ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಬಿಡುಗಡೆ, ಬೆಲೆ 22,999 ರೂ.ನಿಂದ ಆರಂಭ

ಚೀನಾ ಮೂಲದ ಒನ್‌ಪ್ಲಸ್ ಕಂಪನಿಯು, ಭಾರತೀಯ ಮಾರುಕಟ್ಟೆಗೆ ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಫೋನ್‌ ಹಲವು ವಿಶೇಷತೆಗಳನ್ನು ಹೊಂದಿದೆ. ಗೇಮಿಂಗ್ ಸೇರಿದಂತೆ ಎಲ್ಲ ಟಾಸ್ಕ್‌ ನಿರ್ವಹಣೆಯ ಪ್ರದರ್ಶನವು ಅತ್ಯುತ್ತಮವಾಗಿದೆ. ಈ ಫೋನ್ ಬೆಲೆ 22,999 ರೂಪಾಯಿಯಿಂದ ಆರಂಭವಾಗುತ್ತದೆ.

Snapdragon 750G SoC enabled OnePlus Nord CE 5G launched

ಒನ್‌ಪ್ಲಸ್ ಕಂಪನಿಯ ನೂತನ, ‘ಒನ್‌ಪ್ಲಸ್ ನಾರ್ಡ್ ಸಿಇ 5ಜಿ’ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಬಹಳ ದಿನಗಳಿಂದಲೂ ಚರ್ಚೆ ನಡೆಯುತ್ತಿತ್ತು.

ವಿಶೇಷ ಏನೆಂದರೆ, ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾಗಿದ್ದ ಒನ್‌ಪ್ಲಸ್ ನಾರ್ಡ್‌ ಸ್ಮಾರ್ಟ್‌ಫೋನ್‌ಗೂ ಈಗ ಬಿಡುಗಡೆಯಾಗಿರುವ ಒನ್‌ಪ್ಲಸ್ ನಾರ್ಟ್ ಸಿಇ 5ಜಿ(OnePlus Nord CE 5G)ಗೂ ತುಂಬ ವ್ಯತ್ಯಾಸವಿದೆ. ಈ ಸ್ಮಾರ್ಟ್‌ಫೋನ್ ಸ್ಲಿಮ್ ಆಗಿದೆ. 2018ರಲ್ಲಿ ಬಿಡುಗೆಯಾಗಿದ್ದ ಒನ್‌ಪ್ಲಸ್ 6ಟಿ ಅತ್ಯಂತ ತೆಳುವಾದ ಫೋನ್ ಎಂದು ಹೇಳಲಾಗುತ್ತಿತ್ತು. ಈಗ ನಾರ್ಡ್ ಸಿಇ 5ಜಿ ಸ್ಮಾರ್ಟ್‌ಫೋನ್ ಆ ದಾಖಲೆಯನ್ನು ಅಳಿಸಿ ಹಾಕಿದೆ. 

ಭಾರತೀಯ ಮಾರುಕಟ್ಟೆಗೆ OnePlus TV U1S ಟಿವಿ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಎರಡು ಸಿಮ್‌ಗಳನ್ನು ಈ ಫೋನ್‌ನಲ್ಲಿ ಬಳಸಬಹುದು. ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಆಕ್ಸಿಜೆನ್ ಓಎಸ್‌ನೊಂದಿಗೆ ಆಂಡ್ರಾಯ್ಡ್ 11 ಆಧಾರಿತವಾಗಿದೆ. 6.43 ಇಂಚ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇರಲಿದೆ. 

ಗೇಮಿಂಗ್‌ಗೆ ಹೆಚ್ಚು ಅನುಕೂಲವಾಗುವ ಮತ್ತು ಅತ್ಯುತ್ತಮ ಪ್ರದರ್ಶನ ತೋರುವ ಶಕ್ತಿಶಾಲಿ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 750ಜಿ ಎಸ್‌ಒಸಿ ಇದರಲ್ಲಿ ಬಳಸಲಾಗಿದೆ. ಇದಕ್ಕೆ ಆಡ್ರೆನೋ 619 ಜಿಪಿಯು ಮತ್ತು 6 ಜಿಬಿ ರ್ಯಾಮ್ ಜೋಡಿಸಲಾಗಿದೆ. 

ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳು ಇರಲಿವೆ. ಈ ಪೈಕಿ ಮೊದಲನೆಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಇನ್ನುಳಿದಂತೆ ಒಂದು 8 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ಈ ಪೈಕೆ ಮೊದಲನೆಯದ್ದು ಅಲ್ಟ್ರಾ ವೈಡ್‌ ಮತ್ತು ಎರಡನೆಯದ್ದು ಮ್ಯಾಕ್ರೋ ಲೆನ್ಸ್‌ಗಳನ್ನು ಒಳಗೊಂಡಿದೆ. ಇನ್ನು ವಿಡಿಯೋ ಕಾಲ್ ಮತ್ತು ಸೆಲ್ಫಿ ಫೋಟೋಗಾಗಿ ಕಂಪನಿಯು ಫ್ರಂಟ್‌ನಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮಾರೆ ಒದಗಿಸಿದೆ. ಇದಕ್ಕೆ ಇಐಎಸ್ ಸಪೋರ್ಟ್ ಕೂಡ ಇದೆ. 

 

 

ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನೀಡಲಾಗಿರುವ ಕ್ಯಾಮೆರಾ ಮಲ್ಟಿ  ಆಟೋ ಫೋಕಸ್ ಸೇರಿದಂತೆ ಇನ್ನಿತರ ಫೀಚರ್‌ಗಳಿಗೆ ಸಪೋರ್ಟ್ ಮಾಡುತ್ತದೆ. ಜೊತೆಗೆ, ಫ್ರಿಲೋಡೆಡ್ ಆಗಿರುವ ನೈಟ್‌ಸ್ಕೇಪ್, ಅಲ್ಟ್ರಾ ಶಾಟ್ ಎಚ್‌ಡಿಆರ್, ಪ್ರೊಟ್ರೇಟ್, ಪನೋರಾಮಾ, ಪ್ರೋ ಮೋಡ್, ಸ್ಮಾರ್ಟ್ ಸೀನ್ ರೆಕಗ್ನೇಷನ್ ಸೇರಿದಂತೆ ಇನ್ನಿತರ ಫೀಚರ್‌ಗಳಿವೆ. 

ಕನ್ನಡ, ಹಿಂದಿ ಬಳಿಕ ಬಂಗಾಳಿ, ಪಂಜಾಬಿ, ತೆಲುಗು ಭಾಷೆ ಸೇರಿಸಿದ ಸ್ನ್ಯಾಪ್‌ಚಾಟ್

ಇಷ್ಟು ಮಾತ್ರವಲ್ಲದೇ, ಈ ಫೋನ್ ಮೂಲಕ ನೀವು 4ಕೆ ವಿಡಿಯೋ ರೆಕಾರ್ಡಿಂಗ್‌ ಕೂಡ ಮಾಡಬಹುದು. ಅದಕ್ಕೂ ಈ ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಸ್ಮಾರ್ಟ್‌ಫೋನ್ ಸಪೋರ್ಟ್ ಮಾಡುತ್ತದೆ. ಟೈಮ್ ಲ್ಯಾಪ್ಸ್ ಸಪೋರ್ಟ್ ಜತೆಗೆ, ಎಲ್ಇಡಿ ಫ್ಲ್ಯಾಶ್ ಲೈಟ್ ಕೂಡ ಇದೆ. 

ಈ ಫೋನ್, 5ಜಿ, 4ಜಿ ಎಲ್‌ಟಿಇ, ವೈ ಫೈ 802, ಬ್ಲೂಟೂಥ್ ವಿ5.1, ಜಿಪಿಎಸ್‌, ನಾವಿಕ್, ಎನ್ಎಫ್‌ಸಿ, ಯುಎಸ್‌ಬಿ, ಟೈಪ್ ಸಿ ಮತ್ತು  3.5 ಎಂಎಂ ಹೆಡ್‌ಪೋನ್ ಜಾಕ್‌ ಕನೆಕ್ಟಿವಿಟಿ ಸೌಲಭ್ಯಗಳನ್ನು ಒಳಗೊಂಡಿದೆ. ಅಕ್ಸೆಲರ್‌ಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗ್ಯಾರೋಸ್ಕೇಪ್, ಮ್ಯಾಗ್ನೆಟೋ ಮೀಟರ್, ಪ್ರಾಕ್ಸಿಮಿಟಿ ಸೆನ್ಸರ್‌ಗಳಿವೆ. ಫಿಂಗರ್ ಪ್ರಿಂಟ್ ಸೆನ್ಸರ್ ಕೂಡ ಇದೆ. ಕಂಪನಿಯು 4,500 ಎಂಎಚ್ ಬ್ಯಾಟರಿಯನ್ನು ಒದಗಿಸಿದೆ.

ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಸ್ಮಾರ್ಟ್‌ಫೋನ್ ಬೆಲೆಯ ದೃಷ್ಟಿಯಿಂದಲೂ ತುಂಬ ತುಟ್ಟಿಯೇನಲ್ಲ. 6 ಜಿಬಿ ಮತ್ತು 128 ಜಿಜಿ ಸಾಮರ್ಥ್ಯ ವೆರಿಯೆಂಟ್  ಬೆಲೆ 22,999 ರೂ ಇದ್ದರೆ, 8 ಜಿಬಿ ರ್ಯಾಮ್ ಮತ್ತು  128 ಜಿಬಿ ಸ್ಟೋರೇಜ್ ವೆರಿಯೆಂಟ್ ಬೆಲೆ 24,999 ರೂಪಾಯಿ. ಇನ್ನು 12 ಜಿಬಿ ರ್ಯಾಮ್ ಹಾಗೂ 256 ಜಿಬಿ ಸ್ಟೋರೇಜ್ ಸ್ಮಾರ್ಟ್‌ಫೋನ್ ಬೆಲೆ  27,999 ರೂಪಾಯಿಯಾಗಿದೆ. 

6000mAh ಬ್ಯಾಟರಿಯ ರಿಯಲ್‌ಮಿ ಸಿ25ಎಸ್ ಫೋನ್ ಮಾರಾಟ ಶುರು

Latest Videos
Follow Us:
Download App:
  • android
  • ios