ಮಗಳನ್ನು ಬಲೆಗೆ ಬೀಳಿಸಿದ 'ಸೈತಾನ್': ಮನಸ್ಸನ್ನು ವಶಕ್ಕೆ ಪಡೆದು, ತನ್ನಿಷ್ಟದಂತೆ ಕುಣಿಸುವ ಶೈತಾನ

ಡೆಹ್ರಾಡೂನ್‌ನಲ್ಲಿ ಸುಖಿ ಜೀವನ ನಡೆಸುತ್ತಿರುವ ಒಂದು ಕುಟುಂಬ, ರಜೆಯಲ್ಲಿ ಅಪರಿಚಿತ ವ್ಯಕ್ತಿಯನ್ನು ಭೇಟಿಯಾಗುತ್ತದೆ. ಆದರೆ ಈ ಭೇಟಿ ಅವರ ಜೀವನವನ್ನೇ ತಲೆಕೆಳಗಾಗಿಸುತ್ತದೆ. ಮಗಳು ಅಪರಿಚಿತನ ಮಾನಸಿಕ ನಿಯಂತ್ರಣಕ್ಕೆ ಒಳಗಾಗುತ್ತಾಳೆ. ಈ ಕುಟುಂಬದ ಭವಿಷ್ಯ ಏನಾಗುತ್ತದೆ?

Ajay devgan jyothika mahadevan acted saitaan streaming netflix reveiw

- ವೀಣಾ ರಾವ್, ಕನ್ನಡ ಪ್ರಭ

ನಿರ್ಮಾಣ: ದೇವಗನ್ ಪ್ರೊಡಕ್ಷನ್ಸ್
ನಿರ್ದೇಶನ: ವಿಕಾಸ್ ಬೆಹ್ಲ್
ತಾರಾಗಣ: ಅಜೆಯ್ ದೇವಗನ್, ಜ್ಯೋತಿಕಾ, ಮಾಧವನ್
ಒಟಿಟಿ: ನೆಟ್‌ಫ್ಲಿಕ್ಸ್

ಗಂಡ ಚಾರ್ಟೆಡ್ ಅಕೌಂಟೆಂಟ್, ಹೆಂಡತಿ ಎರಡು ಮಕ್ಕಳ ಮುದ್ದಾದ ಸಂಸಾರ. ಉಟ್ಟು, ತೊಟ್ಟು, ತಿನ್ನಲು ಯಾವ ಕೊರತೆಯೂ ಇಲ್ಲ. ದೇವರು ಸಿರಿವಂತಿಕೆಯನ್ನು ಧಾರಾಳವಾಗಿಯೇ ಕೊಟ್ಟಿದ್ದಾನೆ. ಪ್ರಕೃತಿಯ ರಮ್ಯತಾಣ ಡೆಹ್ರಾಡೂನ್‌ನಲ್ಲಿ ವಾಸ. ತಮ್ಮಿಷ್ಟದಂತೆ ಕಟ್ಟಿಕೊಂಡ ಫಾರ್ಮ್ ಹೌಸಿನಲ್ಲಿ ಆಗಾಗ ರಂಜನೀಯವಾಗಿ ರಜಾದಿನಗಳನ್ನು ಕಳೆದು ಬರುತ್ತಾರೆ. ಹೀಗಿರುವಾಗ ಯಾರೋ ಒಬ್ಬ ಅಪರಿಚಿತ ನಿಮ್ಮ ಮನೆಯೊಳಗೆ ನುಗ್ಗಿ ನಿಮ್ಮ ಮಗಳನ್ನು ಮಾನಸಿಕವಾಗಿ ವಶಪಡಿಸಿಕೊಂಡು, ಅವಳನ್ನು ತನ್ನ ಮನಬಂದಂತೆ ಕುಣಿಸುತ್ತಿದ್ದರೆ ಅದರಿಂದ ಪ್ರಾಣಾಪಾಯದಂಥ ತೊಂದರೆಗಳು ಎದುರಾದರೆ ನೀವು ಅದನ್ನು ತಡೆಯಲು ಅಶಕ್ತರಾಗುವಂತೆ ಆ ಅಪರಿಚಿತ ನಿಮ್ಮ ಮೇಲೆ ಒತ್ತಡ ಹೇರಿದರೆ?

ಇದು 2024ರಲ್ಲಿ ಬಿಡುಗಡೆಯಾದ ಸೈತಾನ್ ಚಿತ್ರದ ಕಥಾಭಾಗ. 2023ರಲ್ಲಿ ಬಿಡುಗಡೆಯಾದ ಗುಜರಾತಿ ಚಿತ್ರ ವಶ್‌ನ ರೂಪಾಂತರ ಸೈತಾನ್. ಅಜಯ್ ದೇವಗನ್, ಜ್ಯೋತಿಕಾ, ಮಾಧವನ್ ಮುಖ್ಯ ಭೂಮಿಕೆಯಲ್ಲಿ ಇರುವ ಈ ಚಿತ್ರ ಭಯಾನಕ ಕಥಾ ವಸ್ತುವನ್ನು ಹೊಂದಿದೆ. ಥ್ರಿಲ್ಲರ್-ಹಾರರ್ ಎರಡೂ ಆಗಿರುವ ಸೈತಾನ್ ಚಿತ್ರದುದ್ದಕ್ಕೂ ಕುರ್ಚಿಯ ತುದಿಯಲ್ಲಿ ಕುಳಿತು ನೋಡುವಂತೆ ಮಾಡುತ್ತದೆ. 1998ರಲ್ಲಿ ಬಿಡುಗಡೆಯಾದ ಡೋಲಿ ಸಜಾಕೆ ರಖನಾ ಚಿತ್ರದ ನಂತರ ಜ್ಯೋತಿಕಾ ಸೈತಾನ್ ಮೂಲಕ ಬಾಲಿವುಡ್ ಮರು ಪ್ರವೇಶ ಮಾಡಿದ್ದಾರೆ.

ಕಬಿರ್ ರಿಷಿ ತನ್ನ ಹೆಂಡತಿ ಜ್ಯೋತಿ ಮತ್ತು ಮಕ್ಕಳಾದ ಜಾನ್ವಿ ಹಾಗೂ ಧೃವ್‌ರೊಡನೆ ಡೆಹ್ರಾಡೂನಿನಿಂದ ದೂರವಿದ್ದ ತನ್ನ ಫಾರ್ಮ್ ಹೌಸಿಗೆ ರಜೆ ಕಳೆಯಲು ಬರುತ್ತಾನೆ. ಬರುವಾಗ ದಾರಿಯಲ್ಲಿ ತಿಂಡಿ ತಿನ್ನಲು ಒಂದು ಹೊಟೇಲ್ ಬಳಿ ಬಂದಾಗ ಅವನಿಗೆ ವನರಾಜ್ ಕಶ್ಯಪ್ ಪರಿಚಯವಾಗುತ್ತದೆ. ಆಗಲೇ ಮರೆತು ಬಿಡಬಹುದಾದ ಒಂದು ಸಣ್ಣ ಕ್ಯಾಶುವಲ್ ಪರಿಚಯಕ್ಕೆ ಎಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬ ಕಲ್ಪನೆಯೂ ಇಲ್ಲದೆ ರಿಷಿ ಪರಿವಾರ ವನರಾಜ್ ಜೊತೆ ಕೆಲವು ನಿಮಿಷಗಳ ಕಾಲ ಬೆರೆಯುತ್ತಾರೆ. ವನರಾಜ್ ಪರಾಠ ತಿನ್ನುವುದಿಲ್ಲವೆಂದ  ಜಾನ್ವಿಗೆ ಒಂದು ಲಡ್ಡು ಕೊಡುತ್ತಾನೆ. ಲಡ್ಡು ತಿಂದ ಜಾನ್ವಿಯ ನಡವಳಿಕೆಯೇ ಬದಲಾಗಿ ಬಿಡುತ್ತದೆ. ಅವಳು ವನರಾಜನ ಪ್ರತಿಯೊಂದೂ ಆದೇಶಗಳನ್ನು ಪಾಲಿಸತೊಡಗುತ್ತಾಳೆ. ಇದರಿಂದ ತಾಯಿ ಜ್ಯೋತಿಕಾ ಕಿರಿಕಿರಿಗೊಳಗಾಗಿ ಅಲ್ಲಿಂದ ಎಲ್ಲರೂ ತಮ್ಮ ಫಾರ್ಮ್ ಹೌಸಿಗೆ ಹೊರಟು ಬಿಡುತ್ತಾರೆ.

ಮಹಾರಾಜ ರಿವ್ಯೂ, ಆಧ್ಯಾತ್ಮಿಕ ಗುರು ಜೆಜೆಯದ್ದೇ ಆಳ್ವಿಕೆ: ನಂಬಿಕೆ ವಿರುದ್ಧ ಪತ್ರಕರ್ತನ ಹೋರಾಟ!

ಅಲ್ಲಿ ಎಲ್ಲರೂ ಖುಷಿಯಿಂದ ನೀರಾಟವಾಡುವಾಗ ವನರಾಜನ ಆಗಮನವಾಗುತ್ತದೆ. ಕೀಲಿ ಕೊಟ್ಟ ಗೊಂಬೆಯಂತೆ ವನರಾಜನಿಗೆ ಗೇಟ್ ತೆಗೆಯುವ ಜಾನ್ವಿ ಅಮ್ಮ ಕೆಂಗಣ್ಣಿಗೆ ಗುರಿಯಾದರೂ ನಿರ್ಲಕ್ಷಿಸುತ್ತಾಳೆ. ಅವಳ ಮುಖದಲ್ಲಿ ಒಂದು ವಿಲಕ್ಷಣ ಕಳೆ, ಒಳಬಂದ ವನರಾಜನ ಮುಖದಲ್ಲಿ ಒಂದು ವಿಲಕ್ಷಣ ನಗು. ತನ್ನ ಫೋನ್ ಚಾರ್ಜರ್ ಮುಗಿದಿದೆ ಎಂದೂ ಹತ್ತು ನಿಮಿಷದಲ್ಲಿ ಚಾರ್ಜ್ ಮಾಡಿಕೊಂಡು ಹೊರಟು ಬಿಡುವೆನೆಂತಲೂ ಹೇಳಿದ ವನರಾಜ, ಅಲ್ಲಿಯೇ ಕುಳಿತು ಜಾನ್ವಿಯೊಂದಿಗೆ ಮಾತಿಗೆ ತೊಡಗುತ್ತಾನೆ. ಅಪರಿಚಿತನೊಂದಿಗೆ ಮಗಳು ಸಲುಗೆಯಿಂದ ಮಾತನಾಡುವುದು ಜ್ಯೋತಿಗೆ ಇಷ್ಟವಾಗುವುದಿಲ್ಲ. ರಿಷಿಯ ಆದೇಶದ ಮೇರೆಗೆ ಜ್ಯೋತಿ ಅತಿಥಿಗೆ ಟೀ ತಯಾರಿಸಲು ಹೋಗುತ್ತಾಳೆ. ಟೀ ಹೀಗೇ ಇರಬೇಕು, ಹೀಗೇ ಮಾಡಬೇಕು ಎಂಬುದಾಗಿ ಆದೇಶಗಳನ್ನು ಕೊಡುವ ವನರಾಜ ಜ್ಯೋತಿಗೆ ತಲೆನೋವಾಗುತ್ತಾನೆ.

ಇಲ್ಲಿಂದ ಪ್ರೇಕ್ಷರಿಗೂ ಒಂಥರಾ ಕಿರಿಕಿರಿ, ಒಂಥರಾ ಕುತೂಹಲ ಶುರುವಾಗುತ್ತದೆ. ಜಾನ್ವಿ ಬಳಿ ಮಾತಾನಾಡುತ್ತ ವನರಾಜ ಅವಳ ಓದು, ಅವಳ ಗೆಳತಿಯರು ಅವಳ ಬಾಯ್ ಫ್ರೆಂಡ್ ಎಲ್ಲದರ ಬಗ್ಗೆಯೂ ಕೇಳಿ ತಿಳಿದುಕೊಳ್ಳುತ್ತಾನೆ. ಅವಳ ಗೆಳತಿಯರು ಹಾಗು ಬಾಯ್ ಫೆಂಡ್ ಜೊತೆಗೆ ಅವಳು ಸಧ್ಯದಲ್ಲೇ ಲಡಾಕ್‌ಗೆ ಹೋಗುವ ವಿಷಯವನ್ನೂ ಬಾಯಿ ಬಿಡಿಸುತ್ತಾನೆ. ಕೀಲಿ ಕೊಟ್ಟ ಬೊಂಬೆಯಂತೆ ಅವನು ಕೇಳುವ ಪ್ರಶ್ನೆಗಳಿಗೆಲ್ಲ ಜಾನ್ವಿ ಉತ್ತರಿಸುವುದನ್ನು ನೋಡಿದ ಜ್ಯೋತಿ ಚಕಿತಳಾಗುತ್ತಾಳೆ. ಈ ಮಧ್ಯೆ ಜಾನ್ವಿ ತಮ್ಮ, ಅವಳಿಗೆ ಬಾ ಆಟ ಆಡೋಣ ಉಯ್ಯಾಲೆ ತೂಗಿಕೊಳ್ಳೊಣ ಎಂದು ಪೀಡಿಸುತ್ತಾನೆ. ಧೃವ್‌ನಿಂದ ಕಿರಿಕಿರಿಗೆ ಒಳಗಾಗುವ ವನರಾಜ ಜಾನ್ವಿಗೆ ಹೋಗು, ಅವನ ಜೊತೆ ಆಟವಾಡು ಮತ್ತೆ ಅವನೆಂದಿಗೂ ನಿನ್ನ ಜೊತೆ ಆಟವಾಡಲು ಕೇಳಬಾರದು ಅಷ್ಟು ಅವನಿಗೆ ಬೇಸರ ಬರುವಷ್ಟು ಆಟವಾಡು ಎನ್ನುತ್ತಾನೆ.

ಶರ್ಮಾಜಿಕೀ ಬೇಟಿ: ಮಹಿಳಾ ಕೇಂದ್ರಿತ ಚಿತ್ರದ ಹೆಸರು ಮಾತ್ರ ಹೀಗೆ!

ತಮ್ಮನೊಂದಿಗೆ ಹೊರಗೆ ಹೋದ ಜಾನ್ವಿ ಉಯ್ಯಾಲೆಯಲ್ಲಿ ತಮ್ಮನೊಂದಿಗೆ ರಭಸದಿಂದ ತೂಗಿ ಕೊಳ್ಳುತ್ತಾಳೆ. ಎಷ್ಟು ರಭಸ ಎಂದರೆ ಧೃವ್ ಭಯದಿಂದ ಚೀರುವಷ್ಟು! ಅವನು ಭಯವಾಗುತ್ತಿದೆ ನಿಲ್ಲಿಸು ಎಂದು, ಅಕ್ಕನನ್ನು ಪರಿಪರಿಯಾಗಿ ಕೇಳಿದರೂ ನಿಲ್ಲಿಸದ ಜಾನ್ವಿ ವಿಲಕ್ಷಣವಾಗಿ ನಗುತ್ತಾಳೆ. ಮಗನ ಕಿರಿಚುವಿಕೆಯಿಂದ ಗಾಬರಿಯಾಗಿ ಹೊರಬರುವ ರಿಷಿ ಮತ್ತು ಜ್ಯೋತಿ ಎಷ್ಟು ತಡೆದರೂ ಜಾನ್ವಿ ಉಯ್ಯಾಲೆ ನಿಲ್ಲಿಸುವುದಿಲ್ಲ. ಕೊನೆಗೆ ವನರಾಜ ಹೇಳಿದಾಗ ನಿಲ್ಲಿಸಿ ಕೆಳಗಿಳಿಯುತ್ತಾಳೆ. ಇದರಿಂದ ದಂಪತಿ ಅವಾಕ್ಕಾಗುತ್ತಾರೆ. ವನರಾಜ ಇನ್ನು ಅಲ್ಲೇ ಇರುವುದನ್ನು ನೋಡಿದ ರಿಷಿ ಕೋಪದಿಂದ ಅವನನ್ನು ಜಾಗ ಖಾಲಿ ಮಾಡಲು ಹೇಳುತ್ತಾನೆ. ಕ್ರೂರವಾಗಿ ನಗುತ್ತಾ ವನರಾಜ ತಾನು ಎಲ್ಲೂ ಹೋಗುವುದಿಲ್ಲ ಎನ್ನುತ್ತ ಅಲ್ಲೇ ಭದ್ರವಾಗಿ ಕುಳಿತುಕೊಂಡು, ರಿಷಿ ಹಾಗೂ ಜ್ಯೋತಿಗೆ ತಲೆನೋವಾಗುತ್ತಾನೆ.

ಜಾನ್ವಿಯೊಂದಿಗೆ ಮಾತನಾಡುವ ವನರಾಜ ಅವಳ ಕೈಯಿಂದ ಅವಳ ಭಾಯ್ ಫ್ರೆಂಡ್‌ಗೆ ಫೋನ್ ಮಾಡಿಸಿ ಬ್ರೇಕ್ ಮಾಡುವಂತೆ ಹೇಳುತ್ತಾನೆ. ಅದರಂತೆ ಜಾನ್ವಿ ಬ್ರೇಕ್‌ಅಪ್ ಆಗುವುದಾಗಿಯೂ ಹೇಳುತ್ತಾಳೆ. ರಿಷಿ ವನರಾಜನನ್ನು ಮನೆಯಿಂದ ಬಲವಂತವಾಗಿ ಹೊರಡಿಸಲು ಪ್ರಯತ್ನ ಮಾಡುವಾಗ ಜಾನ್ವಿ ಅಪ್ಪನನ್ನು ತಡೆಯುತ್ತಾಳೆ. ಅವಳಿಗೆ ಎಂಥ ಶಕ್ತಿ ಇರುತ್ತದೆ ಎಂದರೆ ಅಪ್ಪನನ್ನು ತಳ್ಳಿ ಬಿಡುತ್ತಾಳೆ. ವನರಾಜ ನಿನ್ನಪ್ಪನಿಗೆ ಕೆನ್ನೆಗೆ ಬಾರಿಸು ಎಂದರೆ ಬಾರಿಸುತ್ತಾಳೆ. ಇದರಿಂದ ರಿಷಿ ಹಾಗೂ ಜ್ಯೋತಿ ಆಘಾತಕ್ಕೆ ಒಳಗಾಗುತ್ತಾರೆ. ವನರಾಜನ ಪ್ರತಿಯೊಂದೂ ಆದೇಶವನ್ನೂ ಜಾನ್ವಿ ಸಮ್ಮೋಹನಕ್ಕೆ ಒಳಗಾದಂತೆ ಪಾಲಿಸುತ್ತಾಳೆ. ಅವನು ಸತತವಾಗಿ ಬಸ್ಕಿ ಹೊಡೆಯಲು ಹೇಳಿದಾಗ ಹಾಗೆಯೇ ಮಾಡುತ್ತಾಳೆ. ನಿನ್ನ ಹಾಗೂ ನಿನ್ನ ತಂದೆ ತಾಯಿಯ ಫೋನ್ ಒಡೆದು ಹಾಕು ಎಂದರೆ ಒಡೆದು ಹಾಕುತ್ತಾಳೆ. ನಾನು ನಿಲ್ಲಿಸು ಎನ್ನುವವರೆಗೂ ನರ್ತಿಸು ಎಂದರೆ ನರ್ತಿಸುತ್ತಾಳೆ. ಅವಳ ದೇಹಕ್ಕೆ ಸುಸ್ತಾಗುತ್ತಿದ್ದರೂ, ನರ್ತಿಸುತ್ತಾಳೆ. ಹಾಡು ಎಂದರೆ ನಿಲ್ಲಿಸದೆ ಹಾಡುತ್ತಾಳೆ. ನಗು ಎಂದರೆ ಸತತವಾಗಿ ನಗುತ್ತಲೇ ಇರುತ್ತಾಳೆ. ಅಳು ಎಂದರೆ ಕರುಳು ಕಿತ್ತು ಬರುವಂತೆ ಅಳುತ್ತಾಳೆ. ರಿಷಿ ಜ್ಯೋತಿಗೆ ಇದನ್ನೆಲ್ಲಾ ನೋಡಿ, ತಲೆ ಕೆಟ್ಟಂತಾಗುತ್ತದೆ. ಕೋಪ, ದುಃಖ ಕಿರಿಕಿರಿಗಳ ಸಮ್ಮೇಳನ. ನಿನಗೆ ಏನು ಬೇಕು ಹೇಳು. ನಮ್ಮನ್ನು ಬಿಟ್ಟು ಬಿಡು. ಮನೆಯಿಂದ ಹೊರಟು ಹೋಗು ಎಂದು ವನರಾಜನನ್ನು ಕೇಳಿ ಕೊಂಡರೂ ಅವನು ಅಟ್ಟಹಾಸದಿಂದ ನಗುತ್ತಾನೆಯೇ ವಿನಾ ಮನೆ ಬಿಟ್ಟು ಹೋಗಲಾರೆ ಎನ್ನುತ್ತಾನೆ. 

‘ನನಗೆ ನಿನ್ನ ಮಗಳು ಬೇಕು.  ಕಳಿಸುವೆಯಾ ನನ್ನ ಜೊತೆ ಎನ್ನುತ್ತಾನೆ?’ ರಿಷಿ ಒಪ್ಪುವುದಿಲ್ಲ. ಮತ್ತೆ ಇದೇ ರೀತಿ ಕಿರಿಕಿರಿ ಹಿಂಸೆ ಮುಂದುವರೆಯುತ್ತದೆ. ಒಂದು ಹಂತದಲ್ಲಿ ರಿಷಿ ತನ್ನ ಬಳಿ ಇರುವ ಹಣ, ಚಿನ್ನ ಎಲ್ಲವನ್ನೂ ವನರಾಜನಿಗೆ ಕೊಟ್ಟು ಹೊರಟು ಬಿಡು ಎಂದು ಕೈ ಮುಗಿಯುತ್ತಾನೆ. ಅದನ್ನೆಲ್ಲ ತೆಗೆದು ಕೊಳ್ಳುವ ವನರಾಜ ಮನೆಯಿಂದ ಹೊರಡುತ್ತಾನೆ. ಹೊರಟನೆಂದು ಬಾಗಿಲು ಹಾಕಿ ಕೊಳ್ಳುವ ರಿಷಿಗೆ ಮನೆಯ ಮುಂದೆ ಬೆಂಕಿ ಕಂಡು ಬಾಗಿಲು ತೆಗೆದಾಗ ತಾನು ಕೊಟ್ಟ ಹಣ ಒಡವೆಯೆಲ್ಲಾ ವನರಾಜ ಬೆಂಕಿಗೆ ಹಾಕುತ್ತಿರುವುದು ನೋಡುತ್ತಾನೆ. ಮತ್ತೆ ಮನೆ ಒಳಗೆ ನುಸುಳುವ ವನರಾಜ ಹಿಂಸೆ ಮುಂದುವರಿಸುತ್ತಾನೆ.

Raj B Shetty Film Review: ರೂಪಾಂತರದ ವಿಷಾದವನ್ನು ದಾಟಿಸಿರುವ ದೃಶ್ಯ ರೂಪಕ

ಈ ಹಿಂಸೆಯಿಂದ ರಿಷಿ ಮತ್ತವನ ಕುಟುಂಬ ಪಾರಾಗುತ್ತಾ? ರಿಷಿ ಮತ್ತು ಜ್ಯೋತಿಕಾ ವನರಾಜನಿಂದ ಪಾರಾಗಲು ಏನೂ ಉಪಾಯ ಮಾಡಲಿಲ್ಲವೇ? ವನರಾಜ ಯಾರು? ಅವನ ಶಕ್ತಿಯ ಪರಿಮಿತಿ ಏನು? ಅವನು ಹೀಗೆ ಎಷ್ಟು ಜನರನ್ನು ತನ್ನ ಸಮ್ಮೋಹಿನ ಶಕ್ತಿಯಿಂದ ಮರುಳು ಮಾಡಿದ್ದಾನೆ?  ಅವನು ಜಾನ್ವಿಯನ್ನು ತನ್ನ ಜೊತೆ  ಕರೆದು ಕೊಂಡು ಹೋದನೇ? ಜಾನ್ವಿ ವನರಾಜನ ಬಿಗಿ ಮುಷ್ಟಿಯಿಂದ ಪಾರಾದಳೆ? ಧೃವ್‌ಗೆ ಏನಾಯಿತು? ಈ ಎಲ್ಲ ವಿಷಯಗಳು ತಿಳಿಯಬೇಕಾದರೆ ನೆಟ್ ಫ್ಲಿಕ್ಸ್‌ನಲ್ಲಿ ಓಡುತ್ತಿರುವ ಸೈತಾನ್ ಚಿತ್ರವನ್ನು ನೋಡಿ.

ಎಲ್ಲೂ ಬೋರ್ ಹೊಡೆಯದಂತೆ ಉತ್ತಮವಾಗಿ ಬಿಗಿಯಾಗಿ ನಿರ್ದೇಶಿಸಿರುವ ವಿಕಾಸ್ ಬೆಹ್ಲ್ ಚಪ್ಪಾಳೆ ಗಿಟ್ಟಿಸುತ್ತಾರೆ. ಕತೆ ಕೊನೆಯವರೆಗೆ ಬಿಗಿ ಉಳಿಸಿ ಕೊಂಡಿದೆ. ಎಲ್ಲಿಯೂ ಜಾಳು ಜಾಳಾಗಿಲ್ಲ, ಎಲ್ಲಿಯೂ ಅನಾವಶ್ಯಕ ದೃಶ್ಯಗಳಿರದಂತೆ ಎಚ್ಚರಿಕೆ ವಹಿಸಿದ್ದಾರೆ.  ಅಜಯ್ ದೇವಗನ್ ಹಾಗೂ ಜ್ಯೋತಿಕಾ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಅವರ ಅಸಹಾಯಕತೆ ನಮಗೂ ಕಣ್ಣೀರು ತರಿಸುತ್ತದೆ. ಇನ್ನು ಮಾಧವನ್ ಚಿತ್ರದುದ್ದಕ್ಕೂ ಪ್ರೇಕ್ಷಕರು ಕಣ್ಣು ಮಿಟುಕಿಸದೆ ನೋಡುವಂತೆ ಅಭಿನಯಿಸಿದ್ದಾರೆ. ಆ ಮಟ್ಟದ ಕ್ರೂರತೆಯ ಅಭಿನಯ ಮಾಧವನ್ ಹೇಗೆ ಸಾಧ್ಯವಾಯಿತು ಎನಿಸದೆ ಇರಲಾರದು. ತಣ್ಣನೆಯ ಕ್ರೌರ್ಯ ಎದೆ ನಡುಗಿಸುತ್ತದೆ. ಈ ಚಿತ್ರದ ಜೀವಾಳ ಮಾಧವನ್. ಜಾನ್ವಿ ಮತ್ತು ಧೃವ್ ಅಭಿನಯ ಕೂಡ ಉತ್ತಮವಾಗಿದೆ.
 

Latest Videos
Follow Us:
Download App:
  • android
  • ios