New Year 2026 : 2026ರ ಆರಂಭಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಹೊಸ ವರ್ಷದಲ್ಲಿ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಶಾಕ್ ನೀಡುವ ಸಾಧ್ಯತೆ ಇದೆ. ರಿಚಾರ್ಜ್ ಪ್ಲಾನ್ ದುಬಾರಿ ಆಗಲಿದೆ.

ದೇಶದಲ್ಲಿ ಮೊಬೈಲ್ (Mobile) ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿದೆ. ಕೋಟ್ಯಾಂತರ ಮಂದಿ ಮೊಬೈಲ್ ಬಳಸ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್, ಅನುಕೂಲಕ್ಕಿಂತ ಸ್ಟೈಲ್ ಆಗಿದೆ. ದುಬಾರಿ ಬೆಲೆಕೊಟ್ಟು ಮೊಬೈಲ್ ಖರೀದಿ ಮಾಡುವ ಜನರು, ಒಂದು ಮೊಬೈಲ್ ಗೆ ತೃಪ್ತಿ ಆಗೋದಿಲ್ಲ. ಒಬ್ಬರ ಬಳಿ ಎರಡು ಮೊಬೈಲ್ ಕಡ್ಡಾಯ. ಹಾಗೇ ಕನಿಷ್ಠ ಎರಡು ಸಿಮ್ ಇರ್ಲೇಬೇಕು. ಯಾವ ಕಂಪನಿ ಕಡಿಮೆ ರಿಚಾರ್ಜ್ ಪ್ಲಾನ್ (Recharge Plan) ನೀಡ್ತಿರದೆಯೋ ಅದಕ್ಕೆ ಗ್ರಾಹಕರು ಸ್ವಿಚ್ ಆನ್ ಆಗ್ತಾರೆ. ಆದ್ರೆ ಮುಂದಿನ ವರ್ಷ ಎರಡೆರಡು ಸಿಮ್ ಇಟ್ಕೊಂಡು ಓಡಾಡುವ ನಿಮ್ಮ ಜೇಬಿಗೆ ಕತ್ತರಿ ಬೀಳೋ ಸಾಧ್ಯತೆ ಬಹುತೇಕ ಖಚಿತವಾಗಿದೆ. ಟೆಲಿಕಾಂ ಕಂಪನಿಗಳು (Telecom Companies) ದೊಡ್ಡ ಮಟ್ಟದಲ್ಲಿ ಬೆಲೆ ಏರಿಕೆಗೆ ಪ್ಲಾನ್ ಮಾಡ್ತಿವೆ.

ವರದಿ ಹೇಳೋದೇನು?

ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಮೊಬೈಲ್ ರಿಚಾರ್ಜ್ ಬೆಲೆ ಕೂಡ ದುಬಾರಿ ಆಗ್ತಿದೆ. 2026ಕ್ಕೆ ಮೊಬೈಲ್ ರಿಚಾರ್ಜ್ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಜಾಗತಿಕ ಹೂಡಿಕೆ ಸಂಸ್ಥೆ ಮಾರ್ಗನ್ ಸ್ಟಾನ್ಲಿಈ ಬಗ್ಗೆ ವರದಿ ಮಾಡಿದೆ. ಅದ್ರ ಪ್ರಕಾರ, ಏಪ್ರಿಲ್ ಮತ್ತು ಜೂನ್ 2026 ರ ನಡುವೆ 4 ಜಿ ಮತ್ತು 5 ಜಿ ಪ್ಲಾನ್ ಬೆಲೆಗಳು ಶೇ. 16 ರಿಂದ ಶೇಕಡಾ 20 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಡಿಸೆಂಬರ್ 15 ರಂದು ಮಾರ್ಗನ್ ಸ್ಟಾನ್ಲಿ ವರದಿ (Morgan Stanley Report) ಬಿಡುಗಡೆ ಮಾಡಿದೆ. ಮುಂಬರುವ ವರ್ಷದಲ್ಲಿ ಮೊಬೈಲ್ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳನ್ನು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಬೆಲೆ ಏರಿಕೆ ಪ್ರಿಪೇಯ್ಡ್ ಯೋಜನೆ ಮತ್ತು ಪೋಸ್ಟ್ಪೇಯ್ಡ್ ಯೋಜನೆ ಎರಡರಲ್ಲೂ ಕಾಣಿಸಲಿದೆ. ಇಷ್ಟೇ ಅಲ್ಲ, ಅನೇಕ ಕಂಪನಿಗಳು ರಿಚಾರ್ಜ್ ಜೊತೆ ಒಟಿಟಿ ಸ್ಟ್ರೀಮಿಂಗ್ ಸೇವೆಗಳನ್ನು ನೀಡಿದ್ದವು. ರಿಚಾರ್ಜ್ ಮಾಡಿದ್ರೆ ಒಟಿಟಿ ಸೌಲಭ್ಯ ಗ್ರಾಹಕರಿಗೆ ಸಿಗ್ತಿತ್ತು. ಇನ್ಮುಂದೆ ಅದಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಕಂಪನಿಗಳು ತಮ್ಮ ರೀಚಾರ್ಜ್ ಪ್ಲಾನ್ ನಿಂದ ಹಲವಾರು ಒಟಿಟಿ ಸ್ಟ್ರೀಮಿಂಗ್ ಸೇವೆ ತೆಗೆದುಹಾಕುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!

8 ವರ್ಷಗಳಲ್ಲಿ ನಾಲ್ಕನೇ ಬಾರಿ ಹೆಚ್ಚಳ ವರದಿ ನಿಜವಾಗಿದ್ದು, ಕಂಪನಿಗಳು 2026 ರಲ್ಲಿ ತಮ್ಮ ರೀಚಾರ್ಜ್ ಪ್ಲಾನ್ ಬೆಲೆ ಹೆಚ್ಚಿಸಿದ್ರೆ ಇದು ಕಳೆದ ಎಂಟು ವರ್ಷಗಳಲ್ಲಿ ನಾಲ್ಕನೇ ಪ್ರಮುಖ ಸುಂಕ ಹೆಚ್ಚಳವಾಗಲಿದೆ. ಇದಕ್ಕೂ ಮೊದಲು, ದೂರಸಂಪರ್ಕ ವಲಯವು 2019 ರಲ್ಲಿ ಸರಿಸುಮಾರು ಶೇಕಡಾ 30ರಷ್ಟು, 2021 ರಲ್ಲಿ ಶೇಕಡಾ 20 ರಷ್ಟು ಮತ್ತು 2024 ರಲ್ಲಿ ಶೇಕಡಾ 15 ರಷ್ಟು ಸುಂಕ ಹೆಚ್ಚಳ ಮಾಡಿತ್ತು. ಏರ್ಟೆಲ್ (Airtel) ಮತ್ತು ಜಿಯೋ (Jio) ಸುಂಕಗಳನ್ನು ಹೆಚ್ಚಿಸಲು ಇದು ಒಳ್ಳೆಯ ಸಮಯ ಎಂದು ವರದಿಗಳು ಹೇಳುತ್ತಿದೆ.

ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!

ಬಲಗೊಳ್ತಿರುವ ಏರ್ಟೆಲ್

ಟೆಲಿಕಾಂ ಕ್ಷೇತ್ರದಲ್ಲಿ ಭಾರ್ತಿ ಏರ್ಟೆಲ್ನ ಹಿಡಿತ ಬಲಗೊಳ್ಳುತ್ತಿದೆ ಎಂದು ವರದಿಗಳು ಸೂಚಿಸಿವೆ. 2025 ರ ಆರಂಭದಲ್ಲಿ ಶೇಕಡಾ 36 ರಷ್ಟಿದ್ದ ಕಂಪನಿಯ ಆದಾಯದ ಪಾಲು ಈಗ 2028 ರ ವೇಳೆಗೆ ಶೇಕಡಾ 40 ಕ್ಕಿಂತ ಹೆಚ್ಚಾಗಲಿದೆ. ವೊಡಾಫೋನ್ ಐಡಿಯಾದ ಪಾಲು ಸ್ಥಿರವಾಗಿ ಕುಸಿಯುತ್ತಿದೆ. ಇದು ಶೇ. 24 ರಿಂದ ಕೇವಲ ಶೇ. 18 ಕ್ಕೆ ಇಳಿದಿದೆ.