ಕೇವಲ ₹37 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ₹200 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಕಲಾವಿದರ ಅದ್ಭುತ ನಟನೆ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ ಎಂದು ಹೇಳಬಹುದು. ಚಿತ್ರದ ಎಲ್ಲಾ ಹಾಡುಗಳು ಸಹ ಸಿನಿಮಾ ಯಶಸ್ಸಿಗೆ ಕಾರಣವಾಗಿವೆ.
ಮುಂಬೈ: ಸಿನಿಮಾ ಲೋಕದಲ್ಲಿ ಹಲವು ಚಿತ್ರಗಳು ನಿರೀಕ್ಷೆಗೂ ಮೀರಿ ಯಶಸ್ಸು ಪಡೆದುಕೊಂಡಿವೆ. ಸಿನಿಮಾ ನಿರ್ಮಾಣದ ಬಜೆಟ್‌ನ ಎರಡುಪಟ್ಟು ಹಣ ಗಳಿಸಿ ದಾಖಲೆ ಬರೆದಿವೆ. ಟೆಲಿವಿಷನ್‌ಗಳಲ್ಲಿ ಸಿನಿಮಾ ಪ್ರಸಾರವಾದರೂ ಜನರು ಮಿಸ್ ಮಾಡದೇ ನೋಡುತ್ತಾರೆ. ಇದಕ್ಕೆಲ್ಲಾ ಕಾರಣ ಸಿನಿಮಾದ ಗಟ್ಟಿಯಾದ ಕಥೆ, ಕಲಾವಿದರ ಅದ್ಭುತ ನಟನೆ, ಚಿತ್ರದ ಹಾಡುಗಳು. ಕೆಲವೊಂದು ಸಿನಿಮಾಗಳು ಜನರ ಭಾವನೆಗಳೊಂದಿಗೆ ಬೆರೆತುಕೊಳ್ಳುವ ಕಾರಣದಿಂದಾಗಿ ಸಿನಿಲೋಕದ ಟಾಪ್ ಚಿತ್ರಗಳ ಪಟ್ಟಿಗೆ ಸೇರುತ್ತವೆ. ಅದರಲ್ಲಿಯೂ ದೇಶಭಕ್ತಿ ಮತ್ತು ನೈಜ ಘಟನೆಯಾಧರಿತ ಸಿನಿಮಾಗಳು ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆಯುತ್ತವೆ. ಇಂದು ಈ ಲೇಖನದಲ್ಲಿ ಅಂತಹುವುದೇ ಒಂದು ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ. ಹೊಸ ಕಲಾವಿದರೊಂದಿಗೆ ಕೇವಲ 37 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ 200 ಕೋಟಿಗೂ ಅಧಿಕ ಬಾಕ್ಸ್ ಆಫಿಸ್ ಕಲೆಕ್ಷನ್ ಮಾಡಿತ್ತು. ಹೊಸ ಕಲಾವಿದರೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದ ನಿರ್ದೇಶಕರು ಗೆದ್ದಿದ್ದರು.
ಆಲಿಯಾ ಭಟ್- ವಿಕ್ಕಿ ಕೌಶಲ್ ನಟನೆಯ 'ರಾಝಿ' ಸಿನಿಮಾ 2018ರಲ್ಲಿ ಬಿಡುಗಡೆಗೊಂಡಿತ್ತು. ಮ್ಯೂಸಿಕಲ್ ಹಿಟ್ ನೊಂದಿಗೆ ಭಾರತೀಯರ ಮನೆ ಮನಗಳನ್ನು ರಾಝಿ ತಲುಪುವಲ್ಲಿ ಯಶಸ್ವಿಯಾಗಿತ್ತು. ಬಬ್ಲಿ ಗರ್ಲ್, ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಆಲಿಯಾ ಭಟ್‌ಗೆ ರಾಝಿ ಸಿನಿಮಾ ಹೊಸ ಗುರುತನ್ನು ನೀಡಿತ್ತು. ಅದೇ ರೀತಿ ವಿಕ್ಕಿ ಕೌಶಲ್ ಅವರ ನಟನೆಯ ಪಕ್ವತೆ ಈ ಚಿತ್ರದಲ್ಲಿ ಕಾಣಬಹುದು.
11ನೇ ಮೇ 2018ರಂದು ಬಿಡುಗಡೆಯಾದ ಈ ಸಿನಿಮಾ 37 ಕೋಟಿಯ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಈ ಸಿನಿಮಾ ಜನರಿಗೆ ಎಷ್ಟು ಇಷ್ಟವಾಯ್ತು ಅಂದ್ರೆ ಜನರು ಕೌಂಟರ್ ಬಳಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ತೆಗೆದುಕೊಳ್ಳಲು ಗಂಟೆಗಟ್ಟಲೇ ಕಾಯುತ್ತಾ ನಿಂತಿದ್ದರು. ಅಲಿಯಾ ಭಟ್ ಚಿತ್ರದಲ್ಲಿ ಸೆಹ್ಮತ್ ಸೈಯದ್ ಪಾತ್ರದಲ್ಲಿ ನಟಿಸಿದ್ರೆ, ಇಕ್ಬಾಲ್ ಸೈಯದ್ ಹೆಸರಿನ ಪಾಕ್ ಸೇನಾಧಿಕಾರಿಯಾಗಿ ವಿಕ್ಕಿ ಕೌಶಲ್ ನಟಿಸಿದ್ದಾರೆ.
ಚಿತ್ರದ ಕಥೆ ಏನು?
1971 ಕಾಲಘಟ್ಟದ ಸಿನಿಮ ಇದಾಗಿದ್ದು, ಸೆಹ್ಮತ್ ಸೈಯದ್ ತಂದೆ ದೇಶಕ್ಕಾಗಿ ಮಗಳನ್ನು ಪಾಕಿಸ್ತಾನ ಸೇನೆಯ ಉನ್ನತ ಸ್ಥಾನದಲ್ಲಿರುವ ಸೇನಾಧಿಕಾರಿಯ ಮಗನಿಗೆ ಮದುವೆ ಮಾಡಿಕೊಡುತ್ತಾರೆ. ದೇಶಕ್ಕಾಗಿ ಸೆಹ್ಮತ್ ಈ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಮದುವೆಗೆ ಮುನ್ನವೇ ಸೆಹ್ಮತ್‌ಗೆ ಭಾರತದಲ್ಲಿ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗುತ್ತದೆ. ಮದುವೆಯಾಗಿ ಪಾಕಿಸ್ತಾನಕ್ಕೆ ತೆರಳುವ ಸೆಹ್ಮತ್, ಪಾಕ್ ಸೇನೆಯ ರಹಸ್ಯಗಳನ್ನು ಹೇಗೆ ಪತ್ತೆ ಮಾಡುತ್ತಾಳೆ? ತಾನು ಭಾರತ ಪರ ಕೆಲಸ ಮಾಡುತ್ತಿರೋ ವಿಷಯ ತಿಳಿದ ಕೂಡಲೇ ಅಲ್ಲಿಂದ ಹೇಗೆ ಪಾರಾಗುತ್ತಾಳೆ? ಮತ್ತೆ ಭಾರತಕ್ಕೆ ಸೆಹ್ಮತ್ ಬರುತ್ತಾಳಾ? ಆಕೆ ಪತ್ತೆ ಮಾಡಿದ ರಹಸ್ಯಗಳಿಂದ ಭಾರತಕ್ಕೆ ಯಾವೆಲ್ಲಾ ಸಹಾಯ ಆಗುತ್ತೆ ಎಂಬುವುದು ಸಿನಿಮಾದ ಕಥೆಯಾಗಿದೆ.

ಇದನ್ನೂ ಓದಿ:20 ಕಿಸ್ಸಿಂಗ್, 30 ಲಿಪ್‌ಲಾಕ್ ಸೀನ್; ಆದ್ರೂ ಫ್ಲಾಪ್ ಪಟ್ಟಿಗೆ ಸೇರಿದ ಹಾರರ್ ಥ್ರಿಲ್ಲರ್ ಸಿನಿಮಾ
ವಯಸ್ಸಿಗೆ ಮೀರಿದ ನಟನೆಯಿಂದ ಆಲಿಯಾ ಭಟ್ ಎಲ್ಲರ ಗಮನ ಸೆಳೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಜೈದೀಪ್ ಅಹ್ಲಾವತ್, ರಜಿತ್ ಕಪೂರ್, ಸೋನಿ ರಜ್ದಾನ್, ಆರಿಫ್ ಝಕಾರಿಯಾ, ಅಶ್ವಥ್ ಭಟ್, ಸಂಜಯ್ ಸೂರಿ ಸೇರಿದಂತೆ ಹಲವು ಕಲಾವಿದರು ರಾಝಿ ಕಥೆಗೆ ಜೀವ ತುಂಬಿದ್ದಾರೆ.

ಹರಿಂದರ್ ಸಿಕ್ಕಾ ಅವರ ಕಥೆಗೆ ಮೇಘನಾ ಗುಲ್ಜರ್ ಆಕ್ಷನ್ ಕಟ್ ಹೇಳಿದ್ರೆ ವಿನಿತ್ ಜೈನ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಜೊತೆಯಾಗಿ ಬಂಡವಾಳ ಹಾಕಿದ್ದರು. ಜನವರಿ 26 ಮತ್ತು ಆಗಸ್ಟ್ 15ರಂದು ಮಕ್ಕಳಿಗೆ ದೇಶಭಕ್ತಿ ಸಿನಿಮಾ ತೋರಿಸಲು ಪ್ಲಾನ್ ಮಾಡಿದ್ರೆ ಈ ಚಿತ್ರವನ್ನು ತೋರಿಸಬಹುದು. ರಾಝಿ ಸಿನಿಮಾದ " ಏ ವತನ್" ಹಾಡು ಇಂದು ಎಲ್ಲಾ ರಾಷ್ಟ್ರೀಯ ಹಬ್ಬಗಳಂದು ಪ್ರಸಾರವಾಗುತ್ತಿದೆ. ಇನ್ನು ತಂದೆ ಮತ್ತು ಮಗಳ ಬಾಂಧವ್ಯವನ್ನು ತೋರಿಸುವ ಹಾಡು "ಉಂಗುಲಿ ಪಕಡ್ ಕೇ" ಹಾಡು ಸಹ ಸದಾ ಟ್ರೆಂಡಿಂಗ್‌ನಲ್ಲಿರುತ್ತದೆ. ಈ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಒಂದು ಕ್ಷಣ ಫಾರ್ವರ್ಡ್ ಮಾಡಿದ್ರೂ ಈ ಸಿನ್ಮಾ ಅರ್ಥ ಆಗಲ್ಲ; ಪ್ರತಿ ಸೆಕೆಂಡ್‌ಗೂ ರೋಚಕ ತಿರುವುಗಳು

