ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ OnePlus 6T; ಮುಗಿಬಿದ್ದ ಗ್ರಾಹಕರು

ಮೊಬೈಲ್‌ ಪ್ರಿಯರಿಗೆ ಭಾರೀ ನಿರೀಕ್ಷೆ ಹುಟ್ಟಿಸಿರುವ OnePlus 6T ಪಾಪ್‌ಅಪ್ ಈವೆಂಟ್, ಆನ್‌ಲೈನ್, ಆಫ್‌ಲೈನ್‌ಲ್ಲೂ ಲಭ್ಯ ಹೊಸ ಫೋನ್‌ನಲ್ಲೇನಿದೆ? ಏನಿಲ್ಲ? ಇಲ್ಲಿದೆ ಪುಲ್ ಡೀಟೆಲ್ಸ್...

OnePlus 6T Now On Sale In India Here Are The Features

ಬೆಂಗಳೂರು(ನ.02):  ಶುಕ್ರವಾರದಿಂದ ಭಾರತದ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ OnePlus 6T ಮೊಬೈಲ್ ಮಾರಾಟ ಆರಂಭವಾಗಿದೆ. ಇನ್-ಡಿಸ್ಪ್‌ಲೇ ಫಿಂಗರ್‌ಪ್ರಿಂಟ್ ಫೀಚರ್ ಇರೋ ಈ ಸ್ಮಾರ್ಟ್‌ಫೋನ್‌ ಬಿಡುಗಡೆಗಾಗಿ ಮೊಬೈಲ್‌ಪ್ರಿಯರು ಕಾತರದಿಂದ ಕಾಯುತ್ತಿದ್ದರು. ಇದೀಗ ಬೆಂಗಳೂರು ಸೇರಿದಂತೆ ದೇಶದ 8 ನಗರಗಳಲ್ಲಿ  ಈ ಫೋನ್ OnePlus ಆಯೋಜಿಸಿರುವ  ಪಾಪ್‌ಅಪ್ ಈವೆಂಟ್‌ಗಳಲ್ಲಿ ಲಭ್ಯವಿದ್ದು, ಮೊಬೈಲ್‌ ಪ್ರಿಯರು ಮುಗಿಬಿದ್ದಿದ್ದಾರೆ.  ಪಾಪ್‌ಅಪ್ ಈವೆಂಟ್‌ಗಳಲ್ಲಿ ಗ್ರಾಹಕರು ಫೋನನ್ನು ಅಲ್ಲೇ ಪರೀಕ್ಷಿಸಿ  ಕೊಂಡುಕೊಳ್ಳಬಹುದಾಗಿದೆ. 

ಎಲ್ಲಿ ಖರೀದಿಸಬಹುದು:
ರಿಲಾಯನ್ಸ್ ಡಿಜಿಟಲ್, ಕ್ರೋಮಾ ಸ್ಟೋರ್‌ನಂತಹ ಆಫ್‌ಲೈನ್ ಮಳಿಗೆಗಳಲ್ಲೂ ಅಲ್ಲದೇ, ಈ ಫೋನ್ ಅಮೆಜಾನ್, ಒನ್‌ಪ್ಲಸ್‌ನಲ್ಲಿ ಆನ್‌ಲೈನ್‌ನಲ್ಲೂ  ಖರೀದಿಸಬಹುದಾಗಿದೆ. 

ಬೆಲೆ: 
OnePlus 6T ಮೂರು ನಮೂನೆಗಳಲ್ಲಿ ಲಭ್ಯವಿದ್ದು ಅವುಗಳ ಬೆಲೆ ಹೀಗಿದೆ:
6GB+128GBಯ OnePlus 6T ಫೋನ್‌ ಬೆಲೆ ₹37,999
8GB+128GBಯ OnePlus 6T ಫೋನ್ ಬೆಲೆ ₹41,999
8GB+256GBಯ OnePlus 6T ಫೋನ್ ಬೆಲೆ ₹45,999

ಹಿಂದಿನ ವಿನ್ಯಾಸಕ್ಕೆ ಹೋಲಿಸಿದಾಗ ಹೊಸ OnePlus 6Tನಲ್ಲಿ ಗಮನಾರ್ಹ ಬದಲಾವಣೆಗಲಾಗಿವೆ.  ಆಪಲ್, ಸ್ಯಾಮ್‌ಸಂಗ್‌ ನಂತಹ ಮೊಬೈಲ್ ದಿಗ್ಗಜರು ಹೆಡ್‌ಫೋನ್‌ ಜ್ಯಾಕ್‌ಗೆ ತಿಲಾಂಜಲಿಯಿಟ್ಟ ಬಳಿಕ, OnePlus 6T ಯು ಕೂಡಾ ಈಗ ಅದೇ ಸಾಲಿಗೆ ಸೇರಿಕೊಂಡಿದೆ.

ಇನ್-ಡಿಸ್ಪ್ಲೇ  ಫಿಂಗರ್‌ಪ್ರಿಂಟ್ ತಂತ್ರಜ್ಞಾನವನ್ನು ಹೊಂದಿರುವ OnePlus 6Tಯು, ಅನ್‌ಲಾಕ್ ಮಾಡಲು ಅತೀ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂದು ಕಂಪನಿಯು ಹೇಳಿದೆ. ಅನ್‌ಲಾಕ್ ಮಾಡಲು ಬರೋಬ್ಬರಿ 0.34 ಸೆಕಂಡ್‌ಗಳು ಸಾಕು!

OnePlus 6Tಯು 6.41 ಇಂಚಿನ  ಆಪ್ಟಿಕ್ AMOLED ತಂತ್ರಜ್ಞಾನಾಧರಿತ  ಡಿಸ್ಪ್ಲೇ  ಹಾಗೂ ಆಸ್ಪೆಕ್ಟ್ ರೇಶ್ಯೂ 19.5:9 ಹೊಂದಿದೆ. ಅತ್ಯಾಧುನಿಕ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ನಿಂದ ಸ್ಕ್ರೀನ್‌ ತಯಾರಿಸಲ್ಪಟ್ಟಿದ್ದು, ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. ಅಲ್ಲದೇ ಆಂಟಿ ಗ್ಲೇರ್ ಫೀಚರ್‌ನ್ನು ಕೂಡಾ ಒಳಗೊಂಡಿದೆ.

ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್‌ 845 ಪ್ರೊಸೆಸರ್ ಹೊಂದಿರುವ OnePlus 6T,  6GB ಮತ್ತು 8GB RAM ಹಾಗೂ 128GB ಮತ್ತು 256GB ಇಂಟರ್ನಲ್ ಸ್ಟೋರೆಜ್‌ ನಮೂನೆಗಳಲ್ಲಿ ಲಭ್ಯವಿದೆ.

ಭಾರತದಲ್ಲಿ Google Pixel 3 ಬಳಿಕ Android 9 Pie ತಂತ್ರಾಶವನ್ನು ಬಳಸಿದ ಹೆಗ್ಗಳಿಕೆ OnePlus 6Tದ್ದಾಗಿದೆ.  3,700 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ  OnePlus 6T, ಹಳೆಯ OnePlusಗೆ ಹೋಲಿಸಿದರೆ 20% ಹೆಚ್ಚು ಸಾಮರ್ಥ್ಯ ಹೊಂದಿದೆ.

OnePlus 6Tಯ ಕ್ಯಾಮೆರಾದಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನೇ ಬಳಸಲಾಗಿದೆ.  ಮಂದ ಬೆಳಕು ಹಾಗೂ ಹೆಚ್ಚು ಸದ್ದಿರುವಲ್ಲೂ ಉತ್ಕರ್ಷ ಗುಣಮಟ್ಟದ ಫೋಟೋ ಹಾಗೂ ವಿಡಿಯೋ ತೆಗೆಯಲು ಸಹಕಾರಿಯಾಗುವಂತೆ ಕ್ಯಾಮೆರಾವನ್ನು ವಿನ್ಯಾಸಗೊಳಿಸಲಾಗಿದೆ.

Latest Videos
Follow Us:
Download App:
  • android
  • ios