ಸೆ.3ಕ್ಕೆ ರೆಡ್‌ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಲಾಂಚ್ ಫಿಕ್ಸ್
ಶಿಯೋಮಿ ಕಂಪನಿಯು ರೆಡ್‌ಮಿ ಬ್ರ್ಯಾಂಡ್‌ನಡಿ ಮತ್ತೊಂದು ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ರೆಡ್‌ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 3ರಂದು ಲಾಂಚ್ ಆಗಲಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಒಂದಿಷ್ಟು ಮಾಹಿತಿಯಗಳನ್ನು ಹಂಚಿಕೊಂಡಿದೆ.
ಚೀನಾದ ಮೂಲದ ಪ್ರಮುಖ ಸ್ಮಾರ್ಟ್ ಫೋನ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಶಿಯೋಮಿ ತನ್ನ ರೆಡ್‌ಮಿ ಬ್ರ್ಯಾಂಡ್ ಮೂಲಕ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜಬರ್ದಸ್ತ್ ಪಾಲು ಪಡೆದುಕೊಂಡಿದೆ. ಹಲವು ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ತನ್ನದೇ ಗ್ರಾಹಕವಲಯವನ್ನು ಸೃಷ್ಟಿಸಿಕೊಂಡಿದೆ.
ವಿವೋನಿಂದ ಮತ್ತೊಂದು ಫೋನ್ ಲಾಂಚ್. ಎಷ್ಟು ಬೆಲೆ, ಏನೆಲ್ಲ ವಿಶೇಷತೆಗಳಿವೆ?
ಶಿಯೋಮಿ ಕಂಪನಿಯು ಈಗ ಭಾರತೀಯ ಮಾರುಕಟ್ಟೆಗೆ ಸೆಪ್ಟೆಂಬರ್ 3ರಂದು ರೆಡ್‌ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಈ ಸಂಬಂಧ ಕಂಪನಿಯು ಟೀಸರ್ ಬಿಡುಗಡೆ ಮಾಡಿ ದಿನಾಂಕವನ್ನು ಖಚಿತಪಡಿಸಿದೆ. ಜೊತೆಗೆ ಇದಕ್ಕಾಗಿಯೇ ಮೈಕ್ರೊಸೈಟ್ ಸೃಷ್ಟಿಸಿದ್ದು, ಕಲವು ಫೀಚರ್‌ಗಳ ಬಗ್ಗೆಯೂ ಮಾಹಿತಿ ನೀಡಿದೆ.
ಕಂಪನಿಯೇ ನೀಡಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 3ರಂದು ಬಿಡುಗಡೆಯಾಗಲಿರುವ ರೆಡ್‌ಮಿ 10 ಪ್ರೈಮ್ ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾ ಟೆಕ್ ಹೆಲಿಯೋ ಪ್ರೊಸೆಸರ್ ಹೊಂದಿರುವ ಸಾಧ್ಯತೆ ಇದೆ. ಶಿಯೋಮಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ರೆಡ್‌ಮಿ 10 ಫೋನ್ ಅನ್ನೇ ರಿಬ್ರ್ಯಾಂಡ್ ಮಾಡಿ ರೆಡ್‌ಮಿ 10 ಪ್ರೋ ಹೆಸರಲ್ಲಿ ಬಿಡುಗಡೆ ಮಾಡುತ್ತಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.
ರೆಡ್‌ಮಿ 10 ಪ್ರೈಮ್ ಬಿಡುಗಡೆಯನ್ನು ಸೂಚಿಸುವ ಸಲುವಾಗಿ ಶಿಯೋಮಿ ತನ್ನ ರೆಡ್‌ಮಿ ಇಂಡಿಯಾ ಟ್ವಿಟರ್ ಖಾತೆಯ ಬಳಕೆದಾರ 10 ವಿಭಿನ್ನ ಅವಿಭಾಜ್ಯ ಸಂಖ್ಯೆಗಳಾಗಿ ಬದಲಾಯಿಸಿದೆ. ಇದೇ ಖಾತೆಯಲ್ಲಿ ರೆಡ್‌ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಜೊತೆಗೆ ಕಂಪನಿಯು ಮೈಕ್ರೋಸೈಟ್ ಕೂಡ ಸೃಷ್ಟಿಸಿದ್ದು, ಅದರಲ್ಲಿ ಪ್ರಮುಖ ಫೀಚರ್‌ಗಳ ಬಗ್ಗೆ ಮಾಹಿತಿಯನ್ನು ಒದಗಿಸಿದೆ.
ಸೆಪ್ಟೆಂಬರ್ 3ರಂದು ಭಾರತೀಯ ಮಾರುಕಟ್ಟೆಗೆ ರೆಡ್‌ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ ಬಿಗುಡೆಯನ್ನು ಖಚಿತಪಡಿಸಿರುವ ಕಂಪನಿಯು, ಈ ಫೋನ್ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೂ, 13,000 ರೂ.ನಿಂದ 16 ಸಾವಿರ ರೂ.ವರೆಗೂ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
ಈಗಾಗಲೇ ರೆಡ್ ಮಿ 10 ಪ್ರೈಮ್ ಬಗ್ಗೆ ಕಂಪನಿಯು ಒಂದಿಷ್ಟು ಮಾಹತಿಯನ್ನು ಬಿಟ್ಟು ಕೊಟ್ಟಿದೆ ನಿಜವಾದರೂ, ಸಂಪೂರ್ಣವಾಗಿ ಮಾಹಿತಿಗಳೇನೂ ಬಹಿರಂಗಗೊಂಡಿಲ್ಲ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರೆಡ್‌ಮಿ 10 ಸ್ಮಾರ್ಟ್‌ಫೋನ್ ಅನ್ನೇ ಕಂಪನಿಯು ರಿಬ್ರ್ಯಾಂಡ್ ಮಾಡಿ ರೆಡ್‌ಮಿ 10 ಪ್ರೈಮ್ ಎಂದು ಹೇಳಲಾಗುತ್ತಿರುವುದರಿಂದ, ಅದೇ ರೀತಿಯ ಫೀಚರ್‌ಗಳ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
Made in Pakistan ಸ್ಮಾರ್ಟ್‌ಫೋನ್ ರಫ್ತು ಆರಂಭಿಸಿದ ಪಾಕ್
ಅಂದರೆ, ರೆಡ್‌ಮಿ 10 ಪ್ರೈಮ್ ಕೂಡ 6.5 ಇಂಚ್ ಫುಲ್ ಎಚ್‌ಡಿ ಅಡಾಪ್ಟಿವ್ ಸಿಂಕ್ ಡಿಸ್‌ಪ್ಲೇ ಇರಬಹುದು. ಜೊತೆಗೆ, ಅಕ್ಟಾ ಕೋರ್ ಮೀಡಿಯಾಟೆಕ್ ಹೆಲಿಯೋ ಜಿ88 ಪ್ರೊಸೆಸರ್ ಒಳಗೊಂಡಿರುವ ಸಾಧ್ಯತೆಯೂ ಇದೆ. ಇನ್ನು 6 ಜಿಬಿ ರ್ಯಾಮ್ ಕೂಡ ಇರಬಹುದು.
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿರಬಹುದು. ಅಲ್ಟ್ರಾ ವೈಡ್ ಗಾಗಿ ಕಂಪನಿಯು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ. ಇನ್ನು ಫ್ರಂಟ್‌ನಲ್ಲಿ ಸೆಲ್ಫಿಗಾಗಿ ಕಂಪನಿಯು 8 ಮೆಗಾ ಪಿಕ್ಸೆಲ್ ಕಲ್ಪಿಸಿರಬಹುದು ಎಂದು ಹೇಳಲಾಗುತ್ತಿದೆ.
6 ಜಿಬಿ ರ್ಯಾಮ್‌ನೊಂದಿಗೆ ರೆಡ್‌ಮಿ 10 ಪ್ರೈಮ್ ಸ್ಮಾರ್ಟ್‌ಫೋನ್ 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಬಹುದು. ಜೊತೆಗೆ, 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ 5000 ಎಂಎಎಚ್ ಸಾಮರ್ಥ್ಯ ಬ್ಯಾಟರಿ ಕೂಡ ಇರಲಿದ್ದು, ಇದು 9 ವ್ಯಾಟ್ ರಿವರ್ಸ್ ಚಾರ್ಚಿಂಗ್ ಸಪೋರ್ಟ್ ಮಾಡಲಿದೆ ಎನ್ನಲಾಗುತ್ತಿದೆ.
ಜಿಯೋಫೋನ್ ನೆಕ್ಸ್ಟ್ ಫೋನ್ ಹೇಗಿದೆ? ಬೆಲೆ ಎಷ್ಟಿದೆ?