ಕೊನೆಗೂ 48 ಮೆಗಾಪಿಕ್ಸೆಲ್ ಕ್ಯಾಮೆರಾದ Redmi Note 7 Pro ಬಿಡುಗಡೆ; ಹೆಂಗೈತೆ? ಎಷ್ಟು ರೊಕ್ಕಾ ?
- ಭಾರತೀಯ ಮೊಬೈಲ್ ಪ್ರಿಯರಿಗೆ ಫೆ. 28 ಹ್ಯಾಪಿ ಹ್ಯಾಪಿ ದಿನ!
- ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ಹಲವು ಹೊಸ ಫೋನ್‌ಗಳು!
- 48 ಮೆಗಾಪಿಕ್ಸೆಲ್ ಕ್ಯಾಮೆರಾದ Redmi Note 7 Pro ಬಿಡುಗಡೆ
ರೀಸನೇಬಲ್ ದರಗಳಿಗೆ ಜನಪ್ರಿಯವಾಗಿರುವ ಚೀನಾದ ಮೊಬೈಲ್ ಕಂಪನಿ Xiaomiಯು 2 ಹೊಸ ಸ್ಮಾರ್ಟ್ ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿದೆ.
ಚೀನಾದಲ್ಲಿ ಕಳೆದ ತಿಂಗಳೇ ಈ ಫೋನನ್ನು ಬಿಡುಗಡೆ ಮಾಡಿದ್ದ Xiaomi, ಭಾರತದಲ್ಲೂ ಮೊಬೈಲ್ ಫೋನ್ ಪ್ರಿಯರಿಗೆ ತುದಿಗಾಲಲ್ಲಿ ನಿಲ್ಲಿಸಿತ್ತು ಎಂದರೆ ಅತಿಶಯೋಕ್ತಿ ಆಗಲಾರದು.
ಹೊಸ ಮಾದರಿ ಫೋನ್ ಹಾಗೂ ಹೊಸ ಫೀಚರ್‌ಗಳನ್ನು ಒದಗಿಸುವ Xiaomiಯು, Redmi Note 7 ಮತ್ತು Redmi Note 7 Pro ಮೊಬೈಲ್ ಗಳನ್ನು ಇಂದು ಮಾರುಕಟ್ಟೆಗೆ ಬಿಟ್ಟಿದೆ.
ನಿರಿಕ್ಷೆಯಂತೆ Xiaomiಯು ಹೊಸ ಫೋನ್‌ಗಳಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ನೀಡಿದೆ. ವಿಶೇಷವಾಗಿ ಕ್ಯಾಮೆರಾಗಳಿಗೆ ಕುತೂಹಲ ಕೆರಳಿಸಿರುವ Xiaomi, ಈ ಫೋನ್‌ನಲ್ಲಿ 48MP ಕ್ಯಾಮೆರಾ ಒದಗಿಸಿದೆ.
ಇದನ್ನೂ ಓದಿ: ಅಬ್ಬಬ್ಬಾ... Xiaomiಯ ಈ ಫೋನ್ ಕೈಗೆ ಬಂದ್ರೆ ತಲೆಕೆಟ್ಟು ಹೋಗುತ್ತೆ!
ಹೇಗಿದೆ Redmi Note 7 Pro?
Xiaomiಯು 4GB + 64GB ಆವೃತ್ತಿಯ Redmi Note 7 Pro ಬೆಲೆಯನ್ನು ₹13999 ನಿಗದಿಪಡಿಸಿದೆ. 6GB + 128GB ಆವೃತ್ತಿಯ ಫೋನ್ ಬೆಲೆ ₹16999 ಆಗಿದೆ. ನೆಪ್ಚೂನ್ ಬ್ಲೂ, ನೆಬ್ಯುಲಾ ರೆಡ್ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ಮಾರುಕಟ್ಟೆಯಲ್ಲಿ ಖರೀದಿಗೆ ಮಾ.13 ರಿಂದ ಲಭ್ಯವಾಗಲಿದೆ.
Display: 6.30 ಇಂಚು
Resolution: 1080X2340 ಪಿಕ್ಸೆಲ್ಸ್
Processor: 2GHz Octa-core
RAM: 4GB
ಮುಂಬದಿ ಕ್ಯಾಮೆರಾ: 13 MP
ಹಿಂಬದಿ ಕ್ಯಾಮೆರಾ: 48 MP +5 MP
OS: Android Pie
ಬ್ಯಾಟರಿ ಸಾಮರ್ಥ್ಯ: 4000 mAh
Storage: 64 GB
ಇದನ್ನೂ ಓದಿ: ಅಗ್ಗದ Redmi Note 7 ಫೋನ್ ಬಿಡುಗಡೆ; ಇಲ್ಲಿದೆ ವಿಶೇಷತೆ & ಬೆಲೆ