Asianet Suvarna News Asianet Suvarna News

AI ಆಧಾರಿತ ಫೀಚರ್‌ ಇರುವ ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್ ಲಾಂಚ್

ಭಾರತದಲ್ಲೂ ವ್ಯಾಪಕ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿರುವ ಒಪ್ಪೋ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಕೃತಕ ಬುದ್ಧಿಮತ್ತೆ(ಎಐ) ಆಧರಿತ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ವಿಶೇಷತೆಯಾಗಿದೆ.

Oppo launches Reno 5A Smartphone to Japan market
Author
Bengaluru, First Published May 24, 2021, 1:37 PM IST

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಭಾವಿ ಸ್ಥಿತಿಯಲ್ಲಿರುವ ಒಪ್ಪೋ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಪಾಲು ಹೊಂದಿರುವ ಒಪ್ಪೋ, ರೆನೋ 5ಎಂ ಎಂಬ ಸ್ಮಾರ್ಟ್‌ಫೋನ್ ಅನ್ನು ಜಪಾನ್‌ ಮಾರುಕಟ್ಟೆಗೆ  ಬಿಡುಗಡೆ ಮಾಡಿದೆ.

ಬಜೆಟ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಜನಪ್ರಿಯವಾಗಿರುವ ಚೀನಾ ಮೂಲದ ಒಪ್ಪೋ ಕಂಪನಿ ಗ್ರಾಹಕಸ್ನೇಹಿ ಹಾಗೂ ಆಧುನಿಕ ತಂತ್ರಜ್ಞಾನಾಧರಿತ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಈಗ ಜಪಾನ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್ ನಾಲ್ಕು ಕ್ಯಾಮೆರಾ, 90ಎಚ್‌ಜೆಡ್ ಡಿಸ್‌ಪ್ಲೇ ಸೇರಿದಂತೆ ಇನ್ನಿತರ ಪ್ರಮುಖ ಫೀಚರ್‌ಗಳನ್ನು ಒಳಗೊಂಡಿದೆ.

ಟ್ವಿಟರ್‌ನಲ್ಲಿ ನಿಮ್ಮ ಖಾತೆ ದೃಢೀಕರಣವಾಗಬೇಕಾ? ಹೀಗೆ ಮಾಡಿ

ಈ ಫೋನ್‌ನಲ್ಲಿ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 765ಜಿ ಎಸ್ಒಸಿ, 128 ಜಿಬಿ ಸ್ಟೋರೇಜ್, ಹೋಲ್ ಪಂಚ್ ಡಿಸೈನ್‌ ಪ್ರಮುಖ ಫೀಚರ್‌ಗಳಾಗಿವೆ. ಇದರ ಜೊತೆಗೆ ಕೃತಕ ಬುದ್ಧಿಮತ್ತೆ(ಎಐ) ಆಧರಿತ ಹಲವು ಫೀಚರ್‌ಗಳನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದು. ಅಲ್ಟ್ರಾ ನೈಟ್ ವಿಡಿಯೋ, ಲೈವ್ ಎಚ್‌ಡಿಆರ್, ನಿಯೋನ್ ಪೋರ್ಟ್ರೆಯೆಟ್ ಫೀಚರ್‌ಗಳನ್ನು ಕೃತಕ ಬುದ್ಧಿಮತ್ತೆ ಆಧರಿತ ಫೀಚರ್‌ಗಳಿಗೆ ಉದಾಹರಣೆಯಾಗಿ ನೀಡಬಹುದು. ಈ ಫೋನ್‌ನಲ್ಲಿ ನೀವು ಏಕಕಾಲಕ್ಕೆ ಫ್ರಂಟ್ ಮತ್ತು ಬ್ಯಾಂಕ್ ಸೈಡ್ ‌ಕ್ಯಾಮೆರಾಗಳಿಂದ ರೆಕಾರ್ಡಿಂಗ್ ಕೂಡ ಮಾಡಬಹುದು!

ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಕಂಡಿರುವ ಈ ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್ ಎಷ್ಟು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಫೋನ್ ಗ್ರಾಹಕರಿಗೆ ಐಸ್ ಬ್ಲೂ, ಸಿಲ್ವರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. ಈಗ ಜಾಗತಿಕ ಮಾರುಕಟ್ಟೆಗೆ  ಬಿಡುಗಡೆಯಾಗಿರುವ ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್, ಈ ಹಿಂದೆ ಬಿಡುಗೆಯಾಗಿದ್ದ ರೆನೋ 3ಎ ಸ್ಮಾರ್ಟ್‌ಪೋನ್‌ನ ಮುಂದುವರಿದ ಆವೃತ್ತಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ರೆನೋ 3ಎ ಸ್ಮಾರ್ಟ್‌ಫೋನ್ ಬೆಲೆ ಅಂದಾಜು 26,600 ರೂಪಾಯಿವರೆಗೆ ಇತ್ತು. ಪ್ರೀಮಿಯಂ ಫೀಚರ್‌ಗಳನ್ನು ಹೊಂದಿರುವ ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್ ತುಸು ತುಟ್ಟಿಯಾಗಿರಬಹುದು ಎಂದು ವಿಶ್ಲೇಷಿಸಬಹುದು.

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!

ಆಂಡ್ರಾಯ್ಡ್ 11 ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿರುವ ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್ 6.5 ಇಂಚ್ ಫುಲ್ ಎಚ್‌ಡಿ ಪ್ಲಸ್ ಎಲ್‌ಟಿಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ರೆನೋ 5ಎ ಸ್ಮಾರ್ಟ್‌ಫೋನ್‌ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 765ಜಿ ಎಸ್‌ಒಸಿ ಆಧರಿತವಾಗಿದ್ದು, 6 ಜಿಬಿ ರ್ಯಾಮ್ ಇರಲಿದೆ. 128 ಸ್ಟೋರೇಜ್ ಸಾಮರ್ಥ್ಯ ಇರಲಿದೆ.

Oppo launches Reno 5A Smartphone to Japan market

ಇನ್ನು ಕ್ಯಾಮೆರಾಗಳ ಬಗ್ಗೆ ಹೇಳುವುದಾದರೆ ಈ ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳ ಸೆಟ್‌ಅಪ್ ಇರಲಿದೆ. 64 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಆಗಿದ್ದರೆ, ಅಲ್ಟ್ರಾ ವೈಡ್ ಆಂಗಲ್‌ಗೆ 8 ಮೆಗ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಮೋನೋಕ್ರೋಮ್ ಸೆನ್ಸರ್ ಆಗಿ 2 ಮೆಗಾ ಪಿಕ್ಸೆಲ್ ಮತ್ತು ಮ್ಯಾಕ್ರೋ ಶೂಟರ್ ಆಗಿ 2 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಂಪನಿ ನೀಡಿದೆ. ಹಾಗಾಗಿ, ನೀವು ಕ್ವಾಲಟಿ ಚಿತ್ರಗಳನ್ನು ಈ ಫೋನ್ ಮೂಲಕ ಸೆರೆ ಹಿಡಿಯಬುಹದು .

ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್‌ನ ಫ್ರಂಟ್‌ನಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ. ಸೆಲ್ಫಿಗಳನ್ನು ಅದ್ಭುತವಾಗಿ ಸೆರೆ ಹಿಡಿಯಲು ಈ ಕ್ಯಾಮೆರಾ ಸಹಾಯ ಮಾಡಲಿದೆ. ಈ ಫೋನ್ ಮತ್ತು ಡಸ್ಟ್ ಮತ್ತು ವಾಟರ್ ಪ್ರೂಫ್ ಆಗಿದ್ದು, ಇದಕ್ಕಾಗಿ ಐಪಿ68 ಸರ್ಟಿಫಿಕೇಷನ್ ಬಳಸಲಾಗಿದೆ.

ಟ್ವಿಟರ್‌ನಿಂದ ಶೀಘ್ರವೇ ಪಾವತಿ ಸೇವೆ ‘ಟ್ವಿಟರ್ ಬ್ಲೂ’ ಆರಂಭ: ಚಂದಾದಾರಿಗೆ ವಿಶೇಷ ಫೀಚರ್ಸ್!

ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್ 4,000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.  ಈ ಫೋನ್‌ನಲ್ಲಿ 128 ಸ್ಟೋರೇಜ್ ಸಾಮರ್ಥ್ಯವಿದ್ದು, ಈ ನೀವು ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿಕೊಂಡು ಈ ಸಾಮರ್ಥ್ಯವನ್ನು ಒಂದು ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

Follow Us:
Download App:
  • android
  • ios