Tecno Pop 5 LTE: 5000mAh ಬ್ಯಾಟರಿ, 14 ಪ್ರಾದೇಶಿಕ ಭಾಷಾ ಬೆಂಬಲದೊಂದಿಗೆ ಅಗ್ಗದ ಸ್ಮಾರ್ಟ್‌ಫೋನ್!

ಭಾರತದಲ್ಲಿ Tecno Pop 5 LTE ಬೆಲೆ ರೂ. 6,299 ಗೆ ನಿಗದಿಪಡಿಸಲಾಗಿದ್ದು ಫೋನನ್ನು ಅಮೆಝಾನ್‌ ಇಂಡಿಯಾ ಮೂಲಕ ಜನವರಿ 16 ರಿಂದ ಪ್ರಾರಂಭವಾಗುವ ಅಮೆಝಾನ್ ಸ್ಪೆಷಲ್‌ಗಳ ಭಾಗವಾಗಿ ಖರೀದಿಸಬಹುದು

Tecno Pop 5 LTE Launched in India With 5000mAh Battery 14 Regional Language Support mnj

Tech Desk: ಟೆಕ್ನೋ ಕಂಪನಿಯ ಪಾಪ್ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿ Tecno Pop 5 LTE ಅನ್ನು ಭಾರತದಲ್ಲಿ ಬುಧವಾರ ಬಿಡುಗಡೆ ಮಾಡಲಾಗಿದೆ. ಸ್ಮಾರ್ಟ್ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು  14 ಪ್ರಾದೇಶಿಕ ಭಾಷಾ ಬೆಂಬಲದೊಂದಿಗೆ ಬರುತ್ತದೆ ಎಂದು ಟೆಕ್ನೋ ತಿಳಿಸಿದೆ. ಫೋನ್ ಅನ್ನು ನವೆಂಬರ್‌ನಲ್ಲಿ ಫಿಲಿಪೈನ್ಸ್ ಮತ್ತು ಪಾಕಿಸ್ತಾನದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ 6.52 ಇಂಚಿನ ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲಾಗಿತ್ತು. Tecno ಸ್ಮಾರ್ಟ್ಫೋನ್ 8-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ನೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಹೊಸ ಜನರೇಶನ್‌ನ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಮಾರ್ಟ್‌ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯ ಹೇಳಿದೆ.

Tecno Pop 5 LTE ಬೆಲೆ, ಲಭ್ಯತೆ

ಭಾರತದಲ್ಲಿ Tecno Pop 5 LTE ಬೆಲೆ ರೂ. 6,299 ಗೆ ನಿಗದಿಪಡಿಸಲಾಗಿದ್ದು ಫೋನನ್ನು ಅಮೆಝಾನ್‌ ಇಂಡಿಯಾ ಮೂಲಕ ಜನವರಿ 16 ರಿಂದ ಪ್ರಾರಂಭವಾಗುವ ಅಮೆಝಾನ್ ಸ್ಪೆಷಲ್‌ಗಳ ಭಾಗವಾಗಿ ಖರೀದಿಸಬಹುದು. ಆಸಕ್ತರು ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ Notify Me ಟ್ಯಾಬ್ ಅನ್ನು ಕ್ಲಿಕ್ ಮಾಡಬಹುದು. ಟೆಕ್ನೋ ಫೋನ್ Deepsea Luster, Ice Blue ಮತ್ತು Turquoise Cyan ಬಣ್ಣಗಳಲ್ಲಿ ಲಭ್ಯವಿರುತ್ತದೆ. 

ಇದನ್ನೂ ಓದಿ: Tecno Pova 5G: 6000mAh ಬ್ಯಾಟರಿಯೊಂದಿಗೆ ಟೆಕ್ನೋದ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ!

Tecno Pop 5 LTE specifications

ಟೆಕ್ನೋ ಇನ್ನೂ ತನ್ನ ವೆಬ್‌ಸೈಟ್‌ನಲ್ಲಿ ಸ್ಮಾರ್ಟ್‌ಫೋನನ್ನು ಪಟ್ಟಿ ಮಾಡಿಲ್ಲ. ಆದರೆ ಇದರ ವೈಶಿಷ್ಟ್ಯಗಳ ಬಹಿರಂಗೊಂಡಿವೆ. ಇದು ಡ್ಯುಯಲ್-ಸಿಮ್ ಟೆಕ್ನೋ ಪಾಪ್ 5 LTE Android 11 Go-ಆಧಾರಿತ HiOS 7.6 ಅನ್ನು ರನ್ ಮಾಡುತ್ತದೆ, ಇದು Vault 2.0, ಸ್ಮಾರ್ಟ್ ಪ್ಯಾನೆಲ್ 2.0, ಕಿಡ್ಸ್ ಮೋಡ್, ಸೋಷಿಯಲ್, ಟರ್ಬೊ, ಡಾರ್ಕ್ ಥೀಮ್‌ಗಳು, ಪೆರೆಂಟಲ್‌ ಕಂಟ್ರೋಲ್, ಡಿಜಿಟಲ್ ವೆಲ್‌ ಬಿಯಿಂಗ್, ಗೆಸ್ಚರ್ ಕಾಲ್ ಪಿಕ್ಕರ್‌ಗಳಂತ ಸ್ಥಳೀಯ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.  ಇದು 6.52-ಇಂಚಿನ HD+ IPS LCD (720x1,560 ಪಿಕ್ಸೆಲ್‌ಗಳು) ಡಾಟ್ ನಾಚ್ ಡಿಸ್ಪ್ಲೇ ಜೊತೆಗೆ 480 nits ಬ್ರೈಟ್‌ನೆಸ್ ಅನ್ನು ಹೊಂದಿದೆ.

Tecno Pop 5 LTEನ SoCಕುರಿತು ಕಂಪನಿಯು ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಆದರೆ ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾದ ಫೋನ್ ಆಕ್ಟಾ-ಕೋರ್ Unisoc SC9863 SoC ನಿಂದ ಚಾಲಿತವಾಗಿದೆ. ಚಿಪ್‌ಸೆಟ್ ಅನ್ನು 2GB RAM ಮತ್ತು 32GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ ಎಂದು ಅಮೆಝಾನ್ ಟೀಸರ್ ತಿಳಿಸುತ್ತದೆ, ಇದನ್ನು ಮೈಕ್ರೋ SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾಗಿದೆ. 

ಇದನ್ನೂ ಓದಿ: Honor Magic V: ಅತ್ಯಂತ ತೆಳ್ಳಗಿನ ವಿನ್ಯಾಸದೊಂದಿಗೆ ಫ್ಲಾಗ್‌ಶಿಪ್ ಫೋಲ್ಡಬಲ್‌ ಸ್ಮಾರ್ಟ್‌ಫೋನ್ ಲಾಂಚ್‌!

ಛಾಯಾಗ್ರಹಣಕ್ಕಾಗಿ, Tecno Pop 5 LTE ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ಬರುತ್ತದೆ, ಇದರಲ್ಲಿ 8-ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ f/2.2 ಅಪರ್ಚರ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಸೆನ್ಸರ್‌  f/2.4  ಅಪರ್ಚರ್‌ ಲೆನ್ಸ್ ಹೊಂದಿದೆ. ಹಿಂಭಾಗದಲ್ಲಿ ಡ್ಯುಯಲ್ ಬ್ಯಾಟರಿ ಇದೆ. ಹ್ಯಾಂಡ್‌ಸೆಟ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ f/2.0 ಅಪರ್ಚರ್‌ದೊಂದಿಗೆ 5-ಮೆಗಾಪಿಕ್ಸೆಲ್ ಶೂಟರನ್ನು ಹೊಂದಿದೆ.  Adjustable Brightnessಗಾಗಿ ಒಳಗೊಂಡ ಮೈಕ್ರೋ ಸ್ಲಿಟ್ ಫ್ಲ್ಯಾಶ್‌ಲೈಟ್ ಇದೆ.

Tecno Pop 5 LTE ಹಿಂಭಾಗದಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ ಮತ್ತು ಮುಖ ಗುರುತಿಸುವಿಕೆಯನ್ನು ಬೆಂಬಲಿಸುತ್ತದೆ. ಇದು ಹಿಂದಿ, ಬೆಂಗಾಲಿ, ಉರ್ದು  ಒಳಗೊಂಡಂತೆ 14 ಭಾರತೀಯ ಭಾಷೆಗಳಿಗೆ ಬೆಂಬಲದೊಂದಿಗೆ ಬರುತ್ತದೆ. ಫೋನ್ 5,000mAh ಬ್ಯಾಟರಿಯನ್ನು ಹೊಂದಿದು  ವಾಟರ್‌ ರೆಸಿಸ್ಟಂಟ್‌ಗಾಗಿ IPX2 ರೇಟಿಂಗ್‌ನೊಂದಿಗೆ ಬರುತ್ತದೆ. ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆಯಾದ ಹ್ಯಾಂಡ್‌ಸೆಟ್ ಬ್ಲೂಟೂತ್ v4.2, GPS, FM ರೇಡಿಯೋ, 3.5mm ಹೆಡ್‌ಫೋನ್ ಜ್ಯಾಕ್, Micro-USB ಪೋರ್ಟ್, Wi-Fi 802.11 b/g/n, GPRS, 4G LTE ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮಾದರಿಯೂ ಇದೇ ವಿಶೇಷಣಗಳನ್ನು ಹೊಂದಿರಬಹುದು.

Latest Videos
Follow Us:
Download App:
  • android
  • ios