಸಿನಿಮಾ ನಟಿ ಎನಿಸಿಕೊಂಡವರು ಈ ಮೂವರ ವಿದ್ಯಾರ್ಥಿಗಳ ಹೆತ್ತವರು. ತಮ್ಮ ಹೆತ್ತವರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆಂಬ ಅಹಂನಿಂದ ಹಾದಿ ತಪ್ಪುವ ಇವರಿಗೆ ಒಮ್ಮೆ ಎಚ್ಚರಿಕೆ ಬೆಲ್ಲು ಹೊಡೆಯುವ ಸಮಯ ಬಂದಾಗ ಏನಾಗುತ್ತದೆ ಎಂಬುದು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಅಸಲಿಯತ್ತು.
ಆ ಎಚ್ಚರಿಕೆ ಬೆಲ್ಲು ಹೊಡೆಯುವುದು ಯಾರು, ಯಾಕಾಗಿ, ಇವರು ಹಾದಿ ತಪ್ಪುವುದಕ್ಕೆ ಹೆತ್ತವರೂ ಹೇಗೆ ಕಾರಣರಾಗುತ್ತಾರೆ, ಇಷ್ಟಕ್ಕೂ ಈ ವಿದ್ಯಾರ್ಥಿಗಳ ಗುಂಪು ಮಾಡಿರುವ ಅನಾಹುತ ಏನು ಎಂಬುದು ನಿರ್ದೇಶಕ ಅರುಣ್ ಅಮುಕ್ತ ಅವರು ಮಕ್ಕಳ ಆಟದಂತೆಯೇ, ಮನರಂಜನಾತ್ಮಕವಾಗಿ ತೆರೆ ಮೇಲೆ ನಿರೂಪಿಸುತ್ತಾ ಮೊದಲರ್ಧ ಕತೆಯನ್ನು ಮುಗಿಸುತ್ತಾರೆ. ವಿರಾಮದ ನಂತರದ ಕತೆ ಗಂಭೀರತೆ ಸೇರಿಕೊಂಡು, ವಿದ್ಯಾರ್ಥಿಗಳ ಜತೆಗೆ ಕಾಣದ ಕೈಯೊಂದು ಆಟವಾಡುತ್ತದೆ.
ಚಿತ್ರ: ವಿದ್ಯಾರ್ಥಿ ವಿದ್ಯಾರ್ಥಿನಿಯರೇ
ತಾರಾಗಣ: ಚಂದನ್ ಶೆಟ್ಟಿ, ಅಮರ್, ಭಾವನಾ, ಮನಸ್ವಿ, ಸಿಂಚನಾ, ಮನೋಜ್, ಸುನೀಲ್ ಪುರಾಣಿಕ್, ಅರವಿಂದ್ ರಾವ್, ಪ್ರಶಾಂತ್ ಸಂಬರ್ಗಿ, ಬಲರಾಜವಾಡಿ
ನಿರ್ದೇಶನ: ಅರುಣ್ ಅಮುಕ್ತ
ರೇಟಿಂಗ್: 3
ಶಾಲಾ- ಕಾಲೇಜು, ತುಂಟಾಟ, ಪಾರ್ಟಿ, ಪಬ್ಬು ಇತ್ಯಾದಿಗಳ ಹಿನ್ನೆಲೆಯಲ್ಲಿ ನಡೆಯುವ ಒಂದು ಪುಟ್ಟ ಮಗುವಿನ ಸಾವು, ಆ ಸಾವಿನ ಹಿಂದಿನ ಎಮೋಷನ್... ಇವಿಷ್ಟು ಅಂಶಗಳು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದಲ್ಲಿ ಅಡಗಿರುವುದರಿಂದ ನಿರ್ದೇಶಕರು ಕತೆ ಜತೆಗೆ ತೀರಾ ಅನಗತ್ಯವಾಗಿ ಟೈಮ್ ಪಾಸ್ ಮಾಡುವುದಕ್ಕೆ ಹೋಗಿಲ್ಲ. ನಟನೆ ವಿಚಾರಕ್ಕೆ ಬಂದರೆ ಚಂದನ್ ಶೆಟ್ಟಿ ಇಲ್ಲಿ ಫಸ್ಟ್‌ಕ್ಲಾಸ್ ವಿದ್ಯಾರ್ಥಿ.