Asianet Suvarna News Asianet Suvarna News

ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಕೋಕಾ ಕೋಲಾ ಸ್ಮಾರ್ಟ್‍‌ಫೋನ್!

ಕೋಕಾ ಕೋಲಾ ಸಾಫ್ಟ್ ಡ್ರಿಂಕ್ಸ್ ಬಗ್ಗೆ ಕೇಳದವರು ಯಾರಿಲ್ಲ. ಕೋಕಾ ಕೋಲಾ ಭಾರತದಲ್ಲಿ ಅತ್ಯಂತ ಜನಪ್ರಿಯ ಸಾಫ್ಟ್ ಡ್ರಿಂಕ್ಸ್. ಇದೀಗಗ ಕೋಕ್ ಕೇವಲ ಸಾಫ್ಟ್ ಡ್ರಿಂಕ್ಸ್ ಆಗಿ ಉಳಿದಕೊಳ್ಳುತ್ತಿಲ್ಲ. ಭಾರತದಲ್ಲಿ ಕೋಕಾ ಕೋಲಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಈ ಫೋನ್ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.

Soft drink company Coca cola set to launch smartphone in India specification and details ckm
Author
First Published Jan 27, 2023, 5:42 PM IST

ನವದೆಹಲಿ(ಜ.27): ಭಾರತದಲ್ಲಿ ಕೋಕಾ ಕೋಲಾವನ್ನು ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ. ಸಾಫ್ಟ್ ಡ್ರಿಂಕ್ಸ್ ಕ್ಷೇತ್ರದಲ್ಲಿ ಕೋಕಾ ಕೋಲಾ ಅತ್ಯಂತ ಜನಪ್ರಿಯ ಹೆಸರು. ಇಷ್ಟು ದಿನ ಸಾಫ್ಟ್ ಡ್ರಿಂಕ್ಸ್ ಹಾಗೂ ಕ್ಲಬ್ ಸೋಡಾ ಕ್ಷೇತ್ರದಲ್ಲಿ ಮಿಂಚುತ್ತಿದ್ದ ಕೋಕ್ ಇದೀಗ ಮತ್ತೊಂದು ಕ್ಷೇತ್ರಕ್ಕೆ ಕಾಲಿಡುತ್ತಿದೆ. ಹೌದು, ಭಾರತದಲ್ಲಿ ಕೋಕಾ ಕೋಲಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಇನ್ನು ಮುಂದೆ ಕೋಕಾ ಕೋಲಾ ಫೋನ್ ಮಾರುಕಟ್ಟೆಯಲ್ಲಿ ರಾರಾಜಿಸಲಿದೆ. ಶೀಘ್ರದಲ್ಲೇ ಅಂದರೆ 2023ರ ಆರಂಭಿಕ ದಿನಗಳಲ್ಲೇ ಕೋಕಾ ಕೋಲಾ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

ಕೋಕಾ ಕೋಲಾ ಹಾಗೂ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಜಂಟಿಯಾಗಿ ಕೋಕ್ ಫೋನ್ ಬಿಡುಗಡೆ ಮಾಡುತ್ತಿದೆ. ಇದರ ಬೆನ್ನಲ್ಲೇ ರಿಯಲ್‌ಮಿ ಕೋಕಾ ಕೋಲಾ ಸ್ಮಾರ್ಟ್‌ಪೋನ್ ಟೀಸರ್ ಬಿಡುಗಡೆ ಮಾಡಿದೆ. ಈ ಮೂಲಕ ಕೋಕಾ ಕೋಲಾ ಹಾಗೂ ರಿಯಲ್ ಮಿ ಜಂಟಿಯಾಗಿ ಕೋಕ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ.

 

Elon Musk: ಟ್ವಿಟರ್ ಆಯ್ತು, ಈಗ ಕೋಕಾ ಕೋಲಾ ಮೇಲೆ ಕಣ್ಣು; ಟ್ವೀಟ್ ಮೂಲಕ ಕಾಮಿಡಿ ಮಾಡ್ತಿದ್ದಾರಾ ಮಸ್ಕ್?

ರಿಯಲ್ ಮಿ10 4ಜಿ ಸ್ಮಾರ್ಟ್‌ಫೋನ್ ರೀತಿಯಲ್ಲೇ ಕೋಕಾ ಕೋಲಾ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಾರಣ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಟೀಸರ್‌ನಲ್ಲಿ ಕೋಕಾ ಕೋಲಾ ಫೋನ್ ರಿಯಲ್ ಮಿ 10 4ಜಿ ಹೋಲುತ್ತಿದೆ. ಇನ್ನು ಡ್ಯುಯೆಲ್ ಕ್ಯಾಮರಾ ಫೀಚರ್ಸ್, ವಾಲ್ಯುಮ್ ಕಂಟ್ರೋಲ್ ಬಟನ್ ಸೇರಿದಂತೆ ಹಲವು ಫೀಚರ್ಸ್ ಈ ಫೋನ್‌ನಲ್ಲಿದೆ. ರಿಯಲ್ ಮಿ 10 4ಜಿ ಫೋನ್ ಫೀಚರ್ಸ್ ನೂತನ ಕೋಕಾ ಕೋಲಾ ಫೋನ್‌ನಲ್ಲಿ ಇರಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ರಿಯಲ್ ಮಿ 10 4ಜಿ ಫೋನ್ 50MP AI ಪ್ರೈಮರಿ ಕ್ಯಾಮರಾ ಹೊಂದಿದೆ. 16MP ಫ್ರಂಟ್ ಕ್ಯಾಮರಾ ಹಾಗೂ 2MP ಲೆನ್ಸ್ ಕೂಡ ಹೊಂದಿದೆ. 5000mAh ಬ್ಯಾಟರಿ, ಸೂಪರ್VOOC ಚಾರ್ಜಿಂಗ್ ಸೌಲಭ್ಯವಿದೆ. ಈ ಮೂಲಕ ಶೇಕಡಾ 50 ರಷ್ಟು ಚಾರ್ಜಿಂಗ್ ಕೇವಲ 28 ನಿಮಿಷದಲ್ಲಿ ಆಗಲಿದೆ. ಜೊತೆಗೆ ಸುದೀರ್ಘ ಬ್ಯಾಟರಿ ಬಾಳಿಕೆ ಬರಲಿದೆ. ರಿಯಲ್ ಮಿ 10 4ಜಿ ಫೋನ್‌ನಲ್ಲಿ 90Hz AMOLED ಡಿಸ್‌ಪ್ಲೇ ಹೊಂದಿದೆ. 

ಉತ್ತಮ ನಾಳೆಯ ಭರವಸೆಯೊಂದಿಗೆ; ಕೋಕಾ ಕೋಲಾ ವಿಡಿಯೋ ಹಂಚಿಕೊಂಡ ಮಹೀಂದ್ರ!

ಭಾರತದಲ್ಲಿ ಈಗಾಗಲೇ ಚೀನಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ರಿಯಲ್ ಮಿ ಜೊತೆ ಸೇರಿ ಕೋಕಾ ಕೋಲಾ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. ಶಿಒಮಿ, ರಿಯಲ್ ಮಿ, ಒಪ್ಪೊ, ಒನ್ ಪ್ಲಸ್ ಸೇರಿದಂತೆ ಹತ್ತು ಹಲವು ಚೀನಾ ಫೋನ್‌ಗಳು ಭಾರತದ ಮಾರುಕಟ್ಟೆಆಳುತ್ತಿದೆ. ಇದಕ್ಕೆ ಹಲವು ಭಾರತೀಯ ಫೋನ್‌ಗಳು ಪೈಪೋಟಿ ನೀಡುತ್ತಿದ್ದರೂ, ಅತೀ ಹೆಚ್ಚಿನ ಪಾಲು ಚೀನಾ ಫೋನ್ ಆಕ್ರಮಿಸಿದೆ. ಇದೀಗ ಕೋಕಾ ಕೋಲಾ ಫೋನ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸುವ ಸಾಧ್ಯತೆ ಇದೆ ಅನ್ನೋ ಚರ್ಚಗೆಳು ಶುರುವಾಗಿದೆ. ಭಾರತದಲ್ಲಿ ಸಾಫ್ಟ್ ಡ್ರಿಂಕ್ ಮೂಲಕ ಜನಪ್ರಿಯವಾಗಿರುವ ಕೋಕಾ ಕೋಲಾ ಇದೀಗ ಸ್ಮಾರ್ಟ್‌ಫೋನ್ ಮೂಲಕ ಮತ್ತಷ್ಟು ಗ್ರಾಹಕರ ಸಂಪಾದಿಸಲು ಮುಂದಾಗಿದೆ.

Follow Us:
Download App:
  • android
  • ios