ದುಬಾರಿ ದುನಿಯಾಗೆ ಟ್ರಾಯ್ ಬ್ರೇಕ್; ವಾಯ್ಸ್-ಎಸ್‌ಎಂಎಸ್‌ಗೆ ಮಾತ್ರವೇ ಇರುವ ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿಸಿದ ಏರ್‌ಟೆಲ್!
ಡೇಟಾ ಅಗತ್ಯವಿಲ್ಲದ ಗ್ರಾಹಕರಿಗಾಗಿ ಏರ್‌ಟೆಲ್ ಹೊಸ ವಾಯ್ಸ್ ಮತ್ತು ಎಸ್‌ಎಂಎಸ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ₹153ಕ್ಕೆ ತಿಂಗಳಿನ ವಾಯ್ಸ್ ಮತ್ತು ಎಸ್‌ಎಂಎಸ್ ಸೌಲಭ್ಯ, ಹಾಗೂ ₹1999ಕ್ಕೆ ವಾರ್ಷಿಕ ಪ್ಲ್ಯಾನ್ ಲಭ್ಯ. ಟ್ರಾಯ್ ನಿರ್ದೇಶನದಂತೆ ಈ ಹೊಸ ಪ್ಲ್ಯಾನ್‌ಗಳು ಜಾರಿಗೆ ಬಂದಿವೆ.

ಬೆಂಗಳೂರು (ಜ.22): ದೇಶದಲ್ಲಿ ಇನ್ನೂ ಅಸಂಖ್ಯ 2ಜಿ ನೆಟ್‌ವರ್ಕ್ ಬಳಸುವ ಮೊಬೈಲ್ ಯೂಸರ್‌ಗಳಿದ್ದಾರೆ. ಅವರೊಂದಿಗೆ ಎರಡೆರಡು ಸಿಮ್‌ಗಳನ್ನು ಹೊಂದಿರುವ ಸಾಕಷ್ಟು ವ್ಯಕ್ತಿಗಳಿದ್ದಾರೆ. ಇವರಿಗೆ ಪ್ರತಿ ಸಿಮ್‌ಗೂ ಡೇಟಾ ಇರುವ ದುಬಾರಿ ಪ್ರೀಯೇಯ್ಡ್ ಪ್ಲ್ಯಾನ್‌ಗಳನ್ನು ರಿಚಾರ್ಜ್ ಮಾಡಿಸುವುದು ದುಬಾರಿಯಾಗಿತ್ತು. ಇದನ್ನು ಮನಗಂಡ ಭಾರತೀಯ ಟೆಲಿಕಾಂ ನಿಯಂತ್ರಕ ಟ್ರಾಯ್, ಡೇಟಾ ಅಗತ್ಯ ಇಲ್ಲದೇ ಇರುವ ವ್ಯಕ್ತಿಗಳಿಗಾಗಿ ಕೇವಲ ಎಸ್‌ಎಂಎಸ್ ಹಾಗೂ ವಾಯ್ಸ್ ಮಾತ್ರ ಲಭ್ಯ ಇರುವ ರಿಚಾರ್ಜ್ ಪ್ಲ್ಯಾನ್ ಪರಿಚಯಿಸುವಂತೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆ ನೀಡಿತ್ತು. ಇದರ ಮುಂದಿನ ಭಾಗವಾಗಿ ದೇಶದ 2ನೇ ಅತಿದೊಡ್ಡ ಟೆಲಿಕಾಂ ಅಪರೇಟರ್ ಆಗಿರುವ ಭಾರ್ತಿ ಏರ್‌ಟೆಲ್ ಕೇವಲ ವಾಯ್ಸ್-ಎಸ್‌ಎಂಎಸ್ ಪ್ಯಾಕ್‌ಅನ್ನು ಪ್ರಕಟ ಮಾಡಿದ್ದು, ಈ ರಿಚಾರ್ಜ್ ಪ್ಲ್ಯಾನ್‌ಗೆ ಪ್ರತಿ ತಿಂಗಳು 153 ರೂಪಾಯಿ ವೆಚ್ಚವಾಗಲಿದೆ.
ಏರ್‌ಟೆಲ್ ಹೊಸದಾಗಿ ಯಾವುದೇ ಪ್ಲ್ಯಾನ್‌ಅನ್ನು ಘೋಷಣೆ ಮಾಡಿಲ್ಲ. ಈಗಾಗಲೇ ಇರುವ ಪ್ಲ್ಯಾನ್‌ಗಳಲ್ಲಿ ಟ್ರಾಯ್ ಸೂಚನೆಯ ಆಧಾರದ ಮೇಲೆ ಈ ಬದಲಾವಣೆಗಳನ್ನು ಮಾಡಿದೆ. ಏರ್‌ಟೆಲ್‌ನ ಒಂದು ಪ್ರೀಪೇಯ್ಡ್ ಪ್ಲ್ಯಾನ್ 509 ರೂಪಾಯಿಯ ರೀಚಾರ್ಜ್‌ಅನ್ನು ಹೊಂದಿದ್ದು, ಇದು 84 ದಿನಗಳ ಕಾಲ 900 ಎಸ್‌ಎಂಎಸ್ ಹಾಗೂ ಅನ್‌ಲಿಮಿಟೆಡ್ ಆದ ವಾಯ್ಸ್ ಕಾಲ್ ಸೇವೆಯನ್ನು ನೀಡಲಿದೆ. ಅದರೊಂದಿಗೆ ಈ ಪ್ಯಾಕ್‌ನಲ್ಲಿ ಏರ್‌ಟೆಲ್ ಎಕ್ಸ್‌ಟ್ರೀಮ್ ಆಪ್ಲಿಕೇಶನ್‌ಗಳ ಕಂಟೆಂಟ್‌ಗಳನ್ನು ನೋಡಬಹುದಾದಗಿದೆ. ಅಪೊಲೋ 24/7 ಸರ್ಕಲ್ ಮೆಂಬರ್‌ಷಿಪ್, ಉಚಿತವಾದ ಹಲೋ ಟ್ಯೂನ್‌ಗಳು ಇರಲಿದೆ. ಈ ಪ್ಲ್ಯಾನ್‌ನ ಪ್ರತಿ ತಿಂಗಳ ವೆಚ್ಚ 170 ರೂಪಾಯಿ ಆಗಿರಲಿದೆ.
ಟ್ರಾಯ್ ಸೂಚನೆಗೂ ಮುನ್ನ ಈ ಪ್ಲ್ಯಾನ್‌ನಲ್ಲಿ 6 ಜಿಬಿ ಡೇಟಾ ಕೂಡ ಸಿಗುತ್ತಿತ್ತು. ಇದೇ ಪ್ಲ್ಯಾನ್‌ಅನ್ನು ಏರ್‌ಟೆಲ್ ಪುನರ್ ನವೀಕರಣ ಮಾಡಿದ್ದು, ಇದೀಗ ಕೇವಲ ವಾಯ್ಸ್ ಹಾಗೂ ಎಸ್‌ಎಂಎಸ್ ಪ್ಲ್ಯಾನ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ಏರ್‌ಟೆಲ್ ತಿಳಿಸಿದೆ.
BSNL ಬಳಕೆದಾರರಿಗೆ ಗುಡ್‌ನ್ಯೂಸ್ ಶೀಘ್ರದಲ್ಲೇ ಬರಲಿದೆ 4G ಇ-ಸಿಮ್! ಏನಿದರ ವಿಶೇಷತೆ?
ಇನ್ನು ದೀರ್ಘಕಾಲದ ಆಪ್ಶನ್‌ಗಳನ್ನು ಹುಡುತ್ತಿರುವ ವ್ಯಕ್ತಿಗಳಿಗೆ ಏರ್‌ಟೆಲ್ ತನ್ನ 1999 ರೂಪಾಯಿಯ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್‌ಅನ್ನು ಬದಲಾಯಿಸಿದೆ. ಇದರಲ್ಲಿ 365 ದಿನಗಳ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ 3600 ಎಸ್‌ಎಂಎಸ್‌ಗೂ ಉಚಿತವಾಗಿ ಇರಲಿದೆ. ಈ ಪ್ಲ್ಯಾನ್‌ಗಳ ಪ್ರತಿ ತಿಂಗಳ ಅಂದಾಜು ವೆಚ್ಚ 153 ರೂಪಾಯಿ ಆಗಿರಲಿದೆ. ಇದರಲ್ಲಿದ್ದ 24 ಜಿಬಿ ಡೇಟಾ ಸೇವೆಯನ್ನು ಏರ್‌ಟೆಲ್ ಕೈಬಿಟ್ಟಿದೆ.
365ಕ್ಕೆ 395ರ ಚೆಕ್‌ಮೆಟ್ ಕೊಟ್ಟ BSNL; ಏನಾಗ್ತಿದೆ ಅಂತ ಗೊಂದಲದಲ್ಲಿ ಸಿಲುಕಿದ ಏರ್‌ಟೆಲ್, ಜಿಯೋ
ದೇಶದಲ್ಲಿರುವ 2ಜಿ ಮೊಬೈಲ್ ಬಳಕೆದಾರರಿಗೆ ಹಾಗೂ ಡೇಟಾ ಪ್ಲ್ಯಾನ್ ಅಗತ್ಯವಿಲ್ಲದೇ ಇರುವ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಪ್ಲ್ಯಾನ್‌ಗಳನ್ನು ನೀಡುವಂತೆ ಟ್ರಾಯ್ ಆದೇಶ ನೀಡಿತ್ತು. ಏರ್‌ಟೆಲ್ ನಂತರ ಇತರ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ ಜಿಯೋ, ವಿಐ ಹಾಗೂ ಬಿಎಸ್‌ಎನ್‌ಎಲ್ ಕೂಡ ಇದೇ ರೀತಿಯ ಪ್ಲ್ಯಾನ್‌ಗಳನ್ನು ಪರಿಚಯಿಸಬೇಕಿದೆ.