ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ, ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ, ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಅಕ್ಟೋಬರ್ 23ರಿಂದಲೇ ಹೊಸ ಸಮಯ ಜಾರಿಗೆ ಬಂದಿದೆ. ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಬದಲಾವಣೆಗೆ ಕಾರಣ ನೀಡಿದೆ.

ಆಯೋಧ್ಯೆ ರಾಮ ಮಂದಿರದ ಸಮಯ ಬದಲಾವಣೆ
ಆಯೋಧ್ಯೆ ರಾಮ ಮಂದಿರಕ್ಕೆ ಪ್ರತಿ ದಿನ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹಲವು ಭಕ್ತರು ಆಯೋಧ್ಯೆಯಲ್ಲಿ ದೀಪಾವಳಿ ಆಚರಿಸಿ ಸಂಭ್ರಮಿಸಿದ್ದಾರೆ. ರಜಾ ದಿನಗಳಾಗಿದ್ದ ಕಾರಣ ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಯೋಧ್ಯೆ ರಾಮಲಲ್ಲಾ ದರ್ಶನ ಪಡೆದಿದ್ದಾರೆ. ಇದೀಗ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.
ಸಮಯ ಬದಲಾವಣೆಗೆ ಕಾರಣವೇನು?
ಉತ್ತರ ಪ್ರದೇಶದ ಆಯೋಧ್ಯೆ ಸೇರಿದಂತೆ ಹಲೆವೆಡೆ ತೀವ್ರ ಚಳಿ ಆರಂಭಗೊಂಡಿದೆ. ಚಳಿಗಾಳ ಆರಂಭಕ್ಕೂ ಮೊದಲೇ ಚಳಿ ತೀವ್ರಗೊಂಡಿದೆ. ಹೀಗಾಗಿ ಭಕ್ತರಿಗೆ ಅನುಕೂಲವಾಗಲು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಬೆಳಗ್ಗೆ ಬಹುಬೇಗನೆ ದರ್ಶನ ಪಡೆಯಲು ಭಕ್ತರು ಹರಹಾಸ ಮಾಡಬೇಕಾಗುತ್ತದೆ. ಇದೀಗ ಕೆಲ ಬದಲಾವಣೆಯಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ಮಂಗಳಾರತಿಯಿಂದ ದರ್ಶನ ಸಮಯವೂ ಬದಲಾವಣೆ
ಮಂಗಳಾರತಿ ಬೆಳಗ್ಗೆ 4 ಗಂಟೆಗೆ ನಡೆಯಲಿದೆ. ಆದರೆ ಇನ್ನು ಮುಂದೆ 4.30ಕ್ಕೆ ನಡೆಯಲಿದೆ. ಇನ್ನು ಬೆಳಗ್ಗೆ 6 ಗಂಟೆಗೆ ನಡೆಯುತ್ತಿದ್ದ ಶೃಂಗಾರ ಆರತಿ ಇನ್ನು ಮುಂದೆ 6.30ಕ್ಕೆ ನಡೆಯಲಿದೆ. ಇನ್ನು ಭೋಗ ಆರತಿ, ಭಕ್ತರಿಗೆ ರಾಮ ಲಲ್ಲಾನ ದರ್ಶನ ಸಮಯದಲ್ಲೂ ಬದಲಾವಣೆ ಆಗಿದೆ.
ಭಕ್ತರಿಗೆ ಶ್ರೀರಾಮನ ದರ್ಶನ ಸಮಯ
ಭಕ್ತರಿಗೆ ಶ್ರೀರಾಮನ ದರ್ಶನ ಸಮಯ
ಆಯೋಧ್ಯೆ ಶ್ರೀರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಬೆಳಗ್ಗೆ 6.30ಕ್ಕೆ ದರ್ಶನ ಆರಂಭಗೊಳ್ಳುತ್ತಿತ್ತು. ಆದರೆ ವಿಪರೀತ ಚಳಿ ಆರಂಭಗೊಂಡಿರುವ ಕಾರಣ ಇದೀಗ 7 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಶ್ರೀರಾಮ ಮಂದಿರ ಪರಿಷ್ಕೃತ ವೇಳಾಪಟ್ಟಿ
ಶ್ರೀರಾಮ ಮಂದಿರ ಪರಿಷ್ಕೃತ ವೇಳಾಪಟ್ಟಿ
ಮಂಗಳಾರತಿ: ಬೆಳಗ್ಗೆ 4.30ಕ್ಕೆ (ಮೊದಲು ಬೆಳಗ್ಗೆ 4 ಗಂಟೆಗೆ)
ಶೃಂಗಾರ ಆರತಿ: ಬೆಳಗ್ಗೆ 6.30
ಭಕ್ತರಿಗೆ ದರ್ಶನ: ಬೆಳಗ್ಗೆ 7 ಗಂಟೆಯಿಂದ ಆರಂಭ
ಭೋಗ ಆರತಿ: ಮಧ್ಯಾಹ್ನ 12 ಗಂಟೆಗೆ ಆರಂಭ (ಈ ವೇಳೆ 1 ಗಂಟೆ ಭಕ್ತರ ದರ್ಶನ ಸ್ಥಗಿತ, 1 ಗಂಟೆಯಿಂದ ಪುನರ್ ಆರಂಭ)
ದೇಗುಲ ಮುಚ್ಚುವ ಸಮಯ: ರಾತ್ರಿ 9 ಗಂಟೆ ವರೆಗೆ ಭಕ್ತರಿಗೆ ದರ್ಶನ ಇರಲಿದೆ
ಶಾಯನ ಆರತಿ: ರಾಮ ಲಲ್ಲನಿಗೆ ಶಾಯನ ಆರತಿ ರಾತ್ರಿ 9.30ಕ್ಕೆ
ಟ್ರಸ್ಟ್ ವಿಶೇಷ ಮನವಿ
ಟ್ರಸ್ಟ್ ವಿಶೇಷ ಮನವಿ
ರಾಮ ಜನ್ಮ ತೀರ್ಥ ಕ್ಷೇತ್ರ ಟ್ರಸ್ಟ್ ಸಮಯದಲ್ಲಿ ಆಗಿರುವ ಬದಲಾವಣೆ ಗಮನಿಸಲು ಸೂಚಿಸಿದೆ. ಇದೇ ವೇಳೆ ಭಕ್ತರು ಹೊಸ ಪರಿಷ್ಕೃತ ಸಮಯದ ಪ್ರಕಾರ ದರ್ಶನ ಪಡೆದುಕೊಳ್ಳಲು ಮನವಿ ಮಾಡಿದೆ. ಇದೇ ಚಳಿಗಾಲದ ಕಾರಣ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಮನವಿ ಮಾಡಲಾಗಿದೆ.