Asianet Suvarna News Asianet Suvarna News

ಒನ್‌ಪ್ಲಸ್ ಇಟ್ ಈಕ್ವಲ್ ಟು 8 ಲೆಕ್ಕಾಚಾರ ಶುರು!

ಒನ್‌ಪ್ಲಸ್ 8 ಹಾಗೂ 8ಪ್ರೋ ಈಗ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಆದರೆ, ಇನ್ನೂ ಮಾರುಕಟ್ಟೆ ಪ್ರವೇಶ ಮಾಡಿಲ್ಲ. ಸದಾ ಒಂದಿಲ್ಲೊಂದು ಹೊಸತನ ಕಾಯ್ದುಕೊಳ್ಳುತ್ತಾ ಬರುತ್ತಿರುವ ಒನ್‌ಪ್ಲಸ್ ಮೊಬೈಲ್ ಕಂಪನಿ ಈ ಆವೃತ್ತಿಗಳಲ್ಲಿ ಯಾವ ರೀತಿ ಪ್ಲಸ್ ಅನ್ನು ಪಡೆಯಲಿದೆ ಎಂಬುದು ಸದ್ಯದ ಕುತೂಹಲ. ಇಲ್ಲಿ ಅತ್ಯದ್ಭುತ ಅನ್ನಿಸುವಷ್ಟು ಹೊಸ ಫೀಚರ್‌ಗಳಂತೂ ಇವೆ. ಆದರೆ, ಬಳಸಿದ ಮೇಲಷ್ಟೇ ಪರಿಣಾಮಗಳು ಗೊತ್ತಾಗಬೇಕಿದೆ. ಏನೇ ಇರಲಿ ಭಾರತದಲ್ಲಿ ಇದಕ್ಕೆ ದರವೆಷ್ಟು ಎಂಬುದನ್ನು ಕಂಪನಿ ಬಿಟ್ಟುಕೊಟ್ಟಿಲ್ಲ. ಸದ್ಯ ಅಮೆರಿಕ ಮಾರುಕಟ್ಟೆಯಲ್ಲಿರುವ ಇದೇ ಫೀಚರ್‌ನ ಮೊಬೈಲ್‌ಗಂತೂ ದುಬಾರಿ ದರವೇ ಇದೆ. ಹೀಗಾಗಿ ಹೊಸ ಫೋನ್‌ನ ಫೀಚರ್ ಏನು..? ಎತ್ತ..? ಎಂಬುದನ್ನು ನೋಡೋಣ. 
Oneplus 8 pro Oneplus 8 rate not announced
Author
Bangalore, First Published Apr 16, 2020, 2:42 PM IST
ಭಾರಿ ನಿರೀಕ್ಷೆ ಹುಟ್ಟಿಸಿದ್ದ ಒನ್‌ಪ್ಲಸ್ 8 ಹಾಗೂ 8ಪ್ರೋ ಬುಧವಾರ ಬಿಡುಗಡೆಯಾಗಿದ್ದು, ತನ್ನ ಅತ್ಯಾಧುನಿಕ ಫೀಚರ್‌ಗಳಿಂದ ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸುತ್ತಿದೆ. ಅಲ್ಲದೆ, 5ಜಿ ತಂತ್ಜಜ್ಞಾನದ ಲೇಟೆಸ್ಟ್ ವರ್ಷನ್ ಇದಾಗಿದೆ.

120 ಎಚ್ ಝಡ್ ಡಿಸ್ ಪ್ಲೇ ಹೊಂದಿದ್ದು, 5ಜಿ ತಂತ್ಜಜ್ಞಾನದ ಅನಿಯಮಿತ ವೇಗ ಪಡೆಯಬಹುದು ಹಾಗೂ 5ಜಿ ಯುಗಕ್ಕೆ ಪರಿಪೂರ್ಣವಾಗಿ ಸಮರ್ಪಿತವಾದ ಮೊದಲ ಸ್ಮಾರ್ಟ್‌ ಫೋ‌‌ನ್‌ಡಿವೈಸ್ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: ಡಾರ್ಕ್‌ವೆಬ್‌ನಲ್ಲಿ ಸೇಲಾಯ್ತು ಜೂಮ್ ಪ್ರೈವೇಸಿ!

ಭಾರತದಲ್ಲಿ ದರ ಎಷ್ಟಿದೆ?
ಇನ್ನು ಇದರ ದರ ಹಾಗೂ ಕಾನ್ಫಿಗರೇಶನ್ಗಳ ಬಗ್ಗೆ ಗಮನಹರಿಸೋಣ. ಭಾರತದಲ್ಲಿ ಇನ್ನೂ ಮಾರುಕಟ್ಟೆಗೆ ಪ್ರವೇಶಿಸದ ಕಾರಣ ದರ ನಿಗದಿ ಬಗ್ಗೆ ಘೋಷಿಸಿಲ್ಲ. ಆದರೆ, ಅಮೆರಿಕದಲ್ಲಿ 8 ಪ್ರೋ ವಿನ 8 ಜಿಬಿ ರಾಮ್, 128 ಜಿಬಿ ಸಂಗ್ರಹಣಾ ಸಾಮರ್ಥ್ಯ ಇರುವ ಫೋನ್‌ಗೆ 899 ಅಮೆರಿಕನ್ ಡಾಲರ್ (ಭಾರತದಲ್ಲಿ ಇದರ ದರ ಸುಮಾರು 68,500 ರೂ.) ಇದೆ. ಅದೇ 12 ಜಿಬಿ ರಾಮ್ ಹಾಗೂ 256ಜಿಬಿ ಸ್ಟೋರೇಜ್ ಇರುವ ಫೋನ್ ಆದರೆ 999 ಡಾಲರ್ (ಅಂದಾಜು 76,100 ರೂ.) ಇದೆ. 

ಅದೇ ಒನ್‌ಪ್ಲಸ್ 8 ಪೋನಿಗಾದರೆ 699 ಡಾಲರ್‌ಗೆ (53,200 ರೂ.) ಪ್ರಾರಂಭಿಕ ದರ ನಿಗದಿಪಡಿಸಿದ್ದು, ಇದು 8 ಜಿಬಿ ರಾಮ್ ಹಾಗೂ 128 ಜಿಬಿ ಸಂಗ್ರಹಣಾ ಸಾಮಥ್ರ್ಯವನ್ನು ಹೊಂದಿದೆ. ಇನ್ನೊಂದು ಹೆಚ್ಚುವರಿ ಕಾನ್ಫಿಗರೇಷನ್ ಆದ 12 ಜಿಬಿ ರಾಮ್ ಹಾಗೂ 256 ಜಿಬಿ ಸಂಗ್ರಹಣಾ ಸಾಮಥ್ರ್ಯದ ಫೋನ್ ಗೆ 799 ಡಾಲರ್ ಅಂದರೆ 60,800 ರೂಪಾಯಿ ಇದೆ. ಅಂದರೆ ಇವುಗಳ ಬೆಲೆ ದುಬಾರಿ, ಆದರೆ, ಒಂದು ಮಿನಿ ಕಂಪ್ಯೂಟರ್ ಅನ್ನೇ ನಿಮ್ಮ ಜೇಬಿನೊಳಗೆ ಇಟ್ಟುಕೊಂಡಂತೆ ಫೀಚರ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ: ಕೈಜೋಡಿಸಿದ ಟೆಕ್‌ ದಿಗ್ಗಜರು; ಕೊರೋನಾ ಟ್ರೇಸ್‌ಗೆ ಆ್ಯಪಲ್, ಗೂಗಲ್ ಗೂಗ್ಲಿ!

8 ಪ್ರೋ ಸ್ಪೆಸಿಫಿಕೇಶನ್/ಫೀಚರ್
ಡ್ಯುಯಲ್ ಸಿಮ್ (ನ್ಯಾನೋ) ಇದ್ದು, ಆಂಡ್ರಾಯ್ಡ್ 10 ರ ಆಕ್ಸಿಜನ್ ಒಎಸ್ ವರ್ಷನ್ ಹೊಂದಿದೆ. ಈ ಫೋನ್ 6.78 ಇಂಚಿನದ್ದಾಗಿದ್ದು, ಕ್ಯುಎಚ್ ಡಿ+ ಫ್ಲ್ಯೂಯಿಡ್ಕಿ (QHD+ Fluid Display) ಜೊತೆಗೆ 120 ಎಚ್‌ಝಡ್ ರಿಫ್ರೆಶ್‌ರೇಟ್ ಅನ್ನು ಹೊಂದಿದೆ. ಜೊತೆಗೆ ಫ್ಲೂಯ್ಡ್ ಅಮೋಲ್ಡ್ ಡಿಸ್‌ಪ್ಲೇ, ಕ್ವಾಲ್ಕಂ ಸ್ನ್ಯಾಪ್ ಡ್ರಾಗನ್ 865 ಫೀಚರ್ ಅನ್ನೊಳಗೊಂಡಿದೆ.
ಅಲ್ಲದೆ, ಡಿಸ್‌ಪ್ಲೇಗೆ ಡಿಸ್‌ಪ್ಲೇಮೇಟ್‌ನಿಂದ ಎ ಪ್ಲಸ್ ರೇಟಿಂಗ್ ದೊರಕಿದೆ. ಅಲ್ಲದೆ, 280ಕ್ಕೂ ಹೆಚ್ಚು ವಿಧದಲ್ಲಿ ಡಿಸ್‌ಪ್ಲೇ ಅನ್ನು ಉನ್ನತೀಕರಿಸಿದ್ದಾಗಿ ಕಂಪನಿ ಹೇಳಿಕೊಂಡಿದೆ. ಇಲ್ಲಿ ಇನ್ನೊಂದು ಪ್ರಮುಖ ವಿಷಯವೆಂದರೆ ಆಧುನಿಕ ತಂತ್ರಜ್ಞಾನವಾದ ಮೋಶನ್ ಎಸ್ಟಿಮೇಶನ್, ಮೋಶನ್ ಕಂಪೆನ್ಸೇಶನ್ (ಎಂಇಎಂಸಿ) ಅಲ್ಗೊರಿಥಮ್ಸ್ ಇರುವುದರಿಂದ ವಿಡಿಯೋಗಳ ವೀಕ್ಷಣೆ ಗುಣಮಟ್ಟ ಉತ್ಕೃಷ್ಟಮಟ್ಟದಲ್ಲಿರುವುದಲ್ಲದೆ, ಮೋಶನ್ ಬ್ಲರ್ ಅನ್ನು ಕಡಿಮೆ ಮಾಡಿ, ವಿಶುವಲ್ ಕ್ಲಾರಿಟಿ ಕೊಡಲಿದೆ ಎಂಬುದು ಕಂಪನಿಯ ಅಂಬೋಣ. 

3ಡಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಇದ್ದು, ಆಕ್ಟಾ-ಕೋರ್ ಕ್ವಾಲ್ಕೊಮ್ ಸ್ನ್ಯಾಪ್ ಡ್ರಾಗನ್ 865 ಎಸ್‌ಒಸಿ ಅನ್ನು 12ಜಿಬಿ LPDDR5 RAM ರಾಮ್ ಸೌಲಭ್ಯವನ್ನು ಹೊಂದಿದೆ. ಜೊತೆಗೆ ಸೋನಿ ಐಎಂಎಕ್ಸ್689 ಸೆನ್ಸಾರ್ ಹೊಂದಿರುವ 48 ಮೆಗಾಪಿಕ್ಸಲ್ ಪ್ರೈಮರಿ ಇದ್ದು, ಇದಕ್ಕೆ ಎಫ್/1.78 ಲೆನ್ಸ್ ಅನ್ನು ಅಳವಡಿಸಲಾಗಿದೆ. ಜೊತೆಗೆ 8 ಮೆಗಾಪಿಕ್ಸ್ ಟೆಲಿಫೋಟೋ ಶೂಟರ್, 48 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಆ್ಯಂಗಲ್ ಶೂಟರ್ ಮತ್ತು 5 ಮೆಗಾ ಪಿಕ್ಸಲ್ ಅನ್ನು ಕಲರ್ ಫಿಲ್ಟರ್ ಕ್ಯಾಮೆರಾ ಸೆನ್ಸಾರ್‌ಗೋಸ್ಕರ ಮೀಸಲಿಡಲಾಗಿದೆ. ಇನ್ನು 4,510 ಎಂಎಎಚ್ ಬ್ಯಾಟರಿ ಹೊಂದಿದ್ದು, ವಾಪಸ್ ಚಾರ್ಜರ್ 30ಟಿ ವೈರ್ ಲೆಸ್ ಟೆಕ್ನಾಲಜಿಯನ್ನು ಹೊಂದಿದೆ. 

ಇದನ್ನೂ ಓದಿ: ಸುಳ್ಳು ಸಾಂಕ್ರಾಮಿಕಕ್ಕೆ ವ್ಯಾಟ್ಸ್‌ಆ್ಯಪ್ ಗುನ್ನ, ಒಬ್ಬರಿಗೆ ಒಂದೇ ಫಾರ್ವರ್ಡ್!

ಒನ್ ಪ್ಲಸ್ 8 ಫೀಚರ್
ಇದು 8 ಪ್ರೋವಿನ ಪ್ರಮುಖ ಫೀಚರ್‌ಗಳನ್ನು ಒಳಗೊಂಡಿದೆ. ಆದರೆ, 6.55 ಇಂಚಿನ ಡಿಸ್ ಪ್ಲೇ (ಎಚ್ ಡಿ ಪ್ಲಸ್- 1080*2400 ಪಿಕ್ಸಲ್), ಫ್ಲೂಯ್ಡ್ ಅಮೋಲ್ಡ್ ಪ್ಯಾನಲ್ ಇದ್ದು, 90 ಎಚ್ ಝೆಡ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ತ್ರಿಬಲ್ ರೇರ್ ಕ್ಯಾಮೆರಾ ಸೆಟಪ್ ಇದ್ದು, 48 ಮೆಗಾ ಪಿಕ್ಸಲ್ ಸೋನಿ ಐಎಂಎಕ್ಸ್586 ಪ್ರೈಮರಿ ಸೆನ್ಸಾರ್ ಇದೆ. ಇದಕ್ಕೆ ಎಫ್/1.75 ಲೆನ್ಸ್ ಅನ್ನು ಅಳವಡಿಸಲಾಗಿದೆ. 2 ಮೆಗಾಪಿಕ್ಸಲ್ ಸೆಕೆಂಡರಿ ಸೆನ್ಸಾರ್ ಇದ್ದು, ಇದಕ್ಕೆ ಎಫ್/2.4 ಮ್ಯಾಕ್ರೋ ಲೆನ್ಸ್ ಸಾಥ್ ಕೊಟ್ಟಿದೆ. ಇನ್ನು 16 ಮೆಗಾಪಿಕ್ಸಲ್ ಟೆರಿಟರಿ ಸೆನ್ಸಾರ್ ಇದ್ದು, ಎಫ್/2.2 ಲೆನ್ಸ್ ಅನ್ನು ಅಳವಡಿಸಲಾಗಿದೆ. ಸೆಲ್ಫೀಗೋಸ್ಕರ್ 16 ಮೆಗಾಪಿಕ್ಸಲ್ ಸೋನಿ ಐಎಂಎಕ್ಸ್471 ಸೆನ್ಸಾರ್ ಹಾಗೂ ಎಫ್/2.45 ಲೆನ್ಸ್ ಸೌಲಭ್ಯವನ್ನು ನೀಡಲಾಗಿದೆ.

"
Follow Us:
Download App:
  • android
  • ios