ಸ್ಯಾಮ್ಸಂಗ್ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟಿದೆ?
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್ ಆಗಿರುವ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್, ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈಗ ಲಾಂಚ್ ಆಗಿರುವ ಗ್ಯಾಲಕ್ಸಿ ಎ52ಎಸ್ 5ಜಿ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್, ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದ್ದು, ಹಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸ್ಯಾಮ್ಸಂಗ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಜೆಟ್ ಹಾಗೂ ಪ್ರೀಮಿಯಂ, ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳಿಂದ ಹೆಸರುವಾಸಿಯಾಗಿದೆ. ಅದೇ ಕಾರಣಕ್ಕೆ ಅದು ತನ್ನ ಇತರ ಎಲ್ಲ ಸ್ಪರ್ಧಿಗಳಿಗಿಂತಲೂ ಮಾರುಕಟ್ಟೆಯಲ್ಲಿ ಮುಂದಿದೆ. ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ತನ್ನ ಪೈಪೋಟಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಪ್ರಾದೇಶಿಕ ಭಾಷೆಗಳಿಗೆ ಜಿಯೋಮೀಟ್ ಸಪೋರ್ಟ್, ಶೀಘ್ರವೇ ಕನ್ನಡದಲ್ಲೂ ಲಭ್ಯ
ಗ್ಯಾಲಕ್ಸಿ ಎ52ಎಸ್ 5ಜಿ. ಇದು ಸ್ಯಾಮ್ಸಂಗ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಹೊಸ 5ಜಿ ಸ್ಮಾರ್ಟ್‌ಫೋನ್. ವಿಶೇಷ ಎಂದರೆ, ಕಂಪನಿಯು ಇದೇ ಸ್ಮಾರ್ಟ್‌ಫೋನ್ ಅನ್ನು ಕಳೆದ ತಿಂಗಳು ಅನಾವರಣಗೊಳಿಸಿ, ವಾರದ ಬಳಿಕ ಯುರೋಪ್ ಮತ್ತು ಇಂಗ್ಲೆಂಡ್ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ.
ಭಾರತದಲ್ಲಿ ಲಾಂಚ್ ಆಗಿರುವ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್‌ಫೋನ್ ಹಲವು ದೃಷ್ಟಿಯಿಂದ ವಿಶೇಷವಾಗಿದೆ. ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಈ ಫೋನ್ ಗ್ರಾಹಕರಿಗೆ ಭಾರತದಲ್ಲಿ ಅವೇಸಮ್ ಕಪ್ಪು, ಅವೇಸಮ್ ನೇರಳೆ, ಮತ್ತು ಅವೇಸಮ್ ಬಿಳಿ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್‌ಫೋನ್ ಬೆಲೆ ಭಾರತದ ಮಾರುಕಟ್ಟೆಯಲ್ಲಿ 32,999 ರೂಪಾಯಿಯಿಂದ ಆರಂಭವಾಗುತ್ತದೆ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ವೆರಿಯೆಂಟ್ ಫೋನ್ ಬೆಲೆ 35,990 ರೂಪಾಯಿಯಾದರೆ, 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್ ಬೆಲೆ 37,499 ರೂಪಾಯಿ ಇದೆ.
ಭಾರತದಲ್ಲಿ ಕಂಪನಿಯು ಈ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್‌ಫೋನ್ ಅನ್ನು ನೀವು ಸ್ಯಾಮ್ಸಂಗ್ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಹಾಗೂ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಅಧಿಕೃ ರಿಟೇಲರ್‌ಗಳಿಂದ ಖರೀದಿಸಬಹುದಾಗಿದೆ. ವಿಶೇಷ ಆಫರ್‌ಗಳನ್ನು ಸ್ಯಾಮ್ಸಂಗ್ ಕಂಪನಿಯು ಘೋಷಿಸಿದೆ.
ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್‌ಫೋನ್ ಹಲವು ವಿಶಿಷ್ಟವಾದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನು 12 5ಜಿ ಬ್ಯಾಂಡ್ಸ್‌ಗೆ ಸಪೋರ್ಟ್ ಮಾಡುತ್ತದೆ. ಆಂಡ್ರಾಯ್ಡ್ 11 ಆಧರಿತ ಒಎನ್ ಯುಐ 3.1 ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿದ್ದು, ಮೂರು ವರ್ಷ ಆಂಡ್ರಾಯ್ಡ್ ಒಎಸ್ ಅಪ್‌ಡೇಟ್‌ಗಳನ್ನು ಪಡೆಯಲಿದೆ.
ಒಂದು ಶತಕೋಟಿ ಡೌನ್‌ಲೋಡ್ ಕಂಡ ಟೆಲಿಗ್ರಾಮ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್‌ಫೋನ್‌ನ ಪ್ರದರ್ಶಕವು 6.5 ಇಂಚ್ ಆಗಿದೆ. ಸುಪರ್ ಅಮೋಎಲ್ಇಡಿ ಇನ್ಫಿನಿಟಿ ಒ ಫುಲ್ ಎಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶಕ್ತಿಶಾಲಿ ಸ್ನ್ಯಾಪ್‌ಡ್ರಾಗನ್ 778ಜಿ ಪ್ರೊಸೆಸರ್ ಮತ್ತು 6 ಜಿಬಿ/ 8 ಜಿಬಿ ರ್ಯಾಮ್ ಹಾಗೂ 128 ಜಿಬಿ ಮೆಮೋರಿಯನ್ನು ಒಳಗೊಂಡಿದೆ. ಜೊತೆಗೆ ಬಳಕೆದಾರರು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಫೋನ್ ಮೆಮೋರಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಇದೆ. ಅಂದರೆ, ಕಂಪನಿಯು ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಿದೆ. ನಾಲ್ಕು ಕ್ಯಾಮೆರಾಗಳ ಪೈಕಿ ಮೊದಲನೆಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಅಲ್ಟ್ರಾವೈಡ್ ಆಂಗಲ್‌ಗೆ 12 ಮೆಗಾ ಪಿಕ್ಸೆಲ್, 5 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಹಾಗೂ 5 ಎಂಪಿ ಡೆಫ್ತ್ ಸೆನ್ಸರ್ ಕ್ಯಾಮೆರಾಗಳನ್ನು ನೀಡಲಾಗಿದೆ. ಕ್ಯಾಮೆರಾ ದೃಷ್ಟಿಯಿಂದ ಈ ಫೋನ್ ಅತ್ಯುತ್ತಮವಾಗಿದೆ ಎಂದು ಹೇಳಬಹುದು.
ಇನ್ನು ಈ ಫೋನ್ 5ಜಿ ಡುಯಲ್ ಸಿಮ್ ಕಾರ್ಡ್ ಸ್ಲಾಟ್ ಹೊಂದಿದೆ. ಇದರ ಜತೆಗೆ ಜಿಪಿಎಸ್, ವೈ ಪೈ 5, ಬ್ಲೂಟೂಥ್ 5.0, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜಾಕ್, ಸ್ಟಿರಿಯೋ ಸ್ಪೀಕರ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿದೆ. ಕಂಪನಿಯು ಈ ಫೋನ್‌ಗೆ 4,500 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದ್ದು, ಅದು 25 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.
ಹಬ್ಬಕ್ಕೆ ಭಾರತೀಯ ಮಾರುಕಟ್ಟೆಗೆ ಏಸರ್ ಸ್ಮಾರ್ಟ್ ಟಿವಿ ಲಾಂಚ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್‌ಫೋನ್ ಹಲವು ದೃಷ್ಟಿಯಿಂದ ಅತ್ಯುತ್ತಮ ಫೋನ್ ಆಗಿದೆ. ಇದು ಒನ್‌ಪ್ಲಸ್, ಶಿಯೋಮಿಯ ಪ್ರಮುಖ ಸ್ಮಾರ್ಟ್‌ಫೋನ್‌ಗಳಿಗೆ ತೀವ್ರ ಪೈಪೋಟಿಯನ್ನು ನೀಡುವ ಸಾಧ್ಯತೆ ಇದೆ.