Min read

Alexa Review ಸ್ನೇಹ, ದ್ವೇಷ ಮತ್ತು ಮರ್ಡರ್‌ ಮಿಸ್ಟ್ರಿ

Aditi Prabhudeva Pavan Tej Alexa kannada movie review vcs
Alexa aditi Prabhudeva

Synopsis

ಅದಿತಿ ಪ್ರಭುದೇವ, ಪವನ್‌ ತೇಜ್‌, ನಾಗಾರ್ಜುನ ಬಾಳಪ್ಪ, ಹನುಮಂತೇ ಗೌಡ, ಮೇಘಾಶ್ರೀ, ಚಂದ್ರಕಲಾ ಮೋಹನ್‌ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಹೇಗಿದೆ?

ಕೇಶವ್

ಅದಿತಿ ಪ್ರಭುದೇವ ಅವರನ್ನು ಆ್ಯಕ್ಷನ್‌ ಕ್ವೀನ್‌ ಮಾಡುವ ಘನ ಉದ್ದೇಶದಿಂದ ರೂಪಗೊಂಡಿರುವ ಚಿತ್ರ ‘ಅಲೆಕ್ಸಾ’. ಇಡೀ ಸಿನಿಮಾ ಒಂದು ಕೊಲೆಯ ಸುತ್ತ ಸಾಗುತ್ತದೆ. ಈ ನಡುವೆ ರಾಜಕೀಯ ವ್ಯಕ್ತಿಯೊಬ್ಬರ ಭ್ರಷ್ಟಾಚಾರ, ಸ್ನೇಹದ ಹೆಸರಿನಲ್ಲಿ ನಡೆಯುವ ವಂಚನೆ, ಪ್ರೀತಿ- ಪ್ರೇಮದ ವಿಚಾರಗಳು ಬಂದು ಹೋಗುತ್ತವೆ.

ತಾರಾಗಣ: ಅದಿತಿ ಪ್ರಭುದೇವ, ಪವನ್‌ ತೇಜ್‌, ನಾಗಾರ್ಜುನ ಬಾಳಪ್ಪ, ಹನುಮಂತೇ ಗೌಡ, ಮೇಘಾಶ್ರೀ, ಚಂದ್ರಕಲಾ ಮೋಹನ್‌

ನಿರ್ದೇಶನ: ಜೀವ

ಮದುವೆಯಾಗಿ ಹನಿಮೂನ್‌ಗೆ ಹೋದ ದಂಪತಿಯ ಕೊಲೆ ಆಗುತ್ತದೆ. ಆ ಕೊಲೆ ಮಾಡಿದ್ದು ಯಾರೆಂದು ಕಂಡು ಹಿಡಿಯುವುದಕ್ಕೆ ಪೊಲೀಸ್‌ ಅಧಿಕಾರಿ ಅಲೆಕ್ಸಾ ಬರುತ್ತಾಳೆ. ಇಬ್ಬರು ಸ್ನೇಹಿತರು. ಇವರ ಪೈಕಿ ಪೊಲೀಸ್‌ ಅಧಿಕಾರಿ ಅಲೆಕ್ಸಾಳ ಮಾಜಿ ಪ್ರೇಮಿ ಕೂಡ ಒಬ್ಬ. ಕೊಲೆಯಾಗಿರುವುದು ಅಲೆಕ್ಸಾ ಕ್ಲಾಸ್‌ಮೆಂಟ್‌ ಮತ್ತು ಆತನ ಪತ್ನಿ. ಕೊಲೆ ಯಾಕೆ ಆಯ್ತು ಎನ್ನುವ ಪ್ರಶ್ನೆಯಲ್ಲಿ ಮದುವೆ ಆದವರ ಹಳೆಯ ಪ್ರೇಮ ಕತೆಯೂ ತೆರೆದುಕೊಂಡು ಒಂದಿಷ್ಟು ಗೊಂದಲ, ಪ್ರಶ್ನೆ, ಅನುಮಾನಗಳನ್ನು ಹುಟ್ಟಿಸುತ್ತಾ ಸಿನಿಮಾ ಸಾಗುತ್ತದೆ. ಕೊನೆಗೆ ತಾನು ಪ್ರೀತಿಸಿದ ಹುಡುಗನೇ ಕೊಲೆಗಾರ ಎಂದು ಗೊತ್ತಾಗುವ ಹೊತ್ತಿಗೆ ಅಲೆಕ್ಸಾ ಏನು ಮಾಡುತ್ತಾಳೆ ಎಂಬುದು ಚಿತ್ರದ ಕತೆ.

UPADHYAKSHA REVIEW ಹಾಸ್ಯದ ಅಂಬಾರಿಯ ಮೇಲೆ ಪ್ರೇಮದ ಸವಾರಿ

ಅಲೆಕ್ಸಾ ಪಾತ್ರದಲ್ಲಿ ಅದಿತಿ ಪ್ರಭುದೇವ ಅವರ ಆ್ಯಕ್ಷನ್‌ ಚೆನ್ನಾಗಿದೆ. ಪವನ್‌ ತೇಜ್‌ ಅವರ ನಟನೆ ಭರವಸೆ ಮೂಡಿಸುತ್ತದೆ. ಮೇಘಾಶ್ರೀ ಪಾತ್ರ ಮುದ್ದಾಗಿದೆ. ರಾಜಕಾರಣಿಯಾಗಿ ಹನುಮಂತೇಗೌಡ, ತಾಯಿ ಪಾತ್ರದಲ್ಲಿ ಚಂದ್ರಕಲಾ ಮೋಹನ್‌ ಅವರು ಕತೆಯ ತೂಕ ಹೆಚ್ಚಿಸಿದ್ದಾರೆ.

Latest Videos