Asianet Suvarna News Asianet Suvarna News

OnePlus 9RT, OnePlus Buds Z2 ಇಯರ್‌ ಫೋನ್ ಜ. 14ರಂದು ಭಾರತದಲ್ಲಿ ಬಿಡುಗಡೆ!

OnePlus ಟ್ವೀಟ್‌ಗಳ ಮೂಲಕ OnePlus 9RT ಮತ್ತು OnePlus Buds Z2 TWS ಇಯರ್‌ಫೋನ್ ಬಿಡುಗಡೆಯನ್ನು ಬಹಿರಂಗಗೊಳಿಸಿದೆ. 
 

OnePlus 9RT OnePlus Buds Z2 TWS Earphones India Launch features Specifications mnj
Author
Bengaluru, First Published Jan 3, 2022, 8:09 PM IST

Tech Desk: OnePlus 9RT ಮತ್ತು OnePlus Buds Z2 true wireless stereo (TWS) ಇಯರ್‌ಫೋನ್‌ಗಳ  ಜನವರಿ 14 ಕ್ಕೆ ಭಾರತದ ಬಿಡುಗಡೆಯಾಗಲಿವೆ . OnePlus ಈ ಎರಡು ಸಾಧನಗಳ ಆಗಮನವನ್ನು ಎರಡು ಪ್ರತ್ಯೇಕ ಟ್ವೀಟ್‌ಗಳ ಮೂಲಕ ಬಹಿರಂಗಗೊಳಿಸಿದ ಬಳಿಕ  ಕೆಲವು ಗಂಟೆಗಳ ನಂತರ ಸುದ್ದಿ ಬಂದಿದೆ. OnePlus 9RT ಮತ್ತು OnePlus Buds Z2 ಅನ್ನು ಈಗಾಗಲೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ.  ಸ್ಮಾರ್ಟ್ಫೋನ್ ColorOS ಮೇಲೆ ರನ್ ಮಾಡುತ್ತದೆ ಮತ್ತು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. OnePus Buds Z2 38 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ ಮತ್ತು Active Noise Cancellation (ANC) ಯೊಂದಿಗೆ ಬರುತ್ತದೆ.

OnePlus 9RT ಮತ್ತು OnePlus Buds Z2 ಬಿಡುಗಡೆ ಲೈವ್‌ಸ್ಟ್ರೀಮ್ 

OnePlus 9RT ಮತ್ತು OnePlus Buds Z2 ಅನ್ನು ಜನವರಿ 14 ರಂದು ಸಂಜೆ 5 ಗಂಟೆಗೆ (IST)   ವರ್ಚುವಲ್ ವಿಂಟರ್ ಎಡಿಷನ್‌ ಲಾಂಚ್  ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆಯನ್ನು OnePlus ಇಂಡಿಯಾದ ಯುಟ್ಯೂಬ್ ಚಾನಲ್‌ನಲ್ಲಿ ಲೈವ್‌ಸ್ಟ್ರೀಮ್ ‌(Live stream) ಮಾಡಲಾಗುತ್ತದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 'ನೋಟಿಫೈ ಮಿ' ಪುಟವನ್ನು ಲೈವ್ ಮಾಡಿದ್ದು ಇದನ್ನು ಕ್ಲಿಕ್ ಮಾಡುವುದರ ಮೂಲಕ ಲೈವ್‌ ನೋಟಿಫಿಕೇಶನ್‌ ಪಡೆಯಬಹುದು.

OnePlus 9RT specifications

OnePlus 9RT Android 11 ಆಧಾರಿತ ColorOS ನಲ್ಲಿ ರನ್ ಆಗುತ್ತದೆ. ಇದು 20:9 ಅಸ್ಪೆಕ್ಟ್‌ ರೆಶ್ಯೋ  ಮತ್ತು 120Hz ರಿಫ್ರೆಶ್ ದರದೊಂದಿಗೆ 6.62-ಇಂಚಿನ Full-HD+ (1,080x2,400 ಪಿಕ್ಸೆಲ್‌ಗಳು) Samsung E4 AMOLED ಡಿಸ್‌ಪ್ಲೇಯನ್ನು ಹೊಂದಿದೆ. ಸ್ಮಾರ್ಟ್ಫೋನ್ Qualcomm Snapdragon 888 SoC ನಿಂದ ಚಾಲಿತವಾಗಿದೆ. ಇದು 12GB ಯ LPDDR5 RAM ಮತ್ತು 256GB ವರೆಗಿನ ಸಂಗ್ರಹಣೆಯೊಂದಿಗೆ ಬರಲಿದೆ.

ಇದನ್ನೂ ಓದಿBoult ProBass ZCharge: 40 ಗಂಟೆಗಳ ಬ್ಯಾಟರಿ ಲೈಫ್‌ನೊಂದಿಗೆ ನೆಕ್‌ಬ್ಯಾಂಡ್ ಇಯರ್‌ಫೋನ್‌ ಬಿಡುಗಡೆ!

ಫೋಟೊಗ್ರಾಫಿಗಾಗಿ, OnePlus 9RT ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದ್ದು 50-ಮೆಗಾಪಿಕ್ಸೆಲ್ ಸೋನಿ IMX766 ಪ್ರಾಥಮಿಕ ಸೆನ್ಸರ್, 16-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್‌ ಹೊಂದಿದೆ . ಇದು ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ 16-ಮೆಗಾಪಿಕ್ಸೆಲ್ ಸೋನಿ IMX471 ಕ್ಯಾಮೆರಾದೊಂದಿಗೆ ಬರುತ್ತದೆ. ಫೋನ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ, Warp Charge 65T (ನಿಮ್ಮ ಸಾಧನವನ್ನು ವೇಗವಾಗಿ ಚಾರ್ಜ್ ಮಾಡಲು OnePlus ನಲ್ಲಿ ವೈರ್ಡ್ ಅಥವಾ ವೈರ್‌ಲೆಸ್ ತಂತ್ರಜ್ಞಾನ)  ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ಹೊಂದಿದೆ.

OnePlus Buds Z2 specifications

OnePlus Buds Z2 ಇಯರ್‌ಫೋನ್‌ಗಳು 11mm ಡೈನಾಮಿಕ್ ಡ್ರೈವರ್‌ಗಳನ್ನು (Dynamic Drivers) ಹೊಂದಿವೆ ಮತ್ತು ಬ್ಲೂಟೂತ್ v5.2 ಸಂಪರ್ಕದೊಂದಿಗೆ ಬರುತ್ತವೆ. ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಷನ್  (ANC) ಬೆಂಬಲವನ್ನು ಹೊಂದಿದೆ. OnePlus Buds Z2 ಒಂದೇ ಚಾರ್ಜ್‌ನಲ್ಲಿ 38 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ ಎಂದು ಹೇಳಲಾಗಿದೆ. ಬಡ್ಸ್ ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 5 ಗಂಟೆಗಳವರೆಗೆ ಲಿಸ್‌ನಿಂಗ್ ಸಮಯವನ್ನು ನೀಡುತ್ತದೆ. ಅವುಗಳು ಟಚ್‌ ಕಂಟ್ರೋಲ್‌ಗಳೊಂದಿಗೆ ಬರುತ್ತವೆ ಮತ್ತು transparency mode ಅನ್ನು ಒಳಗೊಂಡಿರುತ್ತವೆ.

ಇದನ್ನೂ ಓದಿ: UPI payment fraud ಹಣ ಪಾವತಿ ಸೇರಿ ಡಿಜಿಟಲ್ ವಹಿವಾಟು ಸುರಕ್ಷಿತವಾಗಿಸುವುದು ಹೇಗೆ? ಇಲ್ಲಿವೆ ಟಿಪ್ಸ್!

Follow Us:
Download App:
  • android
  • ios