Tecno Pop 5 Pro: 6000mAh ಬ್ಯಾಟರಿಯೊಂದಿಗೆ ಅತಿ ಅಗ್ಗದ ಮೊಬೈಲ್ ಭಾರತದಲ್ಲಿ ಬಿಡುಗಡೆ!
ಜನವರಿ 12 ರಂದು Tecno Pop 5 LTE ಅನ್ನು ಬಿಡುಗಡೆ ಮಾಡಿದ ನಂತರ ಹೊಸದಾಗಿ ಬಿಡುಗಡೆ ಮಾಡಲಾದ Tecno Pop 5 Pro ಕಂಪನಿಯ ಕೈಗೆಟುಕುವ ಬೆಲೆಯ ಪಾಪ್ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿದೆ
Tech Desk: ಟೆಕ್ನೋ ಇತ್ತೀಚೆಗೆ ಕಂಪನಿಯ ಪಾಪ್ ಸರಣಿಯ Tecno Pop 5 LTE ಬಿಡುಗಡೆ ಮಾಡಿತ್ತು. ಈಗ Tecno Pop 5 Proಅನ್ನು ಭಾರತದಲ್ಲಿ ಬುಧವಾರ ಬಿಡುಗಡೆ ಮಾಡಲಾಗಿದೆ. ಜನವರಿ 12 ರಂದು Tecno Pop 5 LTE ಅನ್ನು ಬಿಡುಗಡೆ ಮಾಡಿದ ನಂತರ ಹೊಸದಾಗಿ ಬಿಡುಗಡೆ ಮಾಡಲಾದ Tecno Pop 5 Pro ಕಂಪನಿಯ ಕೈಗೆಟುಕುವ ಬೆಲೆಯ ಪಾಪ್ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿದೆ. Tecno Pop 5 Pro 6,000mAh ಬ್ಯಾಟರಿಯನ್ನು ಹೊಂದಿದ್ದು 8 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಹ್ಯಾಂಡ್‌ಸೆಟ್ 14 ಪ್ರಾದೇಶಿಕ ಭಾಷೆಗಳಿಗೆ ಬೆಂಬಲವನ್ನು ಹೊಂದಿದೆ, ಸ್ಪ್ಲಾಶ್ ಪ್ರತಿರೋಧಕ್ಕಾಗಿ (Water Resistant) IPX2 ರೇಟಿಂಗ್ ಅನ್ನು ಹೊಂದಿದೆ ಮತ್ತು ಕಂಪನಿಯ HiOS ಸ್ಕಿನ್‌ನೊಂದಿಗೆ Android 11 Go ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಭಾರತದಲ್ಲಿ Tecno Pop 5 Pro ಬೆಲೆ, ಲಭ್ಯತೆ: ಭಾರತದಲ್ಲಿ Tecno Pop 5 Pro ಬೆಲೆಯನ್ನು ಒಂದೇ 3GB RAM ಮತ್ತು 32GB ಇಂಟರ್‌ನಲ್ ಮೆಮರಿ ರೂಪಾಂತರಕ್ಕಾಗಿ ರೂ.8,499ಗೆ ನಿಗದಿಪಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ Deepsea Luster, Ice Blue ಮತ್ತು Sky Cyan ಬಣ್ಣ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು ಮತ್ತು ಟೆಕ್ನೋ ಪ್ರಕಾರ ರಿಟೇಲ್ ಮಳಿಗೆಗಳಲ್ಲಿ ಖರೀದಿಸಲು ಲಭ್ಯವಿರಲಿದೆ. ಹೊಸದಾಗಿ ಪ್ರಾರಂಭಿಸಲಾದ Tecno Pop 5 Pro ಇನ್ನೂ ಕಂಪನಿಯ ವೆಬ್‌ಸೈಟ್‌ನಲ್ಲಿ ಅಥವಾ Amazon ಮತ್ತು Flipkart ನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಪಟ್ಟಿ ಮಾಡಲಾಗಿಲ್ಲ.
ಇದನ್ನೂ ಓದಿ: Tecno Pop 5 LTE: 5000mAh ಬ್ಯಾಟರಿ, 14 ಪ್ರಾದೇಶಿಕ ಭಾಷಾ ಬೆಂಬಲದೊಂದಿಗೆ ಅಗ್ಗದ ಸ್ಮಾರ್ಟ್‌ಫೋನ್!
Tecno Pop 5 Pro specifications: ಡ್ಯುಯಲ್-ಸಿಮ್ ಟೆಕ್ನೋ ಪಾಪ್ 5 ಪ್ರೊ Android 11 Go ಆವೃತ್ತಿಯನ್ನು ಆಧರಿಸಿ HiOS 7.6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ಫೋನ್ 6.52-ಇಂಚಿನ HD+ LCD ಡಿಸ್ಪ್ಲೇಯೊಂದಿಗೆ 480 nitsನ ಗರಿಷ್ಠ ಹೊಳಪನ್ನು ಹೊಂದಿದೆ. ಹೊಸದಾಗಿ ಬಿಡುಗಡೆಯಾದ ಟೆಕ್ನೋ ಪಾಪ್ 5 ಪ್ರೊನಲ್ಲಿನ ಡಿಸ್ಪ್ಲೇ 90 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 120Hzನ ಟಚ್ ಸ್ಯಾಂಪ್ಲಿಂಗ್ ದರವನ್ನು ಸಹ ಬೆಂಬಲಿಸುತ್ತದೆ ಎಂದು ಕಂಪನಿ ತಿಳಿಸಿದೆ.
8 ಮೆಗಾಪಿಕ್ಸೆಲ್ ಕ್ಯಾಮೆರಾ: 3GB RAM ಮತ್ತು 32GB ಬಿಲ್ಟ್‌ಇನ್ ಸ್ಟೋರೆಜ್ ನೊಂದಿಗೆ ಬರಲಿರುವ Tecno Pop 5 Pro ಪ್ರೊಸೆಸರ್‌ನ ವಿವರಗಳನ್ನು ಟೆಕ್ನೋ ಬಹಿರಂಗಪಡಿಸಿಲ್ಲ. ಸ್ಮಾರ್ಟ್‌ಫೋನ್ ಮೈಕ್ರೊ ಎಸ್‌ಡಿ ಮೂಲಕ 256 ಜಿಬಿ ವರೆಗೆ ಸಂಗ್ರಹಣೆ ವಿಸ್ತರಣೆಯನ್ನು ಸಹ ನೀಡುತ್ತದೆ. ಟೆಕ್ನೋ ಪಾಪ್ 5 ಪ್ರೊ ಸೆಕೆಂಡರಿ ಎಐ ಲೆನ್ಸ್ (AI Lens) ಜೊತೆಗೆ 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ ಮತ್ತು ಹ್ಯಾಂಡ್‌ಸೆಟ್ ಎಐ ಪೋಟ್ರೇಟ್ ಮೋಡ್, ಎಚ್‌ಡಿಆರ್ ಮೋಡ್ ಮತ್ತು ಫಿಲ್ಟರ್‌ಗಳನ್ನು ಬೆಂಬಲಿಸುತ್ತದೆ. ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ f/2.0 ಅಪರ್ಚರ್ ಲೆನ್ಸ್ ಮತ್ತು ಮುಂಭಾಗದ ಫ್ಲ್ಯಾಷ್‌ನೊಂದಿಗೆ 5-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ಇದನ್ನೂ ಓದಿ: Tecno Pova 5G: 6000mAh ಬ್ಯಾಟರಿಯೊಂದಿಗೆ ಟೆಕ್ನೋದ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ!
120 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್: ಸ್ಮಾರ್ಟ್‌ಫೋನ್ 6,000mAh ಬ್ಯಾಟರಿಯೊಂದಿಗೆ ಬರಲಿದ್ದು ಕಂಪನಿಯ ಪ್ರಕಾರ 54 ಗಂಟೆಗಳ ಟಾಕ್‌ಟೈಮ್ ಅಥವಾ 120 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಟೆಕ್ನೋ ಪಾಪ್ 5 ಪ್ರೊ ಬ್ಯಾಟರಿ ಲ್ಯಾಬ್ ವೈಶಿಷ್ಟ್ಯ ಮತ್ತು ವಿಸ್ತೃತ ಬ್ಯಾಟರಿ ಬಾಳಿಕೆಗಾಗಿ ಅಲ್ಟ್ರಾ ಪವರ್ ಸೇವಿಂಗ್ ಮೋಡ್ ಸೇರಿದಂತೆ ಸಾಫ್ಟ್‌ವೇರ್ ಆಪ್ಟಿಮೈಸೇಶನ್‌ಗಳನ್ನು ಹೊಂದಿದೆ. ಟೆಕ್ನೋ ಪ್ರಕಾರ, ವಾಲ್ಟ್ 2.0, ಸ್ಮಾರ್ಟ್ ಪ್ಯಾನೆಲ್ 2.0, ಕಿಡ್ಸ್ ಮೋಡ್, ಸೋಷಿಯಲ್ ಟರ್ಬೊ, ಡಾರ್ಕ್ ಥೀಮ್‌ಗಳು, ಪೀಕ್ ಪ್ರೂಫ್, ವಾಯ್ಸ್ ಚಾರ್ಜರ್ ಮತ್ತು ಆಂಟಿ-ಥೆಫ್ಟ್ ಅಲಾರಂ ಸೇರಿದಂತೆ HiOS ಸ್ಪೆಸಿಫಿಕ್ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್‌ಫೋನ್ ಬರುತ್ತದೆ.