365ಕ್ಕೆ 395ರ ಚೆಕ್‌ಮೆಟ್ ಕೊಟ್ಟ BSNL; ಏನಾಗ್ತಿದೆ ಅಂತ ಗೊಂದಲದಲ್ಲಿ ಸಿಲುಕಿದ ಏರ್‌ಟೆಲ್, ಜಿಯೋ
ಬಿಎಸ್‌ಎನ್‌ಎಲ್ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನ ಚಲನೆ ಶುರು ಮಾಡಿದೆ. ಇದೀಗ ಬಿಎಸ್‌ಎನ್‌ಎಲ್ ಕೊಟ್ಟ ಚೆಕ್‌ಮೆಟ್‌ಗೆ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಶಾಕ್‌ಗೆ ಒಳಗಾಗಿದ್ದರೆ, ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.
BSNL 13 ತಿಂಗಳ ವ್ಯಾಲಿಡಿಟಿ ಇರುವ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಜಿಯೋ, ಏರ್‌ಟೆಲ್ ಮತ್ತು VIಗೆ ಪೈಪೋಟಿ ನೀಡುತ್ತಿರುವ ಈ ಪ್ಲಾನ್ ಗ್ರಾಹಕರನ್ನು ಖುಷಿಪಡಿಸಿದೆ.
ಬೆಳೆಯುತ್ತಿರುವ BSNL
ಜಿಯೋ, ಏರ್‌ಟೆಲ್ ಮತ್ತು VI ಗೆ ಹೋಲಿಸಿದರೆ BSNLನ ಬಳಕೆದಾರರ ಸಂಖ್ಯೆ ಕಡಿಮೆ ಇದ್ದರೂ, ಕಂಪನಿಯು ತನ್ನ ಕೈಗೆಟುಕುವ ರೀಚಾರ್ಜ್ ಪ್ಲಾನ್‌ಗಳೊಂದಿಗೆ ಲಕ್ಷಾಂತರ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು, BSNL ತನ್ನ ಗ್ರಾಹಕರಿಗೆ ಒಂದು ದೊಡ್ಡ ಸಮಸ್ಯೆಯನ್ನು ಪರಿಹರಿಸುವ ವಿಶಿಷ್ಟ ಯೋಜನೆಯನ್ನು ಪರಿಚಯಿಸಿದೆ.
BSNL ರೀಚಾರ್ಜ್ ಯೋಜನೆ
BSNL ನ ಹೊಸ ರೂ.2,399 ಪ್ರಿಪೇಯ್ಡ್ ಪ್ಲಾನ್ 395 ದಿನಗಳ ವ್ಯಾಲಿಡಿಟಿ ನೀಡುತ್ತದೆ. ಈ ಪ್ಲಾನ್ ಮೂಲಕ, ಬಳಕೆದಾರರು 13 ತಿಂಗಳಿಗೂ ಹೆಚ್ಚು ಕಾಲ ತಡೆರಹಿತ ಸೇವೆಯನ್ನು ಪಡೆಯುತ್ತಾರೆ.
ರೂ.2,399 ಪ್ಲಾನ್‌ನ ಲಾಭಗಳು
ಅನಿಯಮಿತ ಕರೆಗಳು: ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಉಚಿತ ಅನಿಯಮಿತ ಕರೆ.
ದೈನಂದಿನ SMS: ಸಂಪೂರ್ಣ ವ್ಯಾಲಿಡಿಟಿಗೆ ದಿನಕ್ಕೆ 100 ಉಚಿತ SMS.
ಹೈಸ್ಪೀಡ್ ಡೇಟಾ: ದಿನಕ್ಕೆ 2GB ಹೈಸ್ಪೀಡ್ ಡೇಟಾ, 395 ದಿನಗಳಲ್ಲಿ ಒಟ್ಟು 790GB.
ಕೈಗೆಟುಕುವ ಬೆಲೆ
395 ದಿನಗಳಿಗೆ ಕೇವಲ ರೂ.2,399, ಈ ಪ್ಲಾನ್‌ನ ದೈನಂದಿನ ವೆಚ್ಚ ಸರಿಸುಮಾರು ರೂ.6 ಆಗಿದೆ. ಗ್ರಾಹಕರು ಡೇಟಾ, ಉಚಿತ ಕರೆ ಮತ್ತು SMS ಪ್ರಯೋಜನಗಳನ್ನು ಕಡಿಮೆ ಬೆಲೆಯಲ್ಲಿ ಪಡೆಯುತ್ತಾರೆ.
ಪೈಪೋಟಿ ಪ್ರಯೋಜನ
ಪೈಪೋಟಿ ಪ್ರಯೋಜನ
BSNL ನ 13 ತಿಂಗಳ ಯೋಜನೆಯು ಟೆಲಿಕಾಂ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಕೈಗೆಟುಕುವ ಮತ್ತು ದೀರ್ಘಾವಧಿಯ ಪ್ರಯೋಜನಗಳನ್ನು ಬಯಸುವ ಬಳಕೆದಾರರ ಗಮನವನ್ನು BSNL ಸೆಳೆದಿದೆ.
ಜಿಯೋ, ಏರ್‌ಟೆಲ್‌ಗೆ ಪೈಪೋಟಿ
BSNL ನ ಹೊಸ ಪ್ಲಾನ್ ಜಿಯೋ ಮತ್ತು ಏರ್‌ಟೆಲ್‌ಗೆ ಕಠಿಣ ಪೈಪೋಟಿ ನೀಡಬಹುದು. ಬಿಎಸ್‌ಎನ್‌ಎಲ್ ಈ ಹೊಸ ನಡೆಗೆ ಖಾಸಗಿ ಟೆಲಿಕಾಂ ಕಂಪನಿಗಳು ಶಾಕ್ ಆಗಿವೆ.