ಮುಂಬೈ(ಏ.29):  ಕೊರೋನಾ ವೈರಸ್ ವಕ್ಕರಿಸಿದ ಬಳಿಕ ವಿಶ್ವ ಎದುರಿಸಿದ ಸಂಕಷ್ಟಗಳು ಒಂದೆರಡಲ್ಲ. ಈ ಕಠಿಣ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಕೊರೋನಾ ನಿಯಮ ಪಾಲನೆ ಮಾಡುತ್ತಾ, ಸಾಂಕ್ರಾಮಿಕ ರೋಗದ ವಿರುದ್ಧ ಜನರು ಹೋರಾಡುತ್ತಿದ್ದಾರೆ. ಉತ್ತಮ ನಾಳೆಯ ಭರವಸೆಯೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಇದೀಗ ಇದೇ ಸಂದೇಶ ಸಾರುವ ಕೋಕಾ ಕೋಲಾ ಜಾಹೀರಾತು ಭಾರಿ ಮೆಚ್ಚುಗೆ ಪಡೆದಿದೆ.

ಕೊಟ್ಟ ಮಾತಿನಂತೆ 1 ರೂ ಇಡ್ಲಿ ಅಜ್ಜಿಗೆ ಮನೆ; ಆನಂದ್ ಮಹೀಂದ್ರ ಕಾರ್ಯಕ್ಕೆ ದೇಶವೇ ಸಲಾಂ!.

ಕೊರೋನಾ ಸವಾಲನ್ನು ಜಗತ್ತು ಹೇಗೆ ಎದುರಿಸುತ್ತಿದೆ ಹಾಗೂ ಮಾನವೀಯ ಮೌಲ್ಯಗಳು, ಆಶಾವಾದಗಳು ಜನರಲ್ಲಿ ಹೇಗೆ ಮಿಳಿತವಾಗಿದೆ ಎಂಬುದನ್ನು ತೋರಿಸುವ ಈ ಜಾಹೀರಾತನ್ನು ಇದೀಗ ಭಾರತದ ಉದ್ಯಮಿ, ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೋಕಾ ಕೋಲಾ ಜಾಹೀರಾತು ಭರವಸೆ ಹಾಗೂ ಆಶಾವಾದ ತುಂಬುವ ಜಾಹೀರಾತು ಎಂದು ಆನಂದ್ ಮಹೀಂದ್ರ ಹೇಳಿಕೊಂಡಿದ್ದಾರೆ. ಟ್ವಿಟರ್ ಮೂಲಕ ಜಾಹೀರಾತನ್ನು ಮಹೀಂದ್ರ ಪೋಸ್ಟ್ ಮಾಡಿದ್ದಾರೆ.

 

ಕಳೆದ ವರ್ಷ ಬಿಡುಗಡೆ ಮಾಡಿದ ಈ ಜಾಹೀರಾತು ಈಗಲೂ ಪ್ರಸ್ತುತವಾಗಿದೆ. ಕೊರೋನಾ ಕಾರಣ ದಿಢೀರ್ ಬದಲಾದ ಬದುಕು, ಸಂಬಂಧಗಳ ನಡುವೆ ಮೂಡಿದ ಅಂತರ ನಿಯಮ, ಸಂಕಷ್ಟದಲ್ಲಿ ಹೆಗಲು ಕೊಟ್ಟ ಮಾನವೀಯ ಹೃದಯಗಳ ಸಮ್ಮಿಲನವನ್ನು ಈ ಜಾಹೀರಾತಿನಲ್ಲಿ ಚಿತ್ರಿಸಲಾಗಿದೆ.

2 ನಿಮಿಷ 14 ಸೆಕೆಂಡ್ ವೀಡಿಯೊ "ಮಾನವೀಯತೆ ಮೆರೆದ ಹೀರೋ" ಸಂದೇಶವನ್ನು ಹೊತ್ತು, ದಯೆ ಮತ್ತು ಭರವಸೆ ತುಂಬಿದ್ದಕ್ಕಾಗಿ ಧನ್ಯವಾದಗಳು ಎಂಬ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ.