ಫೆ.24ಕ್ಕೆ ಬಾರ್ಸಿಲೋನದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ HMD ಗ್ಲೋಬಲ್ ಮೊಬೈಲ್ ಕಂಪನಿ (Xiaomi) ತನ್ನ ಹೊಸ ಮಾಡೆಲ್ ಬಿಡುಗಡೆ ಮಾಡಲಿದೆ.  

ಅದರಲ್ಲೇನು ವಿಶೇಷ ಅಂತಾ ಭಾವಿಸುತ್ತಿದ್ದೀರಾ? ಹೌದು, ಇದು ಜಗತ್ತಿನ ಮೊಟ್ಟಮೊದಲ ಪೆಂಟಾ-ಕ್ಯಾಮೆರಾ ಫೋನ್ ಆಗಿರಲಿದೆ!  ಅಂದ್ರೆ ಈ ಫೋನ್‌ನಲ್ಲಿ ಬರೋಬ್ಬರಿ 5 ಕ್ಯಾಮೆರಾಗಳಿರುತ್ತವೆ! ಆದರೆ, Xiaomi ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಕೊಟ್ಟಿಲ್ಲ.

ಇದನ್ನೂ ಓದಿ: ಎಚ್ಚರ... ನಿಮ್ಮ ವಾಟ್ಸಪ್ ಚಟುವಟಿಕೆ ಬಗ್ಗೆ ಲೆಕ್ಕ ಇಡಲಾಗುತ್ತಿದೆ!

ಲಭ್ಯವಿರುವ ಮಾಹಿತಿಗಳ ಪ್ರಕಾರ, Xiaomi 2019ರಲ್ಲಿ ಭಾರಿ ಯೋಜನೆಗಳನ್ನು ಹಾಕಿಕೊಂಡಿದ್ದು, ಕ್ಯಾಮೆರಾದ ಬಗ್ಗೆ ವಿಶೇಷ ಪ್ಲಾನ್‌ಗಳನ್ನು ಹಾಕಿಕೊಂಡಿದೆ.  ಈಗಾಗಲೇ Xiaomiಯು, 48 ಮೆಗಾ ಪಿಕ್ಸೆಲ್ ಕ್ಯಾಮೆರಾವುಳ್ಳ,  Redmi Note 7 ಫೋನನ್ನು ಕೈಗೆಟಕುವ ದರದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಭಾರತದ ಮಾರುಕಟ್ಟೆಗೂ ಈ ಫೋನನ್ನು ಬಿಡುಗಡೆಮಾಡಲಿದೆ.

Xiaomi ತನ್ನ ಕ್ಯಾಮೆರಾ ತಂತ್ರಜ್ಞಾನದಿಂದಾಗಿ ಮೊಬೈಲ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ವಿಶೇಷವಾಗಿ Xiaomi Mi A2 ಮೊಬೈಲ್ ಫೋನ್ ಈಗಿರುವ ಫೋನ್‌ಗಳ ಪೈಕಿ ಅತೀ ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಹಾಗೇನೆ Xiaomiಯ Redmi 6 Pro  ಕೂಡಾ ಎರಡೂ ಬದಿಗಳಲ್ಲಿ ಎರೆಡೆರಡು ಕ್ಯಾಮೆರಾಗಳನ್ನು ಹೊಂದಿದ್ದು, ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ: ಫೇಸ್‌ಬುಕ್‌ ಬಳಕೆದಾರರೇ ಗಮನಿಸಿ : ನಿಮ್ಮ ಅಕೌಂಟ್ ರದ್ದಾಗಬಹುದು

ಕ್ಯಾಮೆರಾಗಳ ಮೇಲೆ ಇಷ್ಟೆಲ್ಲಾ ಪ್ರಯೋಗ ಮಾಡಿರುವ Xiaomi ಇದೀಗ ಪೆಂಟಾ ಕ್ಯಾಮೆರಾ ಮೊಬೈಲ್ ಫೋನ್ ಹೊರತರುತ್ತಿರುವ ವದಂತಿಗೆ ಇಂಬು ನೀಡಿದೆ. ಅದೇ ಅಲ್ಲ, ಜತೆಗೆ, Xiaomiಯ ಪ್ರಾಡಕ್ಟ್ ಡೈರೆಕ್ಟರ್ ವಾಂಗ್ ಟೆಂಗ್ ವೀಬೋ ವೆಬ್‌ಸೈಟ್‌ನಲ್ಲಿ ಹಾಕಿರುವ ಫೋಟೋ ಮೇಲೆ ‘Shot on Mi AI Penta cam' ಎಂಬ ವಾಟರ್ ಮಾರ್ಕ್ ಇರುವುದು ಮೇಲಿನ ಊಹೆಗೆ ಮತ್ತಷ್ಟು ಪುಷ್ಟಿ ನೀಡಿದೆ.