ಕಂಪ್ಯೂಟರ್ ಹಾರ್ಡ್‌ವೇರ್ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ತೈವಾನ್ ಮೂಲದ ಮಲ್ಟಿನ್ಯಾಷನಲ್ ಕಂಪನಿ ಏಸರ್, ಭಾರತೀಯ ಮಾರುಕಟ್ಟೆಗೆ ಈ ತಿಂಗಳು ಸ್ಮಾರ್ಟ್‌ ಟಿವಿ ಲಾಂಚ್ ಮಾಡಲಿದೆ. ಇದಕ್ಕಾಗಿ ಕಂಪನಿಯು ಬೆಂಗಳೂರು ಮೂಲದ ಇಂಡ್‌ಕಲ್ ಟೆಕ್ನಾಲಜಿಸ್ ಕಂಪನಿಯೊಂದಿಗೆ ಪರವಾನಿಗೆ ಒಪ್ಪಂದ ಮಾಡಿಕೊಂಡಿದೆ.

ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ಹಾರ್ಡ್‌ವೇರ್ ಬಿಸಿನೆಸ್‌ನಲ್ಲಿ ಅಗ್ರಗಣ್ಯ ಎನಿಸಿರುವ ತೈವಾನ್ ಮೂಲದ ಏಸರ್ ಸ್ಮಾರ್ಟ್‌ ಟಿವಿ ಉತ್ಪಾದನೆಗೂ ಕಾಲಿಡಲಿದೆ. ಭಾರತದಲ್ಲಿ ಸ್ಮಾರ್ಟ್‌ ಟಿವಿ ಸೆಗ್ಮೆಂಟ್ ಸದ್ಯ ತುಂಬ ಏರುಗತಿಯಲ್ಲಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಏಸರ್ ಮುಂದಾಗಿದೆ.

ಪ್ರಾದೇಶಿಕ ಭಾಷೆಗಳಿಗೆ ಜಿಯೋಮೀಟ್ ಸಪೋರ್ಟ್, ಶೀಘ್ರವೇ ಕನ್ನಡದಲ್ಲೂ ಲಭ್ಯ

ಭಾರತೀಯ ಸ್ಮಾರ್ಟ್‌ ಟಿವಿ ಮಾರುಕಟ್ಟೆಗೆ ಅಡಿ ಇಡಲು ಸಿದ್ಧವಾಗಿರುವ ಏಸರ್ ಇದಕ್ಕಾಗಿ ಬೆಂಗಳೂರು ಮೂಲದ ಇಂಡ್‌ಕಲ್ ಟೆಕ್ನಾಲಜಿಸ್‌ನೊಂದಿಗೆ ಪರವಾನಿಗಿ ಒಪ್ಪಂದಕ್ಕೆ ಮುಂದಾಗಿದೆ. ಕಂಪ್ಯೂಟರ್ ಹಾರ್ಡ್‌ವೇರ್‌ಗೆ ಹೆಚ್ಚು ಪ್ರಸಿದ್ಧಿಯಾಗಿರುವ ಏಸರ್, ಈ ವ್ಯವಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ.

ಇಂಡ್‌ಕಲ್ ಜತೆಗೂಡಿ ಸ್ಮಾರ್ಟ್‌ ಟಿವಿಗಳನ್ನು ಮಾರಾಟ ಮಾಡಲಿರುವ ಏಸರ್, ಆ ಬಗ್ಗೆಯೂ ತೀರಾ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಆದರೂ, ಕಂಪನಿಯು 32 ಇಂಚ್ ಟಿವಿಯಿಂದ ಹಿಡಿದು 70 ಇಂಚಿನ ಟಿವಿಯವರೆಗೂ ಮಾರಾಟ ಮಾಡಲಿದೆ ಎನ್ನಲಾಗಿದೆ. ಏಸರ್ ತನ್ನ ಟಿವಿಗಳನ್ನು ಇ ಕಾಮರ್ಸ್ ತಾಣಗಳ ಮೂಲಕ ಮಾರಾಟ ಮಾಡಲಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಏಸರ್ ಟಿವಿಗಳು ಮಾರಾಟಕ್ಕೆ ಸಿಗಲಿವೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. 

ತೈವಾನ್ ಮೂಲದ ಏಸರ್ ಕಂಪನಿಯು ಕಳೆದ 45 ವರ್ಷಗಳಿಂದಲೂ ಕಂಪ್ಯೂಟರ್ ಹಾರ್ಡ್‌ವೇರ್ ಬಿಸಿನೆಸ್‌ನಲ್ಲಿದೆ. ಕಂಪನಿಯು ಈ ಹಾರ್ಡ್‌ವೇರ್ ಸೆಗ್ಮೆಂಟ್‌ನಲ್ಲಿ ಬಹಳಷ್ಟು ಪ್ರಯೋಗಗಳನ್ನು ಮಾಡಿದೆ. ಡೆಸ್ಕ್‌ಟಾಪ್, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ಸ್, ಟ್ಯಾಬ್ಲೆಟ್ಸ್, ಮಾನಿಟರ್‌ಗಳು, ಗೇಮಿಂಗ್ ಅಕ್ಸೆಸ್‌ರೀಸ್ ಇತ್ಯಾದಿ ಉತ್ಪನ್ನಗಳನ್ನು ಹೊಂದಿದೆ. 

ಕೋರೊನಾ ತಪ್ಪು ಮಾಹಿತಿ: ಲಕ್ಷಾಂತರ ವಿಡಿಯೋ ಡಿಲಿಟ್ ಮಾಡಿದ ಯುಟ್ಯೂಬ್

ತೈವಾನ್‌ನ ಈ ಬಹುರಾಷ್ಟ್ರೀಯ ಕಂಪನಿಯು ಸ್ಮಾರ್ಟ್‌ ಟಿವಿ ಸೆಗ್ಮೆಂಟ್‌ಗೆ ಇಷ್ಟು ದಿನಗಳವರೆಗೂ ಬಂದಿರಲಿಲ್ಲ. ಇದೀಗ, ಭಾರತದಂಥ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಟಿವಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆ ಹಿನ್ನೆಲೆಯಲ್ಲಿ ಕಂಪನಿಯು ಸ್ಮಾರ್ಟ್‌ ಟಿವಿ ಉತ್ಪಾದನೆಗೆ ಅಡಿ ಇಟ್ಟಿದೆ.

ಸ್ಮಾರ್ಟ್‌ ಟಿವಿ ಉತ್ಪಾದನೆಗೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಇಂಡ್‌ಕಲ್ ಟೆಕ್ನಾಲಜಿಸ್ ಸಂಸ್ಥೆಯೊಂದಿಗೆ ಪರವಾನಿಗಿ ಒಪ್ಪಂದ ಮಾಡಿಕೊಂಡಿದೆ. ಈ ತಿಂಗಳವೇ ಏಸರ್ ಕಂಪನಿಯು ಸ್ಮಾರ್ಟ್ ಟಿವಿಯನ್ನು ಲಾಂಚ್ ಮಾಡಲಿದೆ. ಇ ಕಾಮರ್ಸ್ ದೈತ್ಯ ಎನಿಸಿಕೊಂಡಿರುವ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕವೇ ಟಿವಿಗಳನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಆದರೆ, ಟಿವಿಗಳು ಯಾವ ರೀತಿ ಇರಲಿವೆ, ತಂತ್ರಜ್ಞಾನಗಳೇನು, ಫೀಚರ್‌ಗಳೇನಿರಲಿವೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನ ಸದ್ಯಕ್ಕೆ ಕಂಪನಿಯು ನೀಡಿಲ್ಲ ಎನ್ನಬಹುದು. 

ಕಳೆದ ಹನ್ನೆರಡು ತಿಂಗಳಲ್ಲಿ ಮನೆಯ ಮನರಂಜನೆಯ ಅಗತ್ಯ ಹೆಚ್ಚಾಗಿದೆ, ಹೀಗಾಗಿ ದೂರದರ್ಶನಗಳಿಗೆ ಬೇಡಿಕೆ ಹೆಚ್ಚಾಗಿದೆ. ಏಸರ್‌ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲು ಇದು ಉತ್ತಮ ಸಮಯವನ್ನು ಸೂಚಿಸುತ್ತದೆ, ಇದು ಮಾರುಕಟ್ಟೆಗಳಾದ್ಯಂತ ಅತ್ಯಂತ ನಂಬಿಗಸ್ಥ ಮತ್ತು ವಿಶ್ವಾಸಾರ್ಹ ಬ್ರಾಂಡ್‌ಗಳಲ್ಲಿ ಒಂದಾಗಿದೆ. ದೀಪಾವಳಿ ಹಬ್ಬದವರೆಗೆ ಮಾರಾಟದಲ್ಲಿ ಪ್ರಸ್ತುತ ಏರಿಕೆಯಾಗುವ ನಿರೀಕ್ಷೆಯಿದೆ, ಏಸರ್ ಟಿವಿಗಳು ಮಾರುಕಟ್ಟೆಗೆ ತರುವ ಮೌಲ್ಯವರ್ಧನೆಯನ್ನು ಪ್ರದರ್ಶಿಸಲು ಮತ್ತು ಒಟ್ಟಾರೆ ಟಿವಿ ವೀಕ್ಷಣೆಯ ಅನುಭವವನ್ನು ಸುಧಾರಿಸುವಲ್ಲಿ ಅಪಾರ ಅವಕಾಶಗಳನ್ನು ಕಂಡುಕೊಳ್ಳಲಾಗುವುದು ಎಂಬ ಇಂಡ್‌ಕಲ್ ಟೆಕ್ನಾಲಜಿಸ್ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಐಫೋನ್ ನ್ಯಾನೋ ಸ್ಮಾರ್ಟ್‌ಫೋನ್‌ಗೆ ಮುಂದಾಗಿದ್ಯಾ ಆ್ಯಪಲ್?

ಬೆಂಗಳೂರು ಮೂಲದ ಇಂಡ್‌ಕಲ್ ಟೆಕ್ನಾಲಿಜಿಸ್ ಕಂಪನಿಯು ಗೃಹ ಪ್ರದರ್ಶಕಗಳು ಮತ್ತು ಟಿವಿ ಕೇಂದ್ರಿತ ಎಲೆಕ್ಟ್ರಿಕಾನಿಕ್ಸ್‌ ವಸ್ತುಗಳ ಅಭಿವೃದ್ಧಿ, ಹಂಚಿಕೆ ಮತ್ತು ಸಪೋರ್ಟ್‌ಗೆ ಸಂಬಂಧಿಸಿದಂತೆ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ಪರಿಣತಿಯನ್ನು ಪಡೆದಿದೆ. ಟಿವಿ ಮಾಡೆಲ್‌ಗಳನ್ನು ಇಂಡ್‌ಕಲ್ ಅಭಿವೃದ್ಧಿಪಡಿಸಲಿದ್ದು, ಏಸರ್ ಬ್ರ್ಯಾಂಡ್ ಹೆಸರಿನಡಿ ಮಾರಾಟ ಮಾಡಲಿದೆ. ಯಾವ ರೀತಿಯ ಟಿವಿಗಳ ಮಾಡೆಲ್‌ಗಳು ಇರಲಿವೆ ಎಂಬ ಮಾಹಿತಿಯನ್ನು ಶೀಘ್ರವೇ ಹಂಚಿಕೊಳ್ಳುವುದಾಗಿ ಸಂಸ್ಥೆ ಹೇಳಿಕೊಂಡಿದೆ.