Vodafone idea vi Diwali offer : ದೀಪಾವಳಿ ಮುಗಿದ್ರೂ ಅದ್ರ ಸಂಭ್ರಮ ಮುಗಿದಿಲ್ಲ. ಅನೇಕ ಕಂಪನಿಗಳು ಈಗ್ಲೂ ಆಫರ್ ನೀಡ್ತಿವೆ. ಟೆಲಿಕಾಂ ಕಂಪನಿ ಕೂಡ ಹಿಂದೆ ಬಿದ್ದಿಲ್ಲ. ಗ್ರಾಹಕರಿಗೆ ಉಚಿತ ಡೇಟಾ ಜೊತೆ ಕೆಲ ಪ್ಲಾಟ್ಫಾರ್ಮ್ ಗೆ ಉಚಿತ ಸಬ್ಸ್ಕ್ರೈಬ್ ನೀಡ್ತಿದೆ.

ದೀಪಾವಳಿ ಆಫರ್ (Diwali Offer) ಗಳ ಹಬ್ಬ. ಬಟ್ಟೆಯಿಂದ ಹಿಡಿದು ಎಲೆಕ್ಟ್ರಿಕ್ ಐಟಂವರೆಗೆ ಅಗ್ಗದಿಂದ ದುಬಾರಿ ವಸ್ತುಗಳವರೆಗೆ ಎಲ್ಲದಕ್ಕೂ ಆಫರ್ ಸಿಗುತ್ತೆ. ಈ ರೇಸ್ ನಿಂದ ಟೆಲಿಕಾಂ ಕಂಪನಿಗಳು ಹಿಂದೆ ಬಿದ್ದಿಲ್ಲ. ಹಬ್ಬದ ಸಂದರ್ಭದಲ್ಲಿ ಎಲ್ಲ ಕಂಪನಿಗಳಂತೆ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಗಳಿಗೆ ಆಫರ್ ನೀಡ್ತಿವೆ.

ಪ್ರಿಪೇಯ್ಡ್ ಪ್ಲಾನ್ (Prepaid Plan) ಗೆ 50 ಜಿಬಿ ಉಚಿತ : 

ಹಬ್ಬದ ಋತುವಿನಲ್ಲಿ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vi) ಗ್ರಾಹಕರನ್ನು ಖುಷಿಪಡಿಸಿದೆ. ಗ್ರಾಹಕರಿಗೆ ದೀಪಾವಳಿ ಸಂದರ್ಭದಲ್ಲಿ ದೊಡ್ಡ ಉಡುಗೊರೆ ನೀಡಿದೆ. ಕಂಪನಿ ತನ್ನ ಪ್ರಿಪೇಯ್ಡ್ ಪ್ಲಾನ್ ಗೆ ಉಚಿತ 50GB ಡೇಟಾ ನೀಡ್ತಿದೆ. ಅನೇಕ ಪ್ಲಾನ್ ಗೆ ಇದು ಲಭ್ಯವಿದೆ. 3699 ರೂಪಾಯಿ ವಾರ್ಷಿಕ ಯೋಜನೆಯು 50GB ಉಚಿತ ಮೊಬೈಲ್ ಡೇಟಾ ಜೊತೆ ನಿಮಗೆ ಲಭ್ಯವಾಗ್ತಿದೆ. ಈ ಪ್ಲಾನ್ 365 ದಿನಗಳವರೆಗೆ ದಿನಕ್ಕೆ 2GB ಡೇಟಾ ನೀಡುತ್ತದೆ. ಜೊತೆಗೆ ಅನಿಯಮಿತ ಕರೆ ಮತ್ತು ಉಚಿತ SMS ನೀಡುತ್ತದೆ.

ಒನ್‌ಪ್ಲಸ್ ದೀಪಾವಳಿ ಆಫರ್, ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ 12,250 ರೂಪಾಯಿ ಡಿಸ್ಕೌಂಟ್

ರೀಚಾರ್ಜ್ ಮೇಲೆ % 30 ರಷ್ಟು ರಿಯಾಯಿತಿ : 

ವೊಡಾಫೋನ್ ಐಡಿಯಾದ ಪ್ರಿಪೇಯ್ಡ್ ಪ್ಲಾನ್ ಅಗ್ಗವಾಗಿದೆ. ವೆಬ್ ಸೈಟ್ ಮಾಹಿತಿ ಪ್ರಕಾರ, ಕಂಪನಿ ರೀಚಾರ್ಜ್ಗಳ ಮೇಲೆ ಶೇಕಡಾ 30 ರಷ್ಟು ರಿಯಾಯಿತಿ ನೀಡ್ತಿದೆ. ಇಷ್ಟೆ ಅಲ್ದೆ, ವೊಡಾಫೋನ್ ಐಡಿಯಾ ತನ್ನ ಕೆಲವು ಪ್ರಿಪೇಯ್ಡ್ ಯೋಜನೆ ಜೊತೆ ಉಚಿತ ಜಿಯೋಹಾಟ್ಸ್ಟಾರ್ ಸಬ್ಸ್ಕ್ರೈಬ್ ನೀಡ್ತಿದೆ. 365 ರೂಪಾಯಿ, 380 ರೂಪಾಯಿ, 398 ರೂಪಾಯಿ, 450 ರೂಪಾಯಿ, 579 ರೂಪಾಯಿ ಅಥವಾ 469 ರೂಪಾಯಿ ಪ್ಲಾನ್ ನಲ್ಲಿ ನಿಮಗೆ ಜಿಯೋ ಹಾಟ್ ಸ್ಟಾರ್ ಲಭ್ಯವಾಗಲಿದೆ. ಈ ಪ್ರಿಪೇಯ್ಡ್ ಯೋಜನೆಗಳು ದಿನಕ್ಕೆ 2GB ಡೇಟಾ, ಅನಿಯಮಿತ ಕರೆ ಮತ್ತು ಉಚಿತ SMS ನೀಡುತ್ತವೆ. ಈ ಯೋಜನೆಯ ಮಾನ್ಯತೆ 28 ದಿನಗಳು. 19 ಕ್ಕೂ ಹೆಚ್ಚು OTT ಪ್ಲಾಟ್ಫಾರ್ಮ್ಗಳಿಗೆ ಉಚಿತ ಸಬ್ಸ್ಕ್ರೈಬ್ : ಕಂಪನಿ ದೀಪಾವಳಿ ಟೈಂನಲ್ಲಿ ಇನ್ನೂ ಕೆಲ ಯೋಜನೆಗಳನ್ನು ಗ್ರಾಹಕರಿಗೆ ನೀಡ್ತಿದೆ. ಅದ್ರಲ್ಲಿ ಒಟಿಟಿ ಪ್ಲಾಟ್ ಫಾರ್ಮ್ ಗೆ ಉಚಿತ ಚಂದಾದಾರಿಕೆ ಕೂಡ ಸೇರಿದೆ. ಬಳಕೆದಾರರು ಹಲವಾರು ಪ್ರಿಪೇಯ್ಡ್ ಯೋಜನೆಗಳಲ್ಲಿ 19 ಕ್ಕೂ ಹೆಚ್ಚು OTT ಪ್ಲಾಟ್ಫಾರ್ಮ್ಗಳಿಗೆ ಉಚಿತ ಚಂದಾದಾರಿಕೆ ಪಡೆಯುತ್ತಿದ್ದಾರೆ. 175 ರೂಪಾಯಿ ಮತ್ತು 2399 ರೂಪಾಯಿ ಪ್ಲಾನ್ ನಲ್ಲಿಯೂ ಈ ಸೌಲಭ್ಯ ಲಭ್ಯವಿದೆ. ಈ ಯೋಜನೆಗಳು ದೈನಂದಿನ ಡೇಟಾ ಮತ್ತು ಕರೆ ಮಾಡುವ ಪ್ರಯೋಜನಗಳೊಂದಿಗೆ ನಿಮಗೆ ಸಿಗುತ್ತದೆ.

ಏರ್‌ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕ್ಲೌಡ್ ಸುರಕ್ಷತೆ, ಸ್ಟೋರೇಜ್‌ಗಾಗಿ ಐಬಿಎಂ ಜೊತೆ ಪಾಲುದಾರಿಕೆ

ಕಂಪನಿ ಅಧಿಕೃತ ವೆಬ್ ಸೈಟ್ ಹಾಗೂ Vi ನ ಮೊಬೈಲ್ ಅಪ್ಲಿಕೇಶನ್ಗಳಲ್ಲಿಯೂ ನಿಮಗೆ ಲಭ್ಯವಿದೆ. ಕೆಲವೊಂದು ಆಫರ್ ವೆಬ್ ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ನಲ್ಲಿ ಭಿನ್ನವಾಗಿರುತ್ತದೆ. ಗ್ರಾಹಕರು ರಿಚಾರ್ಜ್ ಮಾಡುವ ಮೊದಲು ಎಲ್ಲಿ ಯಾವ ಆಫರ್ ಲಭ್ಯವಿದೆ, ಯಾವುದು ಅಗ್ಗ, ಯಾವ ಆಫರ್ ಗೆ ಯಾವ ಸೌಲಭ್ಯ ಸಿಗ್ತಿದೆ ಎಂಬುದನ್ನು ಪರಿಶೀಲಿಸಿಕೊಂಡು ರಿಚಾರ್ಜ್ ಮಾಡಿದ್ರೆ ಹೆಚ್ಚು ಪ್ರಯೋಜನ ಪಡೆಯಬಹುದು.