BSNL ಬಳಕೆದಾರರಿಗೆ ಗುಡ್‌ನ್ಯೂಸ್ ಶೀಘ್ರದಲ್ಲೇ ಬರಲಿದೆ 4G ಇ-ಸಿಮ್! ಏನಿದರ ವಿಶೇಷತೆ?
BSNL 4G ಸೇವೆಯನ್ನು ತರಲು ಭರದಿಂದ ಕೆಲಸ ಮಾಡುತ್ತಿದೆ. ಗ್ರಾಹಕರಿಗೆ 4G ಇ-ಸಿಮ್ ಅನ್ನು ಶೀಘ್ರದಲ್ಲೇ ಒದಗಿಸಲಿದೆ.

ಬಿಎಸ್ಎನ್ಎಲ್ 4G ಸೇವೆ
ಬಿಎಸ್ಎನ್ಎಲ್
ಭಾರತದಲ್ಲಿ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಖಾಸಗಿ ಕಂಪನಿಗಳು ದೂರಸಂಪರ್ಕ ಸೇವೆ ಒದಗಿಸುತ್ತಿವೆ. ಜಿಯೋ ಮತ್ತು ಏರ್ಟೆಲ್ 3G, 4G ದನ್ನೂ ಮೀರಿ 5G ಸೇವೆ ನೀಡುತ್ತಿವೆ. ಆದರೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇನ್ನೂ 3G ಸೇವೆಯನ್ನೇ ನೀಡುತ್ತಿದೆ.
ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು ರೀಚಾರ್ಜ್ ದರ ಹೆಚ್ಚಿಸಿದಾಗ ಅನೇಕ ಗ್ರಾಹಕರು ಬಿಎಸ್ಎನ್ಎಲ್ ಗೆ ಬಂದರು. ಆದರೆ ನಂತರ ಬಿಎಸ್ಎನ್ಎಲ್ ನಿಂದ ಅನೇಕ ಗ್ರಾಹಕರು ಹೊರ ನಡೆದರು. ಕಳಪೆ ನೆಟ್ವರ್ಕ್ ಮತ್ತು 4G ಇಲ್ಲದಿರುವುದು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಬಿಎಸ್ಎನ್ಎಲ್ ಇ-ಸಿಮ್
4G ಸೇವೆ
ಇದರಿಂದ ಎಚ್ಚೆತ್ತ ಬಿಎಸ್ಎನ್ಎಲ್ ದೇಶಾದ್ಯಂತ 4G ಸೇವೆ ತರಲು ಕೆಲಸ ಮಾಡುತ್ತಿದೆ. ಈಗಲೇ 75,000 4G ಟವರ್ ಗಳನ್ನು ಸ್ಥಾಪಿಸಿದೆ. ಶೀಘ್ರದಲ್ಲೇ 1,00,000 4G ಟವರ್ ಗಳ ಗುರಿ ತಲುಪಲಿದೆ. ಈ ವರ್ಷದ ಅಂತ್ಯಕ್ಕೆ 4G ಸೇವೆ ದೇಶಾದ್ಯಂತ ಲಭ್ಯವಾಗಲಿದೆ ಎನ್ನಲಾಗಿದೆ. ಬಿಎಸ್ಎನ್ಎಲ್ ಶೀಘ್ರದಲ್ಲೇ ಇ-ಸಿಮ್ ಸೇವೆ ಆರಂಭಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಖಾಸಗಿ ಕಂಪನಿಗಳ ದರ ಹೆಚ್ಚಳದ ನಂತರ, ಹಲವು ತಿಂಗಳುಗಳ ಕಾಲ ಹೊಸ ಬಳಕೆದಾರರನ್ನು ಸೇರಿಸಿಕೊಂಡ ಏಕೈಕ ಆಪರೇಟರ್ ಬಿಎಸ್ಎನ್ಎಲ್ ಆಗಿತ್ತು. ನಂತರ ಖಾಸಗಿ ಕಂಪನಿಗಳು ಹೊಸ ಬಳಕೆದಾರರನ್ನು ಸೇರಿಸಿಕೊಳ್ಳಲು ಆರಂಭಿಸಿದ್ದು ಬಿಎಸ್ಎನ್ಎಲ್ ಗೆ ನಷ್ಟ ತಂದಿತು. ಆದ್ದರಿಂದ ಬಿಎಸ್ಎನ್ಎಲ್ 4G ಸೇವೆ ತರಲು ಉತ್ಸುಕವಾಗಿದೆ.
ಬಿಎಸ್ಎನ್ಎಲ್ ರೀಚಾರ್ಜ್ ಪ್ಲಾನ್
3G ನೆಟ್ವರ್ಕ್ ನಿಲ್ಲಲಿದೆ
ಬಿಎಸ್ಎನ್ಎಲ್ 4G ಬಂದಾಗ 3G ನೆಟ್ವರ್ಕ್ ನಿಲ್ಲಲಿದೆ. ಕೆಲವು ಕಡೆ ಈಗಾಗಲೇ 3G ನಿಲ್ಲಿಸಲಾಗಿದೆ. 4G ಇರುವ ಕಡೆ 3G ಸಿಮ್ ಇರುವವರಿಗೆ ಕರೆ ಮಾತ್ರ, ಡೇಟಾ ಸಿಗುವುದಿಲ್ಲ ಎಂದು ತಿಳಿಸಲಾಗಿದೆ.
ಬಿಎಸ್ಎನ್ಎಲ್ ಬಜೆಟ್ ಪ್ಲಾನ್
4G ಇ-ಸಿಮ್ ಪಡೆಯುವುದು ಹೇಗೆ?
3G ನಿಂತಾಗ ಹೊಸ 4G ಇ-ಸಿಮ್ ಸಿಗುತ್ತದೆ. ಬಿಎಸ್ಎನ್ಎಲ್ ಗ್ರಾಹಕರು ಹತ್ತಿರದ ಗ್ರಾಹಕ ಸೇವಾ ಕೇಂದ್ರ ಅಥವಾ ಬಿಎಸ್ಎನ್ಎಲ್ ಕಚೇರಿಗೆ ಹೋಗಿ ಹಳೆಯ 3G ಸಿಮ್ ಕೊಟ್ಟು ಹೊಸ 4G ಸಿಮ್ ಪಡೆಯಬಹುದು.
ಇದಕ್ಕೆ ಫೋಟೋ ID ತೆಗೆದುಕೊಂಡು ಹೋಗಬೇಕು. ಯಾವುದೇ ಶುಲ್ಕವಿರುವುದಿಲ್ಲ.