ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಿಧಾನವಾಗಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸುತ್ತಿರುವ ರಿಯಲ್‌ಮೀ ಕಂಪನಿ, ಮುಂದಿನ ವರ್ಷ ರಿಯಲ್ ಎಕ್ಸ್7 ಸೀರಿಸ್ ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಸಿಇಒ ಮಾಧವ್ ಸೇಠ್ ಅವರೇ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿ ಈ ವಿಷಯವನ್ನು  ಖಚಿತಪಡಿಸಿದ್ದಾರೆ. ಅಗ್ಗದ 5ಜಿ ಸ್ಮಾರ್ಟ್‌ಫೋನ್‌ಗಳಾದ ರಿಯಲ್‌ಮೀ ಎಕ್ಸ್7 ಮತ್ತು ರಿಯಲ್‌ಮೀ ಎಕ್ಸ್7 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಕಳೆದ ಸೆಪ್ಟೆಂಬರ್‌ನಲ್ಲಿ ಚೀನಾದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಅದೇ 5ಜಿ ಸ್ಮಾರ್ಟ್‌ಫೋನ್‌ಗಳನ್ನು 2021ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಕಂಪನಿ ಯೋಜನೆ ಹಾಕಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ವರ್ಷ ಎಂದಷ್ಟೇ ಮಾಹಿತಿ ನೀಡಿರುವ ಅವರು ನಿಗದಿತ ದಿನಾಂಕದ ಬಗ್ಗೆ ಅವರೇನೂ ತಿಳಿಸಿಲ್ಲ. ಹಾಗಾಗಿ, 2021ರ ಮೊದಲನೆಯ ತ್ರೈಮಾಸಿಕದಲ್ಲಿ ರಿಯಲ್‌ಮೀ ಎಕ್ಸ್7 ಸೀರಿಸ್ ಫೋನ್‌ಗಳನ್ನು ಭಾರತೀಯ ಬಳಕೆದಾರರು ನಿರೀಕ್ಷಿಸಬಹುದಾಗಿದೆ. 

ಭಾರತದಲ್ಲಿ ಮತ್ತೆ ಟಿಕ್ ‌ಟಾಕ್ ಕಾರುಬಾರು ಶುರುವಾಗತ್ತಾ?

ರಿಯಲ್‌ಮೀ ಇಂಡಿಯಾ ಮತ್ತು ಯುರೋಪ್ ಸಿಇಒ ಆಗಿರುವ ಮಾಧವ್ ಸೇಠ್, ಕಂಪನಿ ರಿಯಲ್‌ಮೀ ಎಕ್ಸ್50 ಪ್ರೋ ಮೂಲಕ ಭಾರತದ ಮಾರುಕಟ್ಟೆಯಲ್ಲಿ 5ಜಿ ತಂತ್ರಜ್ಞಾನಾಧರಿತ ಫೋನ್‌ಗಳನ್ನು ಕಳೆದ ಫೆಬ್ರವರಿಯಲ್ಲಿ ತಂದಿದೆ ಎಂದು ಟ್ವೀಟ್ ಮಾಡಿರುವ ಅವರು, ಈಗ ರಿಯಲ್‌ಮೀ ಎಕ್ಸ್‌7 ಸೀರಿಸ್ 5ಜಿ ಸ್ಮಾರ್ಟ್‌ಫೋನ್‌ಗಳನ್ನುಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಮಾಧವ್ ಸೇಠ್ ಅವರ ಟ್ವೀಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಿಯಲ್‌ಮೀ ಎಕ್ಸ್7 ಮತ್ತು ರಿಯಲ್‌ಮೀ ಎಕ್ಸ್7 ಪ್ರೋ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ ಆಧಾರಿತ ರಿಯಲ್‌ಮೀ ಯುಐ ಆಪರೇಟಿಂಗ್ ಸಾಫ್ಟ್‌ವೇರ್ ಇದೆ. ಈ ಎರಡೂ ಫೋನ್‌ಗಳು ಡುಯಲ್ ಸಿಮ್‌ಗಳನ್ನು ಒಳಗೊಂಡಿವೆ. ರಿಯಲ್ ಮೀ ಎಕ್ಸ್7 6.4 ಇಂಚ್ ಅಮೋಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದರೆ, ರಿಯಲ್ ಮೀ ಎಕ್ಸ್7 ಪ್ರೋ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ 6.55 ಇಂಚ್ ಹಾಗೂ ಫುಲ್ ಎಚ್ಡಿ ಪ್ಲಸ್ ಅಮೋಎಲ್‌ಇಡಿ  ಒಳಗೊಂಡಿದೆ. ರಿಯಲ್ ಮೀ ಎಕ್ಸ್7 ಫೋನ್‌ಗೆ ಅಕ್ಟಾ ಕೋರ್ ಡೀಮೆನ್‌ಸಿಟಿ 800ಯು ಎಸ್ಒಸಿ ಹಾಗೂ ಪ್ರೋ ಫೋನ್‌ನಲ್ಲಿ ಅಕ್ಟಾ ಕೋರ್ ಡೈಮೆನ್‌ಸಿಟಿ 1000 ಪ್ಲಸ್ ಎಸ್‌ಒಸಿ ಪ್ರೊಸೆಸರ್‌ಗಳಿವೆ. ರಿಯಲ್ ಮೀ ಎಕ್ಸ್7 8ಜಿಬಿ ರಾಮ್,  128 ಜಿಬಿ ಸ್ಟೋರೇಜ್ ಪಡೆಯಬಹುದು. ಇದೇ ವೇಳೆ, ರಿಯಲ್ ಮೀ ಎಕ್ಸ್7 ಪ್ರೋ ಫೋನ್‌ನ ಸ್ಟೋರೇಜ್ ಸಾಮ್ರರ್ಥ್ಯ 256 ಜಿಬಿವರೆಗೂ ಇದೆ. 

PUBG is back: ಹೊಸ ಅವತಾರದ ಗೇಮ್‌ಗೆ ಒಪ್ಪಿಗೆ ಸಿಗುತ್ತಾ?

ರಿಯಲ್ ಮೀ ಎಕ್ಸ್7 ಫೋನ್‌ನಲ್ಲಿ 4,300 ಎಎಂಎಚ್ ಬ್ಯಾಟರಿ ಇದ್ದರೆ ರಿಯಲ್ ಮೀ ಎಕ್ಸ್7 ಪ್ರೋ  4500 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಎರಡೂ ಫೋನ್‌ಗಳು 65ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತವೆ. 

ಕ್ಯಾಮರಾ ಬಗ್ಗೆ ಹೇಳುವುದಾದರೆ,  ರಿಯಲ್ ಮಿ ಎಕ್ಸ್7ನಲ್ಲಿ 64 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ ಇದ್ದು, 8 ಮೆಗಾ ಪಿಕ್ಸೆಲ್ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಕ್ಯಾಮರಾಗಳ ಸೆಟ್‌ ಅಪ್ ಇದೆ. ಫೋನ್‌ನ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮರಾ ಕೊಡಲಾಗಿದೆ. ರಿಯಲ್‌ ಮೀ ಎಕ್ಸ್7 ಪ್ರೋ ಸ್ಮಾರ್ಟ್‌ಫೋನ್‌ನಲ್ಲೂ ಇದೇ ರೀತಿಯ ಕ್ಯಾಮರಾ ಸೆಟ್‌ ಅಪ್ ಇದೆ.

Honor 10X Lite ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆ?

ಅಗ್ಗದ ದರದೊಂದಿಗೆ ಪ್ರೀಮಿಯಂ ಫೀಚರ್‌ಗಳನ್ನು ಒದಗಿಸುವ ರಿಯಲ್ ಮೀ ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿವೆ. ಚೀನಾ ಮೂಲದ ವಸ್ತುಗಳ ಬಹಿಷ್ಕಾರ ಮಧ್ಯೆಯೂ ಸ್ಮಾರ್ಟ್‌ಫೋನ್‌ಗಳ ಮಾರಾಟಕ್ಕೇನೂ ಧಕ್ಕೆಯಾದಂತೆ ಕಾಣುತ್ತಿಲ್ಲ.