OnePlus 10 Pro: Hasselblad ಕ್ಯಾಮೆರಾದೊಂದಿಗೆ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಜ. 11 ರಂದು ಬಿಡುಗಡೆ!
OnePlus 9RT ಭಾರತದಲ್ಲಿ ಜನವರಿ 14 ರಂದು ಬಿಡುಗಡೆಯಾಗಲಿದೆ. ಅದಕ್ಕಿಂತ ಮೂರು ದಿನಗಳ ಮೊದಲು ಅಂದರೆ ಜನವರಿ 11 ರಂದು OnePlus 10 Pro ಚೀನಾದಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಕಂಪನಿಯ ಸಿಇಒ ಟೀಸರ್ ಕೂಡ ಬಿಡುಗಡೆ ಮಾಡಿದ್ದಾರೆ.
Tech Desk: OnePlus 10 Pro ನ ಅಧಿಕೃತ ವಿನ್ಯಾಸದ (Design) ಟೀಸರ್ ಹೊರಬಂದಿದೆ. ಇದರಲ್ಲಿ ಕಂಪನಿಯು ತನ್ನ ಮುಂಬರುವ ಪ್ರೊ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ನ ವಿನ್ಯಾಸವನ್ನು ಪ್ರದರ್ಶಿಸಿದೆ. ವದಂತಿಗಳ ಪ್ರಕಾರ, OnePlus 10 Pro ಬಿಡುಗಡೆ ಕಾರ್ಯಕ್ರಮವು ಜನವರಿ 11 ರಂದು ಚೀನಾದಲ್ಲಿ ನಡೆಯಲಿದೆ. ಅದರ ನಂತರ ಇದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಮೊದಲು ಈ ಫೋನ್ ಅನ್ನು ಜನವರಿ 4 ರಂದು ಬಿಡುಗಡೆ ಮಾಡಲಾಗುವುದು ವರದಿಗಳು ತಿಳಿಸಿದ್ದವು.
OnePlus ಸಹ-ಸಂಸ್ಥಾಪಕ Pete Lau ಅವರು OnePlus 10 Pro ನ ವಿನ್ಯಾಸ ಮತ್ತು ಹೊಸ OnePlus x Hasselblad ಕ್ಯಾಮೆರಾ ಮಾಡ್ಯೂಲ್ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಹಿಂದಿನ ಸೋರಿಕೆಗಳು ಮತ್ತು ರೆಂಡರ್‌ಗಳಲ್ಲಿ ತಿಳಿದು ಬಂದಂತೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಫೋನ್ ಹೊಂದಿದೆ ಎಂದು ಚಿತ್ರವು ಖಚಿತಪಡಿಸುತ್ತದೆ. ಕಂಪನಿಯು "ಒನ್‌ಪ್ಲಸ್ 10 ಫ್ಲ್ಯಾಗ್‌ಶಿಪ್ ಫೋನ್ ರಚಿಸಲು ಬಹಳಷ್ಟು ಅಪ್ಡೇಟ್‌ಗಳ ಮೇಲೆ ಕೆಲಸ ಮಾಡಿದ್ದೇವೆ" ಎಂದು ಲಾವ್ ಹೇಳಿದ್ದಾರೆ.
oneplus 10 ಪ್ರೊ ವಿನ್ಯಾಸ
ಸಾಧನವು Volcanic Black ಮತ್ತು Emerald Forest ಎರಡು ಬಣ್ಣಗಳಲ್ಲಿ ಬರುತ್ತದೆ ಎಂದು ಇದು ಖಚಿತಪಡಿಸುತ್ತದೆ. OnePlus 10 Pro ಟ್ರಿಪಲ್-ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದ್ದು, ಕ್ಯಾಮೆರಾ ಮಾಡ್ಯೂಲ್ ಸೆರಾಮಿಕ್ ಫಿನಿಶ್ ಹೊಂದಿದೆ ಎಂದು OnePlus ದೃಢಪಡಿಸಿದೆ. ಹಿಂಬದಿಯ ಪ್ಯಾನೆಲ್ ಫ್ರಾಸ್ಟೆಡ್ ಗಾಜಿನಿಂದ ಮಾಡಲ್ಪಟ್ಟಿದೆ.
ಇದನ್ನೂ ಓದಿ: OnePlus 9RT, OnePlus Buds Z2 ಇಯರ್ ಫೋನ್ ಜ. 14ರಂದು ಭಾರತದಲ್ಲಿ ಬಿಡುಗಡೆ!
ಚಿತ್ರದಲ್ಲಿ, ನಾವು ನಾಲ್ಕು ಕಟೌಟ್‌ಗಳೊಂದಿಗೆ ಸ್ವ್ಕೇರ್ ಕ್ಯಾಮೆರಾ ಮಾಡ್ಯೂಲ್ ಅನ್ನು ನೋಡಬಹುದು. ಮೂರು ಕ್ಯಾಮೆರಾಗಳಿಗಾಗಿ ಮತ್ತು ಒಂದು ಎಲ್ಇಡಿ ಫ್ಲ್ಯಾಷ್‌ಗಾಗಿ. ಇದು ನಿರೀಕ್ಷೆಯಂತೆ Hasselblad ಬ್ರ್ಯಾಂಡಿಂಗ್ ಅನ್ನು ಹೊಂದಿದೆ ಮತ್ತು ಈ ಸಂಪೂರ್ಣ ಮಾಡ್ಯೂಲ್ OnePlus 10 Pro ನ ಬಲ ಭಾಗದಲ್ಲಿ ಫಿಕ್ಸ್ ಮಾಡಲಾಗಿದೆ. ಹಿಂಭಾಗದಲ್ಲಿ OnePlus ಬ್ರ್ಯಾಂಡಿಂಗ್ ಇದೆ ಮತ್ತು ಬಲ ಭಾಗದಲ್ಲಿ ಅಲರ್ಟ್ ಸ್ಲೈಡರ್ ಜೊತೆಗೆ ಪವರ್ ಬಟನ್ಅನ್ನು ಸಹ ಹೊಂದಿದೆ.
ಚೀನಾದಲ್ಲಿ ಮುಂಗಡ-ಆರ್ಡರ್‌ಗಳಿಗೆ ಲಭ್ಯ
OnePlus 10 Pro ಈಗ ಚೀನಾದಲ್ಲಿ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದೆ. Oppo store, JD.com ಮತ್ತು Tmall ಸೇರಿದಂತೆ ವಿವಿಧ ರಿಟೇಲ್ ವೆಬ್‌ಸೈಟ್‌ಗಳಲ್ಲಿ ಇದನ್ನು ಪಟ್ಟಿ ಮಾಡಲಾಗಿದೆ. ಮುಂಗಡ ನೋಂದಣಿಗಳಿಗಾಗಿ ಇದು OnePlus ಸ್ಟೋರ್‌ನಲ್ಲಿ ಸಹ ಪಟ್ಟಿಮಾಡಲಾಗಿದೆ. ಫೋನ್ 8GB + 128GB, 8GB + 256GB, ಮತ್ತು 12GB + 256GB ಮೂರು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ ಎಂದು ಪಟ್ಟಿ ಮಾಡಲಾಗಿದೆ.
OnePlus 10 Pro specifications (ನಿರೀಕ್ಷಿತ)
OnePlus 10 Pro Android 12-ಆಧಾರಿತ OxygenOS 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ. ಇದು 6.7-ಇಂಚಿನ QHD+ ಡಿಸ್ಪ್ಲೇಯನ್ನು ಹೊಂದಿರಬಹುದು. ಫೋನ್ LTPO 2.0 ತಂತ್ರಜ್ಞಾನವನ್ನು ಬಳಸುವುದನ್ನು ದೃಢೀಕರಿಸಿದೆ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು Qualcomm Snapdragon 8 Gen 1 SoC ನಿಂದ ಚಾಲಿತವಾಗಿದೆ ಎಂದು ವದಂತಿಗಳಿವೆ. ಇದು 12GB ವರೆಗೆ LPDDR5 RAM ಮತ್ತು 256GB ವರೆಗಿನ UFS 3.1 ಸಂಗ್ರಹಣೆಯೊಂದಿಗೆ ಬರಬಹುದು.
ಇದನ್ನೂ ಓದಿ: OnePlus Smart TV: ಭಾರತದಲ್ಲಿ ಒನ್‌ಪ್ಲಸ್‌ನಿಂದ 32, 43 ಇಂಚ್ ಸ್ಮಾರ್ಟ್‌ಟಿವಿ ಲಾಂಚ್ ಸಾಧ್ಯತೆ!
ಇದು 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ, OnePlus 10 Pro 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆಯಲಿದೆ. OnePlus 10 Pro ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68-ಪ್ರಮಾಣೀಕೃತವಾಗಿದ್ದು 5,000mAh ಬ್ಯಾಟರಿಯನ್ನು ಸಹ ಹೊಂದಿದೆ.