ಪ್ರೀಮಿಯಂ ಮತ್ತು  ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ರಿಯಲ್‌ಮಿ ಇದೀಗ ಎರಡು ಸ್ಮಾರ್ಟ್‌ಫೋನ್ ಮತ್ತು ಒಂದು ಏರ್ ಬಡ್ಸ್‌ ಬಿಡುಗಡೆಗೆ ಡೇಟ್ ಫಿಕ್ಸ್ ಮಾಡಿಕೊಂಡಿದೆ.

ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಡೈರೆಕ್ಟ್ ಮೆಸೇಜ್! ಹೇಗೆ ಗೊತ್ತಾ..?

ಫೆಬ್ರವರಿ 24ರಂದು ರಿಯಲ್ ಮಿ ನಾರ್ಜೋ ಪ್ರೊ 5ಜಿ(Realme Narzo 30 Pro 5G), ರಿಯಲ್ ಮಿ ನಾರ್ಜೋ 30ಎ(Realme Narzo 30A) ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು  ಮತ್ತು ರಿಯಲ್ ಮಿ ಬಡ್ಸ್ ಏರ್ 2(Realme Buds Air 2) ಸಾಧನವನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ರಿಯಲ್ ಮಿ ಕಂಪನಿಯ ಅಧಿಕೃತ ವೆಬ್‌ಸೈಟ್ ಹಾಗೂ ಇ ಕಾಮರ್ಸ್ ತಾಣವಾದ ಪ್ಲಿಫ್‌ಕಾರ್ಟ್‌ನ ಡೆಡಿಕೆಟೆಡ್ ಪುಟದಲ್ಲಿ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಲಾಗಿದೆ. ರಿಯಲ್ ಮಿ ನಾರ್ಜೋ 30 ಪ್ರೋ 5ಜಿ ಪ್ರೊಸೆಸರ್ ಮಾಹಿತಿ ಕೂಡ ಸೋರಿಕೆಯಾಗಿದ್ದು, ಎರಡೂ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವೂ ಗೊತ್ತಾಗಿದೆ. ಆದರೆ, ಎರಡೂ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿಯನ್ನು ಕಂಪನಿ ಬಿಟ್ಟುಕೊಟ್ಟಿಲ್ಲ.

ಈ ರಿಯಲ್ ಮಿ ನಾರ್ಜೋ 30 ಪ್ರೋ 5ಜಿ ಹಾಗೂ ರಿಯಲ್ ಮಿ ನಾರ್ಜೋ 30 ಎ ಮತ್ತು ರಿಯಲ್ ಮಿ ಬಡ್ಸ್ ಏರ್‌ಗೆ ಸಂಬಂಧಿಸಿದ ಟೀಸರ್‌ಗಳನ್ನು ಪ್ಲಿಫ್‌ಕಾರ್ಟ್ ಮತ್ತು ರಿಯಲ್ ಮಿ ಡಾಟ್ ಕಾಮ್‌ನಲ್ಲಿರುವ ಡೆಡಿಕೆಟೆಡ್‌ ಪುಟಗಳಲ್ಲಿ ಪ್ರದರ್ಶಿಸಲಾಗಿದೆ. ಆ ಮೂಲಕವೇ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಹಾಗೂ ಏರ್ ಬಡ್ ಬಿಡುಗಡೆಯ ಅಧಿಕೃತ ದಿನಾಂಕದ ಬಗ್ಗೆ ಜನರಿಗ ಗೊತ್ತಾಗಿದ್ದು ಎಂದು ಹೇಳಬಹುದು. ಫೆಬ್ರವರಿ 24ರಂದು ಮಧ್ಯಾಹ್ನ 12.30ಕ್ಕೆ ಪ್ಲಿಫ್‌ಕಾರ್ಟ್ ಮತ್ತು ರಿಯಲ್ ಮಿ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿವೆ. ಆಗಲೇ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳಬಹುದು ಎಂದು ಅಂದಾಜಿಸಲಾಗುತ್ತಿದೆ.

ಈ ಎರಡೂ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ವೇಳೆಯೇ ಈ ಬಡ್ಸ್ ಏರ್ ಟು ವೈರ್‌ಲೆಸ್ ಸ್ಟಿರಿಯೋ (ಟಿಡಬ್ಲ್ಯೂಎಸ್) ಇಯರ್‌ಬಡ್ಸ್ ಕೂಡ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ರಿಯಲ್ ಮಿ ಇಂಡಿಯಾ ಸಿಇಒ ಮಾಧವ್ ಶೇಠ್ ಅವರು ಈ ಇಯರ್ ಬಡ್ಸ್ ಟೀಸರ್ ಹಂಚಿಕೊಂಡಿದದ್ದರು

249 ರೂ. Vi ಪ್ಲ್ಯಾನ್‌: ರಾತ್ರಿ 12ರಿಂದ ಬೆಳಗಿನ 6ರ ತನಕ ಹೈ ಸ್ಪೀಡ್ ಇಂಟರ್ನೆಟ್ ಬಳಸಿ

ರಿಯಲ್ ಮಿ ನಾರ್ಜೋ 30 ಪ್ರೋ 5 ಜಿ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡಿಮೆನ್ಸಿಟಿ 800ಯು 5ಜಿ ಪ್ರೊಸೆಸರ್ ಆಧರಿತವಾಗಿರಲಿದೆ. ಈ ಹೊಸ ಪ್ರೊಸೆಸರ್, ಈ ಹಿಂದಿನ ಮೀಡಿಯಾ ಟೆಕ್ ಡಿಮೆನ್ಸಿಟಿ 700 ಸೀರೀಸ್‌ಗಿಂತಲೂ ಶೇ.11ರಷ್ಟು ಸಿಪಿಯು ಪ್ರದರ್ಶನ ಹೆಚ್ಚಿಗೆ ನೀಡಲಿದೆ. ಹಾಗೆಯೇ, ಶೇ.28ರಷ್ಟು ದಕ್ಷತೆಯೂ ಹೆಚ್ಚಿರಲಿದೆ ಮತ್ತು ಆಪ್ ಲಾಂಚ್ ಕೂಡ ಹೆಚ್ಚಿರಲಿದೆ.

ರಿಯಲ್ ಮಿ ನಾರ್ಜೋ 30 ಪ್ರೊ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಹೋಲ್ ಪಂಚ್ ಡಿಸ್‌ಪ್ಲೇ ಇರಲಿದೆ. ಸ್ಮಾರ್ಟ್‌ಫೋನ್‌ನ ಮೇಲ್ತುದಿಯ ಎಡಭಾಗದಲ್ಲಿ ಸೆಲ್ಫಿ ಕ್ಯಾಮೆರಾ ಇರಲಿದೆ. ಹಾಗೆಯೇ ಈ ಫೋನ್‌ನ ಸೈಡಿನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇರಲಿದೆ. ಈ ರಿಯಲ್ ಮಿ ನಾರ್ಜೋ 30 ಪ್ರೋ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್ ಕ್ಯಾಮೆರಾಗಳ ಸೆಟ್‌ಅಪ್ ಇದೆ. ಫೋನಿನ ಹಿಂಬದಿಯ ಎಡ ಭಾಗದಲ್ಲಿ ಆಯತಾಕಾರದ ಮಾಡ್ಯೂಲ್‌ನಲ್ಲಿ ಈ ಕ್ಯಾಮೆರಾಗಳಿವೆ.

ಈ ಎರಡೂ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಇನ್ನೂ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಡೆಡಿಕೆಟೆಡ್ ಟೀಸರ್ ಪುಟಗಳಲ್ಲಿ ಕೇವಲ ಬಿಡುಗಡೆಯ ದಿನಾಂಕವನ್ನು ಮಾತ್ರವೇ ಖಚಿತಪಡಿಸಲಾಗಿದೆ.

ಏತನ್ಮಧ್ಯೆ, ರಿಯಲ್ ಮಿ ಇಂಡಿಯಾ ಸಿಇಒ ಮಾಧವ್ ಶೇಠ್ ಟ್ವೀಟ್ ಮಾಡಿ, ರಿಯಲ್ ಮೀ ಜಿಟಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ. ಅವರು ಟ್ವೀಟ್‌ನಲ್ಲಿ - ರಿಯಲ್ ಮೀ ಫ್ಯಾನ್ಸ್ ನಿಮ್ಮ ಕ್ಯಾಲೆಂಡರ್‌ನಲ್ಲಿ ಮಾರ್ಚ್ 4 ದಿನಾಂಕವನ್ನು ಗುರುತು ಹಾಕಿಕೊಳ್ಳಿ. ಮುಂದಿನ ತಲೆಮಾರಿನ ಫ್ಲ್ಯಾಗ್‌ಶಿಫ್ ಸೀರೀಸ್- ರಿಯಲ್ ಮಿ ಜಿಟಿ 5ಜಿ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಸ್ನ್ಯಾಪ್ ಡ್ರಾಗನ್ 888 ಚಿಪ್‌ಸೆಟ್ ಆಧರಿತವಾಗಿದೆ. ಅತ್ಯುತ್ತಮ ಪ್ರದರ್ಶನಕ್ಕಾಗಿ ಇನ್ನೋವೇಷನ್, ಡಿಸೈನ್ ಮತ್ತು   ಪ್ರಾಡಕ್ಟ್ ವ್ಯಾಲ್ಯೂವಿನಲ್ಲಿ ಈ ರಿಯಲ್ ಮಿ ಜಿಟಿ 5ಜಿ ಮುಂದಿರಲಿದೆ. ಯಾರೆಲ್ಲ ಎಕ್ಸೈಟ್ ಆಗಿದ್ದೀರಿ ಎಂದು ತಿಳಿಸಿದ್ದಾರೆ.

ಲೆನೆವೋ ಟ್ಯಾಬ್ ಪಿ11 ಪ್ರೊ ಟ್ಯಾಬ್ಲೆಟ್ ಬಿಡುಗಡೆ, ಭರಪೂರ ಫೀಚರ್‌ಗಳು