Asianet Suvarna News Asianet Suvarna News

ಟ್ವಿಟರ್‌ನಲ್ಲಿ ನಿಮ್ಮ ಖಾತೆ ದೃಢೀಕರಣವಾಗಬೇಕಾ? ಹೀಗೆ ಮಾಡಿ...

ಬಳಕೆದಾರರ ಖಾತೆಯನ್ನು ದೃಢೀಕರಣಗೊಳಿಸುವ ಪ್ರಕ್ರಿಯೆಯನ್ನು ಟ್ವಿಟರ್ ಹೊಸ ನಿಯಮಗಳೊಂದಿಗೆ ಮತ್ತೆ ಪ್ರಾರಂಭಿಸಲಿದೆ. ಟ್ವಿಟರ್ ಸೂಚಿಸಿದ ಮಾನದಂಡ ವ್ಯಾಪ್ತಿಯಲ್ಲಿ ನಿಮ್ಮ ಖಾತೆ  ಬರುತ್ತಿದ್ದರೆ ಮತ್ತು ಖಾತೆ ದೃಢೀಕರಣಗೊಂಡ ಬಳಿಕ ಟ್ವಿಟರ್‌ನಲ್ಲಿ ಬ್ಲೂ ಬ್ಯಾಡ್ಜ್ ಮಾರ್ಕ್ ಪಡೆದುಕೊಳ್ಳುತ್ತೀರಿ. ಶೀಘ್ರದಲ್ಲೇ ಈ ಬಗೆಗಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಟ್ವಿಟರ್ ಹೇಳಿಕೊಂಡಿದೆ.

Twitter starts its new verification application process and check details here
Author
Bengaluru, First Published May 22, 2021, 3:46 PM IST

ಖಾತೆಯನ್ನು ದೃಢೀಕರಿಸುವ ಬ್ಲೂ ಬ್ಯಾಡ್ಜ್ ಸೇವೆಯನ್ನು ಟ್ವಿಟರ್ ಹೊಸ ನಿಯಮಗಳೊಂದಿಗೆ ಮತ್ತೆ ಆರಂಭಿಸಿದೆ. ಈ ಬಗ್ಗೆ ಅಧಿಕೃತ ಘೋಷಣೆ ಮಾಡಿರುವ ಟ್ವಿಟರ್, ಖಾತೆಗೆ ಸಂಬಂಧಿಸಿದಂತೆ ಹೊಸ ದೃಢೀಕರಣ ಅಪ್ಲಿಕೇಷನ್ ಪ್ರಕ್ರಿಯೆ ಮತ್ತು ಸಾರ್ವಜನಿಕರ ಖಾತೆಗೆ  ಸಂಬಂಧಿಸಿದ ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಾಗಿ ಹೇಳಿಕೊಂಡಿದೆ.

ಟ್ವಿಟರ್‌ನಿಂದ ಶೀಘ್ರವೇ ಪಾವತಿ ಸೇವೆ ‘ಟ್ವಿಟರ್ ಬ್ಲೂ’ ಆರಂಭ: ಚಂದಾದಾರಿಗೆ ವಿಶೇಷ ಫೀಚರ್ಸ್!

ಟ್ವಿಟರ್‌ನಲ್ಲಿ ಪ್ರೊಫೈಲ್ ದೃಢೀಕರಣ ಹೊಸದೇನಲ್ಲ. ಈ ವ್ಯವಸ್ಥೆಯ ಟ್ವಿಟರ್‌ನಲ್ಲಿ ಈ ಮೊದಲು ಇತ್ತು. ಆದರೆ, ಕೆಲವು ಕಾರಣಗಳಿಂದಾಗಿ ಈ ಮೊದಲ ದೃಢೀಕರಣಾ ಪದ್ಧತಿಯನ್ನು ಟ್ವಿಟರ್ 2017ರಲ್ಲೇ ಕೈ ಬಿಟ್ಟಿತ್ತು. ದೃಢೀಕರಣಗೊಂಡ  ಖಾತೆಗಳಿಗೆ ಟ್ವಿಟರ್ ಬ್ಲೂ ಮಾರ್ಕ್ ಅಳವಡಿಸುತ್ತಿತ್ತು. ಇದರಿಂದಾಗಿ ಇತರ ಖಾತೆಗಳಿಗಿಂತ ದೃಢೀಕರಣಗೊಂಡ ಖಾತೆಗಳನ್ನು ಗುರುತಿಸಲು ಸಹಕಾರಿಯಾಗುತ್ತಿತ್ತು. ಮುಂಬರುವ ದಿನಗಳಲ್ಲಿ ಈ ಹೊಸ ದೃಢೀಕರಣ ಅನ್ವಯಿಕ ಪ್ರಕ್ರಿಯೆ ಬಳಕೆದಾರರಿಗೆ ಟ್ವಿಟರ್‌ನಲ್ಲಿ ಸಿಗಲಿದೆ.

ಯಾರು ದೃಢೀಕರಣ ಮಾಡಿಕೊಳ್ಳಬಹುದು?
ಟ್ವಿಟರ್‌ನಲ್ಲಿ ನಿಮ್ಮ ಖಾತೆಯನ್ನು ವೆರಿಫಿಕೇಷನ್ ಮಾಡಿಕೊಳ್ಳಬೇಕಿದ್ದರೆ, ಟ್ವಿಟರ್ ಸೂಚಿಸಿರುವ ಮಾರ್ಗದರ್ಶಿ ಅಥವಾ ಮಾನದಂಡಗಳ ವ್ಯಾಪ್ತಿಗೆ ಒಳಪಡಬೇಕು. ಕಂಪನಿ ಸಾಮಾನ್ಯರ ಖಾತೆ ದೃಢೀಕರಣಕ್ಕೆ ಒಟ್ಟು ಆರು ವಿಭಾಗಗಳನ್ನು ಮಾಡಿದೆ. ಅವು; ಸರ್ಕಾರಿ ನೌಕರರು, ಖಾಸಗಿ ನೌಕರರು, ಬ್ರಾಂಡ್ಸ್, ಸಂಘಟನೆಗಳು, ಸುದ್ದಿ ಸಂಸ್ಥೆಗಳು, ಪತ್ರಕರ್ತರು, ಮನರಂಜನೆ ಉದ್ಯಮ, ಕ್ರೀಡೆ ಮತ್ತು ಗೇಮಿಂಗ್, ಆಕ್ಟಿವಿಸ್ಟ್, ಸಂಘಟಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳು. ಹೀಗೆ ಈ ಕೆಟಗರಿಯ ವ್ಯಕ್ತಿಯು ನೀವಾಗಿದ್ದರೆ, ಟ್ವಿಟರ್ ನಿಮ್ಮ ಖಾತೆಗೆ ದೃಢೀಕರಿಸಿ ಅದಕ್ಕೆ ಬ್ಲೂ ಬ್ಯಾಡ್ಜ್ ನೀಡುತ್ತದೆ.

ನಿಮ್ಮ ಖಾತೆಯಲ್ಲಿ ನಿಮ್ಮ ಪೂರ್ಣ ಹೆಸರು ಇರಬೇಕು. ಪ್ರೊಫೈಲ್ ಇಮೇಜ್ ಇರಬೇಕು ಇಲ್ಲವೇ ದೃಢೀಕರಣಗೊಂಡ ಇ ಮೇಲ್ ಅಥವಾ ಫೋನ್ ನಂಬರ್ ಇರಬೇಕು. ಆಗ ಮಾತ್ರ ಟ್ವಿಟರ್ ನಿಮ್ಮ ಖಾತೆಯನ್ನು ದೃಢೀಕರಣಕ್ಕೆ ಪರಿಗಣಿಸುತ್ತದೆ. ಇಲ್ಲದಿದ್ದರೆ ಇಲ್ಲ. ಇದರ ಜೊತೆಗೆ ನಿಮ್ಮ ಖಾತೆ ಕಳೆದ ಆರು  ತಿಂಗಳಿಂದ ಸಕ್ರಿಯವಾಗಿರಬೇಕು. ಟ್ವಿಟರ್‌ನ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುತ್ತ ಬಂದಿರಬೇಕು.

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!

ಮುಂದಿನ ಕೆಲವು ವಾರಗಳಲ್ಲಿ ಟ್ವಿಟರ್‌ನಲ್ಲಿರುವ ಪ್ರತಿಯೊಬ್ಬರೂ ಹೊಸ ಪರಿಶೀಲನಾ ಅನ್ವಯಿಕವನ್ನು ನೇರವಾಗಿ ಟ್ವಿಟರ್ ಖಾತೆ ಸೆಟ್ಟಿಂಗ್‍ಗಳ ಟ್ಯಾಬ್‍ನಲ್ಲಿ ನೋಡಲು ಪ್ರಾರಂಭಿಸಬಹುದು. ಭಾರತದಲ್ಲಿ, ಈ ಅನ್ವಯಿಕ ಕನ್ನಡವೂ ಸೇರಿದಂತೆ, ಹಿಂದಿ, ಬಂಗಾಳಿ, ಮರಾಠಿ, ಗುಜರಾತಿ, ತಮಿಳು ಭಾಷೆಗಳಲ್ಲಿ ಲಭ್ಯವಿರಲಿದೆ. ಹಾಗಾಗಿ, ಕನ್ನಡವನ್ನು ಮಾತ್ರವೇ ಬಲ್ಲವರಿಗೂ ತಮ್ಮ ಖಾತೆ ದೃಢೀಕರಣಪಡಿಸಿಕೊಳ್ಳಲು ಇದರಿಂದ ಸರಳವಾಗಲಿದೆ.

Twitter starts its new verification application process and check details here

ಮುಂದಿನ ಕೆಲವು ವಾರಗಳಲ್ಲಿ ಟ್ವಿಟರ್ ಈ ವೆರಿಫಿಕೇಷನ್ ಪ್ರಕ್ರಿಯೆ ಆರಂಭಿಸಲಿದೆ. ಟ್ವಿಟರ್‌ನ ನಿಮ್ಮ ಖಾತೆಯ ಅಕೌಂಟ್ ಸೆಟ್ಟಿಂಗ್ಸ್‌ನಲ್ಲಿ ಈ ಬಗೆಗಿನ ಮಾಹಿತಿಯನ್ನು ನೀವು ಕಾಣಲಿದ್ದಿರಿ. ಇದು ಎಲ್ಲರಿಗೂ ಲಭ್ಯವಾಗಲಿದೆ ಮತ್ತು ಟ್ವಿಟರ್ ಸೂಚಿಸಿರುವ ಗೈಡ್‌ಲೈನ್ಸ್ ವ್ಯಾಪ್ತಿಯಲ್ಲಿ ನಿಮ್ಮ ಅಕೌಂಟ್ ಇದ್ದರೆ ನೀವು ಬ್ಲೂ ಬ್ಯಾಡ್ಜ್ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಟ್ವಿಟರ್ ಹೇಳಿಕೊಂಡಿದೆ.

ಒಮ್ಮೆನಿಮಗೆ ವೆರಿಫಿಕೇಷನ್ ಅಪ್ಲಿಕೇಷನ್ ಆಯ್ಕೆ ಸಿಕ್ಕರೆ, ಟ್ವಿಟರ್ ಸೂಚಿಸಿರುವ ಆರು ಕೆಟಗರಿಯಲ್ಲಿ ನೀವು ಬರಲಿದ್ದೀರಾ ಎಂಬುದನ್ನು ತಿಳಿಸಬೇಕಾಗುತ್ತದೆ.  ಸರ್ಕಾರ ನೀಡಿರುವ ಐಡಿ ಒದಗಿಸುವುದು, ನಿಮ್ಮ ಆಫೀಸ್ ಇ ಮೇಲ್ ಐಡಿ, ವಿಳಾಸ ಅಥವಾ ಆಫೀಸ್ ವೆಬ್‌ಸೈಟ್ ಲಿಂಕ್‌ಗಳನ್ನು ಒದಗಿಸಬೇಕಾಗುತ್ತದೆ. ಇದು ನಿಮ್ಮ ಖಾತೆಗೆ ನೇರವಾಗಿ ರೆಫರೆನ್ಸ್ ಎಂದು ಟ್ವಿಟರ್ ಭಾವಿಸುತ್ತದೆ. ಈ ರೀತಿಯ ಎಲ್ಲ ಮಾಹಿತಿಯನ್ನು ಒದಗಿಸುವ ಮೂಲಕ ನಿಮ್ಮ ಗುರುತನ್ನು ಟ್ವಿಟರ್ ಖಚಿತಪಡಿಸಿಕೊಳ್ಳುತ್ತದೆ.

5ಜಿ ಸೇವೆ ದೊರೆತರೆ ಎಷ್ಟು ಕೋಟಿ ಜನರು ಇಂಟರ್ನೆಟ್ ಸಂಪರ್ಕ ಪಡೆಯಬಹುದು?

ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ ಟ್ವಿಟರ್‌ ನಿಮಗೆ ಇ ಮೇಲ್ ಪ್ರತಿಕ್ರಿಯೆಯನ್ನು ಕಳುಹಿಸುತ್ತದೆ. ಸರದಿಯಲ್ಲಿ ಎಷ್ಟು ತೆರೆದ ಅಪ್ಲಿಕೇಶನ್‌ಗಳು ಇವೆ ಎಂಬುದರ ಆಧಾರದ ಮೇಲೆ ಇದು ಕೆಲವು ದಿನಗಳಿಂದ ಕೆಲವು ವಾರಗಳವರೆಗೆ ತೆಗೆದುಕೊಳ್ಳುತ್ತದೆ. ಆದಾಗ್ಯೂ, ನೀಲಿ ಬ್ಯಾಡ್ಜ್ ಪಡೆಯಲು ಜನರಲ್ಲಿ ಸಾಕಷ್ಟು ನಿರೀಕ್ಷೆ ಇರುವುದರಿಂದ ನೀವು ಎರಡನೆಯ ಆಯ್ಕೆಯನ್ನುನಿರೀಕ್ಷಿಸಬಹುದು.

Follow Us:
Download App:
  • android
  • ios