ಪ್ರಾದೇಶಿಕ ಭಾಷೆಗಳಿಗೆ ಜಿಯೋಮೀಟ್ ಸಪೋರ್ಟ್, ಶೀಘ್ರವೇ ಕನ್ನಡದಲ್ಲೂ ಲಭ್ಯ
ಪ್ರಮುಖ ವೀಡಿಯೋ ಮೀಟಿಂಗ್ ಪ್ಲಾಟ್‌ಫಾರ್ಮ್ ಎನಿಸಿಕೊಂಡಿರುವ ಜಿಯೋಮೀಟ್ ಈಗ ಪ್ರಾದೇಶಿಕ ಭಾಷೆಗಳಿಗೂ ಸಪೋರ್ಟ್ ಮಾಡುತ್ತಿದೆ. ಸದ್ಯ ಹಿಂದಿ, ಮರಾಠಿ ಮತ್ತು ಗುಜರಾತಿ ಭಾಷೆಗಳಿಗೆ ಸಪೋರ್ಟ್ ಮಾಡುತ್ತಿರುವ ಜಿಯೋಮೀಟ್, ಶೀಘ್ರವೇ ಕನ್ನಡ, ತಮಿಳು ಮತ್ತು ತೆಲುಗಿಗೂ ಅವಕಾಶ ನೀಡಲಿದೆ. ಈ ಮೂಲಕ ಜಿಯೋಮೀಟ್ ಪ್ರಾದೇಶಿಕ ಬಳಕೆದಾರರನ್ನುಸೆಳೆಯಲು ಮುಂದಾಗಿದೆ.
ರಿಲಯನ್ಸ್ ಕಂಪನಿಯು ಜಿಯೋ ಮೂಲಕ ಟೆಲಿಕಾಂ ವಲಯದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ. ಹಾಗೆಯೇ, ಜಿಯೋ ಮೂಲಕ ಅನೇಕ ಡಿಜಿಟಲ್ ಸೇವೆಗಳನ್ನು ಒದಗಿಸಲು ಯಶಸ್ವಿಯಾಗಿದೆ. ಈ ಡಿಜಿಟಲ್ ಸೇವೆಗಳ ಪೈಕಿ ವಿಡಿಯೋ ಮೀಟಿಂಗ್ ಪ್ಲಾಟ್‌ಫಾರ್ಮ್ ಜಿಯೋಮೀಟ್ ಭಾರೀ ಸಕ್ಸೆಸ್ ಕಂಡಿದೆ.
ಈಗಿನ ಹೊಸ ಅಪ್‌ಡೇಟ್ ಏನೆಂದರೆ, ನಿಮಗೆಲ್ಲ ಗೊತ್ತಿರುವ ಹಾಗೆ, ಈ ಜಿಯೋಮೀಟ್ ಪ್ರಾದೇಶಿಕ ಭಾಷೆಗಳಿಗೆ ಸಪೋರ್ಟ್ ಮಾಡಲಿದೆ. ಈಗಾಗಲೇ ಜಿಯೋಮೀಟ್ ಭಾರತೀಯ ಭಾಷೆಗಳಾದ ಹಿಂದಿ, ಮರಾಠಿ ಮತ್ತು ಗುಜರಾತಿಗೆ ಸಪೋರ್ಟ್ ಮಾಡುತ್ತಿದೆ. ಆ ಮೂಲಕ ಬಳಕೆದಾರರಿಗೆ ಈ ಮೂರು ಭಾಷೆಗಳಲ್ಲಿ ಜಿಯೋಮೀಟ್ ಆಪ್ ಅನ್ನು ಬಳಸಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ.
ಈ ಮೂರು ಭಾಷೆಗಳ ಜತೆಗೆ ರಿಲಯನ್ಸ್ ಜಿಯೋ ಶೀಘ್ರವೇ ಕನ್ನಡವೂ ಸೇರಿದಂತೆ ತಮಿಳು, ತೆಲುಗು ಇತರ ಭಾಷೆಗಳಿಗೆ ಸಪೋರ್ಟ್ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಜಿಯೋಫೋನ್ ನೆಕ್ಸ್ಟ್ ಖರೀದಿಗೆ ಮುಂದಿನ ವಾರದಿಂದ ಬುಕ್ಕಿಂಗ್?
ಈ ಅಪ್‌ಡೇಟ್ ಅನ್ನು ಈಗ ಎಲ್ಲ ಬಳಕೆದಾರರಿಗೂ ವಿಸ್ತರಿಸಲಾಗುತ್ತಿದೆ. ವಿಡಿಯೋ ಮತ್ತು ವಾಯ್ಸ್ ಮೀಟಿಂಗ್ ಅಪ್ಲಿಕೇಶನ್‌ಗಳು ಅತ್ಯಂತ ಜನಪ್ರಿಯವಾಗಿರುವ ಈ ಸಂದರ್ಭದಲ್ಲಿ ಜಿಯೋಮೀಟ್ ಹಲವು ಭಾರತೀಯ ಭಾಷೆಗಳಿಗೆ ಸಪೋರ್ನೀಟ್ಡು ಮಾಡುವ ಏಕೈಕ ವೀಡಿಯೋ ಮೀಟಿಂಗ್ ವೇದಿಕೆಯಾಗಿದೆ. ಭಾರತೀಯ ಭಾಷೆಗಳಲ್ಲಿ ಜಿಯೋ ಮೀಟ್ ಸೇವೆ ಪಡೆಯಲು ಗ್ರಾಹಕರು ಈ ರೀತಿಯಾಗಿ ಮಾಡಬೇಕಾಗುತ್ತದೆ: ಭಾಷೆಗಳು ಸೆಟ್ಟಿಂಗ್‌ಗಳು> ಭಾಷೆಗಳು> ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ> ಒಂದನ್ನು ಆರಿಸಿಕೊಳ್ಳಬಹುದು.
ಕ್ಲಾಸ್ ರೂಂ ಸಕ್ಸೆಸ್
ಜಿಯೋಮೀಟ್‌ನ ಇನ್ನೊಂದು ವಿಶೇಷ ಎಂದರೆ- ಕ್ಲಾಸ್‌ರೂಮ್ ಮೋಡ್, ಇದು ವರ್ಚುವಲ್ ತರಗತಿಗಳು, ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಹೆಚ್ಚು ಉಪಯುಕ್ತವಾಗಿದೆ. ವರ್ಚುವಲ್ ತರಗತಿಯ ಪರಿಸರಕ್ಕಾಗಿ ಪ್ರೋಗ್ರಾಂನಲ್ಲಿ ಸಂಯೋಜಿತ ನಿರ್ಬಂಧಗಳನ್ನು ಇದು ಒಳಗೊಂಡಿದೆ,
ಉದಾಹರಣೆಗೆ ನಿರ್ಬಂಧಿತ ವೈಟ್‌ಬೋರ್ಡ್ ಪ್ರವೇಶ, ನಿರ್ಬಂಧಿತ ಸಭೆಗಳು, ಸ್ಕ್ರೀನ್ ಹಂಚಿಕೆ ಮತ್ತು ಹಾಜರಾತಿ ಶೀಟ್. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು, ಆಪಲ್ ಐಫೋನ್‌ಗಳು, ಐಪ್ಯಾಡ್‌ಗಳು, ಮ್ಯಾಕ್ ಕಂಪ್ಯೂಟರ್‌ಗಳು, ವಿಂಡೋಸ್ ಪಿಸಿಗಳು ಮತ್ತು ವೆಬ್ ಬ್ರೌಸರ್‌ಗಳಿಗೆ ಜಿಯೋಮೀಟ್ ಅನ್ನು ಪ್ರವೇಶಿಸಬಹುದು. ಜಿಯೋಮೀಟ್ ಎಚ್‌ಡಿ ಗುಣಮಟ್ಟದ ಧ್ವನಿ ಮತ್ತು ವಿಡಿಯೋ ಹಾಗೂ ಅನಿಯಮಿತ ಕರೆ ಸಮಯವನ್ನು ಒದಗಿಸುತ್ತದೆ.
ಕೋರೊನಾ ತಪ್ಪು ಮಾಹಿತಿ: ಲಕ್ಷಾಂತರ ವಿಡಿಯೋ ಡಿಲಿಟ್ ಮಾಡಿದ ಯುಟ್ಯೂಬ್
ರಿಮೋಟ್ ಲರ್ನಿಂಗ್ ನಿಯಂತ್ರಣವನ್ನು ತೆಗೆದುಕೊಳ್ಳುವುದರೊಂದಿಗೆ, ಆನ್ಲೈನ್ ಕ್ಲಾಸ್ ಅಥವಾ ಯಾವುದೇ ಪರಿಸರದಲ್ಲಿ ಕೇಂದ್ರೀಕರಿಸುವುದು ಸವಾಲಿನಿಂದಾಗಿ ಗಮನದ ಕೊಡಲಾಗುವುದಿಲ್ಲ. ಇದನ್ನು ಎದುರಿಸಲು ಜೂಮ್ ಶಿಕ್ಷಣ ಕ್ಷೇತ್ರದಲ್ಲಿ ಉಪಯುಕ್ತವಾಗಬಹುದಾದ ಹೊಸ ಕಾರ್ಯವನ್ನು ಅಭಿವೃದ್ಧಿಪಡಿಸಿದೆ. ವೀಡಿಯೊ ಕಾನ್ಫರೆನ್ಸಿಂಗ್ ಸಾಫ್ಟ್ವೇರ್ ಬೋಧಕರಿಗೆ ಹೊಸ ಫೋಕಸ್ ಮೋಡ್ ಅನ್ನು ಪರಿಚಯಿಸಿದೆ, ಇದು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಲು ಸಹಾಯ ಮಾಡಲು ಪ್ರಯತ್ನಿಸುತ್ತದೆ.
ಈ ಹೊಸ ಫೋಕಸ್ ಮೋಡ್ ಶಿಕ್ಷಕರು ಇತರ ವಿದ್ಯಾರ್ಥಿಗಳ ಭಾಗವಹಿಸುವವರಿಂದ ವಿಚಲಿತರಾಗದೆ ತಮ್ಮ ವಿದ್ಯಾರ್ಥಿಗಳ ವೀಡಿಯೊಗಳನ್ನು ಮತ್ತು ಅವರ ಶಿಕ್ಷಕರನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಶಿಕ್ಷಕರು ತಮ್ಮ ತರಗತಿಗಳನ್ನು ಮೇಲ್ವಿಚಾರಣೆ ಮಾಡಲು ಈ ಉಪಕರಣವನ್ನು ಬಳಸಬಹುದು, ಆದರೆ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ವೀಡಿಯೊ ಸ್ಟ್ರೀಮ್ಗಳಿಂದ ವಿಚಲಿತರಾಗುವುದಿಲ್ಲ ಅಥವಾ ತಮ್ಮ ಕ್ಯಾಮರಾಗಳನ್ನು ಆನ್ ಮಾಡುವ ಬಗ್ಗೆ ಸ್ವಯಂ ಪ್ರಜ್ಞೆಯನ್ನು ಅನುಭವಿಸುವುದಿಲ್ಲ.
ಕೊರೊನಾದಿಂದಾಗಿ ವರ್ಚುವಲ್ ಸಭೆ, ಮೀಟಿಂಗ್, ಕ್ಲಾಸ್‌ರೂಂಗಳ ಬಳಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವೀಡಿಯೋ ಪ್ಲಾಟ್‌ಫಾರ್ಮ್ ಆಗಿರುವ ಜಿಯೋಮೀಟ್ ಹೆಚ್ಚು ಉಪಯುಕ್ತವಾಗುತ್ತಿದೆ. ಜೊತೆಗೆ ಅವದು ಭಾರತೀಯ ಭಾಷೆಗಳಲ್ಲೂ ಸೇವೆ ನೀಡಲು ಮುಂದಾಗುತ್ತಿರುವುದು ಗಣನೀಯವಾಗಿದೆ.
ಐಫೋನ್ ನ್ಯಾನೋ ಸ್ಮಾರ್ಟ್‌ಫೋನ್‌ಗೆ ಮುಂದಾಗಿದ್ಯಾ ಆ್ಯಪಲ್?
ಈಗಾಗಲೇ ಮೂರು ಪ್ರಾದೇಶಿಕ ಭಾಷೆಗಳಲ್ಲಿ ಜಿಯೋಮೀಟ್ ಸಪೋರ್ಟ್ ಮಾಡುತ್ತಿದ್ದು ಶೀಘ್ರವೇ ಕನ್ನಡವೂ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಿಗೂ ಸಪೋರ್ಟ್ ಮಾಡಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಬಳಕೆಯಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸಲಿದೆ.